ವಿಷಯಕ್ಕೆ ಹೋಗು

ನಾನ್‍ಖಟಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನ್‍ಖಟಾಯಿ ಭಾರತ ಮತ್ತು ಪಾಕಿಸ್ತಾನದಲ್ಲಿ ಜನಪ್ರಿಯವಿರುವ ಶಾರ್ಟ್‍ಬ್ರೆಡ್ ಬಿಸ್ಕತ್ತುಗಳು. ನಾನ್‍ಖಟಾಯಿ ಶಬ್ದವನ್ನು ಪರ್ಷಿಯನ್ ಶಬ್ದ ನಾನ್ ಅಂದರೆ ಬ್ರೆಡ್ ಮತ್ತು ಅಫ಼್ಘಾನ್ ಶಬ್ದ ಖಟಾಯಿ ಅಂದರೆ ಬಿಸ್ಕತ್ತು ಇಂದ ಪಡೆಯಲಾಗಿದೆ. ನಾನ್‍ಖಟಾಯಿ ಸೂರತ್‍ನಲ್ಲಿ ಡಚ್ಚರು ಮತ್ತು ಭಾರತೀಯರು ಪ್ರಮುಖ ಸಂಬಾರ ಪದಾರ್ಥ ವ್ಯಾಪಾರಿಗಳಾಗಿದ್ದಾಗ ಅಂದರೆ ೧೬ನೆಯ ಶತಮಾನದಲ್ಲಿ ಹುಟ್ಟಿಕೊಂಡಿತು ಎಂದು ನಂಬಲಾಗಿದೆ.