ಸದಸ್ಯ:Sathyarvidupalapati/ನನ್ನ ಪ್ರಯೋಗಪುಟ
ನೀತಿಶಾಸ್ತ್ರ
ನೀತಿಶಾಸ್ತ್ರವು ತತ್ವಶಾಸ್ತ್ರ[೧]ದ ಒಂದು ಅಂಗವಾಗಿದೆ.ನೀತಿಶಾಸ್ತ್ರ ಸರಿ ಮತ್ತು ತಪ್ಪು, ನ್ಯಾಯ ಮತ್ತು ನೀತಿ, ಕೆಟ್ಟದ್ದು ಮತ್ತು ಒಳ್ಳೆಯದುದರ ಪರಿಕಲ್ಪನೆಗಳನ್ನು ಕಟ್ಟಿಕೊಡುತ್ತದೆ.ತತ್ವಶಾಸ್ತ್ರದ ಒಂದು ಅಂಗವಾಗಿರುವ ನೀತಿಶಾಸ್ತ್ರವು ಮನುಷ್ಯನು ಅತ್ಯುತ್ತಮ ಜೀವನವನ್ನು ಹೇಗೆ ನಡೆಸಬಹುದು..? ಮನುಷ್ಯನ ನಡವಳಿಕೆಗಳು ಸಂದರ್ಭಗಳಿಗೆ ಅನುಸಾರವಾಗಿ ಸರಿಯೋ ತಪ್ಪೋ ಎನ್ನುವುದನ್ನು ತಿಳಿಸುತ್ತದೆ. ಒಂದು ಕೆಲಸ ಅಥವ ಮಾತು ಅಥವಾ ನಡವಳಿಕೆಯು ಕೆಲವು ಸಂದರ್ಭಗಳಲ್ಲಿ ತಪ್ಪಾಗಿರಬಹುದು ಮತ್ತು ಅದೇ ವಿಷಯ ಇನ್ನು ಕೆಲವಾರು ಸಂದರ್ಭಗಳಲ್ಲಿ ಸರಿಯಾಗಿರಬಹುದು.ಸಂದರ್ಭಾನುಸಾರವಾಗಿ ಅವು ತಮ್ಮ ಪ್ರಭಾವವನ್ನು ಬೀರುತ್ತವೆ.ನೀತಿಶಾಸ್ತ್ರವು ತಪ್ಪು-ಸರಿ, ನ್ಯಾಯ-ನೀತಿ, ಕೆಟ್ಟದ್ದು-ಒಳ್ಳೆಯದು ಹೀಗೆ ಮುಂತಾದ ಹಲವಾರು ವಿಷಯಗಳನ್ನು ಬಿಡಿಸಿ ವಿವರಿಸಿ ಮನುಷ್ಯನ ನೈತಿಕತೆಯನ್ನು ತಿಳಿಸಲು ಉಪಯೋಗವಾಗುತ್ತದೆ.ಮನುಷ್ಯನು ಮೌಲ್ಯಗಳನ್ನು ಅರಿಯಲು ಉಪಯುಕ್ತವಾಗಿದೆ.ನೈತಿಕತೆಯನ್ನು ಅನೇಕರು ಹಲವಾರು ಬಾರಿ ಮೌಲ್ಯಗಳ ಬದಲಾಗಿ ಬಳಸುತ್ತಾರೆ. ಅನೇಕ ಬಾರಿ ನೈತಿಕತೆಯನ್ನು ಮನುಷ್ಯನ ನಡವಳಿಕೆಯ ಹಾಗು ಗುಣಲಕ್ಷಣಗಳ ಬದಲಾಗಿ ಬಳಸಲಾಗುತ್ತದೆ.ಆದರೆ ನೀತಿಶಾಸ್ತ್ರವು ಇವೆಲ್ಲದುದರಿಂದ ಭಿನ್ನವಾದುದು.ಇದೇ ಒಂದು ಪ್ರತ್ಯೇಕವಾದ ಪರಿಕಲ್ಪನೆಯಾಗಿದೆ.
ವರ್ಗಗಳು
[ಬದಲಾಯಿಸಿ]ನೀತಿಶಾಸ್ತ್ರದಲ್ಲಿ ಅನೇಕ ವರ್ಗಗಳಿವೆ :
- ವೈಯುಕ್ತಿಕ ನೀತಿಶಾಸ್ತ್ರ
- ವ್ಯವಹಾರಿಕ ನೀತಿಶಾಸ್ತ್ರ
- ಸಾಮಾಜಿಕ ನೀತಿಶಾಸ್ತ್ರ
- ಕಾನೂನಾತ್ಮಕ ನೀತಿಶಾಸ್ತ್ರ
ಇವುಗಳು ಅತ್ಯಂತ ಮುಖ್ಯವಾದ ಭಾಗಗಳಾಗಿವೆ.
ವೈಶಿಷ್ಟ್ಯತೆಗಳು
[ಬದಲಾಯಿಸಿ]- ನೀತಿಶಾಸ್ತ್ರವು ಮನುಷ್ಯನ ನೀತಿ ನಡವಳಿಕೆಗಳು ಹಾಗು ಮೌಲ್ಯಗಳ ಬಗ್ಗೆ ಮಾತನಾಡುತ್ತದೆ.
- ನೀತಿಶಾಸ್ತ್ರವು ಒಂದು ವ್ಯವಸ್ತಿತವಾದ ಜ಼್ನಾನದ ಆಗರವಾಗಿದೆ.
- ನೀತಿಶಾಸ್ತ್ರವು ಸರಿ-ತಪ್ಪು, ನ್ಯಾಯ-ನೀತಿ ಗಳ ನಡುವಿನ ವ್ಯತ್ಯಾಸವನ್ನು ತಿಳಿಸುತ್ತದೆ.
- ನೀತಿಶಾಸ್ತ್ರವು ವ್ಯಕ್ತಿಯಿಂದ ವ್ಯಕ್ತಿಗೆ, ಸ್ಥಳದಿಂದ ಸ್ಥಳಕ್ಕೆ, ಸಮಯದಿಂದ ಸಮಯಕ್ಕೆ, ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ.
- ನೀತಿಶಾಸ್ತ್ರವು ಒಂದು ಮೂಲಭೂತ ಚೌಕಟ್ಟನ್ನು ಕಟ್ಟಿಕಡುತ್ತದೆ.
- ನೀತಿಶಾಸ್ತ್ರವು ಸಮಾಜದ ಸಾಮಾಜಿಕ ಗುಂಪುಗಳಿಗೆ ರಕ್ಷಣೆಯನ್ನು ನೀಡುತ್ತದೆ.
- ನೀತಿಶಾಸ್ತ್ರವು ಒಂದು ಆರೋಗ್ಯಕರ ಸಮಾಜವನ್ನು ಕಟ್ಟುವಲ್ಲಿ ಸಹಾಯವಾಗುತ್ತದೆ.
ವೈಯುಕ್ತಿಕ ನೀತಿಶಾಸ್ತ್ರ
[ಬದಲಾಯಿಸಿ]ವೈಯುಕ್ತಿಕ ನೀತಿಶಾಸ್ತ್ರ ಒಬ್ಬ ವ್ಯಕ್ತಿಯ ಮೌಲ್ಯಗಳನ್ನು ಬಿಂಬಿಸುತ್ತದೆ. ವೈಯುಕ್ತಿಕ ನೀತಿಶಾಸ್ತ್ರ ವ್ಯಕ್ತಿಯ ಜೀವನದ ಎಲ್ಲಾ ಹಂತಗಳಲ್ಲಿ, ಎಲ್ಲಾ ಸನ್ನಿವೇಶಗಳಲ್ಲಿ, ವ್ಯವಹಾರಗಳಲ್ಲಿ, ಸಂಬಂಧಗಳಲ್ಲಿ ಹೀಗೆ ಎಲ್ಲಾ ವಲಯಗಳಲ್ಲೂ ಮುಖ್ಯವಾದುದು.ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನು ಎತ್ತರಕ್ಕೆ ಬೆಳೆಯಬೇಕೆಂದರೆ ಅವನ ವೈಯುಕ್ತಿಕ ನೈತಿಕತೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಅವನು ಮೌಲ್ಯಗಳನ್ನು ಬಿಟ್ಟು ಅಡ್ಡದಾರಿಯಲ್ಲಿ ಎಷ್ಟು ಎತ್ತರಕ್ಕೆ ಬೆಳೆದರೂ, ಎಷ್ಟೇ ಹಣ-ಆಸ್ತಿ ಸಂಪಾದಿಸಿದರೂ ಅದು ಅವನಿಗೆ ಒಳ್ಳೆಯ ಹೆಸರನ್ನು ತಂದುಕೊಡುವುದಿಲ್ಲ. ಅದು ತ್ರುಣಕ್ಕೆ ಸಮಾನ.ಅವನಿಗೆ ಸಿಗಬೇಕಾದ ಗೌರವ, ಸ್ಥಾನ-ಮಾನ, ಪ್ರಶಂಸೆ ದೊರಕುವುದಿಲ್ಲ. ಅವನು ಜೀವನದಲ್ಲಿ ಗಳಿಸಿದ್ದೆಲ್ಲಾ ಯಶಸ್ವಿ ಎನ್ನಲಾಗುವುದಿಲ್ಲ. ಆದ್ದರಿಂದ ನೈತಿಕತೆ ಮನುಷ್ಯನ ಜೀವನ[೨]ದಲ್ಲಿ ಅತ್ಯಂತ ಮಹತ್ವವಾದ ಪಾತ್ರ ವಹಿಸುತ್ತದೆ. ವೈಯುಕ್ತಿಕ ನೈತಿಕತೆ ಈ ಹಿಂದೆ ಹೇಳಿದಂತೆ ಪ್ರತಿಯೊಬ್ಬ ವ್ಯಕ್ತಿಗೂ, ಸಮಯಕ್ಕೆ ಹಾಗು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ.ಒಬ್ಬ ವ್ಯಕ್ತಿಗೆ ತಾನು ಮಾಡಿದ ಕೆಲಸ ಅವನ ನೈತಿಕತೆಗನುಗುಣವಾಗಿ ಸರಿ ಎಂದನಿಸಿದರೆ ಮತ್ತೊಬ್ಬ ವ್ಯಕ್ತಿಗೆ ಅದೇ ಕೆಲಸ ತಪ್ಪು ಎನ್ನಿಸಬಹುದು. ಒಂದೇ ವಿಷಯ ಕೆಲವು ಸಂದರ್ಭಗಳಲ್ಲಿ ಸರಿ ಎಂದನಿಸಿದರೆ ಇನ್ನು ಕೆಲವು ಸಂದರ್ಭಗಳಲ್ಲಿ ತಪ್ಪಾಗಬಹುದು.ಹೀಗೆ ನೈತಿಕತೆ ವ್ಯಕ್ತಿಯ ಮಾನಸಿಕ ಚಿಂತನೆಗಳ ಮೇಲೆ ಆಧಾರಿತವಾಗಿರುತ್ತದೆ.
ತತ್ವಗಳು ಮತ್ತು ಅಂಶಗಳು
[ಬದಲಾಯಿಸಿ]- ಪ್ರಾಮಾಣಿಕತೆ
- ತಾಳ್ಮೆ
- ಸಹನೆ
- ನಿಷ್ಠೆ
- ದಯೆ
- ಭರವಸೆ
- ನಂಬಿಕೆ
- ಸತ್ಯ ಸಂಧತೆ
- ಗೌರವ
- ರಾಜಿ
- ನೇರತನ
- ಕಾಳಜಿ
- ಸಹಾನುಭೂತಿ
- ಪರಾನುಭೂತಿ
- ಒಳ್ಳೆಯ ನಡವಳಿಕೆ
- ಅಹಿಂಸೆ[೩]
- ಸರಳತೆ
ಪ್ರಾಮುಖ್ಯತೆಗಳು
[ಬದಲಾಯಿಸಿ]ವೈಯುಕ್ತಿಕ ನೈತಿಕತೆಯು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಅದರದ್ದೇ ಆದ ಪಾತ್ರವನ್ನು ಹೊಂದಿರುತ್ತದೆ.ಎಲ್ಲರ ಜೀವನದ ಒಂದಲ್ಲ ಒಂದು ಹಂತದಲ್ಲಿ ನೈತಿಕತೆ ಎನ್ನುವುದು ಅವರ ಜೀವನದ ಮೇಲೆ, ಭಾವನೆಗಳ ಮೇಲೆ, ಕುಟುಂಬದ ಮೇಲೆ ಹೀಗೆ ಹೇಗಾದರೂ ಒಂದು ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ.
- ಮನುಷ್ಯ ತನ್ನನ್ನು ಅರಿತುಕೊಳ್ಳಲು: ಮನುಷ್ಯನು ತನ್ನನ್ನು ತಾನು ಅರಿತುಕೊಳ್ಳಲು ಅವನಿಗೆ ಅವನ ನೈತಿಕ ಗುಣಗಳು ಸಹಾಯ ಮಾಡುತ್ತವೆ. ತನ್ನ ಗುಣಗಳು, ನಡವಳಿಕೆಗಳು, ತನ್ನ ಮನಸ್ಸನ್ನು ಪರಿಪೂರ್ಣವಾಗಿ ಆತ್ಮ ವಿಮರ್ಷೆ ಮಾಡಿಕೊಳ್ಳಲು ಸಹಾಯವಾಗುತ್ತದೆ.ತನ್ನ ಮತ್ತು ತನ್ನ ಕುಟುಂಬದವರು, ಪರಿಚಯದವರು, ಅಕ್ಕ ಪಕ್ಕದವರು ಹೀಗೆ ಎಲ್ಲರ ಜೊತೆಯಲ್ಲಿ ತನ್ನ ಸಂಬಂಧವನ್ನು ಅರಿಯಲು ನೈತಿಕತೆ ಉಪಯುಕ್ತವಾಗುತ್ತದೆ.
- ಇತರರೊಂದಿಗೆ ವ್ಯವಹರಿಸಲು : ವ್ಯಕ್ತಿಯು ಇತರರೊಂದಿಗೆ ಮಾತನಾಡುವಾಗ, ವ್ಯವಹರಿಸುವಾಗ ನೈತಿಕತೆಯು ಅವನ ಸಂವಾದದ ಮೇಲೆ ಪ್ರಭಾವ ಬೀರುತ್ತದೆ.ಇತರರೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಲು ವೈಯುಕ್ತಿಕ ನೈತಿಕತ್ತೆ ಬಹಳ ಮುಖ್ಯವಾಗಿದೆ.
- ಬಲ ಮತ್ತು ಬಲಹೀನತೆಗಳನ್ನು ಅರಿಯಲು : ವ್ಯಕ್ತಿಯ ನೀತಿ ನಡವಳಿಕೆಗಳು ಅವನ ಬಲ ಮತ್ತು ಬಲಹೀನತೆಗಳ ಬಗ್ಗೆ ಒಂದು ಸ್ಪಷ್ಟವಾದ ಚಿತ್ರಣವನ್ನು ಕಟ್ಟಿಕೊಡುತ್ತವೆ.ಇದರಿಂದ ವ್ಯಕ್ತಿ ತನ್ನ ಬಲ ಹಾಗು ಬಲಹೀನತೆಗಳನ್ನು ಕಂಡುಕೊಂಡು ಇತರರ ಜೊತೆಯಲ್ಲಿ ವ್ಯವಹರಿಸಲು ಉತ್ತಮವಾದ ಮಾರ್ಗವನ್ನು ತಿಳಿಯಬಹುದು.
- ನೀತಿ ಸಂಹಿತೆಯನ್ನು ಕಟ್ಟಿಕೊಳ್ಳಲು : ವೈಯುಕ್ತಿಕ ನೈತಿಕತೆಯು ಮನುಷ್ಯನಿಗೆ ಒಂದು ತನ್ನದೇ ಆದ ನೀತಿ ಸಂಹಿತೆಯನ್ನು ರೂಪಿಸಿಕೊಂಡು ಒಬ್ಬ ಜವಾಬ್ದಾರಿಯುಳ್ಳ ವ್ಯಕ್ತಿಯಾಗಿ ಹೊಣೆಗಾರಿಕೆಯಿಂದ ನಡೆದುಕೊಳ್ಳಲು ಮತ್ತು ಇತರರ ಜೊತೆ ಗೌರವದಿಂದ ನಡೆದುಕೊಳ್ಳಲು ಉಪಯುಕ್ತವಾಗುತ್ತದೆ.
- ಗುರಿ ಸಾಧಿಸಲು : ಮನುಷ್ಯನ ಉತ್ತಮವಾದ ನಡವಳಿಕೆ, ಅವನ ಅತ್ಯುತ್ತಮವಾದ ಗುಣಗಳು ಅವನಿಗೆ ತನ್ನ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ. ಅವನ ನೈತಿಕತೆಯಿಂದ ಇತರರ ಒಡನೆ ಒಳ್ಳೆಯ ಸಂಬಂಧಗಳನ್ನು ಬೆಳೆಸಿಕೊಂಡು ಎಲ್ಲರನೂ ಗೌರವಿಸುತ್ತಾ ಮತ್ತು ತಾನೂ ಗೌರವಿಸಲ್ಪಡುತ್ತಾನೆ.ತನ್ನ ಸಮಾಜದಲ್ಲಿ ತಾನು ಒಳ್ಳೆಯ ವ್ಯಕ್ತಿತ್ವ ಇಟ್ಟುಕೊಂಡು ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಇರುತ್ತಾನೆ.ಇದರಿಂದ ಅವನು ಸುಲಭವಾಗಿ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.
ವೈಯುಕ್ತಿಕ ನೈತಿಕತೆಯು ಒಬ್ಬ ಮನುಷ್ಯನನ್ನು :
- ಪ್ರಾಮಾಣಿಕನನ್ನಾಗಿಸುತ್ತದೆ
- ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯನ್ನಾಗಿಸುತ್ತದೆ
- ಜವಾಬ್ದಾರಿಯುತ ಮನುಷ್ಯನನ್ನಾಗಿಸುತ್ತದೆ
- ನಂಬಿಕಸ್ತನನ್ನಾಗಿಸುತ್ತದೆ
- ವಿಶ್ವಾಸಿಯನ್ನಾಗಿಸುತ್ತದೆ
- ಸತ್ಯವಂತನನ್ನಾಗಿಸುತ್ತದೆ...
ಹೀಗೆ ನೈತಿಕತೆಯು ಮನುಷ್ಯನಲ್ಲಿ ಎಲ್ಲಾ ರೀತಿಯ ಒಳ್ಳೆಯ ಗುಣಗಳನ್ನು ತುಂಬಿ ಅವನನ್ನು ಒಬ್ಬ ಪರಿಪೂರ್ಣ ವ್ಯಕ್ತಿಯನ್ನಾಗಿಸುತ್ತದೆ. ಮನುಷ್ಯನ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಹೀಗಾಗಿ ವೈಯುಕ್ತಿಕ ನೈತಿಕತೆ ನೀತಿಶಾಸ್ತ್ರದಲ್ಲಿ ಪ್ರಮುಖ ಅಂಗವಾಗಿ ತನ್ನ ಸ್ಥಾನವನ್ನು ಕಂಡುಕೊಂಡಿದೆ.
ಮೂಲಗಳು
[ಬದಲಾಯಿಸಿ]ಪ್ರಾಥಮಿಕವಾಗಿ ನೀತಿಶಾಸ್ತ್ರವು ಮೂರು ಮುಖ್ಯವಾದ ಮೂಲಗಳನ್ನೊಳಗೊಂಡಿದೆ. ಅವು ಯಾವುವೆಂದರೆ :
- ಧರ್ಮಶಾಸ್ತ್ರ
- ಸಂಸ್ಕ್ರುತಿ
- ಕಾನೂನು ಸಂಹಿತೆ
ಧರ್ಮಶಾಸ್ತ್ರವು ಬಹಳ ಹಳೆಯ ಕಾಲದಿಂದಲೂ ನ್ಯಾಯ ನೀತಿಗಳ ಬಗೆಗೆಯೇ ತಿಳಿಸುತ್ತಿದೆ. ಅನಾದಿಕಾಲದಿಂದಲೂ ಮನುಷ್ಯನ ಜೀವನದಲ್ಲಿ ಧರ್ಮವು ತನ್ನ ವಿಷೇಶವಾದ ಪ್ರಭಾವವನ್ನು ಬೀರುತ್ತಲಿದೆ.ಧರ್ಮವು ಸತ್ಯಾಸತ್ಯತೆಗಳ ನಡುವೆ ಗೆರೆ ಎಳೆದು ಮಾನವ ಕುಲಕ್ಕೆ ಸರಿಯಾದ ಮಾರ್ಗ ತೋರುವಲ್ಲಿ ಯಶಸ್ವಿಯಾಗಿದೆ.ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳೂ ಮನುಷ್ಯನ ಪರಸ್ಪರ ಬಾಳ್ವಿಕೆಯ ನೀತಿ ಹಾಗು ಬಗೆಯನ್ನು ವಿವರಿಸುತ್ತವೆ.ಹೀಗೆ ಧರ್ಮಶಾಸ್ತ್ರವು ನೀತಿಶಾಸ್ತ್ರ ಅಸ್ತಿತ್ವಕ್ಕೆ ಬರಲು ಒಂದು ಮೂಲವಾಗಿದೆ.
ಸಂಸ್ಕ್ರುತಿ ಎನ್ನುವುದು ಯಾವುದೇ ಒಂದು ಆಚರಣೆ, ಅನುಕರಣೆ ಮತ್ತು ಮೌಲ್ಯಗಳು ತಲತಲಾಂತರಗಳಿಂದ ಮನುಷ್ಯನಲ್ಲಿ ಪರಂಪರಾಗತವಾಗಿ ವರ್ಗಾವಣೆಯಾಗಿ ಮುಂದುವರೆಯುತ್ತ ಬೆಳೆಯುತ್ತಾ ಬಂದಿರುವುದು.ತಲತಲಾಂತರಗಳಿಂದ ನಮ್ಮ ಹಿರಿಯರು ಸರಿ-ತಪ್ಪುಗಳ ನಡುವೆ ಗೆರೆ ಎಳೆದು ಸತ್ಯಾಸತ್ಯತೆಗಳನ್ನು ತಿಳಿಸಿದ್ದಾರೆ.ಅವರ ಮುಂದಿನ ಪೀಳಿಗೆಗೆ ಆ ಮೌಲ್ಯಗಳನ್ನು ಕಲಿಸಿ ಉಳಿಸಿಕೊಂಡು ಬಂದಿದ್ದಾರೆ.ಹೀಗೆ ಸಂಸ್ಕ್ರುತಿಯೂ ಕೂಡ ನೀತಿಶಾಸ್ತ್ರದ ಒಂದು ಮೂಲವಾಗಿದೆ.
ಕಾನೂನು ಸಹ ಮನುಷ್ಯನಿಗೆ ಸರಿ ದಾರಿಯಲ್ಲಿ ನಡೆಯಲು ಒಂದು ಚೌಕಟ್ಟನ್ನು ಹಾಕುತ್ತದೆ.ಒಂದು ಸಮಾಜ[೪]ದಲ್ಲಿ ಮನುಷ್ಯನು ಇರಬೇಕಾದರೆ ಅವನು ಕೆಲವಾರು ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ.ಆದರೆ ಕೆಲವಾರು ಸಂದರ್ಭಗಳಲ್ಲಿ ಕಾನುನಿನ ಚೌಕಟ್ಟಿನಲ್ಲಿ ನೈತಿಕತೆಯನ್ನು ಸೇರಿಸಲು ಕಷ್ಟವಾಗುವುದು.ಇಂದಿನ ಕ್ರಿಯಾತ್ಮಕ ಹಾಗು ಬದಲಾಗುತ್ತಿರುವ ಪರಿಸರದಲ್ಲಿ ಈ ಎರಡನ್ನೂ ಸಮತೋಲನದಿಂದ ನಡೆಸುವುದು ಕಷ್ಟಸಾಧ್ಯ.ಆದರೆ ಕಾನೂನು ಸಹ ಒಂದು ರೀತಿಯಲ್ಲಿ ಮನುಷ್ಯನ ನಡವಳಿಕೆಯ ಮೇಲೆ ತನ್ನ ಹಿಡಿತವನ್ನು ಇಟ್ಟುಕೊಂಡಿದೆ. ಹಾಗಾಗಿ ಕಾನೂನು ಸಹ ನೈತಿಕತೆಯ ಒಂದು ಮೂಲವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ https://kn.wikipedia.org/wiki/%E0%B2%A4%E0%B2%A4%E0%B3%8D%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0
- ↑ https://kn.wikipedia.org/wiki/%E0%B2%9C%E0%B3%80%E0%B2%B5%E0%B2%A8
- ↑ https://kn.wikipedia.org/wiki/%E0%B2%85%E0%B2%B9%E0%B2%BF%E0%B2%82%E0%B2%B8%E0%B3%86
- ↑ https://kn.wikipedia.org/wiki/%E0%B2%B8%E0%B2%AE%E0%B2%BE%E0%B2%9C