ವಿಷಯಕ್ಕೆ ಹೋಗು

ಮಾನವನಲ್ಲಿ ನಿರ್ನಾಳ ಗ್ರಂಥಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ಲೂಸೆನ್ 0623 ದುಗ್ಧರಸ ವ್ಯವಸ್ಥೆ (ಸ್ತ್ರೀ)

ಪೀಠಿಕೆ

[ಬದಲಾಯಿಸಿ]
ಹಾರ್ಮೋನು ವ್ಯವಸ್ಥೆಯನ್ನು: 1. ಪೀನಲ್ ಗ್ರಂಥಿ, 2. ಪಿಟ್ಯುಟರಿ ಗ್ರಂಥಿ, 3. ಥೈರಾಯ್ಡ್ ಗ್ರಂಥಿ 4. ತೈಮಸ್ ಗ್ರಂಥಿ, 5. ಅಡ್ರೀನಲ್ ಗ್ರಂಥಿ, 6. ಮೇದೋಜೀರಕ, 7. ಅಂಡಾಶಯ,ಮಹಿಳೆಯರಲ್ಲಿ 8. ವೃಷಣ, ಪುರುಷರಲ್ಲಿ
  • ಮಾನವನ ದೇಹದಲ್ಲಿ ಅವನ ಮನಸ್ಸಿನ ಅರಿವಿಗೆ ಬರದೆ ನೇಕ ಕ್ರಿಯೆಗಳು ನಡೆಯುವವು. ಆಹಾರದ ಪಚನ ಕ್ರಿಯೆ, ಶ್ವಾಸೋಚ್ಛ್ವಾಸ, ರಕ್ತ ಪರಿಚಲನೆ, ಕಶ್ಮಲ ನಿವಾರಣೆ (ದೇಹದ ಕೆಲವು ಶುದ್ಧೀಕರಣ) ಮೊದಲಾದವು. ಆರೋಗ್ಯವಂತರಾಗಿರುವಾಗ ನಮ್ಮರಿವಿಗೆ ಬಾರದಂತೆ ತಮ್ಮಷ್ಟಕ್ಕೆ ತಾವೇ ನೆಡೆಯುತ್ತಿರುತ್ತವೆ. ನರಗಳ ವ್ಯವಸ್ಥೆ ಅವಕ್ಕೂ ಕಾರಣವಾಗಿದೆ. ವಿವಿಧ ಅವಯುವಗಳ ಕೆಲಸವನ್ನು ಪರಸ್ಪರ ಹೊಂದಿಸಿ ದೇಹವ್ಯಾಪಾರವನ್ನು ನರವ್ಯವಸ್ಥೆ ಹೋದಿಸಿ ನಡೆಸುವುದಾದರೂ, ಅದೊಂದರಿಂದಲೇ ಈ ದೇಹದ ಎಲ್ಲಾ ಕೆಲಸ ಆಗಲಾರದು. ನರಗಳೇ ಇಲ್ಲದ ಜೀವಿಗಳಿವೆ, ಸಸ್ಯಗಳಿಗೆ ಜೀವವಿದ್ದರೂ ನರಗಳಿಲ್ಲ. ಆದರೂ ಅವುಗಳ ದೇಹ ನಿಯಂತ್ರಣ ಸುಗಮಾವಾಗಿ ನಡೆಯುವುದು, ಕಾರಣ ನರಗಳಲ್ಲದೆ ದೇಹದಲ್ಲಿರುವ ಅನ್ಯ ವಸ್ತುಗಳು ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವುಗಳಿಗೆ ಹಾರ್ಮೋನುಗಳು ಅಥವಾ ಪ್ರೇರಕದ್ರವ್ಯಗಳು ಎಂದು ಕರೆದಿದ್ದಾರೆ. ಈ ಹಾರ್ಮೋನುಗಳು ವಿವಿಧ ಗ್ರಂಥಿಗಳು ಒಸರುವ ರಸಾಯನಿಕ ದ್ರವಗಳು ಅಥವಾ ವಸ್ತುಗಳು. ಈ ಗ್ರಂಥಿಗಳು ರಕ್ತಕ್ಕೇ ನೇರವಾಗಿ ಆ ದ್ರವಗಳನ್ನು ಸೇರಿಸುತ್ತವೆ. ಅದರಿಂದ ರಕ್ತ ಸಂಚರಿಸುವ ಯಾವತ್ತೂ ಅಂಗಗಳಿಗೆ ಅವೂ ಹೋಗುವುವು. ಆ ಮೂಲಕ ಒಂದೊಂದು ಬಗೆಯ ಪ್ರೇರಕ ದ್ರವ್ಯ (ಹಾರ್‍ಮೋನು ರಸ) ಅಯಾ ಆಂಗಿಕ ಚಟುವಟಿಕೆಗಳನ್ನು – ಕೆಲವೊಮ್ಮೆ ಇಡೀ ದೇಹದ ಮತ್ತು ಮನಸ್ಸಿನ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಇದನ್ನು ಎಂಡೊಕ್ರೈನ್ ಸಿಗ್ನಲಿಂಗ್ (endocrine signaling) ಎಂದರೆ ಪ್ರೇರಣೆ ಮತ್ತು ಸೂಚನೆ ಕೊಡುವ ವ್ಯವಸ್ಥೆ ಎನ್ನುವರು. ಇದನ್ನು ಅಂತಃಸ್ರಾವಕ ವ್ಯವಸ್ಥೆ ಎಂದೂ ಹೇಳಬಹುದು. ಅದೇ ಅರ್ಥದಲ್ಲಿ ಇಂಗ್ಲಿಷ್‍ನಲ್ಲಿ ಎಂಡೊಕ್ರೈನ್ ಸಿಸ್ಟಮ್ ಎಂದು ಕರೆಯುವರು. ಇವು ಹಾರ್ಮೋನುಗಳನ್ನು ಯಾ ಪ್ರೇರಕದ್ರವಗಳನ್ನು ಸ್ರವಿಸುವುವು. ಈ ದ್ರವಗಳು ದೇಹದ ಆರೋಗ್ಯ ಮತ್ತು ಸಮತೋಲನವನ್ನು ಕಾಪಾಡುವುವು; ಜೊತೆಗೆ ಕೆಲವು ಅಂಗಗಳಿಗೆ ಸೂಕ್ತಕ್ರಿಯೆ ಅಥವಾ ಕೆಲಸಮಾಡಲು ಪ್ರೇರೇಪಿಸುವುವು. ಕೆಲವು ದ್ರವಗಳು (ಹಾರ್ಮೋನುಗಳು) ದೇಹದ ರಕ್ಷಣೆಯ ಕೆಲಸವನ್ನೂ ಮಾಡುವುವು.

ಇತಿಹಾಸ

[ಬದಲಾಯಿಸಿ]

ವೈದ್ಯರ ಪ್ರಯೋಗ

[ಬದಲಾಯಿಸಿ]
  • ಈಗ ಸುಮಾರು 90 ವರ್ಷಗಳ ಹಿಂದೆ ಬೈಲಿಸ್ ಮತ್ತು ಸ್ಟಾರ್ಲಿಂಗ್ ಎಂಬ ವೈದ್ಯರು ಮೇದೋಜೀರಕ ರಸವು ಆಹಾರಕ್ಕೆ ಸೇರುವ ಕಾರಣ ಪರಿಶೀಲಿಸಿದರು. ಅವರು ಮೇದೋಜೀರಕಕ್ಕೂ ಜಠರಕ್ಕೂ ಜೋಡಿಸಿರುವ ನರವನ್ನು ಕತ್ತರಿಸಿದರು. ಆಗಲೂ ಆಹರ ಕಿಬ್ಬೊಟ್ಟೆಗೆ ಬರುತ್ತಲೇ ಮೇದೋಜೀರಕ ರಸ ತನ್ನಂತೆ ಅಲ್ಲಿಗೆ ಬರುವುದನ್ನು ಗಮನಿಸಿದರು. ಮೇದೋಜೀರಕಕ್ಕೆ ಪ್ರೇರಣೆ ಯಾವುದೆಂದು ಪರಿಶೀಲಿಸಿದಾಗ ಕಿಬ್ಬೊಟ್ಟೆಯ ಒಳಮೈಯ ಪರೆಯಲ್ಲಿರುವ ಗ್ರಂಥಿಗಳು ‘ಸಿಕ್ರೀಟಿನ್’ ಎಂಬ ರಸಾಯನಿಕ ದ್ರವ್ಯವನ್ನುÉÇ್ಯಸರುತ್ತವೆ. ಅದು ರಕ್ತದೊಡನೆ ಬೆರೆತು ಮೇದೋಜೀರಕ ಕೋಶಕ್ಕೆ ಹರಿದಾಗ ದರ ಪ್ರೇರಣೆಯಿಂದ ಮೆದೋಜೀರಕ ರಸ ಆಹಾರಕ್ಕೆ ಬಂದು ಬೀಳುತ್ತದೆ – ಎಂಬುದು ತಿಳಿಯಿತು.

ಪ್ರಾಚೀನರ ನಂಬುಗೆ

[ಬದಲಾಯಿಸಿ]
  • ಪುರಾತನ ಚೀನೀಯರಲ್ಲೂ ಪಾಶ್ಚಿಮಾತ್ಯ ರಲ್ಲೂ ಹೃದಯ, ಯಕೃತ್ತು, ಶ್ವಾಸಕೋಶ, ಕಲಿಜ/ಮೂತ್ರಪಿಂಡ, ಇವುಗಳಿಂದ ಒಸರುವ ರಸಾಯನಿಕ ದ್ರವಗಳು , ಮತ್ತೂ ಇತರ ನಾಲ್ಕು ದ್ರವಗಳು ಸಮತೆಯಿಂದ ಇದ್ದಾಗ ಮಾತ್ರಾ ದೇಹ ಆರೋಗ್ಯವಾಗಿರುವುದೆಂದೂ, ಅದು ತಪ್ಪಿದಾಗ ಆರೋಗ್ಯ ಕೆಡುವುದೆಂದು ನಂಬಿದ್ದರು. ಆದರೆ ಆದ್ರವಗಳನ್ನು ಸುರಿಸುವ ಅಂಗಗಳು ಯಾವುವು ಮತ್ತು ಸ್ರವಿಸುವ ದ್ರವ –ಅದರ ಕ್ರಿಯೆ ಇವಗಳ ತೀಳವಳಿಕೆ ಸರಿ ಇರಲಿಲ್ಲ.

ನಿರ್ನಾಳ ಅಥವಾ ವಿನಾಳ ಗ್ರಂಥಿಗಳ ಪಾತ್ರ

[ಬದಲಾಯಿಸಿ]
  • 20ನೇ ಶತಮಾನದಿಂದೀಚೆಗೆ ದೇಹ ಮತ್ತು ಮನಸ್ಸಿನ ವ್ಯಾಪಾರಗಳನ್ನು ನಿಯಂತ್ರಿಸಲು ಕಾರಣವಾದ ದ್ರವ್ಯಗಳ ಬಗೆಗೆ ಹೆಚ್ಚಿನ ತಿಳುವಳಿಕೆ ದೊರೆತಿದೆ. ಈ ಬಗೆಯ ಪ್ರೇರಕ ದ್ರವ್ಯಗಳನ್ನು ಒದಗಿಸುವ ಅಂಗಗಳೇ ಗ್ರಂಥಿಗಳು. ಈವು ಸ್ರವಿಸುವ ದ್ರವವನ್ನು ಪ್ರತ್ಯೇಕ ನಾಳಗಳು ಒಯ್ಯುವುದಿಲ್ಲ, ಆದ್ದರಿಂದ ಅವನ್ನು ನಿರ್‍ನಾಳ ಅಥವಾ ವಿ-ನಾಳ ಗ್ರಂಥಿಗಳು ಎನ್ನುತ್ತಾರೆ. ಈ ಗ್ರಂಥಿಗಳು ಶುದ್ಧರಕ್ತನಾಳಗಳ ಹೊರಮೈಗೆ ತಾಗಿಕೊಂಡಿವೆ. ವು ಒಂದೊಂದೂ ಬೇರೆ ಬೇರೆ ಬಗೆಯ ಪ್ರೇರಕ ದ್ರವವನ್ನು ರಕ್ತಕ್ಕೆ ಸೇರಿಸುತ್ತವೆ. ರಕ್ತದ ಮೂಲಕ ಆದ್ರವವು ದೇಹದ ಎಲ್ಲೆದೆಗೂ ಸಂಚರಿಸುತ್ತದೆ. ಯಾವ ಅವಯುವಕ್ಕೆ ಅದು ಬೇಕೋ ಅದು ಮಾತ್ರಾ ಆ ದ್ರವವನ್ನು ಹೀರುತ್ತದೆ. ಆ ಮೂಲಕ ಅದು ತನ್ನ ಕೆಲಸವನ್ನು ಮಾಡುತ್ತದೆ. ಥೈರಾಯಿಡ್, ಪ್ರಾಥೈರಾಯಿಡ್ ಎಡ್ರಿನಲ್, ಪಿಟ್ಯುಟರಿ, ಮೇದೋಜೀರಕ, ಲೈಂಗಿಕ ಗ್ರಂಥಿಗಳು, ಪ್ಲೀಹ, ಇವು ಮುಖ್ಯ ಗ್ರಂಥಿಗಳು.

ಶಾರೀರಿಕ ಬದಲಾವಣೆಗಳು

[ಬದಲಾಯಿಸಿ]
  • ಎಳೆತನದಲ್ಲಿ ಕಾಣಿಸದೆ ಅನಂತರ ಕಾಣಿಸತೊಡಗುವ ಪ್ರಾಯ ಪ್ರಬುದ್ಧತೆಗೆ ಸಂಬಂಧಪಟ್ಟ ದೈಹಿಕ ಮತ್ತು ಮಾನಸಿಕ ವಿಕಾಸ ವಿಲಾಸಗಳು ನಮ್ಮ ದೇಹದೊಳಗಿನ ಕೆಲವು ವಿಶಿಷ್ಟ ಗ್ರಂಥಿಗಳು ಉತ್ಪನ್ನ ಮಾಡುವ, ಒಸರುವ ಪ್ರೇರಕದ್ರವ್ಯಗಳಿಂದ ಉಂಟಾಗುತ್ತವೆ. ಇವನ್ನುಂಟುಮಾಡುವ ಗ್ರಂಥಿಗಳನ್ನು ವಿನಾಳ ಗ್ರಂತಿಗಳು ಅಥವಾ ನಿರ್ನಾಳ ಗ್ರಂಥಿಗಳು (ಎಂಡೊಕ್ರೈನ್ ಗ್ಲಾಂಡ್ಸ್-Endocrine glands) ಎಂದು ಕರೆಯುತ್ತಾರೆ.

ಪಿಟ್ಯುಟರಿ

[ಬದಲಾಯಿಸಿ]
  • ಪಿಟ್ಯುಟರಿ ಗ್ರಂಥಿ ಎರಡು ವಿಭಾಗಗಳನ್ನು ಹೊಂದಿದೆ, ಇದು ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆಗಳನ್ನು ಒಳಗೊಂಡಿದೆ. ಪಿಟ್ಯುಟರಿಯ ಈ ಹಾಲೆಗಳು ಪ್ರತ್ಯೇಕ ಗ್ರಂಥಿ-ಭ್ರೂಣದ ಮೂಲವಾದರೂ, ಅವು ಎರಡೂ ನಿಕಟವಾಗಿ ಮಸ್ತಿಷ್ಕನಿಮ್ನಾಂಗಕ್ಕೆ (ಮೆದುಳಿನ ತಲಭಾಗ - ಹೈಪೊಥಾಲಮಸ್‍ಗೆ) ಅಂಟಿಕೊಂಡಿದೆ, ಎಂದರೆ ಪಿಟ್ಯುಟರಿ ಸನಿಹದಲ್ಲೇ, ಅದರ ಮೇಲೆ ಮಿದುಳು ಕೂರುತ್ತದೆ ಆಥವಾ ಥಾಲಮಸ್‍ -ಕೆಳಮೆದುಳಿನ ಬಾಗಕ್ಕೆ ಅಂಟಿಕೊಂಡಿದೆ ಮತ್ತು ಆ ಮಿದುಳು ಭಾಗ ಪಿಟ್ಯುಟರಿ ಹಾರ್ಮೊನ್‍ನ (ಪ್ರೇರಕದ್ರವ್ಯ) ಪ್ರಮಾಣ ಮತ್ತು ಬಿಡುಗಡೆಯೆ ಸಮಯಗಳನ್ನು ನಿಯಂತ್ರಿಸುವ ಮಿದುಳಿನ ಒಂದು ಭಾಗಕ್ಕೆ ಸಂಬಂಧಿಸಿದುದಾಗಿದೆ. ಮೆದುಳಿನ ಕೆಳಭಾಗದಲ್ಲಿ ನೆಲೆಸಿದ, ಪಿಟ್ಯುಟರಿ ಗ್ರಂಥಿಯು ಸ್ಪಿನೊಯಿಡ್ (sphenoid)ಎಂದು ಕರೆಯಲ್ಪಡುವ ಒಂದು ಮೂಳೆಯ ರಚನೆಯಿಂದ ರಕ್ಷಿಸಲ್ಪಟ್ಟಿದೆ. ಈ ಮೂಳೆಯನ್ನು ಟರ್ಕಿಷ್ ತಡಿ (Sella turcica) ಎಂದು ಕರೆಯಲಾಗುತ್ತದೆ.


  • ಪಿಟ್ಯುಟರಿ ಗ್ರಂಥಿ ಅಥವಾ ಹೈಪೋಫೈಸಿಸ್ ಅನ್ನುವುದು ಒಂದು ಬಟಾಣಿ ಗಾತ್ರದ ಮತ್ತು 0.5 ಗ್ರಾಂ(0.02 oz.) ತೂಕವಿರುವ ಎಂಡೊಕ್ರೈನ್ ಗ್ರಂಥಿ. ಇದು ಮಿದುಳಿನ ತಳಭಾಗದಲ್ಲಿರುವ ಮಸ್ತಿಷ್ಕನಿಮ್ನಾಂಗದ ಚಾಚಿರುವ ಕೆಳಭಾಗವಾಗಿದೆ, ಮತ್ತು ಎರಡು ಪದರ (ದಯಾಫ್ರಾಗ್ಮ ಸೆಲ್ಲೆ)ಗಳಿಂದ ಆವರಿಸಿಕೊಂಡಿರುವ ಚಿಕ್ಕ, ಎಲುಬುಗೂಡಿನಲ್ಲಿ (ಸೆಲ್ಲಾ ಟರ್ಕಿಕ) ಸ್ಥಿತವಾಗಿದೆ.[][]
  • ಈ ಪಿಟ್ಯುಟರಿ ಗ್ರಂಥಿಗೆ "ಮಾಸ್ಟರ್ "ಗ್ರಂಥಿ –“ಯಜಮಾನ ಗ್ರಂಥಿ” ಎಂದು ಸಹ ಕರೆಯುವರು. ಏಕೆಂದರೆ ಇದು ದೇಹದ ಅಂತಃಸ್ರಾವಕ ವ್ಯವಸ್ಥೆಯಲ್ಲಿ ಎಲ್ಲಾ ಇತರ ನಿರ್ನಾಳ ಗ್ರಂಥಿಗಳನ್ನು ನಿಯಂತ್ರಿಸುತ್ತದೆ.
ಪಿಟ್ಯುಟರಿ ಎರಡು ವಿಭಾಗ ಅವು ಎರಡೂ ನಿಕಟವಾಗಿ ಮಸ್ತಿಷ್ಕನಿಮ್ನಾಂಗ (ಮೆದುಳಿನ ತಲಭಾಗ - ಹೈಪೊಥಾಲಮಸ್) ಕ್ಕೆ ಅಂಟಿಕೊಂಡಿದೆ, ಎಂದರೆ ಪಿಟ್ಯುಟರಿ ಸನಿಹದಲ್ಲೇ ಅದರ ಮೇಲೆ ಮಿದುಳು ಕೂರುತ್ತದೆ
  • ನಮ್ಮದೇಹದಲ್ಲಿರುವ ವಿನಾಳ ಗ್ರಂಥಿಗಳಲ್ಲಿ ಮುಖ್ಯವಾದ ಒಂದು ಪಿಟ್ಯುಟರಿ ಗ್ರಂಥಿ ನಡುಮಿದುಳಿನ ತಾಲಕ್ಕೆ (ಅಂಕುಲಿಗೆ) ಲ್ಲಿ ಅಂಟಿಕೊಂಡಿದೆ. ಅದರ ತೂಕ ಅರ್ಧ ಗ್ರಾಮಿನಷ್ಟು, ಇದಕ್ಕೆ ಹೈಪೊಸೈಸಿಸ್ ಎಂಬ ಇನ್ನಂದು ಹೆಸರಿದೆ. ಇದು ಒಸರುವ ಪ್ರೇರಕ ದ್ರವ್ಯವು ನಾಲ್ಕಾರು ಲಕ್ಷಣಗಳನ್ನು ಹೊಂದಿದೆ. ಅದರಿಂದ ಥೈರಾಯಿಡ್, ಎಡ್ರಿನಲ್, ಮತ್ತು ಗೊನಾಡ್ ಗ್ರಂಥಿಗಳ ಮೇಲೆ ಪರಿಣಾಮ ಮಾಡುವುದು. ಮೆದುಳಿನಲ್ಲಿ ಒಂದು ತಾಳಿಗೆ ತಾಗಿಕೊಂಡಿರುವ ಚಿಕ್ಕ ವಸ್ತು. ಅದು ವಸರುವ ದ್ರವ್ಯವೇ ಗಂಡು ಹೆಣ್ಣುಗಳ ಪ್ರಾಯಪ್ರಬುದ್ಧತೆಯ ಅನೇಕ ಚಟುವಟಿಕೆಗಳಿಗೆ ಕಾರಣವಾಗುತ್ತದೆ. ಮುಂದೆ ಗಂಡು ತಂದೆಯಾಗುವುದಕ್ಕೂ, ಹೆಣ್ಣು ತಾಯಿಯಾಗುವುದಕ್ಕೂ ಯಾವೆಲ್ಲಾ ಬಳವಣಿಗೆಗಳು ಬೇಕೋ ಅವನ್ನಲ್ಲಾ ಪೆರೇಪಿಸುವುದೇ ಈ ಗ್ರಂಥಿಯ ಪ್ರಧಾನವಾದ ಕೆಲಸ.
  • ಮಕ್ಕಳು ಪ್ರಾಯಕ್ಕೆ ಬರುವ ಕಾಲದಲ್ಲಿ ಉಂಟಾಗುವ ಶಾರೀರಿಕ ಮಾರ್ಪಾಟುಗಳು ಸಂತಾನ ಉತ್ಪಾದನೆಗೂ ತಾಯ್ತನಕ್ಕೂ ಬೇಕಾದ ಮಾರ್ಪಾಟು ಈ ಗ್ರಂಥಿಯಿಂದ ಆಗುವುದು. ಈ ಗ್ರಂಥಿಯು ಒದಗಿಸಿದ ಪ್ರೇರಕಗಳ ದೆಸೆಯಿಂದ ಹೆಣ್ಣು ಗಂಡುಗಳಲ್ಲಿ ರೇತಸ್ಸು ಮತ್ತ ತತ್ತಿಗಳ ಉತ್ಪಾದನೆಯು ಚಕಿತಗೊಂಡು ಹೆಚ್ಚುತ್ತದೆ. ಈ ತತ್ತಿ ಮತ್ತು ರೇತಸ್ಸುಗಳು ಬೆಳೆದಂತೆಅಂಗ ವ್ಯತ್ಯಾಸಕ್ಕೆ ಕಾರಣವಾದ ಇತರ ಪ್ರೇರಕ ದ್ರವಗಳು ದೇಹದ ಬೆಳವಣಿಗೆಯನ್ನು ವಿಶಿಷ್ಟ ರೀತಿಯಿಂದ ಹೆಚ್ಚಿಸುತ್ತವೆ. ಈ ಸಂದರ್ಭದಲ್ಲಿ ಗೋನಾಡ್ ಎಂಬ ಗ್ರಂಥಿಯು, ಪಿಟ್ಯುಟರಿ ಗ್ರಂಥಿಯೊಡಹೆ ಸೇರಿ ಕೆಲಸ ಮಾಡುತ್ತದೆ. ಇದರಿಂದ ಪ್ರಾಯಕ್ಕೆ ಬರುವ ಹುಡುಗ ಹುಡುಗಿಯರ ದೇಹಗಳು ತೂಕ ಎತ್ತರ ಬೇಗ ಹೆಚ್ಚಾಗುವುದು. ಕೆಲವೊಮ್ಮೆ ಗ್ರಂಥಿಯ ಅತಿಸ್ರಾವದಿಂದ ಹೊಂದಿಕೆಯಿಲ್ಲದ ಅತಿಬೆಳವಣಿಗೆ ಕಾಣಿಸಬಹುದು. ಪ್ರಾಯಕ್ಕೆ ಬರವ ಮಕ್ಕಳ ವಿಶಿಷ್ಟ ಬದಲಕಲಾವಣೆಯಿಂದ ಅದಕ್ಕೆ ಹೊಂದಿಕೊಳ್ಳಲಾರದೆ ಅವರಿಗೆ ತಮ್ಮ ಮೇಲೇ ಬೇಸರ ಬರಬಹುದು. ಚಿಕ್ಕ ಮಕ್ಕಳಲ್ಲಿ ಗಂಡು ಹೆಣ್ಣಿಗೆ ವಿಶೇಷ ವ್ಯತ್ಯಾಸ ಕಾಣದಿದ್ದರೂ ಪ್ರಾಯ ಬಂದಾಗ ವ್ಯತ್ಯಾಸ ಎದ್ದು ಕಾಣುವುದು. ಇದಕ್ಕೆ ಈ ಚಿಕ್ಕ ಗ್ರಂಥಿಯ ದ್ರವ ಕಾರಣ. ಹುಡುಗರಲ್ಲಿ ಸ್ನಾಯುಗಳ ಬೆಳವಣಿಗೆ ಹೆಚ್ಚುತ್ತದೆ. ಎದೆ ಅಗಲವಾಗುವುದು, ಧ್ವನಿ ಬದಲಿಸುವುದು, ಎದೆಯ ಮೇಲೆ, ಮುಖದಲ್ಲಿ ಗಡ್ಡಮೀಸೆಗಳು ತೋರುವುವು. ಸ್ತ್ರೀದೇಹದ ಬಾಹ್ಯ ರೇಖೆಗಳು ದುಂಡಾಗತೊಡಗುತ್ತವೆ. ನಡು ವಿಸ್ತರಿಸುತ್ತದೆ. ಸ್ತನಗಳು ಬೆಳೆಯುತ್ತವೆ. ಗಂಡು ಹೆಣ್ಣುಗಳಿಬ್ಬರಲ್ಲೂ ಕಂಕುಳಲ್ಲಿ ಜನನೇಂದ್ರಿಯಯದ ಬಳಿ ರೋಮಗಳು ಬೆಳೆಯುವುವು. ಇವೆಲ್ಲಾ ಈ ಪಿಟ್ಯಟರಿ ಸಕಾಲದಲ್ಲಿ ಸ್ರವಿಸುವ ದ್ರವದ ಪರಿಣಾಮ.

ಸ್ತ್ರೀಯ ಮೇಲಿನ ವಿಶಿಷ್ಟ ಪರಿಣಾಮ

[ಬದಲಾಯಿಸಿ]
  • ಸ್ತ್ರೀಯ ಗರ್ಭಾಶಯದ ಮೇಲೆ ಪರಿಣಾಮ ಉಂಟುಮಾಡುವ ಎರಡು ಬಗೆಯ ಪಿಟ್ಯಟರಿ ಪ್ರೇರಕದ್ರವಗಳುಂಟಾಗುತ್ತವೆ. ಇವುಗಳಲ್ಲಿ ಒಂದು ಗರ್ಭಾಶಯದಲ್ಲಿರುವ ತತ್ತಿಗಳನ್ನು ಬೆಳೆಯಿಸುವುದಕ್ಕೆ ಕಾರಣವಾಗುತ್ತದೆ. ಹುಡುಗಿಯಾದವಳು ಜನ್ಮಕ್ಕೆ ಬರುವಾಗಲೇ ಮುಂದಿನ ಜೀವನಕ್ಕೆ ಬೇಕಾಗುವ ಯಾವತ್ತು ತತ್ತಿಗಳು (ಅಂಡಗಳು) ಅವಳ ದೇಹದಲ್ಲಿ ಉಂಟಾಗಿರುತ್ತವೆ. ಪಿಟ್ಯುಟರಿ ಗ್ರಂಥಿಯ ಪ್ರೇರಣೆಯಿಂದ ಸ್ತ್ರೀಯ ಗರ್ಭಕೋಶದಲ್ಲಿ ತತ್ತಿಯ ಕೋಶವೂ (ಓವರಿ) ವಿನಾಳ ಗ್ರಂಥಿಗಳಂತೆಯೇ ಎರಡು ಮೂರು ಬಗೆಯ ಪ್ರೇರಕ ದ್ರವ್ಯಗಳನ್ನು ಸೂಸುತ್ತದೆ. ಅವುಗಳಲ್ಲಿ ಒಂದು ಆಕೆಯ ದೇಹದ ಬೆಳವಣಿಗೆಗೆ ಕಾರಣವಾಗುತ್ತದೆ. ಇನ್ನೆರಡು ಸಂತಾನೊತ್ಪತ್ತಿಯ ಕ್ರಿಯೆಗೆ ಕಾರಣವಾಗುತ್ತವೆ. ಈ ಕಾಲದಲ್ಲಿ ದ್ರವಿಸುವ ಒಂದು ದ್ರವ್ಯವು ಥೀಲಿನ್. ಇದು ರಕ್ತವನ್ನು ಸೇರಿ ಗರ್ಭಕೋಶದ ಕವಚವನ್ನೂ, ಫಲಿಸಿದ ತತ್ತಿಯನ್ನೂ ರಕ್ಷಿಸಲು ಬೇಕಾದ ಮಾರ್ಪಾಟಿಗೆ ಸಹಾಯ ಮಾಡುತ್ತದೆ. ಙಲೀನ್ ದ್ರವ್ಯದ ಪ್ರೇರಣೆಯಿಂದ ಗರ್ಭಕೋಶದ ಗೋಡೆಗಳು ದಪ್ಪನಾಗುತ್ತವೆ. ಅದರ ಒಳಬಾಗ ಮಿದುವಾಗುತ್ತದೆ. ತತ್ತಿಕೋಶ ಸ್ರವಿಸುವ ಈ ಥಿಲೀನ್ ದ್ರವ ಹೆಣ್ಣಿನಲ್ಲಿ ಗಂಡಿನ ಬಯಕೆ ಉಂಟುಮಾಡುತ್ತದೆ. ಋತುಮತಿಯಾದ ಹುಡುಗಿಯ ಗರ್ಭಾಶಯದಲ್ಲಿ ಸುಪ್ತಾವಸ್ಥೆಯಲ್ಲಿದ್ದ ತತ್ತಿಗಳು ಬಲಿಯುತ್ತವೆ. ಅವುಗಳನ್ನು ಇಟ್ಟುಕೊಂಡ ಅಂಗ ಗ್ರಾಫಿಯನ್ ಫಾಲಿಕಲ್ ಆಗ ಹಿಗ್ಗುತ್ತದೆ. ಒಂದು ತತ್ತಿಯನ್ನು ಗರ್ಭಾಶಯಕ್ಕೆ ಕಳಿಸಿದ ನಂತರ ಇನ್ನೊಂದುಬಗೆಯ ಪ್ರೇರಕ ದ್ರವದಿಂದ ತತ್ತಿಯ ಕೋಶ ಮುದುಡಿಕೊಳ್ಳುತ್ತದೆ. ಅದು ಮುದುಡಿ ಮುದ್ದೆಯಾಗಿ ಕೊಬ್ಬಿನಂತಾಗಿ ಹಳದಿಬಣ್ಣದ ಮೃದುಕಾಯವಾಗುತ್ತದೆ ಅದನ್ನು ಹಳದಿಕಾಯ (ಕೊಪ್ಸ್ ಲೂಟೆಮ್) ಎನ್ನುತ್ತಾರೆ, ಈ ಹಳದಿಕಾಯ ಪಿಟ್ಯುಟರಿ ಪ್ರೇರಣೆಯಿಂದ ಪ್ರೋಜಿಸ್ಟೀನ್ ಎಂಬ ಇನ್ನೊಂದು ಪ್ರೇರಕ ದ್ರವ್ಯವನ್ನು ದ್ರವಿಸುತ್ತದೆ. ಇದೂ ಕೂಡ ಗರ್ಭಾಶಯವು ಫಲಿಸಿದ ತತ್ತಿಯನ್ನ ಸ್ವೀಕರಿಸಲು ವಿಶೇಷ ಸಹಾಯ ಮಾಡುತ್ತದೆ. ಭ್ರೂಣಕ್ಕೆ ಹೊಕ್ಕಳು ಬಳ್ಳಿಯಿಂದ ಆಹಾರ ಹೋಗುವುದಕ್ಕೆ ಮೊದಲು ಬೇಕಾಗುವ ಆಹಾರ ದ್ರವ್ಯವನ್ನು ಇದೇ ಒದಗಿಸುವುದು. ಈ ಪ್ರೋಜಿಸ್ಟೀನ ಗರ್ಭೀನಿಯ ಆರೋಗ್ಯಕ್ಕೂ ಸಹಾಯ ಮಾಡುವುದು. ಥೀಲಿನ್ ಮತ್ತು ಪ್ರೋಜಿಸ್ಟೀನ್ ಅಲ್ಲದೆ ಮೂರನೆ ಒಂದು ದ್ರವವೂ ಈಸಮಯದಲ್ಲಿ ಉತ್ಪತ್ತಿಯಾಗುವುದು.

ಪುರುಷರ ಮೇಲೆ ಪರಿಣಾಮ

[ಬದಲಾಯಿಸಿ]
  • ಪಿಟ್ಯಟರಿ ಪ್ರೇರಕದ್ರವದಿಂದ ಹುಡುಗರಲ್ಲಿಯೂ ಪ್ರಾಯಕ್ಕೆ ಬಂದಾಗ ಇನ್ನೊಂದು ಬಗೆಯ ಬದಲಾವಣೆಯಾಗುತ್ತದೆ. ಅಂಡಾಶಯದಲ್ಲಿರುವ ಗೋನೆಡ್ ಗ್ರಂಥಿಗಳನ್ನು ಈ ದ್ರವ್ಯವು ಪ್ರೇರಿಸಿ ವ್ಯಕ್ತಿಯ ಧ್ವನಿ ಆಕಾರ ಗಾತ್ರ ಮೊದಲಾದುವನ್ನು ಮಾರ್ಪಾಟು ಮಾಡುತ್ತದೆ. ಅದು7 ಅಂಡಾಶಯದಲ್ಲಿ ಲೈಂಗಿಕ ಜಾಗ್ರತಿಗೆ ಸಂಬಂಧಿಸಿದ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಪ್ರೇರಣೆಗಳನ್ನು ಹುಟ್ಟಿಸುತ್ತದೆ. ಪಿಟ್ಯುಟರಿ ಪ್ರೇರಣೆಯಿಂದ ಅಂಡಕೋಶದಲ್ಲಿ ಸುಪ್ತಾವಸ್ಥೆಯಲ್ಲಿರುವ ಅಸಂಖ್ಯ ರೇತಸ್ಸಿನ ಕಣಗಳು ಬಲಿಯುತ್ತ ಹೋಗುತ್ತವೆ. ಮುಂದೆ ಸತತ ರೇತಸ್ಸಿನ ಕಣಗಳು ಉಂಟಾಗುತ್ತಿರುತ್ತವೆ. ಈ ರೇತಸ್ಸಿನ ಕಣಗಳ ಪ್ರವಾಹಕ್ಕೆ ಇನ್ನೂ ಎರಡು ಬಗೆಯ ದ್ರವಗಳು ಸೇರಿಕೊಳ್ಳುತ್ತವೆ. ಅದನ್ನು ವೀರ್ಯ (ಸೆರಮ್) ಎನ್ನುತ್ತಾರೆ.

ಚಟುವಟಿಕೆ ಅತಿ ಅಥವಾ ಕಡಿಮೆ

[ಬದಲಾಯಿಸಿ]
  • ಪಿಟ್ಯುಟರಿ ಗ್ರಂಥಿಯ ಚಟುವಟಿಕೆ ಅತಿಯಾದಲ್ಲಿ ದೇಹದ ಮೇಲೆ ಒಂದು ರೀತಿಯ ಪರಿಣಾಮವಾದರೆ, ಕಡಿಮೆಯಾದರೂ ಹಾನಿಕಾರಕ ಪರಿಣಾಮವಾಗುವುದು. ಅದರ ಚಟುವಟಿಕೆ ಅತಿಯಾದರೆ ದೇಹದ ಗಾತ್ರ ಹೆಚ್ಚಾಗುವುದು. ಪ್ರೇರಕ ದ್ರವವನ್ನು ಇಲಿಗಳ ಮೈಗೆ ಚುಚ್ಚಿ ಸೇರಿಸಿದಾಗ ಒಂದು ವರ್ಷದಲ್ಲಿ ಅದರ ತೂಕ ಎರಡುಪಟ್ಟಾಯಿತು. ಗ್ರಂಥಿಯ ಚಟುವಟಿಕೆ ಕಡಿಮೆಯಾದರೆ ದೇಹ ಕುಬ್ಜಾವಸ್ಥೆಗೆ ಬರುತ್ತದೆ. ಕಾಯನಸ್ ಎಂಬ ಒಬ್ಬ ವ್ಯಕ್ತಿ ಇದರ ಅತಿ ಚಟುವಟಿಕೆಯಿಂದ 9.2 ಅಡಿ ಬೆಳೆದಿದ್ದ. ಜಾಕ್ ಅರ್ಲೆ 8ಅಡಿ 7 ಇಂಚು ಎತ್ತರ ಬೆಳೆದಿದ್ದ. ಇದಕ್ಕೆ ಪ್ರತಿಯಾಗಿ ಮೇಜರ್ ವೈಟ್ ಎನ್ನುವವ 2 ಅಡಿಗೂ ಕಡಿಮೆ ಎತ್ತರದವನಾಗಿದ್ದ.
  • ಅದೇ ರೀತಿ ಇದರ ಹೆಚ್ಚಿನ ಚಟುವಟಿಕೆಯಿಂದ ಕೈ, ಕಾಲು ಮುಖ ಇತ್ಯಾದಿ ದೇಹದ ಕುಡಿ ಅಂಗಗಳು ವಿಕಾರವಾಗಿ ಬೆಳೆಯಬಹುದು. ಪ್ರಾಯ ಬರುವ ಮಕ್ಕಳಲ್ಲಿ ಇದರ ಚಟುವಟಿಕೆ ಹೆಚ್ಚಾದರೆ ಅಂಗವಿಕಾರ ವಾಗುವುದು.
  • ಪಿಟ್ಯುಟರಿ ಗ್ರಂಥಿಯ ಮಗ್ಗುಲಲ್ಲಿ ಮಿದುಳಿನ ಭಾಗ ‘ಥಾಲಮಸ್’ ಇದೆ. ಅಲ್ಲಿಂದ ಒಸರುವ ದ್ರವದಿಂದ ಮೂತ್ರಪಿಂಡಗಳ (ಕಲಿಜ)ಕೆಲಸ ನಿಯಂತ್ರಣಗೊಳುವುದು. ಅದರ ಒಸರುವಿಕೆ ಹೆಚ್ಚಾದರೆ ಬಹುಮೂತ್ರ ರೋಗ ಬರುವುದು. ಪಿಟ್ಯುಟರಿ ಗ್ರಂಥಿ ಸರಯಾಗಿ ಕೆಲಸ ಮಾಡದಿದ್ದರೆ, ಬೇಹದ ಬೆಳವಣಿಗೆ ಅಸಮಾವಾಗುವುದು; ಸೊಂಟದಲ್ಲಿ ಕೊಬ್ಬು ಸೇರಬಹುದು, ಮಖದ ಮಾಂಸ ಖಂಡಗಳು ದುರ್ಬಲವಾಗುವುವು. ಈ ಗ್ರಂಥಿಯು ಹೆಂಗಸರ ಗರ್ಭಕೋಶದ ಮೇಲೂ ಪರಿಣಾಮ ಬೀರುವುದು. ಇದನ್ನು ಬಳಸಿದ್ದರಿಂದ ಹೆರಿಗೆ ಸಕಾಲದಲ್ಲಿ ಆಗಲು ಪ್ರೇರೇಪಿಸುವುದು.

ಥೈರಾಯ್ಡ್ ಗ್ರಂಥಿಗಳು

[ಬದಲಾಯಿಸಿ]
ಕುತ್ತಿಗೆಯಲ್ಲಿ ಥೈರಾಯಿಡ್ ತಾಣ(Thyroide)
  • ಇದು ಗಂಟಲುನಾಳದ ಆರಂಬದಲ್ಲಿ ಅದರ ಎರಡೂಕಡೆ ಇರುವ ಒಂದು ಜೊತೆ ಗ್ರಂಥಿಗಳು. ಇದರ ಚಟುವಟಿಕೆ ಅತಿಯಾದರೆ ಅವು ಇರುವ ಭಾಗ ಉಬ್ಬಿ ಉಬ್ಬಿ ಗುಳ್ಳೆಯಂತಾಗುತ್ತದೆ. ಅದು ಉಬ್ಬಿ ಒಂದು ತೆಂಗಿನಕಾಯಿ ಗಾತ್ರ ಆಗುವುದುಂಟು. ಈ ಬೇನೆ ಹೆಂಗಸರಿಗೆ ಹೆಚ್ಚಾಗಿ ಬರುವುದುಂಟು. ಅದನ್ನು ಗಳಗಂಡ ರೋಗ (ಗಾಯಿಟರ್) ಎಂದು ಕರೆಯುತ್ತಾರೆ.
  • ಥೈರಾಯ್ಡ್ ಗ್ರಂಥಿಯು ಗಂಟಲ ನಾಲದ ಮುಂಭಾಗದಲ್ಲಿ ಇದೆ. ಥೈರಾಯಿಡ್ ನ ರಸಗುಳ್ಳೆಗಳು ಒಸರುವ (ಪ್ರೇರಕ ದ್ರವ್ಯ (ಹಾರ್ಮೋನ್) ದಲ್ಲಿ *ಥೈರೋಗ್ಲೊಬ್ಯುಲಿನ್ (thyroglobulin) ಎಂಬ ಸಂಯುಕ್ತ ರಸಾಯನಿಕ ಇದೆ. ಇದು ಗೈಕೋಪ್ರೋಟೀನ್ ಎಂಬ ಪ್ರೇರಕದ್ರವ್ಯ. ಥೈರಾಯ್ಡ್ ಒಂದು ಕಿರುಚೀಲಗಳಂತೆ ಇರುವ ಈ ಗ್ರಂಥಿಯಿಂದ ಗೈಕೋಪ್ರೋಟೀನ್ ಎಂಬ. ಥೈರಾಯ್ಡ್ ಹಾರ್ಮೋನ್ ಒಸರುವುದು.
  • ಥೈರಾಯ್ಡ್ ಹಾರ್ಮೋನ್ ನಲ್ಲಿ ಥೈರಾಕ್ಸಿನ್ (T4)) ಮತ್ತು ಟ್ರಿಯೋಡೊಥೈರೋನೈನ್ (T3) ಗಳು ಸೆಲ್ಯುಲರ್ (ಜೀವ ಕೋಶಗಳ) ಚಯಾಪಚಯದ ದರವನ್ನು ಹೆಚ್ಚಿಸುವುದು, ಪರಿಣಾಮವಾಗಿ, ಅದರಿಂದ ಆಮ್ಲಜನಕ ಬಳಕೆ ಹೆಚ್ಚುವುದು. ಮತ್ತು ಶಾಖ ಉತ್ಪಾದನೆಯ ಏರಿಕೆಯನ್ನೂ ಉಂಟುಮಾಡುತ್ತದೆ.
  • ಥೈರಾಯಿಡ್ ಹಾರ್ಮೋನು ಟಿಎಸ್ಎಚ್ ನಿಂದ ಪ್ರೇರಿತವಾಗಿದೆ. ಜೀವಕೋಶಗಳಿಂದ ಸ್ರವಿಸುವಿಕೆಯನ್ನು ಖಾಲಿ ಕುಳಿ ಸಂಗ್ರಹಿಸುತ್ತದೆ ಮತ್ತು ಇದರಿಂದ ಥೈರಾಯ್ಡ್ ಹಾರ್ಮೋನ್ ಮಟ್ಟಗಳು ಏರುವುದು. ಈ ಹಾರ್ಮೋನುಗಳು ಪ್ರತಿರೋಧಕ್ಕೆ ಮೆದುಳಿನ ಹೈಪೋಥೈಲಮಸಗೆ ಮತ್ತು ಪಿಟ್ಯುಟರಿಗೆ ಪುನಃಗ್ರಹಿಕೆಯನ್ನು. ಒದಗಿಸುವುದು.

ಪಾರಾಥೈರಾಯ್ಡ್ ಗ್ರಂಥಿಗಳು

[ಬದಲಾಯಿಸಿ]
ಪಾರಾ ಥೈರಾಯಿಡ್ ಗ್ರಂಥಿಗಳು-ಹಸಿರು ಬಣ್ಣದಲ್ಲಿ ಗುರುತು ಮಾಡಿದೆ.
  • ಥೈರಾಯಿಡ್ ಗ್ರಂಥಿಗಳ ಮೇಲೆ ಅವಕ್ಕೇನೇ ಅಂಟಿಕೊಂಡಿರುವಂತೆ (ಎರಡೆರಲ್ಲೂ) ಒಂದೊಂದು ಗ್ರಂಥಿಯಲ್ಲಿ ಎರಡೆರಡರಂತೆ ಅಂಟಿರುವ ಬೇರೆಯೇ ಚಿಕ್ಕ ಎರಡು ಗ್ರಂಥಿಗಳಿವೆ.ಅವನ್ನು ಪಾರಾ ಥೈರಾಯಿಡ್ ಗ್ರಂಥಿಗಳೆನ್ನುತ್ತಾರೆ. ಪ್ರಾಣಿ ಶರೀರದಿಂದ ಥೈರಾಯಿಡ್ ಗ್ರಂಥಿಗಳನ್ನು ತೆಗೆದರೂ ಅದು ಕೆಲವು ಕಾಲ ಬದುಕಬಲ್ಲದು. ಅದರ ದೇಹ ಮಾತ್ರಾ ವಿಕಾರಗೊಳ್ಳತ್ತದೆ. ಆದರೆ ಪಾರಾ ಥೈರಾಯಿಡ್ ಗ್ರಂಥಿಗಳನ್ನು ಕತ್ತರಿಸಿ ತೆಗೆದಲ್ಲಿ ಸಾವೂ ಬರಬಹುದು.

ಕೊರತೆಯಿಂದ ವಿಚಿತ್ರ ಮೈಸೆಟತ

[ಬದಲಾಯಿಸಿ]
  • ಪ್ರಯೋಗಾರ್ಥವಾಗಿ ನಾಯಿಯ ಗಂಟಲಿನಿಂದ ಪಾರಾ ಥೈರಾಯಿಡ್ ಗ್ರಂಥಿಗಳನ್ನು ತೆಗೆದರೆ ಅದರ ದೇಹದಲ್ಲಿ ವಿಚಿತ್ರ ಮೈಸೆಟತ (ಕನ್ವಲ್ಶನ್ಸ್) ಉಂಟಾದವು. ಪದೇ ಪದೇ ಈ ಸೆಟತವುಂಟಾಗಿ ನಾಯಿ ಸತ್ತಿತು. ಧನುವಾತದಲ್ಲುಂಟಾಗುವ ಸ್ನಾಯುಗಳ ಸೆಳತಕ್ಕೆ ಕಾರಣವನ್ನು ಶೋಧಿಸಿದ್ದಾರೆ.

ತೆಗೆದರೆ ಅಸ್ಥಿಪಂಜರ ದುರ್ಬಲ

[ಬದಲಾಯಿಸಿ]
  • ಪಾರಾ ಥೈರಾಯಿಡೆ ಒಸರುವ ಪ್ರೇರಕ ದ್ರವ್ಯಕ್ಕೆ ನಮ್ಮ ರಕ್ತದಲ್ಲಿರುವ ಕೇಲ್ಸಿಯಮ್ (ಸುಣ್ಣ) ಧಾತುವನ್ನು ನಿಯಂತ್ರಿಸುವ ಶಕ್ತಿಯಿದೆ. ಆ ಗ್ರಂಥಿಯನ್ನು ತೆಗೆದರೆ, ರಕ್ತದಲ್ಲಿರವ ಕೇಲ್ಸಿಯಂ ಅಂಸ ಕಡಿಮೆಯಾಗುತ್ತದೆ. ಅದರಿಂದ ಕೇಲ್ಸಿಯಂ ಅಭಾವದಿಂದಾಗಿ ಸ್ನಾಯುಗಳು ಸೆಟೆದುಕೊಳ್ಳತ್ತವೆ ಎಂದು ತಿಳಿದು ಬಂದಿದೆ. ಈಗ್ರಂಥಿ ಕೆಲಸ ಮಾಡದಿದ್ದರೆ ಅದೇ ಪರಿಣಾಮ ವಾಗುತ್ತದೆ. ಆಗ ರೋಗಿಗೆ ಕೇಲ್ಸಿಯಂ ಲವಣಗಳ ಚುಚ್ಚುಮದ್ದು ಕೊಡಬೇಕಾಗುವುದು. ಈ ಗ್ರಂಥಿಗಳ ಚಟುವಟಿಕೆ ಅತಿಯಾದರೆ ರಕ್ತದಲ್ಲಿ ಕೇಲ್ಸಿಯಂ ಧಾತು ಅಧಿಕವಾಗಿ ಬಂದು ಸೇರುತ್ತದೆ. ಇದರಿಂದ ನಮ್ಮ ಎಲುಬಿನಲ್ಲಿರುವ ಕೇಲ್ಸಿಯಂ ಕರಗಿ ರಕ್ತದಲ್ಲಿ ಸೇರುವುದರಿಂದ ನಮ್ಮ ಅಸ್ಥಿಪಂಜರ ದುರ್ಬಲವಾಗುತ್ತದೆ. ಈ ಗ್ರಂಥಿ ವಸರುವ ದ್ರವಕ್ಕೆ “ಪಾರಾಥರ್ಮೊನ್” ಎಂದು ಹೆಸರಿಟ್ಟಿದ್ದಾರೆ.

ಅಡ್ರೀನಲ್ ಗ್ರಂಥಿಗಳು

[ಬದಲಾಯಿಸಿ]
ಮೂತ್ರಪಿಂಡಗಳ ಮೇಲೆ ಟೊಪ್ಪಿಗೆಯಂತಿರುವ ದಟ್ಟ ಹಳದಿಬಣ್ಣದ ಗ್ರಂಥಿಗಳು
  • ಅಡ್ರೀನಲ್ ಗ್ರಂಥಿಗಳಿಗೆ (ಎಪಿನೆಫ್ರೈನೆ ?ಮತ್ತು) ಸುಪ್ರಾರೀನಲ್ ಗ್ರಂಥಿಗಳು ಎಂದೂ ಕರೆಯುತ್ತಾರೆ. ದೇಹ ಕೃಶವಾಗುವ ಕೆಲವು ರೋಗಗಳಿಗೆ ಈ ಅಡ್ರೀನಲ್ ಗ್ರಂಥಿಗಳು ಕಾರಣವೆಂದು ಡಾ.ಎಡಿಸನ್ ಎಂಬಾತ 1881ರಲ್ಲಿ ಕಂಡುಹಿಡಿದ. ಈ ಗ್ರಂಥಿಗಳು ನಮ್ಮ ಮೂತ್ರಪಿಂಡಗಳ ಅಥವಾ ಕಲಿಜಗಳ ಮೇಲುಗಡೆಯಲ್ಲಿರುವ ಹಳದಿಬಣ್ಣದ ಎರಡು ಕೋಶಗಳು ಅಥವಾ ಗ್ರಂಥಿಗಳು. ಈ ಗ್ರಂಥಿಯ ಹೊದ್ದಿಕೆಯ (ಕೊರ್ಟೆಕ್ಸ್) ರಚನೆಯು ಒಂದು ಬಗೆಯದು, ಒಳಭಾಗ ರಚನೆ (ಮೆಡ್ಯುಲ) ಇನ್ನೊಂದು ಬಗೆಯದು. ಮೀನಿನಲ್ಲಿ ಇವೆರಡೂ ಪ್ರತ್ಯೇಕವಾದ ಕೋಶವಾಗಿವೆ. ಮನುಷ್ಯರಲ್ಲಿ ಇವೆರಡು ಭಾಗಗಳು ಒಂದುಗೂಡಿವೆ.
  • ಈ ಗ್ರಂಥಿಯನ್ನು ಕತ್ತರಿಸಿ ತಗೆದಲ್ಲಿ ಮನುಷ್ಯನು ಸತ್ತುಹೋಗಬಹುದು. ಇದರ ಒಳಭಾಗವನ್ನು ತೆಗೆದರೂ ಜೀವಕ್ಕೆ ಅಪಾಯ. ಇದರ ಒಳಬಾಗದಿಂದ ಎಡ್ರಿನಾಲ್/ಅಡ್ರಿನಾಲ್ ಎಂಬ ದ್ರವ ಒಸರುತ್ತದೆ. ಈ ರಸಾಯನಿಕ ದ್ರವವು ರಕ್ತನಾಳಗಳ ಸಂಕೋಚನಕ್ಕೆ ಸಹಾಯ ಮಾಡುತ್ತದೆ. ಆ ದ್ರವವನ್ನು ಪ್ರತ್ಯೇಕವಾಗಿ ನಮ್ಮ ರಕ್ತಕ್ಕೆ ಸೇರಿಸಿದಲ್ಲಿ ರಕ್ತನಾಳಗಳು ಸಂಕೋಚಗೊಂಡು ರಕ್ತ ವೇಗವಾಗಿ ಹರಿಯುತ್ತದೆ. ಅದೇ ಎಡ್ರಿನಾಲ್ ದ್ರವವು ಹೊಟ್ಟೆ ಕರುಳು ಗಂಟಲು ನಾಳ ಮೊದಲಾದ ಸ್ನಾಯುಗಳ ಮೇಲೆ ಇದಕ್ಕೆ ವಿರುದ್ಧವಾದ ಪಪಿಣಾಮ ಮಾಡುತ್ತದೆ. ಕೋಪ ಬಂದಾಗ, ಆತುರ ಹೆಚ್ಚಾದಾಗ ಭಯವಾದಾಗಲೂ ಈ ದ್ರವದ ಪ್ರಮಾಣ ರಕ್ತದಲ್ಲಿ ಹೆಚ್ಚುತ್ತದೆ. ಭಯವಾದಾಗ ಕಾಣಿಸುವ ರೋಮಾಂಚನ, ಕಣ್ಣಾಲಿಗಳು ದೊಡ್ಡಾಗುವಿಕೆ ಸೂಕ್ಷ್ಮ ರಕ್ತನಾಳಗಳು ಸಂಕುಚಿತಗೊಂಡು ಮೈ ಕೆಂಪಡರುವಿಕೆ ಈ ದ್ರವದ ಹೆಚ್ಚಿನ ಒಸರುವಿಕೆಯ ಕಾರಣದಿಂದ. ಆಪತ್ತಿನ ಸಮಯದಲ್ಲಿ ನಾವು ರಕ್ಷಣೆಗಾಗಿ ಹೋರಾಡಬೇಕಾಗುತ್ತದೆ, ಇಲ್ಲವೇ ಓಡಿಹೋಗಬೇಕಾಗುತ್ತದೆ. ಇದಕ್ಕೆ ಬೇಕಾಗುವ ಚುರುಕುತನವನ್ನೂ ಆವೇಗ-ಶಕ್ತಿಗಳನ್ನೂ ಸ್ನಾಯುಗಳಿಗೆ ಒದಗಿಸಿಕೊಡುವುದೇ ಈ ಗ್ರಂಥಿದ್ರವದ ಕೆಲಸ. ಆದರೆ ಇದರ ಪ್ರಮಾಣ ಹೆಚ್ಚಾದರೆ ಕಾತುರ ಹೆಚ್ಚಿ ದೇಹ ಕೆಲಸಮಾಡದೆ ಹೊಗಬಹುದು. ಈ ದ್ರವದ ಅತಿ ಶ್ರಾವದಿಂದ ರಕ್ತ ಚಲನೆ ಹೆಚ್ಚಿ ಹೃದಯಕ್ಕೆ ತೊಂದರೆಯಾಗಬಹುದು.
  • ಅಡ್ರೀನಲ್ ಗ್ರಂಥಿಯ ದ್ರವದ ಕೆಲಸ ಇವಾದರೆ, ಅದರ ಹೊದ್ದಿಕೆಯು ಒಸರುವ ದ್ರವ್ಯವು ಬೇರೆ ಬಗೆಯದು. ಅದರ ದ್ರವದ ಸಾರಜನಕ ಪದಾರ್ಥಗಳಿಂದ ದೇಹದಲ್ಲಿರುವ ಕೆಲವು ವಿಷವಸ್ತುಗಳನ್ನು ನಿವಾರಿಸಬಹುದೆಂಬ ನಂಬುಗೆ ಇದೆ. ತರುಣರಲ್ಲಿ ಗಂಡಸಿನ ಲಕ್ಷಣಗಳು ತೋರುವುದು. ಅದೇ ತರುಣಿಯರಲ್ಲಿ ಅದರ ಒಸರುವಿಕೆ ಪ್ರಮಾಣ ಹೆಚ್ಚಾದರೆ, ಆಗ ಅವರಿಗೆ ಗಂಡಸಿನ ಲಕ್ಷಣ ಬರುವುದುಂಟು. ಮುಖದ ಮೇಲೆ ರೋಮ ಬೆಳೆಯಬಹುದು, ಸ್ಥನಗಳು ಸಂಕೋಚಗೊಳ್ಳಬಹುದು. ಆಗ ಅದರ ಅತಿ ಬೆಳವಣಿಗೆ ತಡೆಯಲು ಅದರ ಶಸ್ತ್ರಕ್ರಿಯೆ ಮಾಡುವರು, ನಂತರ ಅವರ ದೇಹಸ್ಥಿತಿ ಮೊದಲಿನಂತಾಗಬಹುದು.
  • ಇನ್ಪ್ಲುಯೆಂಜಾ ಮೊದಲಾದ ಅನೇಕ ರೋಗಗಳಿಂದಾಗುವ ದೇಹದೌರ್ಬಲ್ಯಕ್ಕೆ ಈ ಅಡ್ರೀನಲ್ ಗ್ರಂಥಿಯ ಚಟುವಟಿಕೆ ಕಡಿಮೆಯಾದುದೇ ಕಾರಣವೆಂದು ಕಂಡುಹಿಡಿದಿದ್ದಾರೆ.
  • ಗಂಡಸರಲ್ಲಿ, ಮೂತ್ರಜನಕಾಂಗದ ಕವಚವು ಮೂರು ಪ್ರಮುಖ ವಿಧಗಳ (ಗಂಡು ಹಾರ್ಮೋನ್ಗಳನ್ನು) ಸ್ಟೆರಾಯ್ಡ್ ಹಾರ್ಮೋನುಗಳನ್ನು ಮಿನರಲೋಕಾರ್ಟಿಕಾಯ್ಡ್ಗಳು, ಗ್ಲುಕೊಕಾರ್ಟಿಕಾಯ್ಡ್ಗಳು ಉತ್ಪಾದಿಸುತ್ತದೆ ಮತ್ತು ಮಹಿಳೆಯರಲ್ಲಿ ಆಂಡ್ರೋಜೆನ್ಗಳನ್ನು ಉತ್ಪಾದಿಸುತ್ತದೆ.

ಮೇದೋಜೀರಕ ಗ್ರಂಥಿ

[ಬದಲಾಯಿಸಿ]
ಮಧ್ಯದಲ್ಲಿ ತಿಳಿಕೆಂಪುಹೊಟ್ಟೆ/ ಜಠರ ಅದರ ತಲದಲ್ಲಿ ಜಠರದ ಮೇಲೆ ಇರುವುದು- ಹಳದಿ ಬಣ್ಣದ್ದು ಮೇದೋಜೀರಕ (Blausen 0316 DigestiveSystem)
  • ಮೇದೋಜೀರಕವು ಕಿಬ್ಬೊಟ್ಟೆಯಲ್ಲಿರುವ ಆಹಾರಕ್ಕೆ ರಸವನ್ನು ಒಸರುತ್ತದೆ. ಇದರಿಂದ ಸಕ್ಕರೆ ಜೀರ್ಣವಾಗಲು ಸಂಬಂದವಿದೆ ಎಂಬ ವಿಷಯ ಮಾತ್ರಾ 20 ನೇಶತಮಾನದ ಮೊದಲು ತಿಳಿದಿತ್ತು. ಆಹಾರದಲ್ಲಿನ ಸಕ್ಕರೆ ಅಂಶ ಒಡೆದು ರಕ್ತದ ಮೂಲಕ ದೇಹದ ಅಂಗಗಳಿಗೆ ದೊಟೆಯದೆ ಹೋದರೆ ದಣಿವು ಹೆಚ್ಚಾಗುತ್ತದೆ. ಈ ಮೇದೋಜೀರಕ ಕೊರತೆಯ ರೋಗ ಹೆಚ್ಚಾದರೆ ದೇಹದ ಗಾಯ, ಹುಣ್ಣು ಬೇಗ ಮಾಯುವುದಿಲ್ಲ. ಜೀರ್ಣವಾಗದ ಸಕ್ಕರೆ ರಕ್ತದಿಂದ ಮೂತ್ರಕ್ಕಸೇರಿ ವಿಸರ್ಜನೆಯಾಗುವುದು. ಇದನ್ನು ಸಿಹಿಮೂತ್ರ ರೋಗವೆನ್ನವುರು. ಇದು ಮಕ್ಕಳು ಮತ್ತದೊಡ್ಡವರಿಗೂ ಬರಬಹುದು. ಮೊದಲು ಈರೋಗವಿದ್ದವರಿಗೆ ಸಕ್ಕರೆಯ ಅಂಶ ಇರದ ಆಹಾರ ಕೊಡುತ್ತಿದ್ದರು. ಈಗ ಆಬಗೆಯ ರೋಗಿಗಳಿಗೆ ಮೊದಲ ಹಂತದಲ್ಲಿ ಮೇದೋಜಿರಕ ರಸದ ಅಂಶವುಳ್ಳ ಇನ್ಸುಲಿನ್ ಕೊಡುತ್ತಾರೆ. ಈ ಇನ್ಸುಲಿನ್ ಕಂಡುಹಿಡಿದವನು ಬೆಂಟಿಂಕ್ ಎಂಬ ತರುಣ ವೈದ್ಯ. ಮೇದೋಜೀರಕ ಬಗೆಯ ಗ್ರಂಥಿಗಳಿಲ್ಲದಿದ್ದರೆ ನಾಯಿಗಳಿಗೂ ಸಕ್ಕರೆ ಕೊರತೆ ರೋಗ ಬರಬಹುದೆಂದು ತಿಳಿದ. 1921ರಲ್ಲಿ ಬೆಂಟಿಂಕ್ ಮೇದೋಜೀರಕ ಗ್ರಂಥಿಯಲ್ಲಿ ಲೆಂಗರ್‍ಹೇಮ್ ಎಂಬ ಭಾಗ ರಸ ವಸರುವದನ್ನು ತಿಳಿದು ಅದರ ಬಗೆಗೆ ಸಂಶೋಧನೆ ಮಾಡಿದ. ಮೃತಪ್ರಾಣಿಗಳಿಂದ ಲೆಂಗರ್‍ಹೇಮ್ ಭಾಗ ತೆಗೆದು ಅದರ ಇನ್ಸುಲಿನ್ ಎಂಬ ಸಾರವನ್ನು ತೆಗೆದು, ಆ ಇನ್ಸುಲಿನ್ ಸಾರವನ್ನು ನಾಯಿಗಳಿಗೆ ಚುಚ್ಚಿದಾಗ ರಕ್ತದಲ್ಲಿರುವ ್ಲ ಸಕ್ಕರೆಯ ಅಂಶ ಕಡಿಮೆಯಾದುದು ಕಂಡು ಬಂತು. ಕಸಾಯಿಖಾನೆಗಳಲ್ಲಿ ಕೊಂದ ಪ್ರಾಣಿಗಳಿಂದ ಮೇದೋಜೀರಕದ ಲೆಂಗರ್‍ಹೇಮ್ ಗ್ರಂಥಿ ಸಾರವನ್ನು ತೆಗೆದು ಮಾನವರಿಗೂ ಕೊಡಬಹುದೆಂದು ಡಾ.ಬೆಂಟಿಂಕ್ ತೋರಿಸಿದ. ಹೀಗೆ ಸಿಹಿಮೂತ್ರ ರೋಗಕ್ಕೆ ಮಾವರಿಗೂ ಲೆಂಗರ್‍ಹೇಮ್ ಸಾರವಾದ ಇನ್ಸುಲಿನ್ ಚಿಕಿತ್ಸೆ ಬಳಕೆಗೆ ಬಂದಿತು. ಈಗ ಇನ್ಸುಲಿನಿನ ಒಂದು ಸಂಯುಕ್ತವಾದ ಪ್ರಟಾಮಿನ್ ಇನ್ಸುಲಿನ್ ನ್ನು ಸಿಹಿಮೂತ್ರರೋಗಕ್ಕೆ ಉಪಯೋಗಿಸುತ್ತಾರೆ.

ಲೈಂಗಿಕ ಗ್ರಂಥಿಗಳು

[ಬದಲಾಯಿಸಿ]

ಹೆಣ್ಣಿನಲ್ಲಿ ಹೆಣ್ಣುತನಕ್ಕೆ ಕಾರಣ

[ಬದಲಾಯಿಸಿ]
  • ಸೊಂಟದ ಶ್ರೋಣಿಯ(ಪೆಲ್ವಿಕ್ ಕ್ಯಾವಿಟಿ- pelvic cavity) ಕುಳಿಯಲ್ಲಿ ನೆಲಸಿರುವ ಸ್ತ್ರೀಯ ಅಂಡಾಶಯಗಳು, ಎರಡು ಮುಖ್ಯವಾದ ಪ್ರೇರಕದ್ವ್ಯ (ಹಾರ್ಮೋನು) ಗಳನ್ನು ಬಿಡುಗಡೆ ಮಾಡುವುದು. ಅಂಡಾಶಯದ ಕಿರುಚೀಲಗಳ ಮೂಲಕ ಎಫ್.ಎಸ್.ಎಚ್ ಪ್ರಭಾವದಿಂದ ಪ್ರೇರಣ ದ್ರವ್ಯ (ಹಾರಮೊನ್) ಈಸ್ಟ್ರೋಜೆನ್ಗಳ (estrogens ) ಸ್ರವಿಸುವಿಕೆಯಿಂದ. ಪ್ರೌಢಾವಸ್ಥೆಯು ಆರಂಭಗೊಳ್ಳುತ್ತದೆ. ಸ್ತ್ರೀಯ ಗರ್ಭಾಶಯದ ಮೇಲೆ ಪರಿಣಾಮ ಉಂಟುಮಾಡುವ ಎರಡು ಬಗೆಯ ಪಿಟ್ಯಟರಿ ಪ್ರೇರಕದ್ರವಗಳುಂಟಾಗುತ್ತವೆ. ಇವುಗಳಲ್ಲಿ ಒಂದು ಗರ್ಭಾಶಯದಲ್ಲಿರುವ ತತ್ತಿಗಳನ್ನು ಬೆಳೆಯಿಸುವುದಕ್ಕೆ ಕಾರಣವಾಗುತ್ತದೆ. ಹುಡುಗಿಯಾದವಳು ಜನ್ಮಕ್ಕೆ ಬರುವಾಗಲೇ ಮುಂದಿನ ಜೀವನಕ್ಕೆ ಬೇಕಾಗುವ ಯಾವತ್ತು ತತ್ತಿಗಳು (ಅಂಡಗಳು) ಅವಳ ದೇಹದಲ್ಲಿ ಉಂಟಾಗಿರುತ್ತವೆ. ಪಿಟ್ಯುಟರಿ ಗ್ರಂಥಿಯ ಪ್ರೇರಣೆಯಿಂದ ಸ್ತ್ರೀಯ ಗರ್ಭಕೋಶದಲ್ಲಿ ತತ್ತಿಯ ಕೋಶವೂ (ಓವರಿ) ವಿನಾಳ ಗ್ರಂಥಿಗಳಂತೆಯೇ ಎರಡು ಮೂರು ಬಗೆಯ ಪ್ರೇರಕ ದ್ರವ್ಯಗಳನ್ನು ಸೂಸುತ್ತದೆ. ಅದೇ ಪ್ರೇರಕ ಈಸ್ಟ್ರೋಜೆನ್ ಉತ್ಪತ್ತಿ ಮತ್ತು ಬಿಡುಗಡೆಗೆ ಕಾರಣವಾಗುತ್ತದೆ.
  • ಈಸ್ಟ್ರೋಜೆನ್ಗಳು ಸ್ತ್ರೀಯ ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಮಾಧ್ಯಮಿಕ ಲೈಂಗಿಕ ಲಕ್ಷಣಗಳ ಅಭಿವೃದ್ಧಿಯ ಪಕ್ವತೆಯನ್ನು ಉತ್ತೇಜಿಸುತ್ತದೆ. ಎಲ್ಎಚ್ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಪ್ರತಿಕ್ರಿಯೆಯಿಂದಾಗಿ ಪ್ರೋಜೆಸ್ಟೋರೋನ್ ಬಿಡುಗಡೆಯಾಗುತ್ತದೆ. ಪ್ರಾಯಕ್ಕೆ ಬರುವ ಹೆಣ್ಣಿನಲ್ಲಿ, ಇದು ಈಸ್ಟ್ರೋಜೆನ್ ಎಂಬ ಪ್ರೇರಕದ್ರವ್ಯದ ಜೊತೆ ಸೇರಿ ಋತುಚಕ್ರದ ವ್ಯವಸ್ಥೆಯನ್ನು ಸ್ಥಾಪಿಸುವ ಕೆಲಸ ಮಾಡುತ್ತದೆ. ಸ್ತ್ರೀಯ ಗರ್ಭಕೋಶದಲ್ಲಿ ತತ್ತಿಯ ಕೋಶವೂ (ಓವರಿ-ovary) ವಿನಾಳ ಗ್ರಂಥಿಗಳಂತೆಯೇ ಎರಡು ಮೂರು ಬಗೆಯ ಪ್ರೇರಕ ದ್ರವ್ಯಗಳನ್ನು ಸೂಸುತ್ತದೆ. ಅವುಗಳಲ್ಲಿ ಒಂದು ಆಕೆಯ ದೇಹದ ಬೆಳವಣಿಗೆಗೆ ಕಾರಣವಾಗುತ್ತದೆ. ಇನ್ನೆರಡು ಸಂತಾನೊತ್ಪತ್ತಿಯ ಕ್ರಿಯೆಗೆ ಕಾರಣವಾಗುತ್ತವೆ. ಈ ಕಾಲದಲ್ಲಿ ದ್ರವಿಸುವ ಒಂದು ದ್ರವ್ಯವು ಥೀಲಿನ್. ಇದು ರಕ್ತವನ್ನು ಸೇರಿ ಗರ್ಭಕೋಶದ ಕವಚವನ್ನೂ, ಫಲಿಸಿದ ತತ್ತಿಯನ್ನೂ ರಕ್ಷಿಸಲು ಬೇಕಾದ ಮಾರ್ಪಾಟಿಗೆ ಸಹಾಯ ಮಾಡುತ್ತದೆ. ಙಲೀನ್ ದ್ರವ್ಯದ ಪ್ರೇರಣೆಯಿಂದ ಗರ್ಭಕೋಶದ ಗೋಡೆಗಳು ದಪ್ಪನಾಗುತ್ತವೆ. ಅದರ ಒಳಬಾಗ ಮಿದುವಾಗುತ್ತದೆ.
  • ತತ್ತಿಕೋಶ ಸ್ರವಿಸುವ ಈ ಥಿಲೀನ್ ದ್ರವ ಹೆಣ್ಣಿನಲ್ಲಿ ಗಂಡಿನ ಬಯಕೆ ಉಂಟುಮಾಡುತ್ತದೆ. ಋತುಮತಿಯಾದ ಹುಡುಗಿಯ ಗರ್ಭಾಶಯದಲ್ಲಿ ಸುಪ್ತಾವಸ್ಥೆಯಲ್ಲಿದ್ದ ತತ್ತಿಗಳು ಬಲಿಯುತ್ತವೆ. ಅವುಗಳನ್ನು ಇಟ್ಟುಕೊಂಡ ಅಂಗ ಗ್ರಾಫಿಯನ್ ಫಾಲಿಕಲ್ ಆಗ ಹಿಗ್ಗುತ್ತದೆ. ಒಂದು ತತ್ತಿಯನ್ನು ಗರ್ಭಾಶಯಕ್ಕೆ ಕಳಿಸಿದ ನಂತರ ಇನ್ನೊಂದುಬಗೆಯ ಪ್ರೇರಕ ದ್ರವದಿಂದ ತತ್ತಿಯ ಕೋಶ ಮುದುಡಿಕೊಳ್ಳುತ್ತದೆ. ಅದು ಮುದುಡಿ ಮುದ್ದೆಯಾಗಿ ಕೊಬ್ಬಿನಂತಾಗಿ ಹಳದಿಬಣ್ಣದ ಮೃದುಕಾಯವಾಗುತ್ತದೆ ಅದನ್ನು ಹಳದಿಕಾಯ (ಕೊಪ್ಸ್ ಲೂಟೆಮ್) ಎನ್ನುತ್ತಾರೆ, ಇದು ಭ್ರೂಣ ಬೆಳೆದು ಮಗುವಾಗಲೂ ಸಹಾಯ ಮಾಡುವುದು. ಈ ಹಳದಿಕಾಯ ಪಿಟ್ಯುಟರಿ ಪ್ರೇರಣೆಯಿಂದ ಪ್ರೋಜಿಸ್ಟೀನ್ ಎಂಬ ಇನ್ನೊಂದು ಪ್ರೇರಕ ದ್ರವ್ಯವನ್ನು ದ್ರವಿಸುತ್ತದೆ. ಇದೂ ಕೂಡ ಗರ್ಭಾಶಯವು ಫಲಿಸಿದ ತತ್ತಿಯನ್ನ ಸ್ವೀಕರಿಸಲು ವಿಶೇಷ ಸಹಾಯ ಮಾಡುತ್ತದೆ. ಭ್ರೂಣಕ್ಕೆ ಹೊಕ್ಕಳು ಬಳ್ಳಿಯಿಂದ ಆಹಾರ ಹೋಗುವುದಕ್ಕೆ ಮೊದಲು ಬೇಕಾಗುವ ಆಹಾರ ದ್ರವ್ಯವನ್ನು ಇದೇ ಒದಗಿಸುವುದು.
  • ಎಲ್.ಎಚ್ ಎನ್ನುವುದು ಪಿಟುಟರಿ ಗ್ರಂಥಿಯ ಹೊರಭಾಗದಲ್ಲಿ ಲುಟೆನೈಸಿಂಗ್ (ಲ್ಯೂಟಂನ ಅಭಿವೃದ್ಧಿ) ಹಾರ್ಮೊನ್ ಸ್ರವಿಸಿವ - ಪ್ರೇರಕದ್ರವ,, ಇದು ರಕ್ತಕ್ಕೆ ಸೇರಿ ಹೆಣ್ಣುತನದ ಗುಣ-ಕ್ರಿಯೆಗೆ ಉತ್ತೇಜಿಸುತ್ತದೆ.(Luteinizing hormone (LH, also known as lutropin and sometimes lutrophin[1]) is a hormone produced bygonadotropic cells in the anterior pituitary gland. In females, an acute rise of LH ("LH surge")

ಗಂಡಿನಲ್ಲಿ ಗಂಡಸಿನ ಲಕ್ಷಣಗಳಿಗೆ ಕಾರಣ

[ಬದಲಾಯಿಸಿ]
  • ಅದೇ ರಿತಿ ಪುರುಷ ವೃಷಣಗಳು ರಕ್ತದಲ್ಲಿ ಎಲ್ಎಚ್ ನ ಪ್ರತಿಕ್ರಿಯೆಯಿಂದಾಗಿ ಪ್ರೌಢಾವಸ್ಥೆಯ ಟೆಸ್ಟೋಸ್ಟೆರಾನ್ ಉತ್ಪತ್ತಿ ಮಾಡುತ್ತವೆ. ಟೆಸ್ಟೋಸ್ಟೆರಾನ್ ವೃಷಣಗಳ ಮೂಲಕ ಪುರುಷ ಸಂತಾನೋತ್ಪತ್ತಿ ಅಂಗಗಳನ್ನು ಪಕ್ವತೆ ಮಾಡುತ್ತದೆ ಮತ್ತು ವೀರ್ಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇತರ ಪುರುಷತ್ವದ ಮಾಧ್ಯಮಿಕ ಲಿಂಗ ಲಕ್ಷಣಗಳ ಬೆಳವಣಿಗೆಗೆ ಸಹಕರಿಸುತ್ತದೆ,
  • ಪಿಟ್ಯಟರಿ ಪ್ರೇರಕದ್ರವದಿಂದ ಹುಡುಗರಲ್ಲಿಯೂ ಪ್ರಾಯಕ್ಕೆ ಬಂದಾಗ ಇನ್ನೊಂದು ಬಗೆಯ ಬದಲಾವಣೆಯಾಗುತ್ತದೆ. ಅಂಡಾಶಯದಲ್ಲಿರುವ ಗೋನೆಡ್ ಗ್ರಂಥಿಗಳನ್ನು ಈ ದ್ರವ್ಯವು ಪ್ರೇರಿಸಿ ವ್ಯಕ್ತಿಯ ಧ್ವನಿ ಆಕಾರ ಗಾತ್ರ ಮೊದಲಾದುವನ್ನು ಮಾರ್ಪಾಟು ಮಾಡುತ್ತದೆ. ಅದು7 ಅಂಡಾಶಯದಲ್ಲಿ ಲೈಂಗಿಕ ಜಾಗ್ರತಿಗೆ ಸಂಬಂಧಿಸಿದ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಪ್ರೇರಣೆಗಳನ್ನು ಹುಟ್ಟಿಸುತ್ತದೆ. ಪಿಟ್ಯುಟರಿ ಪ್ರೇರಣೆಯಿಂದ ಅಂಡಕೋಶದಲ್ಲಿ ಸುಪ್ತಾವಸ್ಥೆಯಲ್ಲಿರುವ ಅಸಂಖ್ಯ ರೇತಸ್ಸಿನ ಕಣಗಳು ಬಲಿಯುತ್ತ ಹೋಗುತ್ತವೆ. ಮುಂದೆ ಸತತ ರೇತಸ್ಸಿನ ಕಣಗಳು ಉಂಟಾಗುತ್ತಿರುತ್ತವೆ. ಈ ರೇತಸ್ಸಿನ ಕಣಗಳ ಪ್ರವಾಹಕ್ಕೆ ಇನ್ನೂ ಎರಡು ಬಗೆಯ ದ್ರವಗಳು ಸೇರಿಕೊಳ್ಳುತ್ತವೆ. ಅದನ್ನು ವೀರ್ಯ (ಸೆರಮ್) ಎನ್ನುತ್ತಾರೆ.
  • Luteinizing hormone-: LH:
  • ಐ,ಸಿ.ಎಸ್.ಎಚ್ ಗಂಡಸರಲ್ಲಿ ಸಹ ಪಿಟುಟರಿ ಗ್ರಂಥಿಯ ಹೊರಭಾಗದಲ್ಲಿ ತೆರಪಿನ ಸೆಲ್-ಉತ್ತೇಜಿಸುವ ಹಾರ್ಮೋನಿನ -ಪ್ರೇರಕ ದ್ರವ್ಯವು ಟೆಸ್ಟೋಸ್ಟೆರಾನ್ ಲೇಡಿಗ್ನ ಸೆಲ್ ಗೆ ಟೆಸ್ಟೊಸ್ಟೆರೊನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ. (ಇಂಟರ್ ಸ್ಟಿಟಿಯಲ್ ಸೆಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ ಲೈಡಿಗ್ ಸೆಲ್ ಗಳು ಟೆಸ್ಟೊಸ್ಟೆರೊನ್ ಉತ್ಪಾದನೆಗೆ ಪ್ರಚೋದಿಸುತ್ತದೆ.)(In males, where LH had also been called interstitial cell–stimulating hormone (ICSH), it stimulates Leydig cell production of testosterone.[2] It acts synergistically withFSH:

ಪ್ಲೀಹ ಅಥವಾ ಗುಲ್ಮ

[ಬದಲಾಯಿಸಿ]
  • ಸ್ಪ್ಲೀನ್ :
  • ಮೇದೋಜೀರಕ ಗ್ರಂಥಿಯಂತೆ ನಮ್ಮ ಜಠರಕ್ಕೆ ತಾಗಿರುವ ಪ್ಲೀಹ ( ಸ್ಪ್ಲೀನ್) ಎಂಬುದು ಕೂಡ ಒಂದು ಪ್ರಧಾನ ಪ್ರೇರಕದ್ರವ್ಯವನ್ನು ಒಸರುವ ಗ್ರಂಥಿ. ಅದು ಹೊಟ್ಟೆಯ ಎಡಭಾಗದಲ್ಲಿದೆ. ತುಂಬಾ ನಾರುಳ್ಳ ಕಣಕೂಟಗಳಿಂದಲೂ ಸ್ನಾಯುಗಳಲ್ಲಿ ರಕ್ತನಾಳ ಸಮೃದ್ಧಿಯಿಂದಲೂ ಕೂಡಿದ ಈ ಅಂಗವು ಹತ್ತಾರು ಕೆಲಸಗಲಿಗೆ ನೆರವಾಗುತ್ತದೆ. ಅದರಲ್ಲಿ ರಕ್ತನಾಳಗಲು ಅಧಿಕವಾಇರುವುದರಿಂದ ಅದು ರಕ್ತವನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೂ ಒಂದು ಸಹಾಯಕ ಅಂಗವಾಗಿದೆ. ರಕ್ತಕಣಗಳು ನಾಶವಾಗುವಾಗ ಇಲ್ಲಿ ಬಂದು ಸಂಗ್ರಹವಾಗುತ್ತವೆ. ಅವುಗಳಲ್ಲಿರುವ ಕಬ್ಬಿಣದ ಅಂಶ ಇಲ್ಲಿಯೂ ಯಕೃತ್ತಿನಲ್ಲಿಯೂ ಸಂಗ್ರಹಿಸಲ್ಪಡುತ್ತವೆ. ಇಲ್ಲಿಂದಲೇ ಹೊಸ ಕೆಂಪು ರಕ್ತಕಣಗಳು ದೇಹಕ್ಕೆ ಪ್ರಸಾರಗೊಳ್ಳತ್ತವೆ. ಬಿಳಿ ರಕ್ತ ಕಣಗಳಿಗೂ ಈ ಪ್ಲೀಹಕ್ಕೂ ಏನೋ ಸಂಬಂದವಿರುವಂತೆ ಕಾಣುತ್ತದೆ. ಈ ಅವಯುವವು ಬಲಿಷ್ಠ ಸ್ನಾಯುಗಳಿಂದ ಹಿಗ್ಗಿ ಕುಗ್ಗಿ ಮಾಡುವುದರಿಂದ ರಕ್ತ ಪರಿಚಲನೆಗೆ ಹೆಚ್ಚಿನ ಸಹಾಯವಿದೆ.
  • ರಕ್ತದಲ್ಲಿ ಮಲೇರಿಯಾದ ಬೀಜಿಕೆಯಂತಹ ಸೂಕ್ಕ್ಮಜೀವಿಗಳು, ವಿಷಮಜ್ವರಕ್ಕೆ ಕಾರಣವಾದ ಜೀವಾಣುಗಳೂ ಇಲ್ಲ ಬಂದು ಸೇರಿಕೊಳ್ಳುತ್ತವೆ. ಆ ಬೇನೆಗೆ ಕಾರಣವಾಗುವ ಅವುಗಳನ್ನು ಪ್ಲೀಹ ಸೆರೆಹಿಡಿದು ನಾಶಪಡಿಸುತ್ತದೆ. ಆದರ ಅದರ ಶಕ್ತಿಗೂ ಮೇರಿದ ಅಧಿಕ ಸೋಂಕು ಆದಲ್ಲಿ ರೋಗ ಉಲ್ಬಣಿಸುವುದು – ಆಗ ಹೆಚ್ಚಿನ ಚಿಕಿತ್ಸೆ ಅಗತ್ಯ. ಮಲೇರಿಯಾದಂತಹ ನಿಡುಗಾಲದ ಬೇನೆಯಲ್ಲಿ ಅದರಿಂದಾಗಿ ಪ್ಲೀಹ ಅಥವಾ ಗುಲ್ಮ ಊದಿಕೊಳ್ಳುವುದು.

ಉಪಸಂಹಾರ

[ಬದಲಾಯಿಸಿ]
  • ಭಾವ ಜೀವನ: ನಿರ್ನಾಳ ಗ್ರಂಥಿಗಳಿಗೂ ಮಾನವನ ಭಾವಜೀವನಕ್ಕೂ ನಿಕಟ ಸಂಬಂಧವಿರುವುದನ್ನು ವಿಜ್ಞಾವಿಗಳು ಕಂಡುಕೊಂಡಿದ್ದಾರೆ. ವಿಶೇಷವಾಗಿ ಭಯ, ಕೋಪ, ನೋವು, ಹಸಿವುಗಳಂಥ ಅಪ್ರಿಯ ಭಾವನೆಗಳಿಗೂ ಈ ನಿರ್ನಾಳ ಗ್ರಂಥಿಗಳಿಗೂ ಹತ್ತಿರದ ಸಂಬಂಧವಿದೆ. ಈ ವಿನಾಳ ಗ್ರಂಥಿಗೆ ಮಿದುಳು ಯಾ ಕಶೇರುಕಗಳಿಂದ ಬರುವ ನರಗಳನ್ನು ಕತ್ತರಿಸಿದರೂ ಅದು ಇಲ್ಲದ ನಾಯಿ, ಬೆಕ್ಕುಗಳು ಸಿಟ್ಟು ಉಗ್ರಸ್ವಭಾವ ತೋರಿಸಿದವು. ಡಾ. ಕೆನನ್ ಎಂಬ ಪ್ರಸಿದ್ಧ ವೈದ್ಯನ ಪ್ರಕಾರ ಭಾವಪ್ರಕಟಣೆಗೆ ಕೇಂದ್ರವಾದ ಮೇಲ್ಮಿದುಳನ್ನು ತೆಗೆದರೂ ಒಂದು ಪ್ರಾಣಿ ಕೋಪತಾಪಗಳನ್ನು ಪ್ರಕಟಿಸಬಲ್ಲದು. ಡಾ.ಕೆನನ್‍ನ ಅಭಿಪ್ರಾಯದಂತೆ ರಸಭಾವಗಳ ಉಗಮ ಮೇಲ್ಮಿದುಳು. ಅದನ್ನು ಪ್ರಕಟಿಸಲು ಕೆಳಮಿದುಳು-ಥಾಲಮಸ್ ಸಹಾಯ ಮಾಡುವುದು. ಮೇಲ್ಮಿದುಳಿಗೂ ಥಾಲಮಸ್ ಅಂಗಕ್ಕೂ ಅದಕ್ಕೆ ಅಂಟಿಕೊಂಡ ಪಿಟ್ಯುಟರಿ ಗ್ರಂಥಿಗೂ ಸಂಬಂಧವಿದ್ದು, ಗ್ರಂಥಿದ್ರವಗಳು ನಮ್ಮನ್ನು ಅಳತೆ ಮೀರಿದ ರಸಭಾವಗಳಿಗೆ ಪ್ರೇರಿಪಿಸುತ್ತವೆ. ಅದನ್ನು ಮಿದುಳು ಉದ್ದೇಶಪಟ್ಟು ನಿಯಂತ್ರಿಸುತ್ತದೆ. ಮೇಲಾಗಿ ಕೋಪತಾಪಗಳನ್ನು ಬುದ್ಧಿಶಕ್ತಿಯಿಂದ ನಿಯಂತ್ರಿಸಲು ಕಲಿಯಬಹುದು. ಸಮಾಜದಲ್ಲಿ ಹೊಂದಿಕೊಂಡು ಬಾಳಲು ಭಾವನೆಗಳನ್ನು ನಿಯಂತ್ರಿಸುವ ಈ ಬುದ್ಧಿಶಕ್ತಿಯ ಅಗತ್ಯವಿದೆ.

ಸಮಸ್ಯೆ

[ಬದಲಾಯಿಸಿ]
  • ಈ ವಿನಾಳ ಗ್ರಂಥಿಗಳು ಮಾನವನ ಮೇಲೆ ವಿಶೇಷ ಪ್ರಭಾವ ಬೀರುವುದು ತಿಳಿದಂತೆ ಅದರ ಹೊಸ ಸಮಸ್ಯೆ ಎದುರಾಗುವುದು. ವಿನಾಳ ಗ್ರಂಥಿಗಳ ಚಟುವಟಿಕೆಗೆ ಅನುವಂಶೀಯತೆಯ ಪ್ರಭಾವವೂ ಹೆಚ್ಚಾಗಿದೆ. ಒಬ್ಬನ ಮನೋಧರ್ಮವು ಕೇವಲ ಅವನೊಬ್ಬನದಲ್ಲ. ಬದಲಿಗೆ ಅವನ ತಂದೆ ತಾಯಿ ಯಾ ಅವನ ಹಿಂದಿನ ವಂಶಜರಿಂದ ಬಂದಿರಬಹುದು. ಒಬ್ಬ ವ್ಯಕ್ತಿಯ ಮನೋಧರ್ಮ ಪೂರ್ಣ ಅವನ ಸ್ವಂತದ್ದಲ್ಲ, ಅವನ ವಂಶಜರಿಂದ ಬಂದುದು. ಆದರೆ ಈ ರಸ, ಭಾವ, ಮನೋಧರ್ಮಗಳಲ್ಲಿ ಅವನ ಸ್ವಂತದ್ದೆನುವುದು ಎಷ್ಟು ಎನ್ನುವುದು ತಿಳಿಯಲಾರದ ಸಮಸ್ಯೆ! ವ್ಯಕ್ತಿಯ ಅಂಕೆಯಿಲ್ಲದ ಕೋಪತಾಪಗಳು, ಲೈಂಗಿಕ ಪ್ರವೃತ್ತಿ ಅವನದೇ ಅಲ್ಲದೆ, ಅವನಿಗೆ ಪೂರ್ವಜರಿಂದ ಬಂದ ಕೊಡಿಗೆಯಾಗಿರಬಹುದು. ಅಷ್ಟಲ್ಲದೆ ಹೀಗೆ ದೇಹಧರ್ಮವು ಮನೋಧರ್ಮವನ್ನೂ ನಿಯಂತ್ರಿಸಬಲ್ಲದು ಎಂದಾಯಿತು. ಆದರೆ ಅವನ ನುಡಿ-ನಡೆಗೆ ಅವನೇ ಹೊಣೆಗಾರ.
  • ೧ವಿಜ್ಞಾನ ಪ್ರಪಂಚ: ಭಾಗ ೨: ಜೀವ ಜೀವನ: ಲೇಖಕ-ಶಿವರಾಮ ಕಾರಂತ: ಹರ್ಷ ಪ್ರಕಟನಾಲಯ, ಪುತ್ತೂರು, ದ.ಕ.:೧೯೬೦.
  • ೨.ಎನ್‍ಕಾರ್ಟಾ

ಉಲ್ಲೇಖ

[ಬದಲಾಯಿಸಿ]
  1. Cranial Fossae". Gray's Clinical Anatomy
  2. Mancall, Elliott L.; Brock, David G., eds. (2011; Elsevier Health Sciences. p. 154]]