ಕಿನ್ನಾಳ ಆಟಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಗುಲ್ಬರ್ಗ
ಕರ್ನಾಟಕದ ಜಿಲ್ಲೆಗಳುಕೊಪ್ಪಳ
Time zoneUTC+05:30 (ಐಎಸ್‍ಟಿ)
ಅಂಚೆ ಸೂಚಿ ಸಂಖ್ಯೆ
583231
Vehicle registrationKA 37
ದೂರವಾಣಿ91-(0)8539
ಭಾರತೀಯ ಭಾಷೆಗಳುಕನ್ನಡ
Websitewww.koppal.nic.in/Placesofinterst/tourism.htm
ಕಿನ್ನಾಳ ಆಟಿಕೆ, ಕರ್ನಾಟಕ

ಕಿನ್ನಾಳ ಎಂಬುದು ಒಂದು ಸ್ಥಳದ ಹೆಸರು. ಕಿನ್ನಾಳ ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿದೆ.[೧][೨]ಕಲೆಯನ್ನು ಕಿನ್ನಾಳ ಕಲೆ ಅಥವಾ ಕಿನ್ನಾಳ ಆಟಿಕೆಯೆಂದು ಕನ್ನಡದಲ್ಲಿ ಕರೆಯುತ್ತಾರೆ.

ಕೊಪ್ಪಳದಲ್ಲಿ ಕೊಪಣಾಚಳ ಎಂಬ ಬೆಟ್ಟವಿದೆ. ಕೊಪಣಚಳವೇ ಕೊಪ್ಪಳ ಆಗಿದೆ. ಹಾಗಾಗಿ ಕೊಪ್ಪಳದ ಕೊಪಣಾಚಳ ಜೈನ ಧರ್ಮದ ಪ್ರಮುಖ ಕೇಂದ್ರ. ಕೊಪ್ಪಳದ ಹತ್ತಿರದ ಪಟ್ಟಣವಾದ ಕಿನ್ನಾಳ ಎಂಬ ಸ್ಥಳವು ಆಟಿಕೆಗಳಿಗೆ ಜಗತ್ಪಸಿದ್ದವಾಗಿದೆ. ಕಿನ್ನಾಳವು ಭಾರತದ ಭೌಗೋಳಿಕ ಚಿಹ್ನೆಗಳ ಪಟ್ಟಿಯಲ್ಲಿ ಸೇರಿದೆ. ಕಿನ್ನಾಳವು ಆಟಿಕೆಗಳಿಗೆ ಪ್ರಸಿದ್ಧವಾಗಿದೆ. ಇದು ಜಿಐನಲ್ಲಿ ೨೧೩ನೆ ಸಂಖ್ಯೆಯನ್ನು ಹೊಂದಿದೆ*.

ಇತಿಹಾಸ[ಬದಲಾಯಿಸಿ]

ಕಿನ್ನಾಳ ಅಗಾಧವಾದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಕಿನ್ನಾಳವು ಒಂದು ಕಾಲದಲ್ಲಿ ಕರಕುಶಲ ಕಲೆಗಳ ಪ್ರವರ್ಧಮಾನ ಕೇಂದ್ರವಾಗಿದ್ದು, ಅತ್ಯಂತ ಸೊಗಸಾದ ಸುಪರಿಚಿತವಾದ ಮರದ ಕೆತ್ತನೆಗಳನ್ನು ಮಾಡಿದ್ದವು. ಹಂಪಿಯ ಪಂಪಾಪತೇಶ್ವರ ದೇವಾಲಯದ ಮರದ ರಥದಲ್ಲಿ ಕೆತ್ತಲಾದ ಪ್ರಸಿದ್ಧವಾದ ಮ್ಯೂರಲ್ ವರ್ಣಚಿತ್ರಗಳು ಇವುಗಳಲ್ಲಿ ಒಂದಾಗಿದೆಯೆಂದೂ ಕಿನ್ನಾಳದ ಕುಶಲಕರ್ಮಿಗಳ ಪೂರ್ವಜರು ಕಲೆಯಲ್ಲಿ ನಿಪುಣರೆಂದು ರುಜುವಾತಾಗಿದೆ.[೩] 2007 ರಲ್ಲಿ ಕಿನ್ನಾಳ ಆಟಿಕೆಗಳ ಪುನಶ್ಚೇತನಕ್ಕೆ ಸ್ಥಳೀಯ ವಿದ್ಯಾರ್ಥಿಗಳ ಮತ್ತು ಕುಶಲಕರ್ಮಿಗಳ ಪ್ರಯತ್ನದಿಂದ ಗ್ಲ್ಯಾಸ್ಗೋ ವಿಶ್ವವಿದ್ಯಾಲಯ ಮತ್ತು ಗ್ಲ್ಯಾಸ್ಗೋ ಸ್ಕೂಲ್ ಆಫ್ ಆರ್ಟ್ ವಿದ್ಯಾರ್ಥಿಗಳು ಮತ್ತು ಕರ್ನಾಟಕ ಕ್ರಾಫ್ಟ್ಸ್ ಕೌನ್ಸಿಲ್[೪] ಸಹಯೋಗದೊಂದಿಗೆ ಒಂದು ಯೋಜನೆ ರೂಪುಗೊಂಡಿದೆ.

ಕಿನ್ನಾಳ ಕಲೆ ವಿಧಾನ[ಬದಲಾಯಿಸಿ]

ಕಿನ್ನಾಳ ಕುಶಲಕರ್ಮಿಗಳನ್ನಯ ಚಿತ್ರಕಾರರು ಎಂದು ಕರೆಯಲಾಗುತ್ತದೆ. ಆಟಿಕೆಗಳನ್ನು ತಯಾರಿಸಲು ಹಗುರ ಮರವನ್ನು ಬಳಸುತ್ತಾರೆ. ಮರದ ಆಟಿಕೆಗಳ ವಿವಿಧ ಭಾಗಗಳಲ್ಲಿ ಹುಣಿಸೆಯ ಬೀಜ ಮತ್ತು ಉರುಟು ಕಲ್ಲುಗಳನ್ನು ಬಳಸಲಾಗುತ್ತದೆ. ಸೆಣಬಿನ ಚಿಂದಿಗಳಿಂದ, ನೆನೆಸಿಡಲಾದ ತುಂಡುಗಳಾಗಿ, ಬೆಳ್ಳಿಯ ಬಣ್ಣದ ಒಣಗಿದ ಪುಡಿಯ, ಮತ್ತು ಮರ ಕೊಯ್ದ ಗರಗಸದ ಧೂಳು ಮತ್ತು ಹುಣಿಸೆ ಹಣ್ಣಿನ ಬೀಜ ಪೇಸ್ಟ್ ಮಿಶ್ರಣದಿಂದ ಕಿಟ್ಟ ತಯಾರಿಸಲಾಗುತ್ತದೆ. ಬೆಣಚುಕಲ್ಲಿನ ಪುಡಿಯನ್ನು ದ್ರವ ರೂಪದ ಅಂಟನೊಂದಿಗೆ ಮಿಶ್ರಣ ಮಾಡಿ ಚಿತ್ರದಲ್ಲಿನ ದೇಹದ ಮೇಲೆ ಅಲಂಕಾರ ಮತ್ತು ಆಭರಣದಂತೆ ಎದ್ದು ತೋರುವಂತೆ ಬಳಸಲಾಗುತ್ತದೆ. ಒಮ್ಮೆ ಚಿತ್ರದಲ್ಲಿನ ಭಾಗಗಳನ್ನು ಜೋಡಿಸಿದ ಮೇಲೆ ಕಿಟ್ಟವನ್ನು ಎಲ್ಲಾ ಭಾಗಗಳ ಮೇಲೆ ಲೇಪಿಸಿ ಸಣ್ಣ ಹತ್ತಿ ತುಂಡುಗಳನ್ನು ಹುಣಿಸೇಹಣ್ಣಿನ ದ್ರವದಿಂದ ಅಂಟಿಕೊಳ್ಳುವಂತೆ ಮಾಡಲಾಗುತ್ತದೆ. ಇದಾದ ನಂತರ ಬೆಣಚುಕಲ್ಲಿನ ದ್ರವದ ಬಣ್ಣದ ಆಧಾರದಲ್ಲಿ ಅನ್ವಯಿಸಿ ರೂಪುಗೊಳ್ಳುತ್ತದೆ.

ಹಿಂದೆ ಜನರು ಬೊಂಬೆಗಳನ್ನು ವಿವಿಧ ವೃತ್ತಿಗಳ ಆಧಾರದಲ್ಲಿ ತಯಾರಿಸುವುದು ಜನಪ್ರಿಯವಾಗಿತ್ತು. ಈಗಿನ ಅಂಕಿ ಅಂಶದ ಪ್ರಕಾರ ಪ್ರಾಣಿಗಳು, ಪಕ್ಷಿಗಳು ಗರುಡ , ಮಹಾಕಾವ್ಯದ ಹಕ್ಕಿ ಹೀಗೆ 12 ಘಟಕಗಳನ್ನು ಹೊಂದಿದೆ. ಸಿಂಹಾಸನದ ಮೇಲಿನ ಗಣೇಶನ 22 ಘಟಕಗಳನ್ನು ಹೊಂದಿದೆ. ಕಿನ್ನಾಳ ಆಟಿಕೆಯ ಶೈಲಿಯು ವಾಸ್ತವಿಕ ಮತ್ತು ವಿನ್ಯಾಸವನ್ನು ಉಳಿ ಬಳಸಿ ಕುಶಲ ಸ್ಪರ್ಶ ನೀಡುತ್ತಾರೆ. ಹಬ್ಬದ ಋತುವಿನಲ್ಲಿ ಮಣ್ಣಿನ ಆಟಿಕೆಗಳು ಮತ್ತು ಚಿತ್ರಗಳನ್ನು ಸಾಮಾನ್ಯವಾಗಿ ಸೆಗಣಿ ಮತ್ತು ಮರದ ಪುಡಿಯನ್ನು ಬಳಸಿ ಮಾಡಲಾಗುತ್ತದೆ.

ಕಿನ್ನಾಳ ಪ್ರಯಾಣ[ಬದಲಾಯಿಸಿ]

ಕೊಪ್ಪಳ ಜಿಲ್ಲೆಯ ಕಿನ್ನಾಳ ಎಂಬ ಹಳ್ಳಿಗೆ ಹೋಗುವವರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳ ವ್ಯವಸ್ಥೆಯಿದೆ. ಕೊಪ್ಪಳ ಹತ್ತಿರಕ್ಕೆ ರೈಲ್ವೆ ವ್ಯವಸ್ಥೆಯಿದೆ.[೫]

ರಾಷ್ಟ್ರಮಟ್ಟದಲ್ಲಿ ಕಿನ್ನಾಳ ಆಟಿಕೆ ಪ್ರದರ್ಶನ[ಬದಲಾಯಿಸಿ]

೨೦೧೩ರಲ್ಲಿ ನಡೆದ ಗಣರಾಜ್ಯ ಉತ್ಸವದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಕಿನ್ನಾಳ ಆಟಿಕೆಗಳ ಪ್ರದರ್ಶನದ ಟ್ಯಾಬ್ಲೊವನ್ನು ತಯಾರಿಸಲಾಗಿತ್ತು.[೬]

ಬಾಹ್ಯ ಕೊಂಡಿ[ಬದಲಾಯಿಸಿ]

* Form GI-1 of Application No. 213 available at http://ipindiaservices.gov.in/GirPublic/ViewApplicationDetails.aspx?Appno=20&Index=0 Archived 2015-03-20 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ[ಬದಲಾಯಿಸಿ]

  1. "Kinnal Craft". Glasgow Kinnal Project. Archived from the original on 28 ಜನವರಿ 2008. Retrieved 16 April 2006.
  2. Staff (19 January 2013). "Reviving Kinnala art". The Hindu.
  3. http://kannada.oneindia.com/news/2013/01/26/india-64th-republic-day-cultural-heritage-kinnal-tableau-071119.html
  4. "ಆರ್ಕೈವ್ ನಕಲು". Archived from the original on 2016-02-15. Retrieved 2016-02-07.
  5. https://www.google.co.in/maps/place/Kinnal,+Karnataka+583230/@15.4428804,76.1353566,16z/data=!4m2!3m1!1s0x3bb8366eef343fab:0x8f64ca519996cb11
  6. http://www.liquisearch.com/kinhal_craft/kinnala_tableau_in_republic_day_parade