ವಿಷಯಕ್ಕೆ ಹೋಗು

ಸದ್ದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಡಾವುಡಿ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಆಡಂಬರ ಲೇಖನಕ್ಕಾಗಿ ಇಲ್ಲಿ ನೋಡಿ.
ನಾಸಾ ಸಂಶೋಧಕರು ೧೯೬೭ರಲ್ಲಿ ವಿಮಾನ ಎಂಜಿನ್‍ನ ಸದ್ದಿನ ಮೇಲೆ ಪರೀಕ್ಷೆಗಳನ್ನು ನಡೆಸುತ್ತಿರುವುದು

ಸದ್ದು ಕೇಳಲು ಅಹಿತಕರ, ಜೋರು ಅಥವಾ ವಿಚ್ಛಿದ್ರಕಾರಕ ಎಂದು ನಿರ್ಣಯಿಸಲಾದ ಅನಗತ್ಯ ಶಬ್ದ. ಭೌತಶಾಸ್ತ್ರದ ದೃಷ್ಟಿಕೋನದಿಂದ, ಸದ್ದು ಮತ್ತು ಶಬ್ದದ ನಡುವೆ ವ್ಯತ್ಯಾಸವಿಲ್ಲ, ಏಕೆಂದರೆ ಎರಡೂ ಗಾಳಿ ಅಥವಾ ನೀರಿನಂತಹ ಒಂದು ಮಾಧ್ಯಮದ ಮೂಲಕ ಚಲಿಸುವ ಕಂಪನಗಳು. ಮಿದುಳು ಒಂದು ಶಬ್ದವನ್ನು ಸ್ವೀಕರಿಸಿ ಗ್ರಹಿಸಿದಾಗ ವ್ಯತ್ಯಾಸ ಉದ್ಭವಿಸುತ್ತದೆ.[][]

ಪ್ರಾಯೋಗಿಕ ವಿಜ್ಞಾನಗಳಲ್ಲಿ, ಸದ್ದು ಒಂದು ನಿರೀಕ್ಷಿತ ಸಂಜ್ಞೆಯ ಗ್ರಹಿಕೆಗೆ ತಡೆಯೊಡ್ಡುವ ದತ್ತದ ಯಾವುದೇ ಯಾದೃಚ್ಛಿಕ ಏರಿಳಿತಗಳನ್ನು ಸೂಚಿಸಬಹುದು.

ಸದ್ದನ್ನು ಅತ್ಯಂತ ಸಾಮಾನ್ಯವಾಗಿ ಡೆಸಿಬೆಲ್‍ಗಳು, ಗಟ್ಟಿತನದ ಅಳತೆ ಅಥವಾ ಶಬ್ದದ ತೀವ್ರತೆಯ ಪರಿಭಾಷೆಯಲ್ಲಿ ಚರ್ಚಿಸಲಾಗುತ್ತದೆ; ಈ ಅಳತೆಯು ಶಬ್ದ ತರಂಗದ ಎತ್ತರವನ್ನು ವಿವರಿಸುತ್ತದೆ.

ಶ್ರವ್ಯ, ಧ್ವನಿಮುದ್ರಣ, ಮತ್ತು ಪ್ರಸಾರ ವ್ಯವಸ್ಥೆಗಳಲ್ಲಿ, ಶ್ರವ್ಯ ಸದ್ದು ಕಾರ್ಯಕ್ರಮದ ಸ್ತಬ್ಧ ಅವಧಿಗಳಲ್ಲಿ ಕೇಳುವ ಅವಶಿಷ್ಟ ಕೆಳಮಟ್ಟದ ಶಬ್ದವನ್ನು ಸೂಚಿಸುತ್ತದೆ. ನಿರೀಕ್ಷಿತ ಶುದ್ಧ ಶಬ್ದ ಅಥವಾ ನೀರವತೆಯಿಂದ ಈ ವ್ಯತ್ಯಯನ ಧ್ವನಿಮುದ್ರಣ ಉಪಕರಣ, ವಾದ್ಯ, ಅಥವಾ ಧ್ವನಿಮುದ್ರಣ ಕೋಣೆಯಲ್ಲಿನ ಸುತ್ತುವರಿದ ಶಬ್ದದಿಂದ ಉಂಟಾಗಬಹುದು.

ಪರಿಸರ ಸದ್ದು ಒಂದು ನಿರ್ದಿಷ್ಟ ಪರಿಸರದಲ್ಲಿ ಇರುವ ಎಲ್ಲ ಸದ್ದಿನ ಸಂಚಯ. ಮೇಲ್ಮೈ ಮೋಟಾರು ವಾಹನಗಳು, ವಿಮಾನಗಳು, ಟ್ರೈನುಗಳು ಮತ್ತು ಕೈಗಾರಿಕಾ ಮೂಲಗಳು ಪರಿಸರ ಸದ್ದಿನ ಪ್ರಮುಖ ಮೂಲಗಳಾಗಿವೆ. ಈ ಸದ್ದಿನ ಮೂಲಗಳು ಮಿಲಿಯಗಟ್ಟಲೆ ಜನರನ್ನು ಶಬ್ದ ಮಾಲಿನ್ಯಕ್ಕೆ ಒಡ್ಡುತ್ತವೆ. ಶಬ್ದ ಮಾಲಿನ್ಯವು ಕಿರುಕುಳವನ್ನು ಸೃಷ್ಟಿಸುವುದಲ್ಲದೆ, ಉನ್ನತ ಪ್ರಮಾಣದಲ್ಲಿ ಕಿವುಡುತನ ಮತ್ತು ಹೃದ್ರೋಗದಂತಹ ಗಮನಾರ್ಹ ಆರೋಗ್ಯ ಪರಿಣಾಮಗಳನ್ನು ಕೂಡ ಸೃಷ್ಟಿಸುತ್ತದೆ. ಮೂಲದ ತೀವ್ರತೆ ಕಡಿತ, ಭೂಬಳಕೆ ಯೋಜನಾ ತಂತ್ರಗಳು, ಶಬ್ದ ನಿರೋಧಕಗಳು ಹಾಗೂ ಧ್ವನಿ ನಿರೋಧಕಗಳು, ವಾಹನ ಕಾರ್ಯಾಚರಣಾ ನಿಯಂತ್ರಣಗಳು, ಮತ್ತು ವಾಸ್ತುಶಾಸ್ತ್ರೀಯ ಧ್ವನಿವಿಜ್ಞಾನದ ವಿನ್ಯಾಸ ಕ್ರಮಗಳನ್ನು ಒಳಗೊಂಡಂತೆ, ಶಬ್ದದ ಮಟ್ಟಗಳನ್ನು ಕಡಿಮೆಮಾಡಲು ವಿವಿಧ ತಗ್ಗಿಸುವಿಕೆ ತಂತ್ರಗಳು ಮತ್ತು ನಿಯಂತ್ರಣಗಳು ಲಭ್ಯವಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Elert, Glenn. "The Nature of Sound – The Physics Hypertextbook". physics.info. Retrieved 2016-06-20.
  2. "The Propagation of sound". pages.jh.edu. Retrieved 2016-06-20.
"https://kn.wikipedia.org/w/index.php?title=ಸದ್ದು&oldid=753632" ಇಂದ ಪಡೆಯಲ್ಪಟ್ಟಿದೆ