ರಾಬರ್ಟ್ ಕಾಚ್
ರಾಬರ್ಟ್ ಕಾಚ್ | |
---|---|
ಜನನ | ರಾಬರ್ಟ್ ಹೆನ್ರಿಕ್ ಹರ್ಮನ್ ಕೋಚ್ ೧೧ ಡಿಸೆಂಬರ್ ೧೮೪೩ ಕ್ಲಾಸ್ತಲ್, ಹ್ಯಾನೋವರ್ ಸಾಮ್ರಾಜ್ಯ |
ಮರಣ | 27 May 1910 ಬಾಡೆನ್ನ ಗ್ರ್ಯಾಂಡ್ ಡಚಿ ಬಾಡೆನ್-ಬಾಡೆನ್ | (aged 66)
ರಾಷ್ಟ್ರೀಯತೆ | ಜರ್ಮನಿ |
ಕಾರ್ಯಕ್ಷೇತ್ರ | ಸೂಕ್ಷ್ಮ ಜೀವವಿಜ್ಞಾನ |
ಸಂಸ್ಥೆಗಳು | ಇಂಪೀರಿಯಲ್ ಹೆಲ್ತ್ ಆಫೀಸ್, ಬರ್ಲಿನ್, ಬರ್ಲಿನ್ ವಿಶ್ವವಿದ್ಯಾಲಯ |
ಅಭ್ಯಸಿಸಿದ ವಿದ್ಯಾಪೀಠ | ಗೊಟ್ಟಿಂಗನ್ ವಿಶ್ವವಿದ್ಯಾಲಯ |
ಡಾಕ್ಟರೇಟ್ ಸಲಹೆಗಾರರು | ಜಾರ್ಜ್ ಮೈಸ್ನರ್[೧] |
Other academic advisors | ಫ್ರೆಡ್ರಿಕ್ ಗುಸ್ಟಾವ್ ಜಾಕೋಬ್ ಹೆನ್ಲೆ ಕಾರ್ಲ್ ಎವಾಲ್ಡ್ ಹ್ಯಾಸ್ಸೆ ರುಡಾಲ್ಫ್ ವಿರ್ಚೊ |
ಪ್ರಸಿದ್ಧಿಗೆ ಕಾರಣ | ಡಿಸ್ಕವರಿ ಬ್ಯಾಕ್ಟೀರಿಯೊಲಜಿ ಸೂಕ್ಷ್ಮಾಣು ಸಿದ್ಧಾಂತ ನ ಕೊಚ್'ಸ್ ಪೋಸ್ಟ್ಯುಲೇಟ್ಗಳು ಆಂಥ್ರಾಕ್ಸ್, ಕ್ಷಯರೋಗ ಮತ್ತು ಕಾಲರಾ |
ಪ್ರಭಾವಿತರು | ಫ್ರೆಡ್ರಿಕ್ ಲೋಫ್ಲೆರ್ |
ಗಮನಾರ್ಹ ಪ್ರಶಸ್ತಿಗಳು | |
ಹಸ್ತಾಕ್ಷರ |
ರಾಬರ್ಟ್ ಹೆನ್ರಿಕ್ ಹರ್ಮನ್ ಕೋಚ್ (11 ಡಿಸೆಂಬರ್ 1843 - 27 ಮೇ 1910)[೩] ಜರ್ಮನ್ ವೈದ್ಯ ಮತ್ತು ಸೂಕ್ಷ್ಮ ಜೀವವಿಜ್ಞಾನಿ.ಆಧುನಿಕ ಬ್ಯಾಕ್ಟೀರಿಯಶಾಸ್ತ್ರದ ಸಂಸ್ಥಾಪಕನಾಗಿ, ಕ್ಷಯರೋಗ, ಕಾಲರಾ, ಮತ್ತು ಆಂಥ್ರಾಕ್ಸ್ನ ನಿರ್ದಿಷ್ಟ ಕಾರಣವಾದ ಏಜೆಂಟ್ಗಳನ್ನು ಗುರುತಿಸುವಲ್ಲಿ ಮತ್ತು ಸಾಂಕ್ರಾಮಿಕ ಕಾಯಿಲೆಯ ಪರಿಕಲ್ಪನೆಗೆ ಪ್ರಾಯೋಗಿಕ ಬೆಂಬಲವನ್ನು ನೀಡುವಲ್ಲಿ ಅವರ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. ವಸಾಹತುಶಾಹಿ ಆಫ್ರಿಕನ್ ವಿಷಯಗಳ ಮೇಲೆ ಆರ್ಸೆನಿಕ್ ಸಿದ್ಧತೆಗಳನ್ನು ಒಳಗೊಂಡಂತೆ ವಿಷಕಾರಿ ಔಷಧಿಗಳೊಂದಿಗೆ ಕೊಚ್ ಪ್ರಯೋಗಿಸಿದರು.ಮಾನವರ ಮೇಲೆ ಪ್ರಯೋಗ ಮಾಡಿದ ಈ ಕಾಯಿಲೆಗಳ ಕುರಿತಾದ ತನ್ನ ನವೀನ ಅಧ್ಯಯನಗಳ ಜೊತೆಗೆ, ಕೋಚ್ ರಚಿಸಿದ ಮತ್ತು ಸೂಕ್ಷ್ಮ ಜೀವವಿಜ್ಞಾನದ ಕ್ಷೇತ್ರದಲ್ಲಿ ಪ್ರಯೋಗಾಲಯ ತಂತ್ರಜ್ಞಾನಗಳನ್ನು ಮತ್ತು ತಂತ್ರಗಳನ್ನು ಅಭಿವೃದ್ಧಿಪಡಿಸಿದರು ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಪ್ರಮುಖ ಸಂಶೋಧನೆಗಳನ್ನು ಮಾಡಿದರು. ಅವರ ಸಂಶೋಧನೆಯು ಕೋಚ್ನ ತತ್ತ್ವಗಳ ಸೃಷ್ಟಿಗೆ ಕಾರಣವಾಯಿತು, ವೈದ್ಯಕೀಯ ಸೂಕ್ಷ್ಮ ಜೀವವಿಜ್ಞಾನದಲ್ಲಿ ಇಂದು "ಚಿನ್ನದ ಗುಣಮಟ್ಟ" ದಲ್ಲಿ ಉಳಿಯುವ ನಿರ್ದಿಷ್ಟ ಕಾಯಿಲೆಗಳಿಗೆ ನಿರ್ದಿಷ್ಟ ಸೂಕ್ಷ್ಮಜೀವಿಗಳನ್ನು ಸಂಪರ್ಕಿಸುವ ನಾಲ್ಕು ಸಾಮಾನ್ಯ ತತ್ವಗಳ ಸರಣಿಯಾಗಿದೆ. ಕ್ಷಯರೋಗದಲ್ಲಿ ಅವರ ಸಂಶೋಧನೆಯ ಪರಿಣಾಮವಾಗಿ, ಕೋಚ್ 1905 ರಲ್ಲಿ ಶರೀರವಿಜ್ಞಾನ ಅಥವಾ ವೈದ್ಯಕೀಯದಲ್ಲಿ ನೋಬೆಲ್ ಪ್ರಶಸ್ತಿಯನ್ನು[೪] ಪಡೆದರು.[೫]
ವೈಯಕ್ತಿಕ ಜೀವನ
[ಬದಲಾಯಿಸಿ]ರಾಬರ್ಟ್ ಕಾಚ್ ಅವರ ಪೋಷಕರ ಹೆಸರು ಹೆರಮನ್ ಕಾಚ್ ಮತ್ತು ಮತ್ತಿಲಡೆ ಜುಲಿ ಹೆನರಿಎಟೆ ಬೈವಾಂಡ್ ಡಿಸೆಂಬರ್ ೧೧ ರಂದು ಹುಟ್ಟಿದ್ದರು. ಅವರು ಚಿಕ್ಕವರಾಗಿದಾಗಲೆ ಓದಿನಲ್ಲಿ ಬುದ್ಧಿವಂತರಾಗಿದ್ದರು , ಅವರು ಶಾಲೆಗೆ ಹೋಗುವುದಕ್ಕೆ ಮುಂಚೆಯೆ ಅವರಾಗಿಯೆ ಬರೆಯುವುದನ್ನು ಮತ್ತು ಓದುವುದನ್ನು ಕಲಿತ್ತಿದ್ದರು, ಶಾಲೆಗೆ ಅವರು ೧೮೪೮ ಇಸಿವಿಯಲ್ಲಿ ಸೇರಿದ್ದರು. ೧೮೬೨ ರಲ್ಲಿ ಹತ್ತನೆ ತರಗತಿಯನ್ನು ಗಣಿತದಲ್ಲಿ ಹಾಗು ಸೈನ್ಸ್ ನಲ್ಲಿ ಅತ್ಯುತಮ ಅಂಕಗಳ ಜೊತೆ ಪದವಿ ಪಡೆದುಕೊಂಡರು. ೧೯ ನೆಯ ವಯಸ್ಸಿನಲ್ಲಿ ಯುನಿವರ್ಸಿಟಿ ಒಫ಼್ ಗೊಟಿನಜೆನ ಸೇರಿ ನ್ಯಾಚರಲ್ ಸೈನ್ಸ್ ಓದಿದ್ದರು. ಆದರೆ ಮೂರು ಸೆಮಿಸ್ಟರ್ ಆದ ನಂತರ ಅವರಿಗೆ ವೈದ್ಯಕೀಯ ವೃತಿಯಲ್ಲಿ ಬಯಕೆ ಬಂತು, ಆದುದರಿಂದ ಅವರು ನ್ಯಾಚರಲ್ ಸೈನ್ಸ್ ಓದುವುದನ್ನು ಬಿಟ್ಟರು[೬] . ೫ ನೆಯ ಸೆಮಿಸ್ಟರ್ ವೈದ್ಯಕಿಯವನ್ನು ಓದುವಾಗ ಜಾಕಬ್ ಹೆನಲೆ ಒಬ್ಬ ಶರೀರ ರಚನೆಯ ಶಾಸ್ತ್ರದಲ್ಲಿ ಪಾರಂಗತರಾಗಿದ್ದವರು ಕೊನಟಾಜಿಯನ್ ಎಂಬ ಸಂಶೋಧನೆಯ ಆರ್ಟಿಕಲ ೧೮೪೦ನಲ್ಲಿ ಪ್ರಚಾರ ಮಾಡಿದರು. ಇವರು ಕಾಚ್ ಅವರನ್ನು ಅವರ ಜೊತೆ ಒಂದು ಸಂಶೋಧನೆಗೆ ಸಹಾಯ ಮಾಡಲು ಕರೆದಿದ್ದರು ,ಆ ಸಂಶೋಧನೆಯು ಯೂಟಿರೀನ್ ನರ್ವ್ ಸ್ಟ್ರಕ್ಚರ್ ಬಗ್ಗೆ ಸಹಾಯ ಮಾಡಲು ಕರೆದಿದ್ದರು. ೬ ನೆಯ ಸೆಮಿಸ್ಟರ್ ನಲ್ಲಿ ಅವರು ಓದುತಿದ್ದ ಸಂಸ್ಥೆಯಲ್ಲಿ ಸಂಶೋಧನೆಯನ್ನು ಮಾಡಲು ಪ್ರಾರಂಭಿಸಿದರು ಅವರು ಮೊದಲನೆಯ ಸಂಶೋಧನೆಯಲ್ಲಿ ಸಕ್ ಸಿನಿಕ್ ಆಸಿಡ್ ಸಿಕ್ರೀಶನ್ ಬಗ್ಗೆ ಸಂಶೋಧನೆ ಮಾಡಿ ಮತ್ತು ಓದಿ ತಿಳಿದು ಕೊಂಡಿದರು . ೧೮೬೬ ಅತ್ಯುತಮ ಅಂಕಿಗಳ ಜೊತೆ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿ ಪದವಿ ಪಡೆದುಕೊಂಡರು . ೧೮೬೭ ರಲ್ಲಿ ಎಮ ಎನ್ನುವರ ಜೊತೆ ಮದುವೆ ಮಾಡಿಕೊಂಡರು ,೧೮೬೮ ರಲ್ಲಿ ಗೆರ್ಟ್ರುಡ್ ಎಂಬ ಮಗಳು ಅವರಿಗೆ ಜನಿಸಿದಳು.೧೮೬೬ ರಲ್ಲಿ ತನ್ನ ಪದವಿಯ ನಂತರ, ಒಂದು ಶಸ್ತ್ರಚಿಕಿತ್ಸಕ ಕೆಲಸ ಫ್ರಾಂಕೋ-ಪ್ರಷ್ಯನ್ ಯುದ್ಧದಲ್ಲಿ ಮಾಡಿದರು ಮತ್ತು ಅವರ ಸೇವೆಯ ನಂತರದ ವೈದ್ಯಕೀಯ ಕೆಲಸ ವೊಲಸ್ಟೀನ್, ಪೋಸೆನ್ ನಲ್ಲಿ ಮಾಡಿದರು. ಎಮ ಫ್ರಾಟ್ಜ಼್ ಮತ್ತು ರಾಬರ್ಟ್ ಕಾಚ್ ಮದುವೆ ೧೮೯೩ ರಲ್ಲಿ ಕೊನೆಗೊಂಡಿತು. ನಂತರ ಅದೇ ವರ್ಷ ಅವರು ಹೆಡ್ವಿಗ್ ಫ್ರೈಬೆರಗ್ ಎಂಬ ನಟಿಯನ್ನು ವಿವಾಹವಾದರು .ಅವರು ನಿರ್ವಾಹಕರಾಗಿ ಮತ್ತು ಪ್ರೊಫೆಸರ್ ಆಗಿ ೧೮೯೦- ೧೮೮೫ ರಿಂದ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಸೇವೆಯನ್ನು ಸಲ್ಲಿಸಿದ್ದರು. ಕಾಚ್ ರವರಿಗೆ ಹೃದಯಾಘಾತ ಏಪ್ರಿಲ್ ೧೯೧೦ ರಲ್ಲಿ ಆಯಿತು, ಮತ್ತೇ ಅವರು ಯಾವತ್ತು ಸಂಪೂರ್ಣ ಚೇತರಿಕೆ ತಲುಪಲಿಲ್ಲ.ಮೇ ೨೭ ರಂದು, ಕೇವಲ ಮೂರು ದಿನಗಳಲ್ಲಿ ತನ್ನ ಕ್ಷಯ ಸಂಶೋಧನೆ ಮೇಲೆ ಉಪನ್ಯಾಸ ವಿಜ್ಞಾನ ಪ್ರಷ್ಯನ್ ಅಕಾಡೆಮಿಯಲ್ಲಿ ನೀಡಿದರು, ರಾಬರ್ಟ್ ಕಾಚ್ ಜರ್ಮನಿಯಲ್ಲಿ ತಮ್ಮ ೬೬ ನೇ ವಯಸ್ಸಿನಲ್ಲಿ ಮರಣ ಹೊಂದಿದ್ದರು.[೭]
ಮೆಟ್ರೆಕಟ್ಟುರೋಗ(ದನಕರುಗಳು)
[ಬದಲಾಯಿಸಿ]ಮೆಟ್ರೆಕಟ್ಟುರೋಗ | |
---|---|
ರಾಬರ್ಟ ಕಾಚ್ ಮೆಟ್ರೆಕಟ್ಟುರೋಗದ ಕೆಲಸಕ್ಕಾಗಿ ಪ್ರಸಿದ್ಧರಾಗಿದರು,ಈ ರೋಗದ ಕಾರಣೋತ್ಪಾದಕ ಕಾರಭಾರಿ ಬಾಸಿಲಸ್ ಅನತ್ರಾಸಿಸ್ ಎಂದು ಕಂಡುಹಿಡಿದನು . ಕಾಚ್ ಮೆಟ್ರೆಕಟ್ಟು ಬ್ಯಾಕ್ಟೀರಿಯನಲ್ಲಿ ಏಕಕೋಶದ ಸಂಯೋಗ ರಹಿತ ಅಂಕುರ ಬೀಜಗಳು ಅತಿರೇಕದ ಅವಸ್ಥೆಯಲ್ಲು ಉಳಿಯಲು ಸಾದ್ಯ ಎಂಬುದು ಕಂಡುಹಿಡಿದಿದ್ದನ್ನು. ಆದರೆ ಅತ್ಯುತ್ತಮ ಸ್ಥಿತಿಯಲ್ಲಿ ಅದೆ ಅಂಕುರ ಬೀಜಗಳು ಬೀಜಗಳಿಂದ ಹೊರಗೆ ಬಂದು ರೋಗವನ್ನು ಹರಡುವುತ್ತೆ ಎಂದು ಗೊತ್ತು ಮಾಡಿಕೊಂಡಿದನು.ಇದನ್ನು ದೃಢಪಡಿಸಲು ಕಾಚ್ ಕಾರಣೋತ್ಪಾದಕ ಬ್ಯಾಕ್ಟೀರಿಯವನ್ನು ಗಾಜಿನ ಮೇಲೆ ಬಿಸಿ ಮಾಡಿ ಕೂರಿಸಿದ್ದನು , ಆ ಬ್ಯಾಕ್ಟೀರಿಯಗಳಿಗೆ ರಂಗುಹಾಕಿದ್ದನು , ಆ ರಂಗು ಹಾಕ್ಕಿದಕ್ಕೆ ಕಾರಣವೇನೆಂದು ಅವನು ಸೂಕ್ಶ್ಮದರ್ಶಕಯಂತ್ರದಲ್ಲಿ ನೋಡಬಹುದಿತ್ತು.ಕಾಚ್ ಮೆಟ್ರೆಕಟ್ಟುರೋಗ ಕೆಲಸ ಪ್ರಸಿದ್ಧವೇಕೆಂದರೆ ಅವರು ಒಂದು ರೋಗವನ್ನು ಒಂದು ಬ್ಯಾಕ್ಟೀರಿಯಾಗೆ ಸಂಬಂಧಿಸಲು ಮೊದಲಾದವರು, ಮತ್ತು ಅವರು ಸ್ವಯಂಪ್ರೇರಿತ ಹುಟ್ಟು ತಿರಸ್ಕರಿಸಿದರು ಮತ್ತು ಮೂಲಬೀಜ ಶಾಸ್ತ್ರದ ರೋಗವನ್ನು ಬೆಂಬಲಕೊಟ್ಟನು.
ಕಾಲೆರಾ
[ಬದಲಾಯಿಸಿ]ಕಾಲೆರಾ | |
---|---|
ಕಾಚ್ ಮುಂದೆ ಅವನ ಗಮನವನ್ನು ಕಾಲೆರ ಮೇಲೆ ಕಣ್ಣು ಹಾರಿಸಿದ್ದರು, ಅವರು ಈಜಿಪ್ಟ್ ನಲ್ಲಿ ಸಂಶೋದನೆಯನ್ನು ಪ್ರಾರಂಭಿಸಿದರು ಆದರೆ ಅವರಿಗೆ ಆ ಕಾರಣೋತ್ಪಾದಕ ರೋಗವನ್ನು ಅದರ ಬ್ಯಾಕ್ಟೀರಿಯದಿಂದ ಬೇರ್ಪಡಿಸಲು ಸಾದ್ಯಾವಾಗಲಿಲ್ಲ , ಈಜಿಪ್ಟ್ ನಲ್ಲಿ ಸಾಂಕ್ರಾಮಿಕ ರೋಗ ಮುಗಿಯುವುದಿಕ್ಕಿಂತ್ತ ಮೊದಲು ಅವನಿಗ ಕೆಲಸ ಮುಗಿಸಲು ಆಗಲಿಲ್ಲ. ಆದುದರಿಂದ ಅವನು ಈದನ್ನು ಕಂಡುಹಿಡಿಯಲು ಅವನು ಇಂಡಿಯಗೆ ಬಂದನು. ಇಂಡಿಯದಲ್ಲಿ ಅವನಿಗೆ ಕಾಲೆರಾ ರೋಗದ ಕಾರಣೋತ್ಪಾದಕ ಬ್ಯಾಕ್ಟೀರಿಯ ವಿಬ್ರಿಯೋ ಕಾಲೆರಾ ಎಂದು ತಿಳಿಯಿತು . ಆದರೆ ಇದನ್ನು ಮೊದಲೆ ಒಬ್ಬ ಇಟಾಲಿಯನ್ ಸೈಂಟಿಸ್ಟ್ ಫಿಲಿಪೊ ಪಸಿನಿ ಈ ಬ್ಯಾಕ್ಟೀರಿಯವನ್ನು ಬೇರ್ಪಡಿಸಿದ್ದರು ಆದರೆ ಅವರಿಗೆ ಅದರ ಸ್ವರೂಪ ಮತ್ತು ಫಲಿತಾಂಶ ಸೆರಿಯಾಗಿ ಗೊತ್ತಿರಲಿಲ್ಲ.
ಟ್ಯೂಬರ್ ಕ್ಯೂಲಾಸಿಸ್
[ಬದಲಾಯಿಸಿ]ಟ್ಯೂಬರ್ ಕ್ಯೂಲಾಸಿಸ್ | |
---|---|
ರಾಬರ್ಟ ಕಾಚ್ ೧೮೦೦ನಯ ಕಾಲದಲ್ಲಿ ಜರ್ಮನಿಯ ಬರ್ಲಿನ್ ದೇಶದಲ್ಲಿ ಇಂಪೀರಿಯಲ್ ಸ್ವಸ್ಥತೆ ಇಲಾಕೆಯಲ್ಲಿ ಸರಕಾರಿ ಸಲಹಕಾರಿಯಾಗಿ ಕೆಲಸ ಮಾಡಬೇಕಾದರೆ ಅವರಿಗೆ ಟ್ಯೂಬರ್ ಕ್ಯೂಲಾಸಿಸ್ ಮೇಲೆ ಸಂಶೋಧನೆ ಮಾಡಬೇಕು ಎಂಬ ಆಸಕ್ತಿ ಹುಟ್ಟಿಕೊಂಡಿತು. ಆಗಿನ ಕಾಲದಲ್ಲಿ ಜನರಿಗೆ ತಿಳಿದಂತ್ತೆ ಟ್ಯೂಬರ್ ಕ್ಯೂಲಾಸಿಸ್ ಒಂದು ಪೂರ್ವಜರಿಂದ ಅಥವ ವಂಶಪರಂಪರೆಯಿಂದ ಬಂದ ರೋಗವೆಂದು ತಿಳಿದ್ದಿದ್ದರು. ಆದರೆ ಕಾಚ್ ತಿಳಿದಿದ್ದೆ ಬೇರೆ ಅವನಿಗೆ ತಿಳಿದಂತೆ ಟ್ಯೂಬರ್ ಕ್ಯೂಲಾಸಿಸ್ ಒಂದು ಬ್ಯಾಕ್ಟೀರಿಯದಿಂದ ಆಗುವ ಮತ್ತು ಸಾಂಕ್ರಾಮಿಕ ರೋಗವೆಂದು ಅವನಿಗೆ ತಿಳಿದ್ದಿದ್ದು, ಇದನ್ನು ದೃಢಪಡಿಸಲು ಕಾಚ್ ತನ್ನ ೪ ಸ್ವಯಂಸಿದ್ಧ ತಿಳಿಯನ್ನು ಗಿನಿ-ಹಂದಿಯ ಮೇಲೆ ಪ್ರಯೋಗಿಸಿದನು . ಈ ಪ್ರಯೋಗಗಳಿಂದ ಕಾಚ್ ನ ೪ ಸ್ವಯಂಸಿದ್ಧ ತಿಳಿಯು ಟ್ಯಾಬರ್ ಕ್ಯೂಲಾಸಿಸ್ ನ ಮೇಲೆ ದೃಡವಾಯಿತು. ೧೮೮೨ ಇಸಿವಿಯಲ್ಲಿ ಅವನು ಟ್ಯೂಬರ್ ಕ್ಯೂಲಾಸಿಸ್ ಬಗ್ಗೆ ಕಂಡುಹಿಡಿದ ಬಗ್ಗೆ ಪ್ರಚಾರ ಮಾಡಿದನು, ಅದರಲ್ಲಿ ಬರೆದಿತ್ತು ಟ್ಯೂಬರ್ ಕ್ಯೂಲಾಸಿಸ್ ನ ಕಾರಣೋತ್ಪಾದಕ ಬ್ಯಾಕ್ಟೀರಿಯ ಮೈಕೊಬ್ಯಕ್ಟೀರಿಯಮ್ ಟ್ಯೂಬರ್ ಕ್ಯೂಲಾಸಿಸ್ ಎಂದು,ಆ ಬ್ಯಾಕ್ಟೀರಿಯ ನಿಧಾನವಾಗಿ ದೇಹದಲ್ಲಿ ಬೆಳೆಯುತ್ತದೆ ಎಂದು ಕೂಡ ಹೇಳಿದ್ದ. ಈ ಕೆಲಸಕ್ಕಾಗಿ ಕಾಚ್ ಗೆ ೧೯೦೫ ನಲ್ಲಿ ನೊಬೆಲ್ ಪ್ರೈಜ್ ಇನ್ ಫಿಜಿಯಾಲಜಿ ಅಥವಾ ಮೆಡಿಸಿನ್ ನಲ್ಲಿ ಪ್ರಶಸ್ತಿ ಸಿಕ್ಕಿತ್ತು. ಅದರ ಮೇಲು ಕಾಚ್ ಟ್ಯೂಬರ್ ಕ್ಯೂಲಾಸಿಸ್ ನ ಸಂಶೋದನೆ ಮತ್ತು ಉಷ್ಣವಲಯದ ರೋಗದ ಬಗ್ಗೆ ಅಧ್ಯಯನ ಮಾಡಿದಕ್ಕೆ ಅವನಿಗೆ "ಪ್ರುಶಿಯನ್ ಆರ್ಡರ್ ಪೋರ್ ಲೆ ಮೆರಿಟೆ" ಎಂಬ ಪ್ರಶಸ್ತಿ ೧೯೦೬ ರಲ್ಲಿ ದೊರೆಕಿತ್ತು ಮತ್ತು ೧೯೦೮ ಇಸಿವಿಯಲ್ಲಿ ಅವರ ಹೆಸರಿನಲ್ಲಿಯೆ ಒಂದು ಪ್ರಶಸ್ತಿ ಬಂತ್ತು. ಈ ಪ್ರಶಸ್ತಿ ವೈದ್ಯಕೀಯ ವೃತ್ತಿಯಲ್ಲಿ ಮಹತ್ವದ ಕೆಲಸ ಮಾಡಿರಬೇಕು ಮತ್ತು ಅವರು ಬದುಕಿರಬೇಕು ಈ ಪ್ರಶಸ್ತಿಯನ್ನು ಪಡೆಯಲು.
ಕಾಚ್ ನ ಸ್ವಯಂಸಿದ್ಧ ತಿಳಿಗಳು
[ಬದಲಾಯಿಸಿ]ಈ ಸ್ವಯಂಸಿದ್ಧ ತಿಳಿಗಳು ರೋಗಗಳು ಹೇಗೆ ಬರುವುದು ಮತ್ತು ಹೇಗೆ ಹರಡುವುದು ಎಂದು ಹೇಳುತ್ತವೆ ಅದು ಅಲ್ಲದೆ ಲ್ಯಾಬಿನಲ್ಲು ಬೆಳೆಯುವ ಬ್ಯಾಕ್ಟೀರಿಯ ಇದೇ ಸ್ವಯಂಸಿದ್ಧ ತಿಳಿಗಳನ್ನು ಪಾಲಿಸುತ್ತದೆ. ಕಾಚ್ ನ ಸ್ವಯಂಸಿದ್ಧ ತಿಳಿಗಳು ಹೀಗಿವೆ: ೧. ಆ ಹರಡುವ ರೋಗದಲ್ಲಿ ಆ ಬ್ಯಾಕ್ಟೀರಿಯ ಇರಲೆ ಬೇಕು ೨. ಆ ಬ್ಯಾಕ್ಟೀರಿಯದಿಂದ ಅದರ ಡಿ.ನ್.ಎ ಯನ್ನು ತೆಗೆದು ಲ್ಯಾಬ್ ನಲ್ಲಿ ಕಲ್ಚರ್ ಮಾಡಬೇಕು ೩. ಈ ಪರಿಶುದ್ಧ ಕಲ್ಚರ್(ರೋಗ ಹರಡುವ ಕಲ್ಚರ್) ನ ತೆಗೆದುಕೊಂಡು ಲ್ಯಾಬಿನಲ್ಲಿ ಬೆಳೆದ ಆರೋಗ್ಯವಾದ ಪ್ರಾಣಿಗೆ ಈ (ರೋಗ ಹರೆಡುವ ಡಿ.ನ್.ಎ) ಯನ್ನು ಚುಚ್ಚಬೇಕು ೪. ಈ ಪ್ರಾಣಿಯಲ್ಲು ಇದೇ ರೋಗ ಕಂಡು ಬಂದರೆ ಅದರ ರಕ್ತದ ಸ್ಯಾಂಪಲ್ ನಿಂದ( ಡಿ.ನ್.ಎ) ಯನ್ನು ತೆಗೆದು ಅದರಲ್ಲು ಅದೇ ರೋಗವೆಂದು ಪತ್ತೆ ಮಾಡಿ ದೃಡ ಪಡಿಸಿಕೊಂಡನು. ಇವೇ ಕಾಚಿನ ೪ ಸ್ವಯಂಸಿದ್ಧ ತಿಳಿಗಳು.
ಶುಧ ಕಲ್ಚರ್ ನ ಬೇರೆ ಪಡಿಸಿ ಗಟ್ಟಿ ಮೀಡಿಯ ಮೇಲೆ ಬೆಳೆಯುವುದು
[ಬದಲಾಯಿಸಿ]ಕಾಚ್ ತನ್ನ ಸಂಶೋಧನೆಯು ಪರಮಾಣು ರೂಪಪ್ರಾಣಿಯ ಬಗ್ಗೆ ಒಂದು ಪ್ರಯೋಗಾಲಯದಲ್ಲಿ ಕೆಲಸ ಮಾಡಿದರೆ ಪಕ್ಕದಲ್ಲೆ ಅವನ ಚಿಕಿತ್ಸಾ ಶೋಧನ ಕೇಂದ್ರವು ಇತ್ತು. ಕಾಚ್ ನ ಪ್ರಯೋಗಾಲಯ ಮೊದಲ ದಿನಗಳಲ್ಲಿ ಅವನು ಮಾಡಿದ ಸಂಶೋಧನೆಯಿಂದ ಮೈಕ್ರೊಬಾಯೊಲೊಜಿ ಕ್ಷೇತ್ರದಲ್ಲಿ ದೊಡ್ದ ಕೊಡುಗೆಯಾಯಿತು ಎಕೆಂದರೆ ಅವರು ಪ್ರಯೋಗಾಲಯಯದಲ್ಲಿ ಬ್ಯಾಕ್ಟೀರಿಯವನ್ನು ಬೆಳೆಸಲು ಒಂದು ತಂತ್ರವನ್ನು ಪ್ರಯೋಗಮಾಡಿದ್ದರು ಅದು ಯಶಸ್ಸು ಕಂಡು ಇಂದಿನ ಕಾಲಕ್ಕೂ ಪ್ರಯೋಗ ಮಾಡಬಹುದು. ಕಾಚ್ ತನ್ನ ಎರಡನೆಯ ಸ್ವಯಂಸಿದ್ಧ ತಿಳಿಯನ್ನು ಇಟ್ಟುಕೊಂಡು ಬ್ಯಾಕ್ಟೀರಿಯವನ್ನು ಪ್ರಯೋಗಾಲಯದಲ್ಲಿ ಬೆಳೆಸಲು ಪ್ರಯತ್ನ ಮಾಡುತ್ತಿದ್ದ ಹಾಗೆಯ ಪ್ರಯತ್ನ ಪಡ ಬೇಕಾದರೆ ಗಟ್ಟಿಯಾದ ಪುಷ್ಟಿಕರವಾದ ಆಲೂಗೆಡ್ಡೆಯ ಹೋಳುಗನ್ನು ಹಾಕಿ ನೋಡಿದಾಗ ಆ ಸಂಧರ್ಬದಲ್ಲಿ ಒಂದೇ ತರವಾದ ಬ್ಯಾಕ್ಟೀರಿಯ ಬೆಳೆಯಲು ಪ್ರಾರಂಬಿಸಿತ್ತು , ಇದರಿಂದ ಮತ್ತೊಂದು ವಿಚಾರ ತಿಳಿದು ಬಂತು ಆಲೂಗೆಡ್ಡೆಯನ್ನು ಎಲ್ಲಾತರಹದ ಬ್ಯಾಕ್ಟೀರಿಯನ್ನು ಬೆಳೆಯಲು ಸಾಧ್ಯವಿಲ್ಲ ವೆಂದು. ಕಾಚ್ ಬೇರೆ ತರಹದ ಪುಷ್ಟಿಕರವಾದ ದ್ರಾವಕವಾದ ಜಿಲಾಟಿನ್ ಎನ್ನುವ ಪದಾರ್ಥವನ್ನು ಬಳಕೆ ಮಾಡಿದ ಆದರೆ ಇದನ್ನು ಪ್ರಯೋಗಿಸುತ್ತ ಅವನಿಗೆ ತಿಳೆಯಿತು ಇದು ಬ್ಯಾಕ್ಟೀರಿಯ ಬೆಳೆಯಲು ಸಾಧ್ಯವಿಲ್ಲವೇಕೆಂದರೆ ಇದು ೩೭ ಡಿಗ್ರೀ ತಾಪಮಾನದ ಮೇಲೆ ಇದನ್ನು ಗಟ್ಟಿ ಪದಾರ್ಥವಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಇದರಿಂದ ಬೆಳೆಸಿದ ಬ್ಯಾಕ್ಟೀರಿಯಗಳು ಹಾಳಾಗುವುದು ಎಂದು ತಿಳಿದು ಬಂತು . ಈ ಸಮಸ್ಯೆಯಿಂದ ಬಳಲುತ್ತಿರುವಾಗ ವಾಲ್ತರ್ ಮತ್ತು ಆನಜಿಲಿನ ಹೆಸೆ ಅವರ ಸ್ನೇಹಿತರು ಸಹಾಯಕ್ಕೆ ಬಂದರು ಅವರು ಅವನಿಗೆ ಅಗಾರ್ ಎಂಬ ಪದಾರ್ಥವನ್ನು ಬಳಸಿ ಎಂದು ಸೂಚನೆಯನ್ನು ಕೊಟ್ಟರು.ಈ ಅಗಾರ್ ಎಂಬ ಪದಾರ್ಥ ಸಮುದ್ರದಿಂದ ಸಿಗುವುದು ಈ ಪದಾರ್ಥವನ್ನು ಕೇಕ್ , ಐಸ್ ಕ್ರೀಮ್ ಮುಂತಾದ ಸಮಾಗ್ರಿಗಳನ್ನು ಮಾಡಲು ಸಾಧ್ಯ ಹೀಗೆ ಇದನ್ನು ಬ್ಯಾಕ್ಟೀರಿಯ ಬೆಳೆಯಲು ಕಾಚ್ ಇದನ್ನು ಬಳೆಸಿದ .ಈ ಪದಾರ್ಥ ಒಂದು ಪಾಲಿಸಾಕರೈಡ್ ಆಗಿತ್ತು ೩೭ ಡಿಗ್ರೀ ತಾಪಮಾನದಲ್ಲೂ ಅದು ಗಟ್ಟಿ ಪದಾರ್ಥವಾಗಿಯೆ ಇರುತ್ತದೆ , ಹಾಗೆಯೆ ಬ್ಯಾಕ್ಟೀರಿಯ ಬೆಳೆಯಲು ಅತಿ ಉನ್ನತ ಪದಾರ್ಥ ಹಾಗು ಪಾರದರ್ಶಕ ಪದಾರ್ಥವು ಆಗಿತ್ತು.
ಪ್ರಶಸ್ತಿಗಳು ಮತ್ತು ಗೌರವಗಳು
[ಬದಲಾಯಿಸಿ]ನೊಬೆಲ್ ಪ್ರಶಸ್ತಿ ಪಡೆದುಕೊಂಡರು ಜೊತೆಗೆ, ಕಾಚ್ ರಾಯಲ್ ಸೊಸೈಟಿಯ ವಿದೇಶಿ ಸದಸ್ಯರಾಗಿ ೧೮೯೭ ರಲ್ಲಿ ಆಯ್ಕೆಯಾದರು (ಫಾರ್ಮೆಮ್ರ್ಸ್).ಕಾಚ್ ನ ಸೂಕ್ಷ್ಮಣೂಜೀವಿಯ ವಿಚಾರವು ಅವರ ಗೌರವಾರ್ಥವಾಗಿ ಅವರ ಹೆಸರಿನಲ್ಲೆ, ಹೆಸರಿಸಲಾಗಿದೆ ಅದನ್ನು ಕಾಚ್ ಆಧಾರ ನಿಯಮಗಳು ಎಂಬುದಾಗಿ ಕರೆಯಲಾಗಿದೆ.
- 2017 ಡಿಸೆಂಬರ್ 10 ರಂದು, ಗೂಗಲ್ ರಾಬರ್ಟ್ ಕೊಚ್ರವರ ಚಿತ್ರ ಗೂಗಲ್ ಡೂಡಲ್ ನಲ್ಲಿ ಪ್ರದರ್ಶಿಸುವ ಮೂಲಕ ಗೌರವ ಸೂಚಿಸಿದೆ .[೮]
ಉಲ್ಲೇಖಗಳು
[ಬದಲಾಯಿಸಿ]- ↑ ID Tree profile Robert Koch
- ↑ "Fellows of the Royal Society". London: Royal Society. Archived from the original on 2015-03-16.
- ↑ https://www.biography.com/scientist/robert-koch
- ↑ https://interviewmania.com/discussion/48975-biology-biology-miscellaneous
- ↑ "ರಾಬರ್ಟ್ ಕಾಚ್ ಜನನ ಮತ್ತು ಮರಣ".
- ↑ "ರಾಬರ್ಟ್ ಕಾಚ್ ಬಯಸಿದ ವೃತ್ತಿ".
- ↑ http://broughttolife.sciencemuseum.org.uk/broughttolife/people/robertkoch
- ↑ https://www.google.com/doodles/celebrating-robert-koch
ಹೊರಗಿನ ಸಂಪರ್ಕ
[ಬದಲಾಯಿಸಿ]- Pages using the JsonConfig extension
- Articles using infobox templates with no data rows
- Articles with FAST identifiers
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Articles with BNC identifiers
- Articles with BNE identifiers
- Articles with BNF identifiers
- Articles with BNFdata identifiers
- Articles with CANTICN identifiers
- Articles with GND identifiers
- Articles with ICCU identifiers
- Articles with J9U identifiers
- Articles with LCCN identifiers
- Articles with Libris identifiers
- Articles with LNB identifiers
- Articles with NDL identifiers
- Articles with NKC identifiers
- Articles with NLA identifiers
- Articles with NLG identifiers
- Articles with NLK identifiers
- Articles with NSK identifiers
- Articles with NTA identifiers
- Articles with PLWABN identifiers
- Articles with VcBA identifiers
- Articles with CINII identifiers
- Articles with PIC identifiers
- Articles with DTBIO identifiers
- Articles with Trove identifiers
- Articles with SNAC-ID identifiers
- Articles with SUDOC identifiers
- ವೈದ್ಯರು
- ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೫-೧೬
- ನೋಬೆಲ್ ಪ್ರಶಸ್ತಿ ಪುರಸ್ಕೃತರು
- ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ
- ವಿಕಿಕ್ಲಬ್ ಕ್ರೈಸ್ಟ್ ಯೂನಿವರ್ಸಿಟಿ ರಚಿಸಿದ ಲೇಖನಗಳು