ವಿಷಯಕ್ಕೆ ಹೋಗು

ಸದಸ್ಯ:Rohith kashi/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ಅಣ್ಣ ತಮ್ಮಂದಿರು ಸಿಬ್ಲಿಂಗ್ ಸಮಾನವಾಗಿ ಒಬ್ಬರು ಅಥವಾ ಇಬ್ಬರು ಹೆತ್ತವರನ್ನು ಹೊಂದಿರುವ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳ ಪೈಕಿ ಒಬ್ಬರು. ಪುರುಷ ಸಿಬ್ಲಿಂಗನ್ನು ಸಹೋದರನೆಂದು ಕರೆಯಲಾಗುತ್ತದೆ, ಮತ್ತು ಸ್ತ್ರೀ ಸಿಬ್ಲಿಂಗನ್ನು ಸಹೋದರಿಯೆಂದು ಕರೆಯಲಾಗುತ್ತದೆ. ವಿಶ್ವಾದ್ಯಂತ ಬಹುತೇಕ ಸಮಾಜಗಳಲ್ಲಿ, ಸಿಬ್ಲಿಂಗ್‍ಗಳು ಸಾಮಾನ್ಯವಾಗಿ ಒಟ್ಟಿಗೆ ಬೆಳೆಯುತ್ತಾರೆ, ಮತ್ತು ಇದರಿಂದ ಪ್ರೀತಿ, ಶತ್ರುತ್ವ ಅಥವಾ ಚಿಂತನಪರತೆಯಂತಹ ಬಲವಾದ ಭಾವನಾತ್ಮಕ ಬಂಧಗಳ ಬೆಳವಣಿಗೆ ಸುಲಭವಾಗುತ್ತದೆ.

 ಪ್ರತಿಯೊಬ್ಬ ಮನುಶ್ಯನು ಹುಟ್ತುವಾಗ ಒಂಟಿ ಸಾಯುವಾಗ ಒಂಟಿ.ಇವೆರಡರ ನಡುವೆ ಸುಮಾರು ಅನುಬಂಧಗಳು ಇರುತ್ತವೆ. ಅದರಲ್ಲಿ ಕೆಲವು ಅನಿವಾರ್ಯ ಇನ್ನು ಕೆಲವು ಆಯ್ಕೆ ಹಾಗೂ ಕೆಲವು ದೇವಲೋಕದ ಉಡುಗೊರೆ.ಅಂತಹವುಗಳಲ್ಲಿ ತಂದೆ-ತಾಯಿ ಹಾಗೂ ಒಡಹುಟ್ಟಿದವರು ನಮಗಾಗಿ ನಿಶ್ಚಯವಾದ ಸಂಬಂದಗಳು.  ಸಾಮನ್ಯವಾಗಿ ಸಿಬ್ಲಿಂಗ್ ಎಂದರೆ ಒಡಹುಟ್ಟಿದವರು ಎಂಬ ಅರ್ಥ ನೀಡುತ್ತದೆ. ಈ ರೀತಿ ಒಡಹುಟ್ಟಿದವರು ಅಣ್ಣ- ತಮ್ಮ, ಅಕ್ಕ-ತಂಗಿ, ಅಕ್ಕ-ತಮ್ಮ,ಅಣ್ಣ- ತಂಗಿ ಆಗಿರಬಹುದು. ಅದೆ ರೀತಿ ಕೆಲವರ ಮನೆಯಲ್ಲಿ ಎರಡಕ್ಕಿಂತ ಹೆಚು ಮಕ್ಕಳು ಕೂಡ ಇರುತ್ತಾರೆ.ಆ ಮಕ್ಕಳ ಮಧ್ಯದಲ್ಲಿ ಸಾಮಾನ್ಯವಾಗಿ ಪ್ರೀತಿ , ದ್ವೇಶ, ಕೋಪ ಇದ್ದೇ ಇರುತ್ತದೆ. ಎಷ್ಟೇ ಜಗಳವಾಡಿದರೂ  ಕೂಡ ಅವರು ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾರರು .ಆದರೆ ಹಿರಿಯರು ಹೇಳಿದಂತೆ ಅವರ ಜಗಳವೇ ಅವರ ಪ್ರೀತಿ ಎಂಬ ಮಾತು ಸತ್ಯ. ಅದರೆ ಕೆಲವು ಸಮಯಗಳಲ್ಲಿ ಸಿಬ್ಲಿಂಗ್ ಒಟ್ಟಿಗೆ ಇರುವುದಿಲ್ಲ ಏಕೆಂದರೆ ತಂದೆ ತಾಯಿ ಜಗಳವಾಡಿ ಮಕ್ಕಳನ್ನು ದೂರಪಡಿಸಿರಬಹುದು ಅಂದರೆ ಒಂದು ಮಗು ತಂದೆ ಹತ್ತಿರ ಹಾಗೂ ಇನ್ನೊಂದು ಮಗು ತಾಯಿಯ ಹತ್ತಿರ ಬೆಳದು ದೂರವಾಗಿರುತ್ತಾರೆ ಅಥವಾ ಓದಿನ ಕಾರಣದಿಂದ ದೂರ ಬೆಳೆಯುತಾರೆ

  ಸಿಬ್ಲಿಂಗ್ ಗಳಲ್ಲಿ ಸುಮಾರು ವಿಧಗಳಿವೆ , ಅವುಗಳೆಂದರೆ
  ೧.ಒಂದೇ ದಂಪತಿಗಳಿಗೆ ಇಬ್ಬರು ಮಕ್ಕಳು ಹುಟ್ಟುವುದು.
  ೨.ಅವಳಿ-ಜವಳಿ  ಮಕ್ಕಳು (ಅಂದರೆ ಒಂದೆ ಬಾರಿ ಎರಡು ಮಕ್ಕಳು ಹುಟ್ಟುವುದು)

thumb|ಅವಳಿ- ಜವಳಿ ಮಕ್ಕಳು

  ೩. ಒಂದೇ ತಾಯಿ ಹಾಗೂ ಹಲವು ತಂದೆಯರು ಇರುವ ಸಂಧರ್ಭದಲ್ಲಿ ಮಕ್ಕಳು ತಾಯಿಯನ್ನು ಮಾತ್ರ ಆಯ್ದುಕೊಳ್ಳುತ್ತಾರೆ.
  ೪.ಕೆಲವು ಸಮಯಗಳಲ್ಲಿ ಒಂದೆ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಅವರ ರಕ್ತ ಒಂದೆಆಗಿರುವುದಿಲ್ಲ ,ಏಕೆಂದರೆ ಇಲ್ಲಿ ಮಗುವಿನ ತಾಯಿಗೆ ಮೊದಲನೆ ಗಂಡ ಸತ್ತಿರುವುದರಿಂದ,ಎರಡನೆ ಮದುವೆ ಆಗಿರುತ್ತರೆ ಅಥವಾ ತಂದೆಗೆ ಮೊದಲನೆ ಹೆಂಡತಿ ಸತ್ತು ಎರಡನೆ ಮದುವೆ  ಆಗಿರುತ್ತರೆ.
  ೫.ಕೆಲವರು ಒಂದು ಮಗುವನ್ನು ಹೆತ್ತು ಹಾಗು ಇನ್ನೊಂದು ಮಗುವನ್ನು ದತ್ತು ಪಡೆದಿರುತ್ತಾರೆ.
  ೬.ದೊಡ್ಡಪ್ಪ  ಚಿಕ್ಕಪ್ಪ  ಮಕ್ಕಳು ಒಂದೇ ಮನೆಯಲ್ಲಿ ಒಟ್ಟಿಗೆ ಇರುತ್ತಾರೆ.
  ೭.ಸಾಮಾನ್ಯವಾಗಿ ಇಸ್ಲಾಮಿಯರ ಜಾತಿಯಲ್ಲಿ ಒಂದು ಮಗುವಿಗೆ ಬೆರೆಯವರು ಎದೆಯ ಹಾಲು ಕುಡಿಸಿ ತಾಯಿ ಎನಿಸಿಕೊಳ್ಳುತ್ತಾರೆ.ಆದರೆ ಹೆತ್ತ ತಾಯಿ ಇಲ್ಲದ ಕಾರಣದಲ್ಲಿ ಮಾತ್ರ.Good brothers.jpg


  ಸಿಬ್ಲಿಂಗ್ಸ್ ನಲ್ಲಿನ ಕಿತ್ತಾಟ
 ಸಾಮಾನ್ಯವಾಗಿ ಸಿಬ್ಲಿಂಗ್ಸ್ ಮಧ್ಯೆ ಯಾವಾಗಲು ಜಗಳ ,ದ್ವೆಶ, ನಾಮುಂದು- ತಾಮುಂದು(ಏರಾಟ)  ಎನ್ನುವುದು ಸಹಜವಾಗಿ ಎಲ್ಲರಲ್ಲಿ ಇರುತ್ತದೆ.ಇಬ್ಬರು ಮಕ್ಕಳುಗಂಡು ಅಥವಾ ಹೆಣ್ಣು ಮಕ್ಕಳಾಗಿರುತ್ತರೆ ಹಾಗೂ ಅವರ ವಯಸ್ಸು ಹತ್ತಿರವಾಗಿದ್ದಲ್ಲಿ ಅವರು ಉಗ್ರವಾಗಿ ಕಾಣುತ್ತರೆ.ಈ ರೀತಿಯ ಜಗಳ ಎರಡನೆ ಮಗು ಮನೆಗೆ ಬಂದೊಡನೆ ಮನೆಯಲ್ಲಿ  ಜಗಳ ಶುರುವಾಗುತ್ತದೆ ಏಕೆಂದರೆ ಚಿಕ್ಕಮಗುವನ್ನು ಸ್ವಲ್ಪ ಮುದ್ದಾಗಿ ಕೊಂಡರೆ ಇನ್ನೋಂದು ಮಗು ನನ್ನನ್ನುಎಲ್ಲಿ ಬಿಟ್ಟುಬಿಡುತ್ತರೊಎಂದುಕೊಳ್ಳುತ್ತದೆ.ಕೆಲವು ರೀತಿಯ ಕಿತ್ತಟಗಳೆಂದರೆ ಹೊಟ್ಟೆ ಹುರಿಸಿಕೊಳ್ಳುವುದು , ಹೊಸದಾಗಿ ಹುಟ್ಟಿದ ಮಗುವನ್ನು ಮುದ್ದಗಿ ಬೆರೆಯವರು ಕಂಡಾಗ, ಹಾಗೂ ತಂದೆ ತಾಯಿ ಇಬ್ಬರು ಮಕ್ಕಳನ್ನು ಬೆರೆಮಾಡಿ ನೋಡಿದಾಗ, ಮತ್ತು ಚಿಕ್ಜ್ಕಚಿಕ್ಕ ಕಾರಣಗಳಿಗೆ ಹೋಡೆದಾದುವುದು ಇನ್ನು ಮುಂತಾದ ಕಾರಣಗಳಿಂದ ಮನೆಯಲ್ಲಿ ಒಡಹುಟ್ಟಿದವರಲ್ಲಿ ಜಗಳ ಉಂಟಾಗುತ್ತದೆ.
  ಸಿಬ್ಲಿಂಗ್ಸ್ ಮಧ್ಯೆ ಜಗಳ ಸಾಮಾನ್ಯ ಹಾಗೂ ಅದು ವಿಜ್ನಾನದ ಪ್ರಕಾರ ನಿಜವಾಗಿದೆ.ಇಂತಹ ಕಿತ್ತಾಟವನ್ನು ಎರಡುವಿಧಗಳಾಗಿ ವಿಂಗಡಿಸಬಹುದು. ಮೊದಲನೆ ಕಿತ್ತಟ ಸಮಾನತೆ ಅಥವಾ ನ್ಯಾಯದ ಬಗ್ಗೆ, ಕೆಲವು ವಿಶಯದಲ್ಲಿ ಸಿಬ್ಲಿಂಗ್ಸ್ರ ಮಧ್ಯೆ ಇಬ್ಬರಲ್ಲಿ ಒಬ್ಬರನ್ನು ಅವರ ಶಿಕ್ಷಕರು, ಬಂಧುಗಳು ,ಮುಖ್ಯವಾಗಿ ಅವರ ತಂದೆ ತಾಯಿಯರು ಹೊಗಳುವುದು ಕಂಡರೆ ಇನ್ನೊಬ್ಬರಿಗೆ ಕೋಪ. ಆದರೆ ಆ ಮಕ್ಕಳು ಯಾವಾಗಲೂ ಅವರ ತಂದೆ ತಾಯಿಯರು ಇನ್ನೊಬ್ಬರ ಪರವಾಗೆ ಇರುತ್ತಾರೆ ಎಂದು ಇಬ್ಬರು ಮಕ್ಕಳು ಅಂದುಕೊಳ್ಳುತ್ತಾರೆ.[] 
 
ಸಿಬ್ಲಿಂಗ್ಸ್ರ ಕಿತ್ತಟದ ಅನಾಹುತಗಳು 
  ಸಿಬ್ಲಿಂಗ್ಸ್ ಮಧ್ಯೆ ಕಿತ್ತಾಟ ಹೆಚ್ಚದಂತೆ ಹಾಗೂ ಮುಂದಿನ ಹಂತಗಳಿಗೆ ಹೋದಂತೆ ಅವರ  ಆತಂಕ ಮತ್ತು ಖಿನ್ನತೆ ಹೆಚ್ಚಾಗುತ್ತದೆ, ಆದರೆ ಹಂತಗಳು ಕಡಿಮೆಯಾದಂತೆ ಅವರ ಪ್ರತಿಶ್ಟತೆ ಮತ್ತು ಶೈಕ್ಶನಿಕ ಹೋರಾಟ ಅವರ ಮಧ್ಯೆ ಇರುತ್ತದೆ.ಸಿಬ್ಲಿಂಗ್ಸ್ ಮಧ್ಯೆ ಅಸೂಯೆ ಇರುತ್ತದೆ,ಹಾಗೂ ಅಸೂಯೆ ಎಂಬುದು ಅವರ ಮಧ್ಯೆ ಒಂದು ಭವನೆ ಅಷ್ಟೆ.ಅಸೂಯೆ ಇಂದ ಉಂಟಾಗುವ ಭವನೆಗಲು ಯಾವುವೆಂದರೆ ಭಯ,ಕೋಪ ಮತ್ತು ದುಃಖ ಮತ್ತು ಆತಂಕ.ಅಸೂಯೆ ಎಂಬುದು ಸಾಮಾಜಿಕ ಸಂಬಧವಿದ್ದಂತೆ ಆದರೆ ಇದರಲ್ಲಿ ಮೂರನೆ ವ್ಯಕ್ತಿಯನ್ನು ಸೇರಿಸುವುದಿಲ್ಲ ಆದರೆ ಅವರ ತಂದೆ-ತಾಯಿಯನ್ನು ಸೇರಿಸುತ್ತರೆ.[]

ಈ ರೀತಿಯ ಅಸೂಯೆ ಇದ್ದಲ್ಲಿ ಮಕ್ಕಳು ಹೋಡೆದಾಡುವಲ್ಲಿ ಮುಂದಾಗುತ್ತಾರೆ, ಇದರಿಂದ ಅನಾಹುತಗಳು ನಡೆಯುವ ಅವಕಾಶಗಳಿವೆ.ಅನಾಹುತಗಳೆಂದರೆ ರಕ್ತ ಬರುವಂತೆ ಹೊಡೆದಾಡುವುದು, ಕಲ್ಲು ಎಸೆಯುವುದು,ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಹಾಕುವುದು ಮುಂತಾದವುಗಳನ್ನು ಮಾಡಿಕೊಂಡು ಕೆಲವರು ತಮ್ಮ ಬಂಧವನ್ನು ಹಾಳು ಮಾಡಿಕೊಳ್ಳುತ್ತಾರೆ.ಆದರೆ ಎಲ್ಲರ ಮನೆಯಲ್ಲಿ ಇದೆ ರೀತಿ ಇರುತ್ತದೆ ಎಂದು ಕೂಡಾ ಹೇಳಳಾಗುವುದಿಲ್ಲ.ಕೆಲವರ ಮನೆಯಲ್ಲಿ ಜೊತೆ ಕೂಡಿ ಬಾಳುವಂತಹ ಸಿಬ್ಲಿಂಗ್ಸ್ ಕೂಡಾ ಇರುತ್ತಾರೆ , ಉದಾಹರಣೆಗೆ :ದಶರಥ ಮಹಾರಜರು ಮೂರು ಮದುವೆಯನ್ನು ಮಾಡಿಕೊಂಡು , ನಾಲ್ಕು ಮಕ್ಕಳನ್ನು ಹೆತ್ತರು ಅವರು ಯಾರೆಂದರೆ ರಾಮ,ಲಕ್ಷ್ಮಣ, ಭರತ, ಶತ್ರುಗ್ನರು ಆದರೆ ಇವರು ಕಿತ್ತಾಡುತ್ತಿರಲಿಲ್ಲ, ಪಾಂಡು ರಾಜನಿಗೆ ಕೂಡಾ ಇಬ್ಬರು ಹೆಂಡತಿಯರು ಹಾಗೂ ಅವರಿಗೆ ೫ ಜನ ಮಕ್ಕಳು ಅವರು ಯಾರೆಂದರೆ ಧರ್ಮರಾಯ, ಅರ್ಜುನ ,ಭೀಮ,ನಕುಲ,ಸಹದೇವ.ಇವರ ಸಂಬಂಧ ಕೂಡ ಚೆನ್ನಾಗಿತ್ತು. ಈ ರೀತಿ ನಾವು ಪುರಾಣದಲ್ಲಿ ಹಲವಾರು ಸಿಬ್ಲಿಂಗ್ ಗಳ ಉದಾಹರಣೆಗಳನ್ನು ಕಾಣಬಹುದು.ಇದನ್ನು ನಾನು ಕೆಲವು ಚಿತ್ರಗಳಲ್ಲಿ ತೋರಿಸುತ್ತೆನೆ.

ಇವು ಸಿಬ್ಲಿಂಗ್ಸ್ ಎಂದರೆ.ಈ ರೀತಿ ನನ್ನ ಈ ಲೇಖನ ವನ್ನು ಮುಗಿಸುತ್ತೆನೆ.

  1. https://en.wikipedia.org/wiki/Sibling
  2. https://en.wikipedia.org/wiki/Sibling_relationship