ಸದಸ್ಯ:Nancy Mathew/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಣದ ಪ್ರಮಿತಿಗಳು[ಬದಲಾಯಿಸಿ]

ರಾಷ್ಟ್ರದಲ್ಲಿ ಯಾವ ಬಗೆಯ ನಾಣ್ಯವು ಚಲಾವಣೆಯಲ್ಲಿದೆ ಮತ್ತು ಪ್ರಧಾನ ನಾಣ್ಯದ ಮೌಲ್ಯವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ವಿವರಿಸುವುದಕ್ಕೆ ಹಣಕಾಸಿನ ಪದ್ಧತಿ ಅಥವಾ ಹಣದ ಪ್ರಮಿತಿ ಎಂದು ಕರೆಯಲಾಗುತ್ತದೆ. ಒಂದು ರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ನಾಣ್ಯ ಪದ್ಧತಿಗೆ ಹಣದ ಪ್ರಮಿತಿ ಎನ್ನುತ್ತೇವೆ. ಹಣದ ಪೂರೈಕೆಯನ್ನು ಸರ್ಕಾರವೇ ನಿಗದಿಪಡಿಸಿ ಅದರ ಮೌಖಿಕ ಸ್ಥಿರತೆಯಲ್ಲಿಡಲು ಒಂದು ಸಾಧನದ ಅವಶ್ಯಕತೆ ಇದೆ. ಇಂತಹ ಒಂದು ಸಾಧನವೇ ಹಣದ ಪ್ರಮಿತಿ ಎಂದು ಕರೆಯುತ್ತೇವೆ. ಅವರ ಮೌಲ್ಯವನ್ನು ನಿರ್ಧಾರ ಮಾಡುವ ಬಗೆಯನ್ನು ಹಣದ ಪ್ರಮಿತಿಯು ಸೂಚಿಸುತ್ತದೆ.

Redbook-1898 (27GA)

ಹಣದ ಪ್ರಮಿತಿಯ ಉತ್ತಮ ಲಕ್ಷಣಗಳು

ಒಂದು ಉತ್ತಮ ಹಣಕಾಸಿನ ಪ್ರಮಿತಿಯು ಅನೇಕ ಗುಣಲಕ್ಷಣಗಳನ್ನು ಒಳಗೊಂಡಿದೆ. ಅವುಗಳೆಂದರೆ:-

೧. ಹಣಕಾಸಿನ ಪ್ರಮಿತಿಯು ಸರಳತೆಯಿಂದ ಕೂಡಿರುತ್ತದೆ.

೨. ಸ್ವಯಂ ಕಾರ್ಯಚರಣೆಯ ಮೂಲಕ ಸಾರ್ವಜನಿಕರ ವಿಶ್ವಾಸವನ್ನು ಗಳಿಸುತ್ತದೆ.

೩. ಕಾನೂನುಬದ್ಧ ಹಣವಾಗಿರುವುದರಿಂದ ಸಾರ್ವತ್ರಿಕ ಸ್ವೀಕಾರವನ್ನು ಹೊಂದಿರುತ್ತದೆ.

೪. ಕೆಲವು ಲೋಹಗಳಿಂದ ತಯಾರಿಸಿದ ನಾಣ್ಯಗಳಿಗೆ ಪರಿವರ್ತನೀಯವಾದ ಲಕ್ಷಣವನ್ನು ಹೊಂದಿರುತ್ತದೆ.

೫.' ಸ್ವಯಂಚಾಲಿತ ಹೊಂದಾಣಿಕೆ ಇರುವುದರಿಂದ ಸರ್ಕಾರದ ಕನಿಷ್ಠ ಹಸ್ತಕ್ಷೇಪ ಅವಶ್ಯಕವಾಗಿರುತ್ತದೆ.

೬. ಆಂತರಿಕ ಹಾಗೂ ಅಂತರರಾಷ್ಟ್ರೀಯ ಬೆಲೆಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದರಿಂದ ವಿನಿಮಯ ಸ್ಥಿರತೆಯನ್ನು ಹೊಂದಿರುತ್ತದೆ.

೭. ಮಿತವ್ಯಯವನ್ನು ಹೊಂದಿರುತ್ತದೆ. ಲೋಹದ ಹಣಕ್ಕಿಂತ ಕಾಗದದ ಹಣವು ಮಿತವ್ಯಯದಿಂದ ಕೂಡಿರುತ್ತದೆ. ಇದು ದುಬಾರಿಯೆನಿಸುವುದಿಲ್ಲ.

೮. ಸ್ಥಿತಿಸ್ಥಾಪಕತ್ವವನ್ನು ಹೊಂದಿರುತ್ತದೆ. ಆರ್ಥಿಕ ವ್ಯವಸ್ಥೆಗೆ ಅನುಗುಣವಾದ ಹಣದ ಪೂರೈಕೆಯನ್ನು ಮಾಡಬಹುದಾಗಿದೆ.

೯. ಹಣದ ಉತ್ತಮ ಗುಣಗಳಾದ ಸುಲಭವಾಗಿ ಸಾಗಿಸಲು, ವರ್ಗಾಯಿಸಲು, ಗುರುತಿಸಲು, ಏಕರೂಪತೆ, ವಿಭಜನೆ ಮತ್ತು ಮೌಲ್ಯದಲ್ಲಿ ಸ್ಥಿರತೆಯನ್ನು ಸಾಧಿಸುವುದು ಸಾಧ್ಯವಾಗುತ್ತದೆ.

ಹಣಕಾಸಿನ ಪ್ರಮಿತಿಯ ವಿಧಗಳು

ಹಣಕಾಸಿನ ಪ್ರಮಿತಿಗಳನ್ನು ಹಲವಾರು ವಿಧಗಳಾಗಿ ವಿಗಂಡಿಸಬಹುದು. ಹಣಕಾಸಿನ ಪ್ರಮಿತಿಯ ವಿಧಗಳನ್ನು ಈ ರೀತಿ ಪಟ್ಟಿ ಮಾಡಬಹುದು:-

ಲೋಹದ ಪ್ರಮಿತಿ

ಯಾವುದೇ ಒಂದು ರಾಷ್ಟ್ರದಲ್ಲಿ ಚಿನ್ನ,ಬೆಳ್ಳಿ ಅಥವಾ ಇತರ ಲೋಹದ ನಾಣ್ಯಗಳು ಚಲಾವಣೆಯಲ್ಲಿದ್ದರೆ ಮತ್ತು ಪ್ರಧಾನ ನಾಣ್ಯದ ಮೌಲ್ಯವನ್ನು ಈ ಲೋಹಗಳ ಮೂಲಕವೇ ನಿರ್ಧರಿಸುತ್ತಿದ್ದರೆ ಆ ವ್ಯವಸ್ಥೆಗೆ ಲೋಹದ ಪ್ರಮಿತಿ ಎಂದು ಕರೆಯಲಾಗುತ್ತದೆ. ಪ್ರಧಾನ ನಾಣ್ಯವನ್ನು ಮುದ್ರಿಸಲು ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಅತ್ಯಮೂಲ್ಯವಾದ ಲೋಹಗಳನ್ನು ಬಳಸಿಕೊಳ್ಳಲಾಗುವುದು. ಲೋಹದ ಪ್ರಮಿತಿಯನ್ನು ಎರಡು ಭಾಗಗಳಾಗಿ ವಿಂಗಡಿಸಿಕೊಳ್ಳಲಾಗುತ್ತದೆ.

೧. ಏಕಲೋಹ ನಾಣ್ಯ ಪ್ರಮಿತಿ.

೨. ದ್ವಿಲೋಹ ನಾಣ್ಯ ಪ್ರಮಿತಿ.

೧. ಏಕಲೋಹ ನಾಣ್ಯ ಪ್ರಮಿತಿ

ಒಂದು ರಾಷ್ಟ್ರದಲ್ಲಿ ಚಲಾವಣೆಯಲ್ಲಿರುವ ನಾಣ್ಯವನ್ನು ಒಂದೇ ಲೋಹದಿಂದ ತಯಾರಿಸಲ್ಪಟ್ಟಿದ್ದರೆ ಅದನ್ನು ಏಕಲೋಹ ನಾಣ್ಯ ಪ್ರಮಿತಿ ಎಂದು ಕರೆಯಲಾಗುತ್ತದೆ. ಅಂದರೆ ಪ್ರಧಾನ ನಾಣ್ಯದ ಮೌಲ್ಯವನ್ನು ನಿರ್ಧರಿಸುವ ಸಲುವಾಗಿ ಒಂದೇ ಲೋಹವನ್ನು ಉಪಯೋಗಿಸಲಾಗುತ್ತದೆ. ಈ ಹಿಂದೆ ಚಿನ್ನ ಅಥವಾ ಬೆಳ್ಳಿ ಇವುಗಳಲ್ಲಿ ಒಂದು ಲೋಹವನ್ನು ಪ್ರಮಿತಿಯಾಗಿ ಅಳವಡಿಸಿಕೊಳ್ಳುವುದು ರೂಢಿಯಲ್ಲಿತ್ತು. ಈ ಪ್ರಮಿತಿಯನ್ನು ಹೊಂದಿರುವ ದೇಶದಲ್ಲಿ ಚಿನ್ನ ಅಥವಾ ಬೆಳ್ಳಿಯ ನಾಣ್ಯಗಳು ಚಲಾವಣೆಯಲ್ಲಿರುತ್ತದೆ. ಇಲ್ಲವೇ ದೇಶದ ಪ್ರಧಾನ ನಾಣ್ಯವನ್ನು ಈ ಲೋಹಕ್ಕೆ ಪರಿವರ್ತಿಸಬಹುದಾಗಿರುತ್ತದೆ. ಏಕಲೋಹ ಪ್ರಮಿತಿಯು ಜಗತ್ತಿನ ಅನೇಕ ದೇಶಗಳಲ್ಲಿ ಬಹಳ ಕಾಲದವರೆಗೆ ಅಸ್ತಿತ್ವದಲ್ಲಿತು. ಪ್ರಮುಖವಾಗಿ ಈ ಪದ್ಧತಿಯಲ್ಲಿ ಚಿನ್ನವನ್ನು ವ್ಯಾಪಕವಾಗಿ ಬಳಸಲಾಗಿತ್ತು. ಏಕಲೋಹ ನಾಣ್ಯ ಪ್ರಮಿತಿಯನ್ನು ಬೆಳ್ಳಿ ಪ್ರಮಿತಿ ಮತ್ತು ಸುವರ್ಣ ಪ್ರಮಿತಿ ಎಂದು ಎರಡು ಭಾಗಗಳಾಗಿ ವಿಗಂಡಿಸಬಹುದು.

ಏಕಲೋಹ ಪ್ರಮಿತಿಯ ಗುಣಗಳು

ಏಕಲೋಹ ನಾಣ್ಯ ಪ್ರಮಿತಿಯು ಹಲವಾರು ಗುಣಗಳನ್ನು ಹೊಂದಿದೆ ಅವುಗಳೆಂದರೆ,

೧. ಸರಳತೆ :

ಇದೊಂದು ಸರಳವಾದ ನಾಣ್ಯ ಪ್ರಮಿತಿಯಾಗಿದೆ. ಒಂದೇ ಲೋಹದ ನಾಣ್ಯಗಳು ಚಲಾಣೆಯಲ್ಲಿರುವುದರಿಂದ ಎರಡು ಲೋಹಗಳ ನಡುವೆ ವಿನಿಮಯ ದರವನ್ನು ನಿರ್ಧರಿಸುವ ಅವಶ್ಯಕತೆ ಇರುವುದಿಲ್ಲ.

೨. ಸಾರ್ವಜನಿಕ ವಿಶ್ವಾಸ :

ಈ ಪ್ರಮಿತಿಯಲ್ಲಿ ಪ್ರಧಾನ ನಾಣ್ಯದ ಮೌಲ್ಯವು ಒಂದೇ ಲೋಹದ ಆಧಾರದ ಮೇಲೆ ನಿರ್ಧಾರವಾಗುವುದರಿಂದ ಹಣಕಾಸಿನ ಕಾರ್ಯ ನಿರ್ವಹಣೆಯಲ್ಲಿ ಗೊಂದಲ ಸಂಭವಿಸುವುದಿಲ್ಲ. ಆದ್ದರಿಂದ ಇದು ಸಾರ್ವಜನಿಕರ ವಿಶ್ವಾಸವನ್ನು ಗಳಿಸಲು ಸಾಧ್ಯವಾಗುತ್ತದೆ.

೩. ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಅನುಕೂಲ :

ಏಕಲೋಹ ನಾಣ್ಯ ಪ್ರಮಿತುಯು ಸರಳವಾಗಿ ಯಾವುದೇ ಗೊಂದಲಕ್ಕೀಡುಮಾಡದೇ ಕಾರ್ಯಚರಣೆ ಮಾಡುವುದರಿಂದ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಅನುಕೂಲವಾಗುತ್ತದೆ.

೪. ಗ್ರೇಷಮ್ ರವರ ನಿಯಮ ಅನ್ವಯಿಸುವುದಿಲ್ಲ :

ಏಕಲೋಹ ನಾಣ್ಯ ಪದ್ಧತಿಯಲ್ಲಿ ಒಂದೇ ಲೋಹದ ನಾಣ್ಯಗಳಿರುವುದರಿಂದ ಸಾರ್ವತ್ರಿಕವಾದ ಮತ್ತು ಏಕರೀತಿಯ ಮನ್ನಣೆ ಪಡೆಯುತ್ತದೆ. ಆದರಿಂದ ಗ್ರೇಶಮ್ ರವರ ನಿಯಮ ಅನ್ವಯಿಸುವುದಿಲ್ಲ. ಅಂದರೆ, ಒಂದು ಲೋಹದ ನಾಣ್ಯವು ಇನ್ನೊಂದು ಲೋಹದ ನಾಣ್ಯವನ್ನು ಚಲಾವಣೆಯಿಂದ ಹೊರದೂಡುವ ಅವಕಾಶವಿರುವುದಿಲ್ಲ.

೫. ಸ್ವಯಂ-ನಿಯಂತ್ರಣ :

ಏಕಲೋಹ ನಾಣ್ಯ ಪ್ರಮಿತಿಯು ಸ್ವಯಂ ನಿಯಂತ್ರಿತವಾಗಿದೆ. ಅಂದರೆ ಲೋಹದ ಪೂರೈಕೆಯು ಹೆಚ್ಚಾದಾಗ ಹಣದ ಪೂರೈಕೆಯು ಹೆಚ್ಚಾಗಿ ಹಾಗೂ ತನ್ನಷ್ಟಕ್ಕೆ ತಾನೇ ಹಣದ ಮೌಲ್ಯವು ಇಳಿಯುತಿದ್ದರೆ ಜನರು ಲೋಹದ ನಾಣ್ಯಗಳನ್ನು ಕರಗಿಸಿ, ನಾಣ್ಯಗಳ ಪೂರೈಕೆಯನ್ನು ಕಡಿಮೆ ಮಾಡುತ್ತಾರೆ. ಇದರಿಂದಾಗಿ ಹಣದ ಮೌಲ್ಯವು ಪುನಃ ಹೆಚ್ಚಾಗುತ್ತದೆ.

Forex Money for Exchange in Currency Bank

ಏಕಲೋಹ ನಾಣ್ಯ ಪ್ರಮಿತಿಯ ಅವಗುಣಗಳು

ಏಕಲೋಹ ನಾಣ್ಯ ಪ್ರಮಿತಿಯು ಅನೇಕ ದೋಷಗಳು ಅಥವಾ ಅವಗುಣಗಳನ್ನು ಒಳಗೊಂಡಿದೆ. ಅವುಗಳೆಂದರೆ,

೧. ಎಲ್ಲಾ ರಾಷ್ಟ್ರಗಳು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ :

ಜಗತ್ತಿನ ಎಲ್ಲಾ ರಾಷ್ಟ್ರಗಳು ಏಕಲೋಹ ನಾಣ್ಯ ಪ್ರಮಿತಿಯನ್ನು ಅಂದರೆ ಚಿನ್ನ ಅಥವಾ ಬೆಳ್ಳಿ ಪ್ರಮಿತಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಲೋಹದ ಕೊರತೆ ಸಂಭವಿಸಬಹುದು. ನಾಣ್ಯಗಳ ತಯಾರಿಕೆಗೆ ಒಂದೇ ಲೋಹಕ್ಕೆ ಬೇಡಿಕೆ ಇರುವುದರಿಂದ ಅದರ ನೀಡಿಕೆ ಹೋಲಿಸಿದಂತೆ ಬೇಡಿಕೆಯು ವಿಪರೀತ ಅಧಿಕವಾಗುವ ಸಂಭವವಿರುತ್ತದೆ. ಪರಿಣಾಮವಾಗಿ ಲೋಹದ ಪೂರೈಕೆ ಕಡಿಮೆಯಾಗಿ ಹಣದ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದಾಗಿ ಹಣಕಾಸಿನ ವ್ಯವಸ್ಥೆಯೇ ಕುಸಿದು ಬೀಳುವ ಅಪಾಯವಿರುತ್ತದೆ.

೨. ಸ್ಥಿತಿಸ್ಥಾಪಕತ್ವದ ಕೊರತೆ :

ಒಂದೇ ಲೋಹದ ನಿಧಿಯನ್ನು ಅಧಿಕವಾಗಿ ಹೊಂದಿರಲು ಸಾಧ್ಯವಿಲ್ಲದಿರುವುದರಿಂದ ಹಣಕಾಸಿನ ವ್ಯವಸ್ಥೆಯು ಸ್ಥಿತಿಸ್ಥಾಪಕತ್ವದ ಕೊರತೆಯನ್ನು ಅನುಭವಿಸಬೇಕಾಗುತ್ತದೆ. ಈ ಪದ್ಧತಿಯಲ್ಲಿ ಲೋಹದ ನಿಧಿಯು ಕಡಿಮೆಯಾದರೆ ಹಣದ ಪೂರೈಕೆಯನ್ನು ಅಧಿಕಗೊಳಿಸಲು ಸಾಧ್ಯವೇ ಆಗುವುದಿಲ್ಲ.

೩. ಬೆಲೆಯ ಅಸ್ಥಿರತೆ :

ಈ ಪದ್ಧತಿಯಲ್ಲಿ ಏಕಲೋಹ ನಣ್ಯಗಳು ಚಲಾವಣೆಯಲ್ಲಿದ್ದಾಗ ಆ ಲೋಹದ ಪೂರೈಕೆಯ ಬದಲಾವಣೆಗೆ ತಕ್ಕಂತೆ ಹಣದ ಮೌಲ್ಯದಲ್ಲಿಯೂ ಏರುಪೇರು ಉಂಟಾಗುತ್ತಿರುತ್ತದೆ. ಆದರೆ ಅದರ ಮೌಲ್ಯವನ್ನು ಸ್ಥಿರತೆಗೆ ತರಲು ಇನ್ನೊಂದು ಲೋಹದ ನಾಣ್ಯಗಳಿರುವುದಿಲ್ಲ. ಅದರಿಂದಾಗಿ ಈ ಪ್ರಮಿತಿಯಲ್ಲಿ ಬೆಲೆಯ ಅಸ್ಥಿರತೆ ಉಂಟಾಗುತ್ತದೆ.

೪. ಆರ್ಥಿಕ ಬೆಳವಣಿಗೆಗೆ ಅಡ್ಡಿ :

ಏಕಲೋಹ ನಾಣ್ಯ ಪ್ರಮಿತಿಯು ಸ್ಥಿತಿಸ್ಥಾಪಕತ್ವ ಕೊರತೆಯನ್ನು ಹೊಂದಿರುವುದರಿಂದ ಅಂದರೆ ಅನಮ್ಯವಾಗಿರುತ್ತದೆ. ಅದರಿಂದ ಇದು ಆರ್ಥಿಕ ಬೆಳವಣಿಗೆ ಅಡ್ಡಿಯನ್ನುಂಟು ಮಾಡಬಹುದು.

ಉಲ್ಲೇಖಗಳು[ಬದಲಾಯಿಸಿ]

<reference /> [೧] http://www.vocabulary.com/dictionary/monetary%20standard http://hubpages.com/education/Monetary-Standard-Meaning-and-Types

  1. http://www.forbes.com/sites/norbertmichel/2015/11/17/monetary-policy-devils-are-in-the-details-easy-to-dismiss-ideas-too-quickly/