ಸದಸ್ಯ:PALLAVI NAGESH/sandbox
ಕಾಡು ಬೇವು
[ಬದಲಾಯಿಸಿ]PALLAVI NAGESH/sandbox | |
---|---|
Leaves, flowers, and fruit | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | M. azedarach
|
Binomial name | |
Melia azedarach |
ಸಸ್ಯ ಪರಿಚಯ
[ಬದಲಾಯಿಸಿ]ಕಾಡು ಬೇವು ಮರವು ಮೇಲಿಯೇಸಿ ಎಂಬ ಕುಟುಂಬಕ್ಕೆ ಸೇರಿದೆ. ಇದು ಸಾಮಾನ್ಯವಾಗಿ ಭಾರತದ ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತದೆ[೨]. ಈ ಮರವು ಸಾಮಾನ್ಯವಾಗಿ ಹನ್ನೆರಡು ಮೀಟರ್‍ಗಳಷ್ಟು ಎತ್ತರಕ್ಕೆ ಬೆಳೆಯತ್ತದೆ.ಕಾಡು ಮೇವು ಪದ ಗ್ರಿಕ್ ಭಾಷೆಯ ಮೆಲಿಯ ಅಝೆಡರಖ್ ಪದದಿಂದ ಬಂದಿದೆ. ಮೆಲಿಯ ಅಂದರೆ ಬೂದಿ ಅಝೆಡರಖ್ ಎಂದರೆ ಸ್ವತಂತ್ರಮರ ಎಂದರ್ಥ. ಇದರ ಕಾಂಡದ ಮೇಲಿನ ತೊಗಟೆಯು ನುಣ್ಣಗಿದ್ದು ಬೂದು ಮಿಶ್ರಿತ ಕಂದು ಬಣ್ಣದಿಂದ ರಚಿತವಾಗಿದೆ.ಕಾಡು ಬೇವು ಮರವು ಪರ್ಯಾಯ ಜೋಡಣೆಯ ದ್ವಿಗರಿರೂಪಿ ಸಂಯಕ್ತ ಎಲೆಗಳನ್ನು ಹೊಂದಿದೆ.ಕಿರು ಎಲೆಗಳ ಅಂಚು ಗರಗಸದಂತಿದ್ದು ತುದಿ ಚೂಪಾಗಿದೆ. ಕಿರು ಎಲೆಗಳಲ್ಲಿ ಜಾಲದಂತ ನರವಿನ್ಯಾಸವಿದೆ.ಕಿರು ಎಲೆಗಳಲ್ಲಿ ತೈಲ ಚೀಲಗಳಿವೆ. ಇದರ ಎಲೆಗಳು ಸಾಮಾನ್ಯವಾಗಿ ೨೩-೪೫ಸೆ.ಮೀ.ಗಳಷ್ಟು ಉದ್ದವಿರುತ್ತದೆ.೩-೧೧ಸೆ.ಮೀನಷ್ಟು ಅಗಲವಿರುತ್ತದೆ.ಇದರ ಕಿರು ಎಲೆಗಳು ೧.೨-೫ಸೆ.ಮೀನಷ್ಟು ಉದ್ದ ಹಾಗು ೦.೬-೨.೫ಸೆ.ಮೀನಷ್ಟು ಅಗಲವಾಗಿದೆ.ಇದರ ಹೂವು ಸುವಾಸನೆಯುಕ್ತವಾಗಿದೆ ಹಾಗು ತೆಳುವಾಗಿದೆ.ಕಾಡು ಮೇವು ಮರವು ಮಾರ್ಚ್ ಹಾಗು ಮೇತಿಂಗಳಲ್ಲಿ ಹೂ ಬಿಡುತ್ತದೆ.ಈ ಮರವು ಬೀಜದಿಂದ ತನ್ನ ವಂಶವವನ್ನು ವೃದ್ದಿಸಿಕೊಳ್ಳುತ್ತದೆ.
ಇತರ ಹೆಸರುಗಳು
[ಬದಲಾಯಿಸಿ]ಕಾಡು ಬೇವನ್ನು ಇಂಗ್ಲೀಷಿನಲ್ಲಿ ಪರ್ಷಿಯನ್ ಲೈಲಾಕ್ ಟ್ರೀ, ದಿ ಬೀಡ್ ಟ್ರೀ ಎಂಬ ಹೆಸರಿನಿಂದ ಕರೆಯತ್ತಾರೆ. ಕನ್ನಡದಲ್ಲಿ ಹುಚ್ಚುಬೇವು,ಅರೆಬೇವು,ತುರುಕು ಬೇವು,ಗರುಡಬೇವು ಎಂಬ ಹೆಸರಿನಿಂದ ಕರೆಯುತ್ತಾರೆ.ಹಿಂದಿಯಲ್ಲಿ ಬಕೇನ್,ತೆಲುಗಿನಲ್ಲಿತರಕವೇಪ,ಮಲಯಾಳಂನಲ್ಲಿ ವೆಂಬು,ತಮಿಳಿನಲ್ಲಿ ಮಲ್ಲೆವೆಂಬು,ಮರಾಠಿಯಲ್ಲಿ ಪೆಜ್ರಿ,ಸಂಸ್ಕ್ರತದಲ್ಲಿ ಅಕ್ಷದ್ರು,ಗಿರಿಪತ್ರ ಎಂಬ ಹೆಸರಿನಿಂದ ಕರೆಯುತ್ತಾರೆ
ಉಪಯೋಗಗಳು
[ಬದಲಾಯಿಸಿ]ಕಾಡು ಬೇವು ಮರವನ್ನು ರಸ್ತೆಬದಿಯಲ್ಲಿ ನೆರಳಿಗಾಗಿ ಬೆಳೆಸುತ್ತಾರೆ.ಈ ವೃಕ್ಷವನ್ನು ಔಷಧೀಯವಾಗಿ ಬಳಸಲಾಗುತ್ತದೆ. ಇದರ ಬೀಜದಿಂದ ತೆಗೆದ ಎಣ್ಣೆಯನ್ನು ಔಷಧಿಗೆ ಬಳಸುತ್ತಾರೆ.ಬೇರನ್ನು ಜಂತು ನಾಶಕವಾಗಿ ಉಪಯೋಗಿಸುತ್ತಾರೆ.ತೊಗಟೆಯ ರಸ ಹಲ್ಲುಗಳನ್ನು ಗಟ್ಟಿಮಾಡುತ್ತದೆ.ಬೀಜದಿಂದ ತೆಗೆದ ಎಣ್ಣೆಯನ್ನು ಮೆದುಳಿಗೆ ಟಾನಿಕ್‍ನಂತೆ ಉಪಯೋಗಿಸುತ್ತಾರೆ.ಅಲ್ಲದೆ ಇದು ರಕ್ತವನ್ನು ಶುದ್ದಿಗೊಳಿಸುತ್ತದೆ.ಇದರ ಬೀಜವನ್ನು ಸಂದುನೋವು ನಿವಾರಣೆಗೆ ಬಳಸುತ್ತಾರೆ.ಎಲೆಗಳು ಕೀಟಗಳನ್ನು ದೂರ ಇಡುತ್ತವೆ.ಇದನ್ನು ಔಷಧಿಗೆ ಮಾತ್ರವಲ್ಲದೆ ಆರ್ಥಿಕ ಅನುಕೂಲಕ್ಕೆ ಉಪಯೋಗಿಸುತ್ತಾರೆ.ಇದರ ಮರದಿಂದ ಪೆಟ್ಟಿಗೆಗಳನ್ನು ತಯರಿಸುತ್ತಾರೆ.ಇದರ ಒಣಗಿದ ಕಾಯಿಗಳನ್ನು ರುದ್ರಾಕ್ಷಿಮಾಲೆಯಂತೆ ಮಾಡಿ ಉಪಯೋಗಿಸುತ್ತಾರೆ.
ಉಲ್ಲೇಖ
[ಬದಲಾಯಿಸಿ]- ↑ Linnaeus, C. (1753)
- ↑ http://www.anbg.gov.au/gnp/interns-2008/melia-azedarach.html