ಸಂ. ಆಲೋಷಿಯಸ್ ಪ್ರಾರ್ಥನಾಲಯ
12°52′25″N 74°50′43″E / 12.87361°N 74.84528°E
ಸಂ. ಆಲೋಷಿಯಸ್ ಪ್ರಾರ್ಥನಾಲಯ | |
---|---|
ಸಂ. ಆಲೋಷಿಯಸ್ ಪ್ರಾರ್ಥನಾಲಯ | |
ಹಳೆಯ ಹೆಸರುಗಳು | ಕಾಪೆಲ್ಲಾ ಡಿ ಸಾನ್ ಲುಗಿ ಕಾಪೆಲ್ಲಾ ಡೆ ಸಾವೊ ಲೂಯಿಸ್ |
ಇತರೆ ಹೆಸರುಗಳು | ಸಂ. ಆಲೋಷಿಯಸ್ ಪ್ರಾರ್ಥನಾಲಯ |
ಸಾಮಾನ್ಯ ಮಾಹಿತಿ | |
ನಗರ ಅಥವಾ ಪಟ್ಟಣ | ಮಂಗಳೂರು, ದಕ್ಷಿಣ ಕನ್ನಡ, ದಕ್ಷಿಣ ಕರಾವಳಿ |
ದೇಶ | ಭಾರತ |
ಮುಕ್ತಾಯ | ೧೮೭೮ |
ಸಂ. ಆಲೋಷಿಯಸ್ ಪ್ರಾರ್ಥನಾಲಯ, (ಇಟಾಲಿಯನ್:ಕಾಪೆಲ್ಲಾ ಡಿ ಸಾನ್ ಲುಗಿ, ಪೋರ್ಚುಗೀಸ್:ಸಾವೊ ಲೂಯಿಸ್ ಕಾಪೆಲ್ಲಾ) ಅಥವಾ ಸಂ.ಅಲೋಷಿಯಸ್ ಕಾಲೇಜುವು, ಒಂದು ಕ್ರೈಸ್ತ ಪ್ರಾರ್ಥನಾಲಯವಾಗಿದ್ದು ಕರ್ನಾಟಕ ರಾಜ್ಯದಲ್ಲಿರುವ ಭಾರತ ದೇಶದ ದಕ್ಷಿಣ ನೈಋತ್ಯ ಭಾಗದಲ್ಲಿದೆ. ಪ್ರಾರ್ಥನಾಲಯವು ನಗರದ ಹೃದಯ ಭಾಗದಲ್ಲಿದ್ದು ಬಾವುಟಗುಡ್ಡ ಅಥವಾ ದ್ವೀಪಸ್ಥಂಭ ಬೆಟ್ಟ ಅಥವಾ ಲೈಟ್ ಹೌಸ್ ಬೆಟ್ಟದಲ್ಲಿದೆ.
ಇತಿಹಾಸ
[ಬದಲಾಯಿಸಿ]ಸಂ. ಆಲೋಷಿಯಸ್ ಪ್ರಾರ್ಥನಾಲಯವನ್ನು ಯೇಸು ಸಭೆಯ ಧರ್ಮಪ್ರಚಾರಕರು ೧೮೮೦ರಲ್ಲಿ ನಿರ್ಮಿಸಿದ್ದು, ಇಟಲಿ ಯೇಸು ಸಭೆಯ ದರ್ಮಪ್ರಚಾರಕ ಅಂಟೋನಿಯೊ ಮೊಸ್ಕೇನ್ಹಿ ಅವರು ೧೮೯೯ರಲ್ಲಿ ವರ್ಣಚಿತ್ರಗಳಿಂದ ಕೂಡಿದ ಒಳಭಾಗವನ್ನು, ತಮ್ಮ ೧೮೭೮ರ ಮಂಗಳೂರು ಧರ್ಮಪ್ರಚಾರದ ಅವಧಿಯಲ್ಲಿ ಬಿಡಿಸಿದರು.ಇಟಲಿ ಯೇಸು ಸಭೆ ಮಂಗಳೂರು ಕ್ರೈಸ್ತರ ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಜೀವನ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸಿತು [೧] ಮತ್ತು ೧೮೮೦ರಲ್ಲಿ ನಿರ್ಮಿಸಿ,ಸಂ. ಅಲೋಷಿಯಸ್ ಕಾಲೇಜು,[೨] ಸಂ. ಆಲೋಷಿಯಸ್ ಪ್ರಾರ್ಥನಾಲಯವನ್ನು ೧೮೮೪ರಲ್ಲಿ ಸ್ಥಾಪಿಸಿದ್ದರು,[೩] ಅನೇಕ ಚರ್ಚುಗಳು ಹಾಗೂ ಸಂಸ್ಥೆಗಳನ್ನೂ ನಿರ್ಮಿಸಿದರು.
ವಾಸ್ತುಶಿಲ್ಪ
[ಬದಲಾಯಿಸಿ]ಸಂ. ಆಲೋಷಿಯಸ್ ಪ್ರಾರ್ಥನಾಲಯವು ರೋಮ್ ನಗರದ ಪ್ರಾರ್ಥನಾಲಯಗಳನ್ನು ಹೋಲುವ ಅದ್ಭುತವಾದ ವಾಸ್ತಶಿಲ್ಪವನ್ನು ಹೊಂದಿದೆ. ಒಳಗೋಡೆಗಳ ಪ್ರತಿಯೊಂದು ಭಾಗವೂ ವರ್ಣರಂಜಿತಗೊಂಡು ದೇಶದಲ್ಲೇ ವಿಶಿಷ್ಟವಾದ ಪ್ರಾರ್ಥನಾಲಯವೆಂದು ಗುರುತಿಸಲ್ಪಟ್ಟಿದೆ. ಇಟಲಿಯ ಬ್ರ. ಮೊಸ್ಕೇನ್ಹಿ ಇದರ ನಿರ್ಮಾತೃಕಾರರಾಗಿದ್ದಾರೆ. ಪ್ರಾರ್ಥನಾಲಯದ ಒಂದು ಭಾಗವು ಅಲೋಷಿಯಸ್ ಕಾಲೇಜಿನ ಪೋಷಕ ಸಂತರಾದ ಅಲೋಷಿಯಸ್ ಗೊನ್ಜಾಗ ಅವರ ಜೀವನ ಚರಿತ್ರೆಯನ್ನು ವಿವರಿಸುತ್ತದೆ. ಸಂ. ಅಲೋಷಿಯಸ್ ತಮ್ಮ ಜೀವನವನ್ನು ಇತರರಿಗಾಗಿ ಮುಡಿಪಾಗಿಟ್ಟಿದ್ದರು.
ದೇಶದ ಮಾನ್ಯತೆಗೊಳಪಟ್ಟ ಮಂಡಳಿಯು ಇದರ ವರ್ಣರಂಜಿತ ಗೋಡೆಗಳನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದೆ.
ವರ್ಣಲೇಪನ
[ಬದಲಾಯಿಸಿ]ಕಾಲೇಜು ಮತ್ತು ಪ್ರಾರ್ಥನಾಲಯವನ್ನು ಸರ್ಮಪಿಸಿದ ಅಲೋಷಿಯಸ್ ಅವರ ಜೀವನ ಚರಿತ್ರೆಯನ್ನು ಮಧ್ಯಭಾಗದ ಒಳಛಾವಣಿಯಲ್ಲಿರುವ ವರ್ಣರಂಜಿತವಾದ ಚಿತ್ರಗಳು ವರ್ಣಿಸುತ್ತದೆ. ಇತರರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಗೊನ್ಜಾಗ ಅವರ ಮೌಲ್ಯಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಲೆಂದು ಕಾಲೇಜಿಗೆ ಅವರ ಹೆಸರನ್ನು ಇಡಲಾಗಿದೆ. ಯುವಕರಿಗೆ ಇರಬೇಕಾದಂತಹ ಆಸ್ತಿ, ಅಧಿಕಾರ ಮತ್ತು ಪ್ರಾಬಲ್ಯಗಳು ಗೊನ್ಜಾಗ ಅವರಿಗಿತ್ತು, ಆದರೆ ಅವರು ಅದನ್ನು ಇತರರ ಸೇವೆ ಮಾಡುವಲ್ಲಿ ಅದರಲ್ಲಿಯೂ ಅಗತ್ಯವುಳವರಿಗಾಗಿ ತ್ಯಜಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಅವರ ಸೇವಾ ಮಾದರಿಯನ್ನು ಅನುಸರಿಸಲು ಉತ್ತೇಜನ ನೀಡಲಾಗುತ್ತದೆ.
ಪ್ರಾರ್ಥನಾಲಯದ ಹಿಂಭಾಗದಿಂದ ಅವರ ಆರಂಭಿಕ ಜೀವನ ಶೈಲಿಯನ್ನು ಚಿತ್ರಿಸಲಾಗಿದೆ:-
- ಅಲೋಷಿಯಸ್ ತಮ್ಮ ಜೀವನವನ್ನು ದೇವರಿಗೋಸ್ಕರ ಮುಡಿಪಾಗಿಡಲು ಮಾತೆ ಮೇರಿಯ ಪೀಠದೆದುರು ಕೈಗೊಳ್ಳುವ ಶಪಥದ ಚಿತ್ರ.
- ತನ್ನದೇ ಜನರ ಮಧ್ಯದಲ್ಲಿ ದೇವರ ಬಗ್ಗೆ ಬೋಧನೆಯನ್ನು ಮಾಡುವುದು.
- ಅಲೋಷಿಯಸ್ ಅವರ ಮೊದಲ ಪರಮ ಪ್ರಸಾದ ಸ್ವೀಕಾರ ಪ್ರಕ್ರಿಯೆ.
- ಯೇಸು ಸಭೆಗೆ ಅಲೋಷಯಸ್ ಅವರು ಭರ್ತಿಗೊಳ್ಳುವುದು.
ತದನಂತರದ ಅವರ ಜೀವನವನ್ನು ಬಲಿಪೀಠದ ಮೇಲ್ಭಾಗದಲ್ಲಿರುವ ಗೋಡೆಯ ಮೇಲೆ ಚಿತ್ರೀಕರಿಸಲಾಗಿದೆ. ಮಧ್ಯಭಾಗದ ಚಿತ್ರದಲ್ಲಿ ರೋಮ್ ನಗರ ಪ್ಲೇಗ್ ರೋಗಕ್ಕೆ ತುತ್ತಾಗಿರುವುದನ್ನು ಕಾಣಬಹುದು. ರೋಗಪೀಡಿತರಿಗೆ ಅಲೋಷಿಯಸ್ ತಮ್ಮ ಸಹಾಯ ಹಸ್ತ ಚಾಚಿದರು. ಅವರಿಗೆ ಅದೇ ರೋಗ ತಗುಲಿ , ತಮ್ಮ ೨೩ನೇ ವಯಸ್ಸಿನಲ್ಲಿ ಸಾವನ್ನಪ್ಪಿದರು.
ವಿವಿಧ ಅಂಕಣಗಳಲ್ಲಿರುವ ಇಳಿಜಾರು ಛಾವಣಿಯಲ್ಲಿ ಧರ್ಮಪ್ರಚಾರಕರ ಚಿತ್ರಗಳನ್ನು ಹೂಮಾಲೆಯಿಂದ ಬಿಡಿಸಲಾಗಿದೆ. ಎಲ್ಲೂ ಸಹ ಎರಡು ಹೂವಿನ ಹಾರಗಳು ಒಂದೇ ಮಾದರಿಯ ಹೂಗಳನ್ನು ಹೊಂದಿಲ್ಲ. ಹೂವಿನ ಹಾರವನ್ನು ಹೊಂದಿರುವ ದೇವತೆಗಳ ಚಿತ್ರಗಳು ಜೀವಿತಾವಧಿಯನ್ನು ವಿವರಿಸುತ್ತದೆ. ಮೇಲಿನ ಛಾವಣಿಯ ಗೋಡೆಗಳು ಚರ್ಚಿನ ಎಲ್ಲಾ ಸಂತರ ಚಿತ್ರಗಳನ್ನು ಹೊಂದಿದೆ. ಕೆಳಭಾಗದ ಛಾವಣಿಯು ಯೇಸು ಸಭೆಯ ಸಂತರ ಚಿತ್ರಗಳನ್ನು ಹೊಂದಿದೆ.
ಈ ವರ್ಣರಂಜಿತ ಚಿತ್ರಗಳು
- ಸಂ. ಥೋಮಸ್, ಭಾರತದ ಧರ್ಮಪ್ರಚಾರಕ, ಭರ್ಜಿಯನ್ನು ಹಿಡಿದು ನಿಂತಿದ್ದಾರೆ
- ಸಂ. ಫ‍್ರಾನ್ಸಿಸ್ ಆಸ್ಸಿಸಿ ಪರಿಸರವಾದಿಗಳ ಪೋಷಕ.
- ಸಂ. ಪೇತ್ರ ಕ್ಲೆವರ್ ನೀಗ್ರೋ ಜನರ ಧರ್ಮಪ್ರಚಾರಕ, ಇವರು ಕಾರ್ಟಾಜೆನಿಯಾಕ್ಕೆ ಹೋಗಿ ಗುಲಾಮರ ಸೇವೆ ಮಾಡಿದ್ದು, ಅವರನ್ನು ತನ್ನ ಸಮಾನರನ್ನಾಗಿ ಕಾಣುವ ದೃಶ್ಯವನ್ನು ನಾಲ್ಕನೇ ಎಡಭಾಗದ ಕಮಾನಿನಲ್ಲಿ ಚಿತ್ರೀಕರಿಸಲಾಗಿದೆ.
- Bl. ರುಡೋಲ್ಫ್ ಅಕ್ವಾವಿವ. ಇವರು ಅಕ್ಬರನ ಆಸ್ಥಾನಕ್ಕೆ ಹೋಗಿದ್ದು, ಅಲ್ಲಿ ಅವರನ್ನು ಘನತೆಯಿಂದ ಸತ್ಕರಿಸಲಾಗಿತ್ತು.
- ಸಂ Jಜೋನ್ ದೆ ಬ್ರಿಟ್ಟೊ ಸಾಂಸ್ಕೃತೀಕರಣದ ಸಂಕೇತವಾಗಿ ಸನ್ಯಾಸಿ ವೇಷಭೂಷಣಗಳನ್ನು ಧರಿಸಿದ ಮೊದಲ ಧರ್ಮಪ್ರಚಾರಕ. ಸಂಸ್ಕೃತವನ್ನು ಕಲಿತ ವಿದ್ವಾಂಸರಾಗಿದ್ದು, ತಮಿಳು ಮತ್ತು ಭಾರತೀಯತೆಯಲ್ಲಿ ಪರಿಒಣತಿಯನ್ನು ಪಡೆದಿದ್ಧರು.
ಯೇಸು ಮಕ್ಕಳ ಗೆಳೆಯ ಎಂದು ವರ್ಣಿಸುವ ಚಿತ್ರವು ಹಿಂಭಾಗದ ಗೋಡೆಯಲ್ಲಿದೆ. ಈ ಚಿತ್ರವು ಮೊಸ್ಕೇನ್ಹಿ ಅವರ ಅದ್ಭುತ ಕಲಾಕೃತಿಗಳಲ್ಲೊಂದಾಗಿದೆ. ಮಳೆನೀರಿನಿಂದಾಗುವ ಹಾನಿಯನ್ನು ತಡೆಗಟ್ಟಲು ಶಿಲೀಂಧ್ರ ಮತ್ತು ಕ್ಯಾಲ್ಸಿಯಂ ಕಾರ್ಬೋನೇಟ್ ಹರಳುಗಳನ್ನು ಹಾಕಿ ವರ್ಣಚಿತ್ರಗಳನ್ನು ಸಂರಕ್ಷಿಸಲಾಗಿದೆ. ಕುಳಿತುಕೊಂಡ ಮಹಿಳೆಯ ಬಲಭಾಗದಲ್ಲಿ ಕೆಳಗಡೆ ಚಿತ್ರದ ಸಣ್ಣ ಭಾಗವನ್ನು ಸರಿಪಡಿಸಲು ಸಾಧ್ಯವಾಗಿಲ್ಲವಾದ್ಧರಿಂದ ಅದನ್ನು ಹಾಗೆಯೇ ಬಿಡಲಾಗಿದೆ.
ಯೇಸುಕ್ರಿಸ್ತನ ಜೀವನವನ್ನು ಬಿತ್ತರಿಸುವ ಹಲವಾರು ಚಿತ್ರಗಳನ್ನು ಇಲ್ಲಿ ಕಾಣಬಹುದು.
- ಕ್ರಿಸ್ಮಸ್ ರಾತ್ರಿಯಲ್ಲಿ ದೇವರ ಜನನ.
- ಸಂ.ಜೋನ್ ಬ್ಯಾಪ್ಟಿಸ್ಟರು ಯೇಸುವಿಗೆ ಪವಿತ್ರ ಸ್ನಾನ ನೀಡುವುದು
- ಕಾನಾ ನಗರದ ಮದುವೆ ಸಮಾರಂಭ, ದಲ್ಲಿ ಯೇಸು ೬ ಬಿಂದಿಗೆಳಷ್ಟು ನೀರನ್ನು ದ್ರಾಕ್ಷಾರಸವನ್ನಾಗಿ ಬದಲಾಯಿಸಿದರು.
- ಕಲ್ವಾರಿ ಪರ್ವತದಲ್ಲಿ ಇಬ್ಬರು ಕಳ್ಳರ ಮಧ್ಯದಲ್ಲಿ ಯೇಸು ಶಿಲುಬೆಯಲ್ಲಿರುವ ಚಿತ್ರ. ಯೇಸುವಿನ ತಾಯಿ ಮೇರಿ ಮತ್ತು ಮಾಗ್ದಲೆನ್, ಇಬ್ಬರು ಶಿಲುಬೆಯ ಕೆಳಭಾಗದಲ್ಲಿದ್ದಾರೆ. ಯೇಸುವಿನ ಪಕ್ಕೆಲುಬಿಗೆ ಸೈನಿಕನಾದ ಲಂಗಿನಸ್, ಭರ್ಜಿಯನ್ನು ಚುಚ್ಚುವ ದೃಶ್ಯವೂ ಇದೆ. ಕತ್ತಲೆ ಹಾಗೂ ಬೆಳಕಿನ ಪ್ರಮಾಣ ಕಡಿಮೆ ಇದ್ದುದರಿಂದ, ಇಲ್ಲಿಯೂ ಕಲಾವಿದ ಬೆಳಕನ್ನು ಇತಿಮಿತಿಯಲ್ಲಿ ಬಳಸಿರುತ್ತಾನೆ.
ಪ್ರಾರ್ಥನಾಲಯದ ವರ್ಣಚಿತ್ರಗಳು ರಚನೆ
[ಬದಲಾಯಿಸಿ]ಪ್ರಾರ್ಥನಾಲಯದಲ್ಲಿ ಎರಡು ಬಗೆಯ ವರ್ಣಚಿತ್ರಗಳಿವೆ: ಫ್ರೆಸ್ಕೊ ಮತ್ತು ಕ್ಯಾನ್ವಾಸ್. ಫ್ರೆಸ್ಕೊ ಚಿತ್ರಗಳನ್ನು ಅರ್ಧ ಸುಣ್ಣ ಪ್ಲಾಸ್ಟರ್-ಗಳಿಂದ ಗೋಡೆಗಳ ಮೇಲೆ ಬಿಡಿಸಲಾಗಿದೆ. ಇದರಿಂದಾಗಿ ಬಣ್ಣಗಳು ಪ್ಲಾಸ್ಟರ್-ನಲ್ಲಿ ವಿಲೀನಗೊಳ್ಳುತ್ತವೆ ಮತ್ತು ಅವು ಒಣಗುತ್ತವೆ. ಫ್ರೆಸ್ಕೊ ಚಿತ್ರಗಳು ಪ್ರಾರ್ಥನಾಲಯದ ೬೦೦ ಚದರ ಮೀಟರ್ ಗೋಡೆಯನ್ನು ಆವರಿಸಿವೆ. ಎಣ್ಣೆ ಚಿತ್ರಗಳಿಗೆ ನಾರಗಸೆ ಎಣ್ಣೆಯನ್ನು ಬಳಸಿ ವರ್ಣಚಿತ್ರಗಳನ್ನು ಬಳಸಲಾಗಿದೆ. ಕ್ಯಾನ್ವಾಸ್ ಚಿತ್ರಗಳನ್ನು ಶುದ್ಧ ಲಿನಿನ್ ಹಾಗೂ ಬಲವಾದ ನೇಯ್ಗೆ ಸಾಮಾಗ್ರಿಗಳಿಂದ ಬಿಡಿಸಲಾಗಿದೆ. ಪ್ರಾರ್ಥನಾಲಯದ ಛಾವಣಿಯಲ್ಲಿರುವ (ಸುಮಾರು ೪೦೦ ಚದರ ಮೀಟರ್) ಚಿತ್ರಗಳು ಕ್ಯಾನ್ವಾಸ್ ಶೈಲಿಯಲ್ಲಿವೆ.
ವರ್ಣಚಿತ್ರಗಳ ಜೀರ್ಣೋದ್ಧಾರ
[ಬದಲಾಯಿಸಿ]ಕಾಲ ಕಳೆದಂತೆ ವರ್ಣಚಿತ್ರಗಳು ಧೂಳು, ತೇವಾಂಶ ಹಾಗೂ ಸಂರಕ್ಷಣಾ ಸಾಮಾಗ್ರಿಗಳಿಂದಾಗಿ ಹಾಳಾಗತೊಡಗಿದವು. ಕ್ಯಾನ್ವಾಸ್-ನಲ್ಲಿನ ಹೊಲಿಗೆಗಳು ಬಿರುಕು ಬಿಟ್ಟವು. ವಿಶೇಷ ತೊಟ್ಟಿಲುಗಳ ಸಹಾಐದಿಂದ ಕ್ಯಾನ್ವಾಸ್-ಗಳನ್ನು ಕೆಳಗಡೆ ಇಳಿಸಲಾಗಿದ್ದು, ವೈಜ್ಞಾನಿಕವಾಗಿ ಕಲಾಕೃತಿಗಳ ನೈಜ ಬಣ್ಣವನ್ನು ತೋರಿಸುವಲ್ಲಿ ತೊಡಕನ್ನುಂಟು ಮಾಡಿದ ಧೂಳು, ರಾಸಾಯನಿಕ ಮತ್ತು ಗಲೀಜುಗಳನ್ನು ತೆಗೆದು ಅವುಗಳ ಸಂರಕ್ಷಣೆ ಮಾಡಲಾಯಿತು. ಬಿರುಕು ಬಿಟ್ಟ ಭಾಗಗಳಿಗೆ ಹೊಲಿಗೆಗಳನ್ನು ಹಾಕಿ ಕೀಲುಗಳನ್ನು ಬಲವರ್ಧಿತಗೊಳಿಸಲಾಯಿತು. ಹೊಲಿಗೆಗಳನ್ನು ಹಾಕಿ ಸರಿಪಡಿಸಿದ ನಂತರ ಕ್ಯಾನ್ವಾಸ್ ವರ್ಣಚಿತ್ರಗಳನ್ನು ಮತ್ತೆ ಅದೇ ಸ್ಥಳದಲ್ಲಿ ಇಡಲಾಗಿದೆ. ಡಾ| ಒ.ಪಿ. ಆಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಇನ್ಟಾಕ್ ಸಂಸ್ಥೆಯ ತಜ್ಞರು ಸಂರಕ್ಷಣಾ ಕಾರ್ಯಗಳನನ್ಉ ೧೯೯೧ರಿಂದ ೧೯೯೪ರವರೆಗೆ ಮಾಡಿರುತ್ತಾರೆ.
ಕಲಾವಿದ
[ಬದಲಾಯಿಸಿ]ಇಟಲಿ ದೇಶದ ಬರ್ಗಾಮೊದಲ್ಲಿರುವ ಸ್ಟೆಝಾನೊ ಎಂಬ ಹಳ್ಳಿ ಪ್ರದೇಶದಲ್ಲಿ ೧೭ ಜನವರಿ ೧೮೫೪ರಲ್ಲಿ ಅಂಟೋನಿಯೊ ಮೊಸ್ಕೇನ್ಹಿ ಜನಿಸಿದರು. ಅವರ ಕಲೆಯನ್ನು ಬಹು ಹಿಂದೆಯೇ ಗುರುತಿಸಿದ್ದರಿಂದ ಅವರನ್ನು ಬರ್ಗಾನಿಯೊದಲ್ಲಿರುವ ಅಕಾಡಮಿಯ ಕಾರಾರ ಸಂಸ್ಥೆಗೆ ಹೆಚ್ಚಿನ ತರಬೇತಿ ಪಡೆಯಲು ಕಳುಹಿಸಲಾಗಿತ್ತು. ಅವರು ತಜ್ಞ ಶಿಕ್ಷಣಕಾರರಿಂದ ತರಬೇತಿಯನ್ನು ಪಡೆದು ಚಿತ್ರಕಲೆಯಲ್ಲಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡು ಒಬ್ಬ ವೃತ್ತಿಪರ ಚಿತ್ರಕಾರರಾಗಿ ಬೆಳೆದರು. ವ್ಯಾಟಿಕನ್ ನಗರದಲ್ಲಿರುವ ಮೇರುಕೃತಿ ಚಿತ್ರಗಳ ಅಧ್ಯಯನಕ್ಕಾಗಿ ಅವರು ರೋಮ್ ನಗರಕ್ಕೆ ತೆರಳಿದರು. ಫ್ರೆಸ್ಕೊ ಚಿತ್ರ ಬಿಡಿಸುವ ಕಲೆಯು ಅವರ ಹವ್ಯಾಸವಾಗಿ ಬೆಳೆಯಿತು. ೧೮೮೯ರಲ್ಲಿ ಅಂಟೋನಿಯೊ ಸಂಪೂರ್ಣವಾಗಿ ವೃತ್ತಿಪರತೆಯನ್ನು ಹೊಂದಿ ಧಾರ್ಮಿಕ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು. ಆದರೆ ಅವರ ಧಾರ್ಮಿಕ ಮುಖಂಡರು ಅವರಲ್ಲಿನ ಕಲೆಗೆ ಪ್ರೋಆತ್ಸಾಹ ನೀಡದೆ ಮಂಗಳೂರಿನ ಸಂ. ಅಲೋಷಿಯಸ್ ಕಾಲೇಜಿನ ಪ್ರಾರ್ಥನಾಲಯಕ್ಕೆ ಕಳುಹಿಸುವ ಮುನ್ನ ಇಟಲಿಯ ಅನೇಕ ಚರ್ಚುಗಳನ್ನು ಚಿತ್ರೀಕರಿಸುವಂತೆ ಆದೇಶೀಸಿದರು. ಅವರು ಪ್ರಾರ್ಥನಾಲಯದ ಚಿತ್ರಕಲೆಗಳನ್ನು ಬಿಡಿಸಲು ಎರಡು ವರ್ಷಗಳ ಕಾಲ ಕಳೆದರು.
ಉಲ್ಲೇಖಗಳು
[ಬದಲಾಯಿಸಿ]- ↑ "೧೨೫ ವರ್ಷಗಳ ಸಂಭ್ರಮಾಚರಣೆಯಲ್ಲಿ ಸಂ. ಅಲೋಷಿಯಸ್ ಕಾಲೇಜು". ದಿ ಹಿಂದೂ. ೨೦೦೪-೦೧-೦೮. Archived from the original on 2009-08-20. Retrieved ೨೦೦೮-೧೦-೩೦.
{{cite news}}
: Check date values in:|accessdate=
and|date=
(help); Italic or bold markup not allowed in:|publisher=
(help) - ↑ "About St. Aloysius College". St. Aloysius College (Mangalore). Archived from the original on 2008-05-27. Retrieved ೨೦೦೮-೦೯-೦೫.
{{cite web}}
: Check date values in:|accessdate=
(help) - ↑ "About Chapel". St. Aloysius College (Mangalore). Archived from the original on December 28, 2008. Retrieved 2008-09-05.
{{cite web}}
: Unknown parameter|deadurl=
ignored (help)
- Pages using gadget WikiMiniAtlas
- Pages using the JsonConfig extension
- CS1 errors: markup
- CS1 errors: dates
- CS1 errors: unsupported parameter
- Coordinates on Wikidata
- Commons category link is locally defined
- Roman Catholic chapels in India
- Churches in Mangalore Diocese
- 19th-century churches
- 1878 establishments in India
- Churches completed in 1878
- Buildings and structures in Mangalore
- Tourist attractions in Mangalore