ವಿಷಯಕ್ಕೆ ಹೋಗು

ಅಗಾಥಾ ಕ್ರಿಸ್ಟೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಗಾಥಾ ಕ್ರಿಸ್ಟಿ
ಅಗಾಥಾ ಕ್ರಿಸ್ಟಿ
Born೧೫ ಸೆಪ್ಟೆಂಬರ್ ೧೮೯೦

ಅಗಾಥಾ ಕ್ರಿಸ್ಟಿ ಅವರ ಪೂರ್ಣ ಹೆಸರು ಡೇಮ್ ಅಗಾಥ ಮೇರಿ ಕ್ಲರಿಸ್ಸ ಕ್ರಿಸ್ಟಿ.ಇವರು ೧೫ ಸೆಪ್ಟೆಂಬರ್ ೧೮೯೦ ಇಸವಿಯಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದರು.ಇವರು ಮೇಲ್ವರ್ಗದ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರು.ಈಕೆ ಕ್ಲಾರ ಮತ್ತು ಮಿಲ್ಲರ್ ದಂಪತಿಗಳ ಕೊನೆಯ ಪುತ್ರಿ.ಇವರ ಅಕ್ಕ ಮಾರ್ಗ್ರೆಟ್ ಮಿಲ್ಲರ್ ಮತ್ತು ಅಣ್ಣ ಲೂಯಿಸ್ ಮಿಲ್ಲರ್.ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಪಿಯಾನೋ ಮತ್ತು ಮಾಂಡೊಲಿನ್ ನುಡಿಸುತಿದ್ದರು. ಇವರು ಜೀವಮಾನವಿಡೀ ಪುರಾತತ್ವ ಕ್ಶೇತ್ರದಲ್ಲಿ ಆಸಕ್ತಿ ಉಳಿಸಿಕೊಂಡಿದ್ದರು. ಈಕೆ ಪತ್ತೆದಾರಿ ಕಾದಂಬರಿಕಾರರು ಮಾತ್ರವಲ್ಲದೆ, ಸಣ್ಣ ಕಥೆಗಾರರು ಮತ್ತು ನಾಟಕಕಾರರಾಗಿ ಕೂಡ ಹೆಸರುವಾಸಿಯಾಗಿದ್ದಾರೆ. ಇವರು " ಮೇರಿ ವೆಸ್ಟ್ ಮೆಕ್ಕೊಟ್ " ಎಂಬ ಮತ್ತೊಂದು ಹೆಸರಿನಲ್ಲಿ ಪ್ರಣಯ ಕಥೆಗಳನ್ನು ಬರೆದಿದ್ದಾರೆ.ಇವರು ಅಗಾಥಾ ಕ್ರಿಸ್ಟಿ ಎನ್ನುವ ಹೆಸರಿನಲ್ಲಿ ಅರವತ್ತಾರು ಪತ್ತೇದಾರಿ ಕಾದಂಬರಿಗಳನ್ನು ಮತ್ತು ಹದಿನಾಲ್ಕು ಸಣ್ಣಕಥಾ ಸಂಗ್ರಹಗಳನ್ನು ಬರೆದಿದ್ದಾರೆ.[]

ವೃತ್ತಿ ಮತ್ತು ಬರಹ

[ಬದಲಾಯಿಸಿ]

ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.ಇವರ ಪುಸ್ತಕಗಳು ಅದರಲ್ಲೂ ಕಾದಂಬರಿಗಳು ಅತಿ ಹೆಚ್ಚು ಮಾರಾಟವಾಗುವುದೆಂದು ಗಿನ್ನಿಸ್ ಪುಸ್ತಕವು ದಾಖಲು ಮಾಡಿದೆ. ಆಕೆಯ ಬರವಣಿಗೆಗಳು ವಿಶ್ವದಲ್ಲೇ ಅತ್ಯಂತ ವ್ಯಾಪಕವಾಗಿ ಪ್ರಕಟವಾದ ಪುಸ್ತಕಗಳ ಶ್ರೇಯಾಂಕಗಳಲ್ಲಿ ಮೂರನೇ ಸ್ಥಾನ ಹೊಂದಿದೆ.ಇಂಡೆಕ್ಸ್ ಟ್ರಾನ್ಸ್ಲೇಟಿಯಂ ರ ಪ್ರಕಾರ ಇವರ ಕೃತಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಅನುವಾದಗೊಳ್ಳುತ್ತದೆ. ಸಂಖ್ಯೆಯ ಮೊತ್ತವನ್ನು ಗಮನಿಸಿದಾಗ ಅನ್ಯ ಭಾಷೆಗಳಿಗೆ ಅನುವಾದಗೊಳ್ಳುವ ಅತ್ಯುತ್ತಮ ಹಾಗೂ ಏಕೈಕ ಲೇಖಕಿಯಾಗಿದ್ದಾರೆ. ಇವರ ಕಥೆಗಳು ಕನಿಷ್ಠ ೧೦೩ ಭಾಷೆಗಳಲ್ಲಿ ಅನುವಾದಗೊಂಡಿದೆ.ಇವರ "ಅಂಡ್ ದೆನ್ ದೆರ್ ವೆರ್ ನನ್ " ವಿಶ್ವದಲ್ಲೇ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದೆನಿಸಿದೆ. ಈ ಪುಸ್ತಕವು ಇಲ್ಲಿಯವರೆಗೆ ಹತ್ತು ಲಕ್ಷ ಮಾರಾಟವನ್ನು ಕಂಡಿದೆ.ಇವರು ವಿಶ್ವದ ದೀರ್ಘಕಾಲೀನ ನಾಟಕ, ಒಂದು ಕೊಲೆ ರಹಸ್ಯ ಮತ್ತು ದಿ ಮೌಸ್ಟ್ರಾಪ್ ಎಂಬಂತಹ ನಾಟಕಗಳನ್ನು ರಚಿಸಿದ್ದಾರೆ. ಇದು ೨೫ ನೇ ಸೆಪ್ಟೆಂಬರ್ ೧೯೫೨ ರಂದು ಅಂಬಾಸಿಡರ್ ನಾಟ್ಯಮಂದಿರದಲ್ಲಿ ಮುಕ್ತವಾಗಿ ಇಡಲಾಗಿತ್ತು.ಇದು ಅತ್ಯಂತ ದೀರ್ಘಕಾಲಿಕ ನಾಟಕ ಎಂದು ದಾಖಲೆಯಾಗಿದೆ.ಇವರ ಮೊದಲನೇಯ ಸಣ್ಣ ಕಥೆ " ದಿ ಹೌಸ್ ಆಫ಼್ ಬ್ಯೂಟಿ ". ಇದು ಕೀವಲ ೬೦೦೦ ಪದಗಳನ್ನು ಹೊಂದಿದೆ. ಇವರ ಮೊದಲ ಕಾದಂಬರಿಯ ಹೆಸರು " ಸ್ನೋ ಅಪೊನ್ ದಿ ಡೆಜ಼ರ್ಟ್ ". ಇವರು ಕೆಲವು ಕಾಲ್ಪನಿಕವಲ್ಲದ ಕಥೆಗಳನ್ನೂ ಬರೆದಿದ್ದರೆ. ಕ್ಂ ಟೆಲ್ಲ್ ಮಿ ಹೌ ಯು ಲಿವ್, ದಿ ಗ್ರಾಂಡ್ ಟೂರ್ ಮೊದಲಾದವೂ ಇವರ ಕಾಲ್ಪನಿಕವಲ್ಲದ ಕಥೆಗಳು. ಇವರ ಆಥ್ಮಕಥೆಯ ಹೆಸರು " ಅಗಾಥಾ ಕ್ರಿಸ್ಟಿ:ಆಥ್ಮಚರಿತ್ರೆ ". ಇದು ೧೯೭೭ ರಲ್ಲಿ ಪ್ರಕಟವಾಯಿತು. ಅಗಾಥಾ ಕ್ರಿಸ್ಟಿ , ವಿಶ್ವದ ಅತ್ಯುತ್ತಮ ಪತ್ತೆದಾರಿ ಕಾದಂಬರಿಕಾರರು. ಇವರನ್ನು ಕ್ವೀನ್ ಆಫ್ ಕ್ರೈಮ್ ಎಂದು ಕರೆಯಲಾಗುತ್ತದೆ.೨೦೧೩ ರಲ್ಲಿ," ಮರ್ಡರ್ ಆಫ್ ರೋಜರ್ ಅಕ್ರೋಯ್ಡ್ " ಎಂಬ ಅಪರಾಧಕ್ಕೆ ಸಂಬಂಧಿಸಿ ಕಾದಂಬರಿ , ಅತ್ಯುತ್ತಮ ಅಪರಾಧ ಕಾದಂಬರಿ ಎಂದು ಅಪರಾಧ ಬರಹಗಾರ ಸಂಘದ ೬೦೦ ಬರಹಗಾರರು ಹೇಳಿದ್ದಾರೆ.ಮರ್ಡರ್ ಇನ್ ಮೆಸೊಪಟ್ಯಾಮಿಯಾ, ಡೆತ್ ಆನ್ ನೈಲ್,ಅಪ್ಪಾಯಿಂಟ್ಮೆನ್ಟ್ ವಿಥ್ ಡೆತ್,ದೆ ಕೇಮ್ ಟು ಭಾಗ್ದಾದ್ ಮೊದಲಾದ ಕೃತಿಗಳು ಪುರಾತತ್ವ ಪ್ರಭಾವಗಳನ್ನು ಹೊಂದಿವೆ.ಕ್ರಿಸ್ಟಿ ಮೊದಲ ಪುಸ್ತಕ " ದಿ ಮಿಸ್ಟಿರಿಯಸ್ ಆಫ಼ೇರ್ ಅಟ್ ಸ್ಟೈಲ್ಸ್ ೧೯೨೦ ರಲ್ಲಿ ಪ್ರಕಟಿಸಲಾಯಿತು. " ಹರ್ಕ್ಯೂಲಿ ಪೈರೋಟ್ " ಇವರ ೩೩ ಕಾದಂಬರಿಗಳು ಮತ್ತು ೫೪ ಸಣ್ಣ ಕಥೆಗಳಲ್ಲಿ ಕಾಣಿಸಿಕೊಳ್ಳುವ ಪಾತ್ರವಾಗಿದೆ.

1920ರಲ್ಲಿ ದಿ ಮಿಸ್ಟೀರಿಯಸ್ ಅಫೇರ್ ಎಟ್ ಸ್ಟೈೀಲ್ಸ್ ಎಂಬ ತನ್ನ ಮೊದಲ ಕಾದಂಬರಿಯನ್ನು ಪ್ರಕಟಿಸಿದಳು. ಇದರಲ್ಲಿ ಈಕೆ ಸೃಷ್ಟಿಸಿದ ಬೆಲ್ಜಿಯನ್ ಪತ್ತೇದಾರ ಹಕ್ರ್ಯೂಲ್ ಪಾಯ್ರಾನ ಪ್ರಥಮ ಪರಿಚಯವಾಗುತ್ತದೆ. ದಿ ಮರ್ಡರ್ ಆಫ್ ರೋಜರ್ ಆಕ್ರಾಯ್ಡ್‍ನಲ್ಲಿ (1926) ಕತೆಗಾರನೇ ಕೊಲೆಗಾರನೆಂಬ ವಿಷಯ ವಿಸ್ಮಯಕಾರಿಯಾಗಿದೆ. ಈ ನಡುವೆ ಕ್ರಿಸ್ಟಿ ಇದ್ದಕ್ಕಿದ್ದಂತೆ ಕಾಣಳಾದಳು ಎಂಬ ಸುದ್ದಿ ಹಬ್ಬಿ ಹಲವರ ಗಮನ ಸೆಳೆಯಿತು. ನಿಜಕ್ಕೂ ಈಕೆ ಆಗ ಮರವೆರೋಗಕ್ಕೆ ತುತ್ತಾಗಿ ಯಾರಿಗೂ ಹೇಳದಂತೆ ಯಾರ್ಕ್‍ಷೈರಿನ ಆಸ್ಪತ್ರೆ ಸೇರಿದ್ದಳು. 1928ರಲ್ಲಿ ವಿವಾಹವಿಚ್ಛೇದನ ಮಾಡಿಕೊಂಡು 1930ರಲ್ಲಿ ಮ್ಯಾಲೋವನ್ ಎಂಬ ಪ್ರಾಕ್ತನ ಸಂಶೋಧಕನನ್ನು ಮದುವೆಯಾಗಿ ಆತನೊಡನೆ ಏಷ್ಯಖಂಡದಲ್ಲಿ ಸಂಚರಿಸಿ ಕಾದಂಬರಿಗಳನ್ನು ಬರೆದು ಬಹಳ ಹಣ ಗಳಿಸಿದಳು. ಪತಿಯ ಪ್ರಾಕ್ತನ ಸಂಶೋಧನೆಗಳ ಸುತ್ತ ಕ್ರಿಸ್ಟಿ ನೇಯ್ದಿರುವ ಕಾದಂಬರಿ ಎಂದರೆ ಮರ್ಡರ್ ಇನ್ ಮೆಸಪೊಟೇಮಿಯ. ಈಕೆಯ ಮೂರು ನಾಟಕಗಳು ಏಕಕಾಲದಲ್ಲಿ ವೆಸ್ಟ್ ಎಂಡ್‍ನಲ್ಲಿ ಪ್ರದರ್ಶಿತವಾದುವು. ಈಕೆಯ ಪ್ರಸಿದ್ಧ ಕಾದಂಬರಿಗಳು ಇವು: ದಿ ಮಿಸ್ಟರಿ ಆಫ್ ದಿ ಬ್ಲೂ ಟ್ರೇನ್ (1928). ದಿಸೆವೆನ್ ಡಯಲ್ಸ್ ಮಿಸ್ಟರಿ (1929), ಲಾರ್ಡ್ ಎಜ್‍ವೇರ್ ಡೈಸ್ (1933). ಮೇರಿ ವೆಸ್ಟ್‍ಮ್ಯಾಕಾಟ್ ಎಂಬ ಬದಲು ಹೆಸರನ್ನಿಟ್ಟುಕೊಂಡು ಈಕೆ ಆಬ್ಸೆಂಟ್ ಇನ್ ದಿ ಸ್ಪ್ರಿಂಗ್ (1944), ದಿ ರೋಸ್ ಅಂಡ್ ದಿ ಯೂ ಟ್ರೀ (1948) ಎಂಬ ಕಾದಂಬರಿಗಳನ್ನೂ ಬರೆದಳು. ವಿಟ್‍ನೆಸ್ ಫಾರ್ ದಿ ಪ್ರಾಸೆಕ್ಯೂಷನ್ ಮೊದಲಾದ ಈಕೆಯ ಕೆಲವು ಕಥೆಗಳು ಚಲನಚಿತ್ರಗಳಾಗಿ ಖ್ಯಾತಿಗಳಿಸಿವೆ. ಈಕೆ ರಾಯಲ್ ಸೊಸೈಟಿ ಆಫ್ ಲಿಟರೆಚರ್ ಸಂಸ್ಥೆಯ ಫೆಲೊ ಆಗಿದ್ದಳಲ್ಲದೆ 1956ರಲ್ಲಿ ಈಕೆಗೆ ಸಿ.ಬಿ.ಇ. ಪ್ರಶಸ್ತಿಯೂ ದೊರಕಿತು.

ಪೂರ್ವ ಜೀವನ

[ಬದಲಾಯಿಸಿ]

ಇವರು ಆರ್ಚಿಬಾಲ್ಡ್ ಕ್ರಿಸ್ಟಿ ಎಂಬ ವ್ಯಕ್ತಿಯೊಂದಿಗೆ ೧೯೧೪ ರಲ್ಲಿ ಮದುವೆಯಾದರು.ಆದರೆ ಅವರ ಸಂಬಂಧ ಧೀರ್ಘ ಸಮಯ ಉಳಿಯಲಿಲ್ಲ.ಆದರೆ ಆತ ನಾನ್ಸಿ ನೀಲ್ ಎಂಬ ಮತ್ತೊಬ್ಬಳನ್ನು ಪ್ರೀತಿಸುತ್ತಿದ್ದರಿಂದ ಆಕೆಯೊಂದಿಗೆ ಅವರು ಮದುವೆಯಾದರು.ಕೋಪಗೊಂಡ ಅಗಾಥ ಮೇರಿ ಕ್ಲರಿಸ್ಸ ಕ್ರಿಸ್ಟಿ ಓಲ್ಡ್ ಸ್ವಾನ್ ಹೊಟೆಲ್ನಲ್ಲಿ ತನ್ನ ಗಂಡನ ಪ್ರೇಮಿಯ ಹೆಸರಿನಲ್ಲಿ (ತೆರೇಸ ನೀಲ್) ಹತ್ತು ದಿನದವರೆಗೆ ಕಣ್ಮರೆಯಾಗಿದ್ದರು.ಇವರು ೧೯೩೦ ರಲ್ಲಿ ಅಗಾಥಾ,ಮಾಕ್ಸ್ ಮಲ್ಲೊವನ್ ಅವರನ್ನು ಮದುವೆಯಾದರು.[]

ಸನ್ಮಾನಗಳು

[ಬದಲಾಯಿಸಿ]

೧೯೫೬ - ಕಮಾಂಡರ್ ಆಫ್ ಬ್ರಿಟಿಷ್ ಎಂಪೈರ್ ೧೯೫೭ -"ಪತ್ತೆ ಕ್ಲಬ್" ಅಧ್ಯಕ್ಷರು.

ಡೇಮ್ ಅಗಾಥಾ ಕ್ರಿಸ್ಟಿ ೧೨ ಜನವರಿ ೧೯೭೬ ರಂದು ತನ್ನ ಮನೆಯಲ್ಲಿ ವಯೋ ಸಹಜ ಕಾರಣಗಳಿಂದ ೮೫ ವಯಸ್ಸಿನಲ್ಲಿ ತೀರಿಕೊಂಡರು.ಮೂವತ್ತು ಹೂವಿನ ದಂಡೆಗಳಿಂದ,ಡೇಮ್ ಅಗಾಥಾ ಸಮಾಧಿಯನ್ನು ಅಲಂಕರಿಸಲಾಗಿತ್ತು.

ಉಲ್ಲೆಖಗಳು

[ಬದಲಾಯಿಸಿ]
  1. https://en.wikipedia.org/wiki/Agatha_Christie
  2. "ಆರ್ಕೈವ್ ನಕಲು". Archived from the original on 2016-09-15. Retrieved 2016-09-15.