ಯೇಸು ಸಭೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೇಸು ಸಭೆ [English : Society of Jesus, Latin : Societas Iesu , S. J] ಎನ್ನುವುದು ಒಂದು ಕಥೋಲಿಕ ಕ್ರೈಸ್ಥ ಧರ್ಮಕ್ಕೆ ಸೇರಿದ ಪುರುಷ ಪ್ರಧಾನ ಸಭೆಯಾಗಿದೆ.ಇದರಲ್ಲಿರುವ ಸದಸ್ಯರನ್ನು ಜೆಸ್ವಿಟರರು ಎಂದು ಕರೆಯಲಾಗುತ್ತದೆ.ಯೇಸು ಸಭೆಯು ತನ್ನ ಸೇವೆಯನ್ನು ಈಗಾಗಲೆ ೧೧೨ ಕ್ಕೂ ಹೆಚ್ಚು ದೇಷಗಳಲ್ಲಿ ನೀಡುತ್ತಿದೆ. ಇವರು ಶಾಲಾ ಕಾಲೇಜು, ಸಂಶೋದನೆ, ಸಮಾಜಾಭಿವ್ರುದ್ದಿ, ಧ್ಯಾನ, ಆಸ್ಪತ್ರೆ ಹೀಗೆ ಹಲವಾರು ರೀತಿಯಲ್ಲಿ ಯಮ್ಮ ಸೇವೆಯನ್ನು ನೀಡುತ್ತಿದ್ದಾರೆ.

ಯೇಸು ಸಭೆಯನ್ನು ಸಂತ ಇಗ್ನಾಸಿ ಅವರು ೧೫೪೦ ರಲ್ಲಿ ಸ್ತಾಪಿಸಿದರು.ಇವರು ಫ಼್ರೆಂಚ್ ದೇಶದ ಎದುರು ಯುದ್ದ ನಡೆಸುತ್ತಿದ್ದಾಗ ಕಾಲಿಗ ಅತಿಯಾಗಿ ಗಾಯಗೊಂಡು ಹಾಸಿಗೆ ಹಿಡಿದಿದ್ದರು. ಹೀಗೆ ಅವರು ಚೇತರಿಕೆಯ ಸಮಯದಲ್ಲಿ ಅವರಿಗೆ ಹಲವಾರು ಸಂತರ ಹಾಗು ದೇವರ ವಿಷಯವಾಗಿ ಪುಸ್ತಕಗಳನ್ನು ಕೊಡಲಾಗಿತ್ತು.ಮೊದಮೊದಲು ಹಿಡಿಸದಿದ್ದರು ನಂತರ, ಓದಿನಿಂದ ಬೇರೆಯವರನ್ನು ದೇವರಲ್ಲಿ ಕಾಣಲು ಹಾಗು ದೇವರನ್ನು ಪರರಲ್ಲಿ ಕಾಣಲು ಸಿದ್ದರಾದರು. ಇಗ್ನಾಸಿಯವರು ಮನ್ರೀಸಾ ಎಂಬ ಒಂದು ಗುಹೆಯಲ್ಲಿ ಹಲವಾರು ದಿನಗಳ ಪ್ರಾರ್ಥನೆಯ ನಂತರ ಪರಿವರ್ತನೆಗೊಂದು "ಆಧ್ಯಾತ್ಮಿಕ ಸಾಧನ" ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕವು ಯೇಸು ಸಭೆಯ ಸದಸ್ಯರ ಒಂದು ಹೆಮ್ಮೆಯ ಹಾಗು ಅತ್ಯಮೂಲ್ಯವಾದ ಸ್ವತ್ತಾಗಿದೆ. ಪ್ರತಿಯೊಬ್ಬರನ್ನು ದೇವರೆಡೆಗ ಈ ಒಂದು ಪುಸ್ತಕದ ಮೂಲಕ ಸೆಳೆಯುವುದು ಇಗ್ನಾಸಿಯವರ ಒಂದು ದೊಡ್ದ ಆಸಕ್ತಿಯಗಿತ್ತು.

ಸುಮಾರು ೧೬೭೪೦ ಜೆಸ್ವಿಟರು ೧೧೨ ಕ್ಕೂ ಹೆಚ್ಚು ದೇಶಗಳಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಇದರಲ್ಲಿ ೧೧೯೮೬ ಜನ ಗುರುಗಳು, ೨೭೭೩೩ ಸ್ಕೊಲಾಸ್ತಿಕ್ಸ್ [ಗುರು ಅಧ್ಯಯನದಲ್ಲಿರುವವರು], ೧೨೬೮ ಬ್ರದರ್ಸ್ಗಳು ಹಾಗು ೭೫೩ ನೋವಿಸಸ್ ಗಳು ಇದ್ದಾರೆ. ಯುರೋಪ್ ಹಾಗು ಅಮೇರಿಕ ಖಂಡಗಳಲ್ಲಿ ಜೆಸ್ವಿಟರ ಸಂಖ್ಯೆ ಕ್ಷೀಣಿಸುತ್ತಿದ್ದರು ಏಷ್ಯಾ ಹಾಗು ಆಫ಼್ರಿಖಾ ಖಂಡಗಳಲ್ಲಿ ಇವರ ಸಂಖ್ಯೆ ಏರುತ್ತಿದೆ. ಭಾರತದಲ್ಲಿ ಜೆಸ್ವಿಟರ ಕಾರ್ಯಗಳು ಬಹಳ ಪ್ರಗತಿ ಗೊಂಡಿದ್ದು ಜನ ಮೆಚ್ಚುಗೆಗೆ ಪಾತ್ರಗೊಂಡಿದೆ. ಬಡವರ ಹಾಗು ದಲಿತರ ಏಳಿಗೆ ಇವರ ಮೂಲ ಗುರಿಯಾಗಿದ್ದು ಸದಾ ಅವರ ಪ್ರಗತಿಗಾಗಿ ಜೆಸ್ವಿತ್ ಸಂಸ್ಥೆ ಶ್ರಮಿಸುತ್ತಿದೆ.

ಯೇಸು ಸಭೆಯನ್ನು ಪೋಪ್ ಪೌಲ್ ||| ರವರು "ರೆಜಿಮಿನಿ ಮಿಲಿತಾಂತಿಸ್ ಎಕ್ಲೇಸಿಯೆ" ಎಂಬ ಶಾಸನದ ಮೂಲಕ ಕರ್ಯರೂಪಗೊಳಿಸಿದರು.


[೧] [೨]

ಉಲ್ಲೆಖ

  1. http://www.britannica.com/topic/Jesuits
  2. http://www.gotquestions.org/Jesuits.html
"https://kn.wikipedia.org/w/index.php?title=ಯೇಸು_ಸಭೆ&oldid=927132" ಇಂದ ಪಡೆಯಲ್ಪಟ್ಟಿದೆ