ಲೀಲಾ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೀಲಾ ಭಟ್[ಬದಲಾಯಿಸಿ]

ಪುತ್ತೂರಿನ ಸಾಹಿತ್ಯ ವಲಯವನ್ನು ವಿಸ್ತರಿಸಿದ ಹಿರಿಯರಲ್ಲಿ ಪ್ರೊ.ಬಿ.ಲೀಲಾ ಭಟ್ಟರು[೧] ಒಬ್ಬರು. ಇವರ ಹುಟ್ಟೂರು ದ.ಕ.ಜಿಲ್ಲೆಯ ಪುತ್ತೂರು, ತಂದೆ ಬೊಳುವಾರು ಶ್ರೀನಿವಾಸ ಭಟ್, ತಾಯಿ ಜೀನಾ ಬಾಯಿ ಇವರು ಜಿನಸಿ ವ್ಯಾಪಾರಿಗಳು. ಪ್ರವಾಸ ಕಥನ, ಸಂಶೋದನೆ, ಸಂಪಾದನೆ, ಅನುವಾದ, ಜೀವನಚರಿತ್ರೆ ಹೀಗೆ ಸೃಜನೇತರ ಸಾಹಿತ್ಯ ವಲಯದಲ್ಲಿ ಕೆಲಸ ಮಾಡಿದ ಹಿರಿಯ ವ್ಯಕ್ತಿ. ಇವರ ಮನೆ ಮಾತು ಕೊಂಕಣಿ. ಆದರೆ ತುಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಅವರಿಗೆ ಪರಿಣತಿಯಿತ್ತು. ಉಗ್ರಾಣ ಮಂಗೇಶರಾಯರು, ಶಿವರಾಮ ಕಾರಂತರು, ಬ್ಯೆಂದೂರು ಆನಂದರಾಯರು, ಕಡವ ಶಂಭುಶರ್ಮ ಮುಂತಾದವರು ನಿರ್ಮಿಸಿದ ಪುತ್ತೂರಿನ 'ಸಾಹಿತ್ಯ ರಥ'ವನ್ನು ಮುನ್ನಡೆಸಿದ ಹಿರಿಮೆ ಇವರದು. ಪುತ್ತೂರು ಕರ್ನಾಟಕ ಸಂಘದ ಬೆಂಬಲ, ಬೋಳಂತಕೋಡಿ ಈಶ್ವರ ಭಟ್ಟರ ಒತ್ತಾಸೆ, ಲೀಲಾ ಭಟ್ಟರ ಶ್ರದ್ಧೆಗಳು ಮುಪ್ಪುರಿಗೊಂಡು ಉಗ್ರಾಣ ಮತ್ತು ಎಂ.ಎನ್.ಕಾಮತ್ ಸಂಪುಟಗಳು ಹೊರಬರಲು ಸಾದ್ಯವಾಯಿತು.

ವಿದ್ಯಾಭ್ಯಾಸ[ಬದಲಾಯಿಸಿ]

ಪ್ರಾಥಮಿಕ ಮತ್ತು ಪ್ರೌಢಶಿ‍ಕ್ಷಣವನ್ನು ಪುತ್ತೂರಿನಲ್ಲಿಯೇ ಪಡೆದರು ಹಾಗು ಮಂಗಳೂರಿನ ಸೆಂಟ್ ಆಗ್ನೆಸ್ ಕಾಲೇಜಿನಲ್ಲಿ ಬಿ. ಎ., ಬಿ. ಟಿ. ಪದವಿ, ಮದ್ರಾಸು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ. ಎ. ಪದವಿ.ಪದಡೆದಿದ್ದಾರೆ ಗುರುಗಳು: ಕಡವ ಶಂಭುಶರ್ಮ, ಮಾರಪ್ಪ ಶೆಟ್ಟಿ ಹಾಗು ಮದ್ರಾಸಿನಲ್ಲಿ ಪ್ರೊ. ಎಂ. ಮರಿಯಪ್ಪ ಭಟ್ಟರು ಮೊದಲಾದವರು. ಉದ್ಯೊಗ:ಇವರು ಆರಂಭದಲ್ಲಿ ನಾಲ್ಕು ವರ್ಷ ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡಿದ ಅನಂತರ ಕನ್ನಡ ಉಪನ್ಯಾಸಕರಾಗಿ ಉಡುಪಿಯ ಎಂ. ಜಿ. ಎಂ. ಕಾಲೇಜಿನಲ್ಲಿ ತಮ್ಮ ಬದುಕಿನ ಸಾರವತ್ತಾದ ಭಾಗವನ್ನು ಕಳೆದರು.

ಕೃತಿಗಳು[ಬದಲಾಯಿಸಿ]

  • ಭೂತನಾಗರ ನಡುವೆ[೧೯೮೧] *ಶಕ್ತಿಯ ಶೋಧನೆಯಲ್ಲಿ[೧೯೮೯]
  • ಉಳ್ಳಾಲ್ತಿ ಅಮ್ಮನವರು ಈ ಮೂರು ಇವರ ಮುಖ್ಯ ಕೃತಿಗಳು
  • ಉಗ್ರಾಣ ಸಂಪುಟ೧[೧೯೮೭]
  • ಉಗ್ರಾಣ ಸಂಪುಟ೨[೧೯೮೮]
  • ಎಂ. ಎನ್. ಕಾಮತ್ ಅವರ ೫ ಸಂಪುಟಗಳು ಕ್ರಮವಾಗಿ ೧೯೯೧,೧೯೯೨,೧೯೯೩,೧೯೯೫,೧೯೯೬ರಲ್ಲಿ ಹೊರಬಂದಿದೆ
  • ಏಷ್ಯಾದ ಬೆಳಕು[೧೯೯೫]
  • ಲೀಲಾಕಾರಂತ ನೆನಪಿನ ಸಂಪುಟ[೨೦೦೧]
  • ಅರ್ಥವಿಸಲಾಗದ ಸಾಯಿಬಾಬಾ[೨೦೦೪]
  • ಮಾರ್ತಾ ಎಷ್ಟನ್ ಯಕ್ಷಗಾನ ಸಾಹಸಗಾಥೆ[೨೦೦೫] ಇವರ ಇನ್ನಿತರ ಕೃತಿಗಳು

ಉಲ್ಲೇಖ[ಬದಲಾಯಿಸಿ]

  1. ಚಂದ್ರಗಿರಿ ನಾಡೋಜ ಡಾ.ಸಾರಾ ಅಬೂಬಕ್ಕರ್ ಅಬಿನಂದನ ಗ್ರಂಥ, ಸಂಪಾದಕರು, ಡಾ.ಸಬಿಹಾ, ಪ್ರಕಾಶಕರು ಸಿರಿವನ ಪ್ರಕಾಶನ ಬೆಂಗಳೂರು, ಪುಟ ಸಂಖ್ಯೆ-೨೨೫
"https://kn.wikipedia.org/w/index.php?title=ಲೀಲಾ_ಭಟ್&oldid=647163" ಇಂದ ಪಡೆಯಲ್ಪಟ್ಟಿದೆ