ವಿಷಯಕ್ಕೆ ಹೋಗು

ಕುಲ್ಚಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಲ್ಚಾ ಭಾರತ ಮತ್ತು ಪಾಕಿಸ್ತಾನದಲ್ಲಿ ತಿನ್ನಲಾದ ಒಂದು ಬಗೆಯ ಹುದುಗು ಸೇರಿಸಿದ ಬ್ರೆಡ್. ಇದನ್ನು ಮೈದಾದಿಂದ ತಯಾರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಚನಾ ಮಸಾಲಾದ ಜೊತೆಗೆ ತಿನ್ನಲಾಗುತ್ತದೆ. ಕುಲ್ಚಾ ಒಂದು ವಿಶಿಷ್ಟ ಪಂಜಾಬಿ ಪಾಕ. ಹಿಟ್ಟಿನ ಕಣಕವನ್ನು ಚಪ್ಪಟೆ, ದುಂಡನೆಯ ಆಕಾರವಾಗಿ ಲಟ್ಟಿಸಲಾಗುತ್ತದೆ ಮತ್ತು ಮಣ್ಣಿನ ಒಲೆಯಲ್ಲಿ ಬಂಗಾರ ಕಂದು ಬಣ್ಣ ಬರುವವರೆಗೆ ಬೇಯಿಸಲಾಗುತ್ತದೆ. ಬೆಂದ ನಂತರ, ಅದನ್ನು ಸಾಮಾನ್ಯವಾಗಿ ಬೆಣ್ಣೆಯಿಂದ ತೇಯ್ದು, ಖಾರದ ಛೋಲೆಯೊಂದಿಗೆ ತಿನ್ನಲಾಗುತ್ತದೆ.

"https://kn.wikipedia.org/w/index.php?title=ಕುಲ್ಚಾ&oldid=657671" ಇಂದ ಪಡೆಯಲ್ಪಟ್ಟಿದೆ