ಎಂ.ಎನ್.ಕಾಮತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ.ಎನ್.ಕಾಮತ್ (ಕ್ರಿ.ಶ.೧೮೮೩-೧೯೪೦) ಎಂದು ಪ್ರಸಿದ್ಧರಾದ ಅವರ ಪೂರ್ಣ ಹೆಸರು ಮುಂಡ್ಕೂರು ನರಸಿಂಗ ಕಾಮತ್. ಕಾವ್ಯನಾಮ ರಾಬಿನ್ ರೆಡ್ ಬ್ರೆಸ್ಟ್. ಕನ್ನಡ ನವೋದಯ ಸಾಹಿತ್ಯದ ಶ್ರೇಷ್ಠ ಸಾಹಿತಿಗಳಲ್ಲೊಬ್ಬರು. ಕನ್ನಡ ಸಾಹಿತ್ಯದಲ್ಲಿ ಸಣ್ಣಕತೆ ಮತ್ತು ನಾಟಕಗಳನ್ನು ಬರೆದ ಆದ್ಯರಲಿ ಒಬ್ಬರು. ಅವರು ಕವಿತೆ, ಕಾದಂಬರಿ, ನಾಟಕ, ಹರಟೆ, ಲಲಿತ ಪ್ರಬಂಧಗಳು ಇತ್ಯಾದಿ ಪ್ರಕಾರಗಳಲ್ಲಿ ಗಣನೀಯ ಕೊಡುಗೆಯನ್ನು ನೀಡಿದವರು. ಕಡು ಬಡತನದ ಗೋಳು ಅವರ ಪ್ರತಿಭಾ ವಿಕಸನಕ್ಕೆ ತಡೆಯಾದರೂ ಅವರ ಕನ್ನಡ ಸಾಹಿತ್ಯ ಸಾಧನೆ ಅಲ್ಪವೇನಲ್ಲ.

ಬಾಲ್ಯ ಜೀವನ[ಬದಲಾಯಿಸಿ]

ಎಂ.ಎನ್. ಕಾಮತ್ ಅವರು ೧೮೮೩ರ ಮಾಚ್ ೧೭ರಂದು ಮುಂಡ್ಕೂರಿನಲ್ಲಿ ಜನಿಸಿದರು. ಅವರ ತಂದೆ ಶ್ರೀನಿವಾಸ ಕಾಮತ್; ತಾಯಿ ತುಂಗಾಭದ್ರ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ ಬಡತನದ ಅವರದು. ಎಂ.ಎಸ್. ಕಾಮತರು ಮುಂಡ್ಕೂರಿನ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಅವರ ತಾಯಿ ತೀರಿಕೊಂಡರು. ಪತ್ನಿಯನ್ನು ಕಳಕೊಂಡ ಮೇಲೆ ಶ್ರೀನಿವಾಸ ಕಾಮತರಿಗೆ ಮುಂಡ್ಕೂರಿನ ಜೀವನವು ಅಸನಿಯವಾಯಿತು. ಆದದ್ದಾಗಲಿ ಎಂಬ ಹುಚ್ಚು ಧ್ಯೆಯದಿಂದ ಮಗನೊಂದಿಗೆ ಮಂಗಳೂರಿಗೆ ಹೋದರು.

ಹೈಸ್ಕೂಲ್ ನಲ್ಲಿ ಎರಡು ವಷಗಳ ಕಾಲ (೧೮೯೩-೧೮೯೯) ಮಂಜೇಶ್ವರ ಗೋವಿಂದ ಪೈಯವರು ಕಾಮತರ ಸಹಪಾಠಿಗಳಾಗಿದ್ದರು. ೧೮೯೯ರಲ್ಲಿ ಕಾಮತರು, ಪೈಯವರು ಮತ್ತು ಇತರ ಕೆಲವು ವಿದ್ಯಾಥಿಗಳ ಒಟ್ಟುಗೂಡಿ ಏಂಜಲ್ ಎಂಬ ಕೈಬರಹದ ಇಂಗ್ಲಿಷ್ ಪತ್ರಿಕೆಯನ್ನು ಹೊರಡಿಸಿದರು. ಆ ಪತ್ರಿಕೆಯನ್ನು ಮೊದಲು ಎರಡು ಸಂಚಿಕೆಯಲ್ಲಿ ಕಾಮತರ ಆರು ಇಂಗ್ಲೀಷ್ ಕವಿತೆಗಳಿದ್ದುವು ಎಂದು ಗೋವಿಂದ ಪೈ ಅವರು ಬರೆದಿದ್ದಾರೆ.

ಕಾಲೇಜು ಶಿಕ್ಷಣಕ್ಕಾಗಿ ಕಾಮತರ ಸಂತ ಆಲೋಶಿಯಸ್ ಕಾಲೇಜನ್ನು ಸೇರಿದರು. ಗೋವಿಂದ ಪೈ ಅವರು ಸರಕಾರಿ ಕಾಲೇಜನ್ನು ಸೇರಿದ್ದರು. ಆದುದರಿಂದ ಕೆನರಾ ಹೆಸ್ಕೂಲಿನಲ್ಲಿ ಚಿಗುರಿದ ಈ ಇಬ್ಬರ ಗೆಳೆತನವು ಬೆಳೆಯಲು ಆ ಕೂಡಲೇ ಅವಕಾಶವಾಗಲಿಲ್ಲ. ಒಂದು ವೇಳೆ ಕಾಮತರು ಪೆಯವರಂತೆ ಸರಕಾರಿ ಕಾಲೇಜನ್ನು ಸೇರಿದ್ದಲ್ಲಿ ಪಂಜೆ ಮಂಗೇಶರಾಯರು ಶಿಷ್ಯರಾಗಲು ಅವಕಾಶವುಂಟಾಗುತ್ತಿತ್ತು. ಎ‌‌ಫ್.ಎ.ಪರೀಕ್ಷೆ ಪಾಸು ಮಾಡಿದ ಬೆನ್ನಲೆ ಕಾಮತರ ಮದುವೆ ನಡೆಯಿತು. ಮನೆಯ ಆಥಕ ಪರಿಸ್ಥಿತಿ ತೀರ ತೋಚನಿಯವಾಗಿತ್ತು. ವಾದ್ಯದ ಕಂಪೆನಿಯೊಂದರಲ್ಲಿ ಅವರಿಗೆ ಗುಮಾಸ್ತನ ಕೆಲಸ ಸಿಕ್ಕಿತು. ಎರಡು ವಷಗಳ ಬಳಿಕ ಅವರಿಗೆ ಆ ಕಂಪೆನಿಯ ಕಲ್ಕತದ ಶಾಖೆಗೆ ವಗವಾಯಿತು. ಕಲ್ಕತದ ವಾಸವು ಅವರ ಬದುಕಿಗೆ ಒಂದು ಪ್ರಮುಖ ತಿರುವನ್ನು ತಂದ್ದೊಡಿತು.

ಅದು ಬಂಗಾಳಿ ಸಾಹಿತ್ಯದ ಪುನರುಜ‍್ಜೀವನದ ಕಾಲ. ಆಗ ಅಲ್ಲಿಯ ಸಾಹಿತಿಗಳು ಇಂಗ್ಲೀಷ್ ಮೋಹವನ್ನು ಬಿಟ್ಟು, ಬಂಗಾಳಿಯಲ್ಲಿ ಹೊಸ ಸಾಹಿತ್ಯವನ್ನು ನಿಮಿಸತೊಡಗಿದ್ದರು.

ಕಾದಂಬರಿಗಳು[ಬದಲಾಯಿಸಿ]

 • ಕಮಲಕುಮಾರಿ (ಬಾಬೂ ತಾರಕನಾಥ ವಿಶ್ವಾ ಅವರು ಕೃತಿ ಅನುವಾದ)
 • ಪ್ರೇಮಪಿಪಾಸೆ
 • ಕ್ಷಾತ್ರತೇಜ
 • ವಿಷವಿವಾಹ

ಪ್ರಸಿದ್ಧಿ ಹರಟೆಗಳು[ಬದಲಾಯಿಸಿ]

 • ಸಾಹಿತ್ಯರೈಲ್ವೆ
 • ಬೀಡಿ ಸೇದಿ ಬೇಡಿ

ಗದ್ಯ ಕೃತಿಗಳು[ಬದಲಾಯಿಸಿ]

 • ಬಾಲಕರ ಮಹಾಭಾರತ
 • ಯಾದವ ಕೃಷ್ಣ
 • ಚಂಡಕೌಶಿಕ

ನಾಟಕಗಳು[ಬದಲಾಯಿಸಿ]

 • ಅರ್ಜುನನ ಚಾರ್ತುಮಾಸ
 • ಕೃಷ್ಣ ಸಂಧಾನ
 • ಮೆಂಬರ
 • ತೆನಾಲಿ ರಾಮ
 • ಪ್ರತಾಪ ಸಿಂಹ

ಉಲ್ಲೇಖಗಳು[ಬದಲಾಯಿಸಿ]

 • ಮಾಹಿತಿ ಕೃಪೆ: ಕಣಜ