ಮುಸ್ತಫಿಜುರ್ ರಹಮಾನ
ಮುಸ್ತಫಿಜುರ್ ರಹಮಾನವರು ೬ ಸೆಪ್ಟೆಂಬರ್ ೧೯೯೫ರಂದು ಜನಿಸಿದರು.[೧]ಅವರ ಅಡ್ಡ ಹೆಸರು ಮುಸ್ತಫಿಜ್,ಫಿಜ್,ಕಟ್ಟರ್ ಮಾಸ್ಟರ್.ಅವರು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಆಟಗಾರ.ಅವರು ಎಡಗೈ ಮಧ್ಯಮ ವೇಗದ ಬೌಲರಾಗಿದ್ದು,ಇದರಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ.ಅವರು ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್(೧೩) ತೆಗೆದುಕೊಂಡಿದ್ದರು.ಅವರು ಟೆಸ್ಟ್ ಹಾಗು ಅಂತಾರಾಷ್ಟ್ರೀಯ ಏಕದಿನದ ಪಾದಾರ್ಪಣೆ ಪಂದ್ಯದಲ್ಲಿ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದ ಮೊದಲಿಗ.ಅವರು ಪ್ರತಿಷ್ಠಿತ ಎಂ.ಆರ್.ಎಫ಼್ ಪೇಸ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದಿದ್ದರು.ಅವರು ಏಪ್ರಿಲ್ ೨೦೧೫ರಲ್ಲಿ ಪಾಕಿಸ್ತಾನದ ವಿರುದ್ಧ ಟಿ-೨೦ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದ್ಯಾರ್ಪಣೆ ಮಾಡಿದರು.[೨]
ಆರಂಭಿಕ ಜೀವನ
[ಬದಲಾಯಿಸಿ]ರಹಮಾನವರು ಖುಲ್ನಾ ವಿಭಾಗದ ಬಾಂಗ್ಲಾದೇಶದ ಶಕ್ತಿಖಿರ ಎಂಬ ಸಣ್ಣ ಪಟ್ಟಣದಲ್ಲಿ ಬೆಳೆದರು.ಅಬುಲ್ ಖಾಸಿಮ್ ಗಾಸಿ ಹಾಗು ಮಹ್ಮುದಾ ಖಾತುನವರ ಆರು ಮಕ್ಕಳಲ್ಲಿ ಕಿರಿಯ ಮಗನೇ ರಹಮಾನವರು.ಅವರ ತಂದೆ ಕ್ರಿಕೆಟಿನ ಉತ್ಸಾಹಿ ಅಭಿಮಾನಿಯಾಗಿದ್ದರು.ಅವರ ಅಣ್ಣನಾದ ಮೊಕ್ಲೇಶುರ್ ರಹಮಾನ್ ಇವರೊಂದಿಗೆ ಪ್ರತಿದಿನ ಬೆಳಿಗ್ಗೆ ಮನೆಯಿಂದ ನಲವತ್ತು ಕಿಲೋಮೀಟರ್ ದೂರ ಹೋಗಿ ಕ್ರಿಕೆಟ್ ಅಭ್ಯಾಸಮಾಡುತ್ತಿದ್ದಾಗ ಕ್ರಿಕೆಟಿನಲ್ಲಿ ಇವರಿಗೆ ಬಹಳ ಆಸಕ್ತಿ ಹುಟ್ಟಿತು.ಇದರಿಂದಾಗಿ ಅವರ ವಿದ್ಯಾಭ್ಯಾಸಕ್ಕೆ ಕುತ್ತು ಬಂತು.ತಮ್ಮ ಬೌಲಿಂಗ್ ಪ್ರತಿಭೆಯನ್ನು ಪತ್ತೆಹಚ್ಚುವ ಮೊದಲು ಟೆನ್ನಿಸ್ ಚೆಂಡಿನೊಂದಿಗೆ ಬ್ಯಾಟ್ಸ್ಮನ್ ಆಗಿ ಆಡಿದರು.ಅವರು ಪಾಕಿಸ್ತಾನದ ವೇಗಿ ಮೊಹಮದ್ ಅಮಿರವರಿಂದ ಸ್ಪೂರ್ತಿಯನ್ನು ಪಡೆದರು.
ಯುವ ಮತ್ತು ದೇಶೀ ವೃತ್ತಿ ಜೀವನ
[ಬದಲಾಯಿಸಿ]೨೦೧೨ರಲ್ಲಿ ರಹಮಾನವರು ವೇಗದ ಬೌಲರುಗಳ ಶಿಬಿರದಲ್ಲಿ ಭಾಗವಹಿಸಲು ಢಾಕಾದ ರಾಜಧಾನಿಗೆ ಬಂದರು.ಅದಕ್ಕೂ ಮುಂಚೆ,ಅವರು ತಮ್ಮ ತವರುನಗರದಲ್ಲಿ ಅಂಡರ್ ೧೭ರ ಪಂದ್ಯಾವಳಿಯನ್ನು ಎದುರಿಸಬೇಕಾಯಿತು.ಅವರು ವೇಗದ ಬೌಲರ್ ಆಗಿದ್ದರಿಂದ ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಯ ಅಡಿಪಾಯವಾದರು.ಶೀಘ್ರದಲ್ಲೇ ಬಾಂಗ್ಲಾದೇಶದ ೧೯ ವರ್ಷದೊಳಗಿನ ಕ್ರಿಕೆಟ್ ಆಟಗಾರರ ಪೈಕಿಯಲ್ಲಿ ಎಂಟು ವಿಕೆಟುಗಳನ್ನು ತೆಗೆಯುವ ಮುಖಾಂತರ ಯು.ಎ.ಇ,೧೯ ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ಪಿನಲ್ಲಿ ೨೦೧೪ರಲ್ಲಿ ಆಯ್ಕೆಯಾದರು.ರಹಮಾನವರು ೨೦೧೪ರಲ್ಲಿ ತಮ್ಮ ಪ್ರಥಮ ದರ್ಜೆಯ ಕ್ರಿಕೆಟ್ ಮತ್ತು ಪಟ್ಟಿ-ಕ್ರಿಕೆಟ್ ಎರಡೂ ಆರಂಭಿಸಿದರು.
ಇಂಡಿಯನ್ ಪ್ರಿಮಿಯರ್ ಲೀಗ್
[ಬದಲಾಯಿಸಿ]೨೦೧೬ ಋತುವಿನಲ್ಲಿ ಐ.ಪಿ.ಎಲ್ ಹರಾಜಿನಲ್ಲಿ ರಹಮಾನವರನ್ನು ಸನ್ರೈರ್ಸ್ ಹೈದ್ರಾಬಾದ್ ಸಿದ್ಧಮಾಡಿದರು.ಅವರು ಆ ಪಂದ್ಯಾವಳಿಯಲ್ಲಿ ೧೬ ಪಂದ್ಯಗಳಲ್ಲಿ ೧೭ ವಿಕೆಟ್ ಪಡೆದು ಸನ್ರೈರ್ಸ್ ಹೈದ್ರಾಬಾದಿಗೆ ಹೆಸರುಗಳಿಸಿಕೊಟ್ಟರು.ಅವರು ಈ ಪ್ರಶಸ್ತಿಯನ್ನು ಗಳಿಸಿದ ಮೊದಲನೆ ಸಾಗರೋತ್ತರ ಆಟಗಾರವಾಗಿದ್ದರಿಂದ ಅವರನ್ನು ಆ ಪಂದ್ಯಾವಳಿಯ 'ಉದಯೋನ್ಮುಖ ಆಟಗಾರ' ಎಂದು ಕರೆಯಲಾರಂಭಿಸಿದರು.
ಬಾಂಗ್ಲಾದೇಶ್ ಪ್ರಿಮಿಯರ್ ಲೀಗ್
[ಬದಲಾಯಿಸಿ]ರಹಮಾನವರು ಅಂತಾರಾಷ್ಟ್ರೀಯ ಟಿ-೨೦ ಪಂದ್ಯವನ್ನು ಆಡುವ ಮುನ್ನ,೨೦೧೫ರ ಬಾಂಗ್ಲಾದೇಶ್ ಪ್ರಿಮಿಯರ್ ಲೀಗಿನಲ್ಲಿ ಢಾಕಾ ಡೈನಾಮೈಟ್ಸ್ ಪರ ಆಡುತ್ತಿದ್ದರು.ಅದೇ ಋತುವಿನಲ್ಲಿ ಅವರು ೧೪ ವಿಕೆಟುಗಳು ಹಾಗು ೧೦ ಕ್ಯಾಚ್ಗಳನ್ನು ತೆಗೆದುಕೊಂಡಿದ್ದರು.
ನಾಟ್ ವೆಸ್ಟ್ ಟಿ-೨೦ ಬ್ಲಾಸ್ಟ್
[ಬದಲಾಯಿಸಿ]ಮಾರ್ಚ್ ೨೦೧೬ರಲ್ಲಿ ಇಂಗ್ಲಾಂಡಿನ ಸಸೆಕ್ಸ್ ತಂಡದವರು,ಟಿ-೨೦ ಬ್ಲಾಸ್ಟ್ ಪಂದ್ಯಾವಳಿಯ ಸಲುವಾಗಿ ಅಂತಾರಾಷ್ಟ್ರೀಯ ಆಟಗಾರನಾದ ರಹಮಾನ್ ತಮ್ಮ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಘೋಷಿಸಿದರು.
ಪಾಕಿಸ್ತಾನ್ ಸೂಪರ್ ಲೀಗ್
[ಬದಲಾಯಿಸಿ]ಮುಸ್ತಾಫಿಜುರನ್ನು ಪಾಕಿಸ್ತಾನ್ ಸೂಪರ್ ಲೀಗಿನಲ್ಲಿ ಆಡಲು ಲಾಹೋರ್ ಕಲಾಂದರ್ಸ್ ಆಯ್ಕೆಮಾಡಿದರು.ಬಿ.ಸಿ.ಬಿಯವರಿಗೆ ಅವರನ್ನು ಆಟವಾಡಲು ಅವಕಾಶಕೊಡಲು ಇಷ್ಟವಿರಲಿಲ್ಲ.ಈ ತೊಂದರೆ ಹೇಗೋ ಬಗೆಹರಿಯಿತು ಇಂತಹ ಸಂದರ್ಭದಲ್ಲಿ ೨೦೧೬ರಲ್ಲಿ ಅವರಿಗೆ ಭುಜಕ್ಕೆ ಪೆಟ್ಟು ಬಿದ್ದಿದರಿಂದ,ಅವರನ್ನು ಪಾಕಿಸ್ತಾನ್ ಸೂಪರ್ ಲೀಗಿನಲ್ಲಿ ಆಟವಾಡಲು ಕೊಟ್ಟಿದ ಅವಕಾಶವನ್ನು ತಡೆಗಟ್ಟಿದರು.
ಅಂತಾರಾಷ್ಟ್ರೀಯ ವೃತ್ತಿ ಜೀವನ
[ಬದಲಾಯಿಸಿ]ರಹಮಾನವರು,೨೪ನೇ ಏಪ್ರಿಲ್ ೨೦೧೫ರಂದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು.ಅಂದು ಪಾಕಿಸ್ತಾನದ ವಿರುದ್ಧ ೨೦ ಓವರುಗಳ ಪಂದ್ಯದಲ್ಲಿ ಶಾಹಿದ್ ಅಫ್ರಿದಿ ಮತ್ತು ಮೊಹಮದ್ ಹಫೀಝರಂತಹ ಅನುಭವಿಗಳ ವಿಕೆಟ್ ಪಡೆದು ಗಮನಸೆಳೆದರು.ಅದೇ ವರ್ಷ,ಭಾರತ ತಂಡವು ಬಾಂಗ್ಲಾದೇಶದ ಪ್ರವಾಸಕೈಗೊಂಡಿತು.ಪ್ರವಾಸದಲ್ಲಿ ಒಂದು ಟೆಸ್ಟ್ ಹಾಗು ಮೂರು ಏಕದಿನ ಪಂದ್ಯಗಳ ಆಯೋಜನೆಯಾಗಿತ್ತು.ರಹಮಾನವರನ್ನು ಏಕದಿನ ತಂಡಕ್ಕೆ ಆಯ್ಕೆಮಾಡಲಾಗಿತ್ತು.ಸರಣಿಯ ಮೊದಲ ಪಂದ್ಯದಲ್ಲೇ ೯.೨ಓವರುಗಳಲ್ಲಿ ಐದು ವಿಕೆಟ್ ತೆಗೆದು ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಪಡಿಸಿದರು.ಬಾಂಗ್ಲಾದೇಶ ತಂಡವು ಆ ಪಂದ್ಯವನ್ನು ಗೆದ್ದಿತು ಮತ್ತು ರಹಮಾನ್ ಪಾದಾರ್ಪಣೆ ಪಂದ್ಯದಲ್ಲೇ ಐದು ವಿಕೆಟ್ ಪಡೆದು ವಿಶ್ವದ ಹತ್ತನೇ ಬೌಲರ್ ಎನಿಸಿದರು.ಎರಡನೇ ಏಕದಿನ ಪಂದ್ಯದಲ್ಲಿ ಮತ್ತೂ ಆರು ವಿಕೆಟುಗಳನ್ನು ಕಬಳಿಸಿದರು.ಎರಡು ಏಕದಿನ ಪಂದ್ಯಗಳ ನಂತರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಮಾಡಿದರು.ಈ ಹಿಂದೆ ಜಿಂಬಾಬ್ವೆಯ ಬ್ರಯನ್ ವಿಕ್ಟೋರಿಯ ಹೆಸರಿನಲ್ಲಿ ಈ ದಾಖಲೆಯಿತ್ತು.ಅದನ್ನು ಮೀರಿ ನಿಂತ ಯುವ ಬೌಲರ್ ರಹಮಾನ್, ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಎರಡು ವಿಕೆಟ್ ತೆಗೆದು ಮೂರು ಪಂದ್ಯಗಳ ಸರಣಿಯಲ್ಲಿ ಹದಿಮೂರು ವಿಕೆಟ್ ತೆಗೆದು,ಇತಿಹಾಸ ಸೃಷ್ಟಿಸಿದೆ.ಮೂರು ಪಂದ್ಯಗಳ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್(೧೩) ಪಡೆದ ದಾಖಲೆ ರಹಮಾನ್ ಹೆಸರಿನಲ್ಲಿದೆ.ಮುಂದಿನ ತಿಂಗಳು,ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬಾಂಗ್ಲಾದೇಶ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ೨-೧ರಲ್ಲಿ ಸರಣಿ ಜಯ ಸಾಧಿಸಿತು.ಆ ಸರಣಿ ಜಯಕ್ಕೆ ರಹಮಾನ್ ತೆಗೆದ ಐದು ವಿಕೆಟುಗಳು ಪ್ರಮುಖವಾಗಿದ್ದವು.ಅದೇ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೂ ಪಾದಾರ್ಪಣೆ ಮಾಡಿದರು.ತಾನಾಡಿದ ಮೊದಲ ಪಂದ್ಯದಲ್ಲೇ ನಾಲ್ಕು ವಿಕೆಟುಗಳನ್ನು ಪಡೆದು ಗಮನ ಸೆಳೆದರು.ನವೆಂಬರ್ ತಿಂಗಳಲ್ಲಿ,ಬಾಂಗ್ಲಾದೇಶ ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಮತ್ತು ಎರಡು ಟಿ-೨೦ ಪಂದ್ಯಗಳನ್ನು ಆಯೋಜಿಸಿತ್ತು.ಏಕದಿನ ಸರಣಿಯಲ್ಲಿ ರಹಮಾನ್ ಪ್ರಧಾನ ಪಾತ್ರವನ್ನು ನಿಭಾಯಿಸಿದರು.ಸರಣಿಯಲ್ಲಿ ಒಟ್ಟು ಎಂಟು ವಿಕೆಟುಗಳನ್ನು ಕಬಳಿಸಿದರು.ಸರಣಿಯ ಕೊನೆಯ ಪಂದ್ಯದಲ್ಲಿ ಐದು ವಿಕೆಟುಗಳನ್ನು ತೆಗೆದು,ತಮ್ಮ ಮೂರನೇ ಐದು ವಿಕೆಟ್ ವಶಪಡಿಸಿಕೊಂಡರು.ಟಿ-೨೦ ಸರಣಿಯಲ್ಲಿ ರಹಮಾನ್ ಇಂದ ಹೆಚ್ಚು ಕೊಡುಗೆ ಸಾಧ್ಯವಾಗಲಿಲ್ಲ,ಆದರೂ ಉತ್ತಮ ಬೌಲಿಂಗ್ನಿಂದ ಸರಣಿಯಲ್ಲಿ ಸಮಬಲ ಸಾಧಿಸಲು ಸಹಾಯ ಮಾಡಿದರು.ಮುಂದಿನ ವರ್ಷ ಜನವರಿಯಲ್ಲಿ ಬಾಂಗ್ಲಾದೇಶ ತಂಡವು ಪುನಃ ಜಿಂಬಾಬ್ವೆ ವಿರುದ್ಧ ನಾಲ್ಕು ಟಿ-೨೦ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಂಡಿತು.ರಹಮಾನ್ ಮೊದಲೆರಡು ಪಂದ್ಯಗಳನ್ನು ಆಡಿದನು.ಬಾಂಗ್ಲಾದೇಶವು ಆ ಎರಡು ಪಂದ್ಯಗಳಲ್ಲಿ ಗೆಲುವನ್ನು ಪಡೆಯಿತು.ಆದರೆ ಭುಜದ ಗಾಯದ ತೊಂದರೆಯಿಂದ ಸರಣಿಯಿಂದ ಹೊರಗುಳಿಯಬೇಕಾಯಿತು.ಅವರು ಬಾಂಗ್ಲಾದೇಶದಲ್ಲಿ ನಡೆದ ೨೦೧೬ರ ಏಷ್ಯಾಕಪ್ನಲ್ಲಿ ಪಾಲ್ಗೊಂಡರು.ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ನಾಲ್ಕು ಓವರುಗಳಲ್ಲಿ ನಲವತ್ತು ರನ್ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಕೂಡ ತೆಗೆಯಲಾಗಲಿಲ್ಲ.ನಂತರ ಉ.ಎ.ಇ ಮತ್ತು ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದು ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಲು ಕಾರಣರಾದರು.ಮತ್ತೇ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್ನಿಂದ ಹೊರಗುಳಿಯಬೇಕಾಯಿತು.ಮಾರ್ಚಿನಲ್ಲಿ ಭಾರತದಲ್ಲಿ ನಡೆದ ೨೦೧೬ ವಿಶ್ವ ಟಿ-೨೦ ಸಮರದಲ್ಲಿ ಅವರು ಗುಂಪು ಮಟ್ಟದ ಪಂದ್ಯಗಳನ್ನು ಆಡಲಾಗಲಿಲ್ಲ ಹಾಗೂ ಮುಖ್ಯ ಸುತ್ತಿನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಿಂದ ತಪ್ಪಿಸಿಕೊಂಡರು.ಅವರು ಆಡಿದ ಮೂರು ಪಂದ್ಯಗಳಲ್ಲಿ ಒಟ್ಟಾಗಿ ಒಂಬತ್ತು ವಿಕೆಟುಗಳನ್ನು ಕಬಳಿಸಿದರು,ಅದರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಐದು ವಿಕೆಟುಗಳು ಕೂಡ ಒಳಗೊಂಡಿತ್ತು.
ಗಾಯದ ಸಮಸ್ಯೆ
[ಬದಲಾಯಿಸಿ]ಜನವರಿ ೨೦೧೬ರಲ್ಲಿ ಮುಸ್ತಾಫಿಜುರವರು ಎರಡನೆ ಟಿ-೨೦ಯಲ್ಲಿ ಜಿಂಬಾಬ್ವೆ ವಿರುದ್ಧ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಅವರ ಭುಜಕ್ಕೆ ಪೆಟ್ಟುಂಟಾಯಿತು,ಆದರಿಂದ ಪಾದಾರ್ಪಣೆಯಲ್ಲಿ ಮೊದಲನೆ ಬಾರಿ ಅವರನ್ನು ತಂಡದಿಂದ ತೆಗೆಯಲಾಯಿತು.ಮುಂದಿನ ತಿಂಗಳು ನಡೆಯಲಿರುವ ಏಶಿಯಾ ಕಪ್ನಲ್ಲಿಯೂ ಸಹಾ,ಗಾಯದ ಕಾರಣದಿಂದಾಗಿ ಅವರಿಗೆ ಆಡಲು ಸಾಧ್ಯವಾಗಲಿಲ್ಲ.
ಆಡುವ ಶೈಲಿ
[ಬದಲಾಯಿಸಿ]ರಹಮಾನವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಫ್ ಕಟ್ಟರ್ ದಾಲಿಯ ಮೂಲಕ ಪ್ರಸಿದ್ಧರಾದರು.ಈ ರೀತಿಯ ಬೌಲಿಂಗ್ ಶೈಲಿಯಲ್ಲಿ ಚೆಂಡು ಬೇರೆ ದಿಕ್ಕಿನೆಡೆಗೆ ಸಾಗುತ್ತದೆ.ಅನಾಮುಲ್ ಹಾಕ್ ಸೂಚನೆಯ ಪ್ರಕಾರ ಬೌಲಿಂಗ್ ಮಾಡಿದ ನಂತರ ಅವರಿಗೆ ಬೌಲಿಂಗ್ ತಂತ್ರವನ್ನು ಕಂಡುಹಿಡಿಯಲು ಸಾಧ್ಯವಾಯಿತು.
ವೈಯಕ್ತಿಕ ಮತ್ತು ಶಿಸ್ತು
[ಬದಲಾಯಿಸಿ]ವೈಯಕ್ತಿಕ ಹಾಗು ಬೇರೆ ಯಾವದೇ ವಿಷಯಗಳಲ್ಲಿ ನಾಯಕನಾದ ಮಶ್ರಾಫೆ ಮೊರ್ತಾಜಾವರು ರಹಮಾನವರ ಮೂಲಕ ಮಾತಾಡುತ್ತಿದ್ದರು,ಅದು ಸಂದರ್ಶನದಲ್ಲಿ ಆಗಿರಲಿ ಅಥವ ಪ್ರಶಸ್ತಿ ಪ್ರಧಾನ ಸಮಾರಂಭವಿರಲಿ, ಮಶ್ರಾಫೆ ಅವರು ಹೇಳುವ ಪ್ರಕಾರ ರಹಮಾನ್ ಸಾಮಾನ್ಯವಾಗಿ ಎಲ್ಲರೆದುರು ಮಾತನಾಡಲು ಹಿಂಜರಿಯುತ್ತಾರೆ.ಒಮ್ಮೆ ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಯುವಾಗ ಭಾರತದ ನಾಯಕ ಎಮ್.ಎಸ್.ಧೋನಿ ಆಟವಾಡುವ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೂ ದಂಡವಿದಿಸಲಾಯಿತು.
ದಾಖಲೆಗಳು ಮತ್ತು ಮೈಲುಗಲ್ಲುಗಳು
[ಬದಲಾಯಿಸಿ]ವಿಶ್ವ ಕ್ರಿಕೆಟಿನ ಮುಖ್ಯ ಆಡಳಿತ ಮಂಡಳಿಯಾದ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್,ಬಾಂಗ್ಲಾದೇಶ ಮೂಲದ ಅಂತಾರಾಷ್ಟ್ರೀಯ ಕ್ರಿಕೆಟಿಗಾ ರೆಹಮಾನನ್ನು ೨೦೧೫ಇಸವಿಯಲ್ಲಿ,ಐ.ಸಿ.ಸಿ ಅಂತಾರಾಷ್ಟ್ರೀಯ ಏಕದಿನ ತಂಡಕ್ಕೆ ಅವರನ್ನು ಸೇರಿಸಿಕೊಂಡು,ವಿಶ್ವದ ಮುಖ್ಯ ಹತ್ತು ಕ್ರಿಕೆಟಿಗರಲ್ಲಿ ಓರ್ವನೆಂದು ಗುರುತಿಸಿದೆ. ಹಾಗೆಯೇ ಈ ಸಾಧನೆಗೆ ಇವರು ಬಾಂಗ್ಲಾದೇಶದಿಂದಲೇ ಪ್ರಥಮನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಹಾಗೂ ಐ.ಸಿ.ಸಿ ತಂಡಕ್ಕೆ ಶಾಕೀಬ್ ಅಲ್ ಹಸನರವರ ನಂತರ ಸೇರಿಸಲಾಗಿದ ಎರಡನೆ ಕ್ರಿಕೆಟಿಗನೆಂಬ ಹೆಗ್ಗಳಿಕೆ ಅವರದಾಗಿದೆ.
ಉಲ್ಲೇಖನಗಳು
[ಬದಲಾಯಿಸಿ]
- http://www.espncricinfo.com/India/content/player/330902.html
- http://www.espncricinfo.com/county-cricket-2016/content/story/1037391.html
- http://www.espncricinfo.com/bangladesh-v-india-2015/content/story/889919.html
- http://cricketarchive.com/Archive/Players/1248/1248675/1248675.html
- http://www.espncricinfo.com/ci/engine/current/match/870731.html