ವಿಷಯಕ್ಕೆ ಹೋಗು

ಸದಸ್ಯ:Perumals263/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[] [] ಭಾರತೀಯ ಮಹಾಕಾವ್ಯ:

                         ಭಾರತೀಯ ಉಪಖಂಡದಲ್ಲಿ ಬರೆಯಲಾದ ಮಹಾಕಾವ್ಯ. ಮೂಲತಃ ಸಂಸ್ಕೃತದಲ್ಲಿ ರಚಿತವಾದ, ಮತ್ತು ನಂತರ ಅನೇಕ ಇತರ ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡ ರಾಮಾಯಣ ಮತ್ತು ಮಹಾಭಾರತ ಭೂಮಿಯ ಮೇಲಿನ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ಮಹಾಕಾವ್ಯಗಳ ಪೈಕಿ ಕೆಲವು ಮತ್ತು ಇತಿಹಾಸದ ಭಾಗವಾಗಿವೆ. ನಿಶ್ಚಯವಾಗಿ, ಮಹಾಕಾವ್ಯ ರೂಪವು ಪ್ರಚಲಿತವಾಯಿತು ಮತ್ತು ಪದ್ಯ ಬಹಳ ಇತ್ತೀಚಿನವರೆಗೆ ಹಿಂದೂ ಸಾಹಿತ್ಯಕ ಕೃತಿಗಳ ಆದ್ಯತೆಯ ರೂಪವಾಗಿ ಉಳಿಯಿತು.

ಸಂಸ್ಕೃತ ಸಾಹಿತ್ಯ:

                   ಸಂಸ್ಕೃತ ಸಾಹಿತ್ಯ ವೇದಗಳನ್ನು ಒಳಗೊಂಡಿದೆ.ಸಂಸ್ಕೃತ ಭಾಷೆಯು ಅಧುನಿಕ ಭಾರತೀಯ ಭಾಷೆಗಳ ಮೇಲೆ ಅತ್ಯಂತ ಪ್ರಭಾವ ಬೀರಿದೆ ಮತ್ತು ಸಂಸ್ಕೃತ ಸಾಹಿತ್ಯವು ಭಾರತೀಯ ಸಂಸ್ಕೃತಿಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ.ಕೆಲವು ಸಂಸ್ಕೃತ ಸಾಹಿತ್ಯಗಳಾದ ಪತಂಜಲಿಯ ಯೋಗ-ಸೂತ್ರಗಳು ಮತ್ತು ಉಪನಿಷತ್ ಗಳು ಅರೇಬಿಕ್ ಹಾಗೂ ಪರ್ಷಿಯನ್ ಭಾಷೆಗೆ ಅನುವಾದಿಸಲಾಯಿತು ಮತ್ತು ಪಂಚತಂತ್ರ ಸಾಹಿತ್ಯವು ಪರ್ಷಿಯನ್ ಭಾಷೆಗೆ ಅನುವಾದಗೊಂಡಿತು.ಸಂಸ್ಕೃತ ಸಾಹಿತ್ಯದಲ್ಲಿ ಮುಖ್ಯವಾದ  ಮಹಾಕಾವ್ಯಗಳು ಎಂದರೆ ಅದು ರಾಮಾಯಣ ಮತ್ತು ಮಹಾಭಾರತ.ಸುಮಾರು ಕ್ರಿ.ಪೂ ೬ ಮತ್ತು ೧ನೇ ಶತಮಾನಗಳ ಮಧ್ಯದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಬರೆಯಲಾಗಿದೆ ಎಂದು ಹೇಳುತ್ತಾರೆ.ಇವುಗಳನ್ನು ಇತಿಹಾಸದ ಕಥೆಗಳೆಂದು ಅಥವಾ ಇತಿಹಾಸ ಎಂ
ರಾಮಾಯಣ

ದು ಕರೆಯಲಾಗುತ್ತದೆ.

  ರಾಮಾಯಣ:
                ರಾಮಾಯಣ ಮಹಾಕಾವ್ಯವನ್ನು ಹಿಂದೂ ಋಷಿಯಾದ ವಾಲ್ಮೀಕಿಯು ರಚಿಸಿದ್ದಾರೆ.  ಮತ್ತು ಇವರನ್ನು "ಆದಿಕವಿ" ಅಥವಾ "ಮೊದಲ ಕವಿ" ಎಂದು ಕರೆಯುತ್ತಾರೆ.ರಾಮಾಯಣ ಪ್ರಾಚೀನ ಭಾರತೀಯ ಮಹಾಕಾವ್ಯಗಳಲ್ಲಿ ಮೊದಲ ಕಾವ್ಯವಾಗಿದೆ.ರಾಮಾಯಣ ರಾಮನ ಜೀವನದ ಬಗ್ಗೆ ವಿವರಿಸುತ್ತದೆ.ಈ ಕಥೆಯಲ್ಲಿ ರಾಮನ ವನವಾಸದ ಬಗ್ಗೆ ಮತ್ತು ರಾಕ್ಷಸ ರಾಜ ರಾವಣ ಆತನ ಹೆಂಡತಿಯನ್ನು ಅಪಹರಣ ಮಾಡಿದ್ದು ಮತ್ತು ಶ್ರೀಲಂಕಾ ಯುದ್ಧದ ಬಗ್ಗೆ ವಿವರಿಸಲಾಗಿದೆ.ಈ ಕಥೆಯ ಮುಖ್ಯ ಪಾತ್ರಗಳು-ರಾಮ,ಸೀತೆ,ಹನುಮಂತ, ಲಕ್ಷ್ಮಣ, ರಾವಣ, ಜಟಾಯು, ಭರತ, ಸುಗ್ರೀವ, ಇತ್ಯಾದಿ. ರಾಮಾಯಣ ಪ್ರಪಂಚ ಸಾಹಿತ್ಯದಲ್ಲಿ ಒಂದು ದೊಡ್ಡ ಪ್ರಾಚೀನ ಮಹಾಕಾವ್ಯವಾಗಿದೆ ,ಇದು ಸುಮಾರು ೨೪,೦೦೦ ಪದ್ಯ ಅಥವಾ ಶ್ಲೋಕಗಳನ್ನು ಹೊಂದಿದೆ ಹಾಗೂ ಇದನ್ನು ಏಳು ಕಾಂಡಗಳಾಗಿ ವಿಂಗಡಿಸಲಾಗಿದೆ ಮತ್ತು ೫೦೦ ಅಧ್ಯಾಯಗಳನ್ನು ಒಳಗೊಂಡಿದೆ.ಏಳು ಕಾಂಡಗಳೆಂದರೆ-ಬಾಲ ಕಾಂಡ,ಅಯೋಧ್ಯಾ ಕಾಂಡ,ಅರಣ್ಯ ಕಾಂಡ,ಕಿಶಕಿಂದ ಕಾಂಡ,ಸುಂದರ ಕಾಂಡ,ಯುದ್ಧ ಕಾಂಡ ಮತ್ತು ಉತ್ತರ ಕಾಂಡ.ಹಿಂದೂ ಸಂಪ್ರದಾಯದಲ್ಲಿ, ರಾಮಾಯಣವನ್ನು ಆದಿ-ಕಾವ್ಯ(ಮೊದಲ ಕವಿತೆ) ಎಂದು ಪರಿಗಣಿಸಲಾಗಿದೆ.ಈ ಕಥೆ ಸಂಬಂಧಗಳ ಕರ್ತವ್ಯಗಳ ಬಗ್ಗೆ ಮಾತಾನಾಡುತ್ತದೆ,ಹಾಗೂ ಮಹಭಾರತದಂತೆ,ರಾಮಾಯಣ ಕೇವಲ ಕಥೆ ಅಲ್ಲ,ಇದು ಹಿಂದೂ ಋಷಿಗಳ ಬೋಧನೆಗಳನ್ನು ಒದಗಿಸುತ್ತದೆ. ರಾಮಾಯಣ ಭಾರತೀಯ ಮತ್ತು ಆಗ್ನೇಯ ಏಷ್ಯಾ ಸಂಸ್ಕೃತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.ರಾಮಾಯಣ ಏಷ್ಯಾದ ಹಲವು ಭಾಷೆಗಳಲ್ಲಿ ಭಾಷಾಂತರಗೊಂಡಿದೆ.
   ಮಹಾಭಾರತ:
                  ಮಹಾಭಾರತ ವಿಶ್ವದ ಅತ್ಯಂತ ಕಾವ್ಯಾತ್ಮಕ ಕೃತಿಗಳಲ್ಲಿ ಒಂದಾಗಿದೆ.ಮಹಾಭಾರತ ಹಿಂದೂ 

thumb|ಮಹಾಭಾರತ ಪುರಾಣ, ತತ್ವಶಾಸ್ತ್ರ ಮತ್ತು ಧಾರ್ಮಿಕಗಳ ಬಗ್ಗೆ ವಿವರಿಸುತ್ತದೆ. ಮಹಾಭಾರತ ಒಂದು ಮಹಾಕಾವ್ಯ ಹಾಗೂ ಮಹಾಭಾರತ ಭಾರತದ ಪ್ರಾಚೀನ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯಗಳಲ್ಲಿ ಒಂದಾಗಿದೆ.ಮಹಾಭಾರತ ಎಂಬುದು ದ್ರೌಪದಿಯ ಕಟ್ಟದ ಕಬರಿಯ ಹಾಗೆ ಎಂದು ಉಪನ್ಯಾಸವೊಂದರಲ್ಲಿ ವಿದ್ವಾಂಸ]ಲಕ್ಷೀಶ ತೋಳ್ಪಾಡಿಯವರು ಹೇಳಿದರೆ.ಮಹಾಭಾರತಕ್ಕೆ ಇಷ್ಟೊಂದು ಯುಕ್ತವಾದ ರೂಪಕ ಬೇರೊಂದಿಲ್ಲ. ಈ ಕಥೆ ಕುರುಕ್ಷೇತ್ರ ಯುದ್ಧ ಮತ್ತು ಕೌರವ ಹಾಗೂ ಪಾಂಡವ ರಾಜಕುಮಾರರ ಭವಿಷ್ಯವನ್ನು ವಿವರಿಸುತ್ತದೆ.ಸಾಂಪ್ರದಾಯಿಕವಾಗಿ, ಮಹಾಭಾರತದ ಕರ್ತೃ ವ್ಯಾಸ ಎನ್ನಲಾಗಿದೆ ಮತ್ತು ಇವರು ಈ ಮಹಾಕಾವ್ಯದಲ್ಲಿ ಒಬ್ಬ ಮುಖ್ಯ ಪಾತ್ರವಾಗಿದ್ದಾರೆ.ಮಹಾಭಾರತವನ್ನು" ದೀರ್ಘ ಕವಿತೆ" ಎಂದು ಕರೆಯುತ್ತಾರೆ.ಈ ಕಥೆಯನ್ನು ಕ್ರಿ.ಪೂ ೮ ಮತ್ತು ೬ನೇ ಶತಮಾನದಲ್ಲಿ ಬರೆಯಲಾಗಿದೆ ಎಂದು ಹೇಳುತ್ತಾರೆ ಹಾಗೂ ಪ್ರಥಮ ಗುಪ್ತ( ಕ್ರಿ.ಶ ೪ನೇ ಶತಮಾನ) ಅವಧಿಯಲ್ಲಿ,ಮಹಾಭಾರತ ಪಠ್ಯ ಪೂರ್ಣಗೊಂಡ ಹಂತದಲ್ಲಿ ಇತ್ತು. ಮಹಾಭಾರತವನ್ನು ಇಲಿಯಡ್ ಮತ್ತು ಒಡಿಸ್ಸಿ ಕಾವ್ಯಗಳಿಗೆ ಹೋಲಿಸಿದರೆ ಮಹಾಭಾರತವು ೧೦ ಪಟ್ಟು ದೊಡ್ಡದಾದ ಕಾವ್ಯವಾಗಿದೆ ಹಾಗೂ ಮಹಾಭಾರತವು ರಾಮಾಯಣಕ್ಕಿಂತ ೪ ಪಟ್ಟು ದೊಡ್ಡದಾಗಿದೆ.ಮಹಾಭಾರತ ಆದಿ ಪರ್ವ ಪ್ರಕಾರ(೮೧-೧೦೧-೧೦೨),ಈ ಪಠ್ಯ ವ್ಯಾಸ ಸಂಯೋಜಿಸಿದ ಸಂದರ್ಭದಲ್ಲಿ ಮೂಲತಃ ೮೮೦೦ ಪದ್ಯಗಳನ್ನು ಹೊಂದಿದ್ದು ನಂತರ ವೈಶಂಪಾಯನ ೨೪೦೦೦ ಪದ್ಯಗಳನ್ನು ಒಳಗೊಂಡಿರುವ ಕಾವ್ಯವನ್ನು ರಚಿಸಿದ.ಮಹಾಭಾರತ ಪಠ್ಯವನ್ನು ಜಯಾ(ವಿಕ್ಟರಿ) ಎಂದು ಕರೆಯಲಾಗುತಿತ್ತು.ಮಹಾಭಾರತ ಕಥೆ ವಿಶಾಲವಾಗಿದೆ.ಈ ಕಥೆಯಲ್ಲಿ ಮುಖ್ಯವಾಗಿ ಹಸ್ತಿನಾಪುರ ಯಾರಿಗೆ ಎಂಬುದಕ್ಕಾಗಿ ಎರಡು ಕುಟುಂಬಗಳ ನಡುವೆ ನಡೆದ ಸಂಘರ್ಷ ಕಥೆಯಾಗಿದೆ. ಮಹಾಭಾರತದಲ್ಲಿ ಒಟ್ಟು ೧೮ ಪರ್ವಗಳು ಇವೆ. ಅವುಗಳು ಎಂದರೆ-ಆದಿ ಪರ್ವ,ಸಭಾ ಪರ್ವ,ವನ ಪರ್ವ,ವಿರಾಟ ಪರ್ವ,ಉದ್ಯೋಗ ಪರ್ವ,ಭೀಷ್ಮ ಪರ್ವ,ದ್ರೋಣ ಪರ್ವ,ಕರ್ಣ ಪರ್ವ,ಶಲ್ಯ ಪರ್ವ,ಸೌಪ್ತಿಕ ಪರ್ವ,ಸ್ತ್ರೀಪರ್ವ,ಶಾಂತಿ ಪರ್ವ,ಅನುಶಾಸನ ಪರ್ವ,ಅಶ್ವಮೇಧಿಕ ಪರ್ವ,ಆಶ್ರಮ ವಾಸಿಕ ಪರ್ವ,ಮೌಸಲ ಪರ್ವ,ಮಹಾಪ್ರಾಸ್ತಾವಿಕ ಪರ್ವ,ಸ್ವರ್ಗಾರೋಹಣ ಪರ್ವ. ಮಹಾಭಾರತ ಭಾರತ ಮತ್ತು ಹಿಂದೂ ಧರ್ಮಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.

                    "ಕನ್ನಡದಲ್ಲಿ ಮಾತ್ರ ರಾಮಾಯಣ ಮತ್ತು ಮಹಾಭಾರತ ಜೈನ್ ಸಂಪ್ರದಾಯದ ಮೇಲೆ ಬರೆಯಲಾಗಿದೆ".
  1. https://en.wikipedia.org/wiki/Mahabharata
  2. https://en.wikipedia.org/wiki/Ramayana