ಮರಿಯಪ್ಪನ್ ತಂಗವೇಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರಿಯಪ್ಪನ್ ತಂಗವೇಲು
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಮರಿಯಪ್ಪನ್ ತಂಗವೇಲು
ಜನನ (1995-06-28) ೨೮ ಜೂನ್ ೧೯೯೫ (ವಯಸ್ಸು ೨೮)
ಪೆರಿಯವಡಗಂಪಟ್ಟಿ ಗ್ರಾಮ, ಸೇಲಂ ಜಿಲ್ಲೆ;, ತಮಿಳುನಾಡು,,ಭಾರತ
Sport
ದೇಶ ಭಾರತ
ಕ್ರೀಡೆAthletics
ಸ್ಪರ್ಧೆಗಳು(ಗಳು)High Jump - T42
Achievements and titles
ಪ್ಯಾರಲಂಪಿಕ್ ಫ಼ೈನಲ್‌ಗಳು2016 Summer Paralympics: High Jump (T42) – Gold


ರಿಯೋದಲ್ಲಿ ಚಿನ್ನ[ಬದಲಾಯಿಸಿ]

  • ಮರಿಯಪ್ಪನ್ ತಂಗವೇಲು:ರಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ತಮಿಳುನಾಡು ಮೂಲದ ಮರಿಯಪ್ಪನ್ ತಂಗವೇಲು ಭಾರತ ಕೀರ್ತಿ ಪತಾಕೆ ಹಾರಿಸಿದ್ದಾರೆ. ಹೈಜಂಪ್‍ನಲ್ಲಿ 1.86 ಮೀಟರ್ ಜಿಗಿದು ಚಿನ್ನ ಗೆದ್ದ ಈ ಯುವಕನ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗುವಂತದ್ದು, ಸೇಲಂನ ಪುಟ್ಟ ಹಳ್ಳಿಯೊಂದರ ಹುಡುಗ ರಿಯೊದಲ್ಲಿ 'ಬಂಗಾರ' ಗೆದ್ದ ಸಾಧನೆಮಾದಿದ್ದಾನೆ. 21 ವರ್ಷ ಮರಿಯಪ್ಪನ್ ತಂಗವೇಲು ಅವರು ಪುರುಷರ T42 ರಿಯೊ ಡಿ ಜನೈರೊ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳು ಎರಡನೇ ದಿನ 9-9-2016 ಶುಕ್ರವಾರ ಎತ್ತರದ ಜಿಗಿತದಲ್ಲಿ ಚಿನ್ನದ ಪದಕವನ್ನು ಗಳಿಸಿ ಇತಿಹಾಸ ಚಿಇತಿಹಾಸನಿರ್ಮಿಸಿದ್ದಾರೆ.
  • ಫೋಟೊ ಮತ್ತು ವಿಡಿಯೋ:[[೧]]

[೧]

ಜೀವನ[ಬದಲಾಯಿಸಿ]

  • ಮರಿಯಪ್ಪನ್ ತಂಗವೇಲು ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯವಡಗಂಪಟ್ಟಿ ಗ್ರಾಮದಲ್ಲಿ ಊರಿನಿಂದ ಬಂದವರಾಗಿದ್ದಾರೆ. ಚೆನೈ ನಿಂದ ಕೆಲವು 340 ಕಿ.ಮೀ. ದೂರದಲಿದೆ. ್ಲ ಸೇಲಂ ಜಿಲ್ಲೆಯ ಅವರ ತಾಯಿ, ಸರೋಜ, ಒಂದು ಚಕ್ರದಗಾಡಿಲ್ಲಿ ತರಕಾರಿಗಳನ್ನು ಮಾರುತ್ತಾಳೆ. ಮತ್ತು ದಿನಗೂಲಿ ನೌಕರರಾಗಿ ಕೆಲಸಮಾಡುತ್ತಾಳೆ. . ತಂದೆ ಒಂದು ದಶಕದ ಹಿಂದೆ ಕುಟುಂಬವನ್ನು ಬಿಟ್ಟು ಹೋಗಿದ್ದಾನೆ..
  • ಆದರೇನು ಅವರ ತಾಯಿಯ ಬೆಂಬಲದಿಂದ ಮರಿಯಪ್ಪನ್ ತಮ್ಮ ಕೌಶಲಗಳನ್ನು ಬೆಳಸಿಕೊಳ್ಳಲು ಸಾಧ್ಯವಾಯಿತು. ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಹಲವಾರು ಪದಕಗಳನ್ನು (ಮೆಡಲ್ಗಳನ್ನು) ಜಯಗಳಿಸಿದರು. . ಕಳೆದ ವರ್ಷ, ಅವರು ವಾಣಿಜ್ಯಆಡಳಿತದ ವಿಷಯದಲ್ಲಿ ತಮ್ಮ ಪದವಿಯನ್ನು ಸಂಪೂರ್ಣಗೊಳಿಸಿದರು. ಮತ್ತು ಉದ್ಯೋಗಪಡೆಯಲು ಯತ್ನಿಸುತ್ತಿದ್ದಾರೆ. 2015ರಲ್ಲಿ ಬಿಬಿಎ ಪದವಿ ಪೂರೈಸಿದ ತಂಗವೇಲು ಸದ್ಯ ಕೆಲಸದ ಹುಡುಕಾಟದಲ್ಲಿದ್ದಾರೆ.


  • 16 ವರುಷಗಳ ಹಿಂದೆ ಸಂಭವಿಸಿದ ಬಸ್ ಅಪಘಾತದಲ್ಲಿ ತಂಗವೇಲುವಿನ ಬಲ ಕಾಲಿಗೆ ತೀವ್ರ ಪೆಟ್ಟು ಬಿದ್ದಿತ್ತು. ಪರಿಣಾಮ ಮಂಡಿಯ ಕೆಳಗಿನ ಭಾಗವನ್ನು ಕತ್ತರಿಸಬೇಕಾಗಿ ಬಂತು. ವಾಲಿಬಾಲ್ ಆಟದಲ್ಲಿ ಚುರುಕಾಗಿದ್ದ ಈತನಿಗೆ ಒಂದ ಕಾಲು ಕಳೆದುಕೊಂಡಾಗ ಬದುಕೇ ದುಸ್ತರವೆನಿಸಿಬಿಟ್ಟಿತ್ತು. ಆ ಹೊತ್ತಲ್ಲಿ ತಂಗವೇಲುವಿನ ಅಮ್ಮ ಸರೋಜಾ ಮಗನಿಗೆ ಧೈರ್ಯ ತುಂಬಿದರು. ಅಪ್ಪ ಬಿಟ್ಟು ಹೋದ ಕುಟುಂಬದಲ್ಲಿ ಅಮ್ಮನೇ ಆಧಾರ ಸ್ತಂಬವಾಗಿದ್ದರು, ಬೇರೆ ಯಾರ ಸಹಾಯವಿಲ್ಲದೆಯೇ ಸರೋಜಾ ತನ್ನ ಮಕ್ಕಳನ್ನು ಬೆಳೆಸಿದರು. ತರಕಾರಿ ಮಾರಿ, ಮನೆಕೆಲಸ ಮಾಡಿ ದಿನ ಸಾಗಿಸುತ್ತಿದ್ದ ಸರೋಜಾ, ಮಗ ಮತ್ತೆ ಆಟದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಿದರು.

ಕ್ರೀಡೆಯಲ್ಲಿ ಸಾಧನೆ[ಬದಲಾಯಿಸಿ]

  • 14ನೇ ವಯಸ್ಸಿನಲ್ಲಿ ನಡೆದ ಕ್ರೀಡಾ ಸ್ಪರ್ಧೆಯೊಂದರಲ್ಲಿ ತಂಗವೇಲು ಎರಡನೇ ಸ್ಥಾನ ಗಳಿಸಿದ್ದರು. ಹುಡುಗನ ಸಾಮರ್ಥ್ಯವನ್ನು ಗುರುತಿಸಿ ಸತ್ಯನಾರಾಣ ಎಂಬ ಕೋಚ್, ಈತನಿಗೆ ಮುಂದಿನ ತರಬೇತಿ ನೀಡಿದರು. ಇದರ ಫಲವಾಗಿ ತಂಗವೇಲು ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುವಂತಾಯಿತು.ಆಗ ತಂಗವೇಲುವಿಗೆ 18 ವರ್ಷ!
  • ಆನಂತರ ಬೆಂಗಳೂರಿನಲ್ಲಿ ತರಬೇತಿ ಪಡೆದ ಈತ 2015ರಲ್ಲಿ ಸೀನಿಯರ್ ಲೆವೆಲ್ ಸ್ಪರ್ಧೆಯಲ್ಲಿ ನಂಬರ್ 1 ಸ್ಥಾನಕ್ಕೇರಿದರು. ಐಪಿಸಿ ಟ್ಯುನೀಸಿಯಾ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ 1.78 ಮೀಟರ್ ಜಿಗಿದು ಚಿನ್ನದ ಪದಕ ಗೆಲ್ಲುವ ಮೂಲಕ ಈತ ಪ್ಯಾರಾಲಿಂಪಿಕ್ಸ್ ‍ಗೆ ಅರ್ಹತೆ ಪಡೆದುಕೊಂಡರು.

ಗ್ರಾಮದಲ್ಲಿ ಸಂಭ್ರಮ[ಬದಲಾಯಿಸಿ]

  • ತಂಗವೇಲು ಅವರ ಗೆಲುವನ್ನು ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯವಡಗಂಪಟ್ಟಿ ಗ್ರಾಮದಲ್ಲಿ ಪಟಾಕಿ ಸಿಡಿಸಿ ಆಚರಣೆ ಮಾಡಲಾಗಿದೆ. ದಿನವೊಂದಕ್ಕೆ ರು.75ರಿಂದ ರು. 100 ಸಂಪಾದನೆ ಮಾಡಿ ನಾಲ್ಕು ಮಕ್ಕಳನ್ನು ಸಾಕುತ್ತಿರುವ ಅಮ್ಮ ಸರೋಜಾ ಮಗನಿಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದಾಗ ಅವರ ಕಣ್ಣಾಲಿಗಳಿಂದ ಖುಷಿಯ ಕಣ್ಣೀರು ಜಿನುಗಿತ್ತು.[೨]
  • ತಮಿಳುನಾಡು ಸರ್ಕಾರ ಮರಿಯಪ್ಪನ್‍ಗೆ 2 ಕೋಟಿ ನಗದು ಬಹುಮಾನ ಘೋಷಿಸಿತು. [೩]
  • ಅದನ್ನು 23 Dec, 2016 ರಂದು ಟಿ. ಮರಿಯಪ್ಪನ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವನ್ ಅವರು ರೂ.2 ಕೋಟಿ ಬಹುಮಾನ ನೀಡಿ ಗೌರವಿಸಿದ್ದಾರೆ.[೪]

ಪ್ರಶಸ್ತಿಗಳು[ಬದಲಾಯಿಸಿ]

೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ.[೫]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. Abandoned by father, fought poverty: Story of India’s Paralympics hero
  2. http://www.prajavani.net/news/article/2016/09/10/437073.html ಅಪಘಾತದಲ್ಲಿ ಕಾಲು ಕಳೆದುಕೊಂಡಾತ ರಿಯೊದಲ್ಲಿ ಬಂಗಾರ ಗೆದ್ದ!
  3. Paralympics-gold-A-journey-defying-all-odds
  4. ಮರಿಯಪ್ಪನ್‌ಗೆ ರೂ.2 ಕೋಟಿ ಚೆಕ್
  5. "Padma Awards 2017 announced".