ಸದಸ್ಯ:Ankitha Varsha/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಮಲ್ ರನಾಡಿವ್
ಜನನ೮ ನವೆಂಬರ್, ೧೯೧೭
ಪೂನೆ,ಮಹಾರಾಷ್ಟ್ರ
ವೃತ್ತಿವಿಜ್ಞಾನಿ
ವಿಷಯಕ್ಯಾನ್ಸರ್ ಹಾಗು ಜೀವಕೋಶ ವೀವವಿಜ್ಞಾನ

ಕಮಲ್ ರನಾಡಿವ್(ಕಮಲ್ ಜಯ್ಸಿಂಗ್ ರನಾಡಿವ್)-(೮ ನವೆಂಬರ್ ೧೯೧೭-೨೦೦೧).ಇವರು ಭಾರತೀಯ ಬಯೊಮೆಡಿಕಲ್ ಸಂಶೋಧಕಿ.ಕ್ಯಾನ್ಸರ್ ಸಂಶೋಧನೆಯಲ್ಲಿ ಪ್ರಸಿದ್ಧರಾದವರು.ಇವರ ಸಂಶೋಧನೆಯು ಕ್ಯಾನ್ಸರ್ ಮತ್ತು ಸೋಂಕುಗಳ(ವೈರಸ್) ನಡುವೆ ಇರುವ ಕೊಂಡಿಗಳ ಬಗ್ಗೆ ಆಗಿತ್ತು.ಕಮಲ್ ಭಾರತೀಯ ಮಹಿಳಾ ವಿಜ್ಞಾನ ಸಂಘದ ಸ್ಥಾಪಕ ಸದಸ್ಯೆಯಾಗಿದ್ದರು.೧೯೬೦ರಲ್ಲಿ ಭಾರತದ ಮೊದಲ ಅಂಗಾಂಶ ಕೃಷಿ ಪ್ರಯೋಗಾಲಯವನ್ನು ಭಾರತೀಯ ಸಂಶೋಧನಾ ಕೇಂದ್ರದಲ್ಲಿ ಸ್ಥಾಪಿಸಿದರು.[೧]

ಬಾಲ್ಯ ಜೀವನ[ಬದಲಾಯಿಸಿ]

ಕಮಲ್ ಅವರು ನವೆಂಬರ್ ೮,೧೯೧೭, ಪೂನೆಯಲ್ಲಿ ಜನಿಸಿದರು.ತಂದೆ ದಿನಕರ್ ದತ್ತಾತ್ರೇಯ ಸಮರ್ಥ್ ಮತ್ತು ತಾಯಿ ಶಾಂತಾಬಾಯಿ ದಿನಕರ್ ಸಮರ್ಥ್.ತಂದೆಯು ಫ಼ರ್ಗೂಸನ್ ಕಾಲೇಜಿನಲ್ಲಿ ಜೀವಶಾಸ್ತ್ರಜ್ಞರಾಗಿದ್ದರು.ಇವರು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಹುಜ಼ರ್ಪಾಗಾದಲ್ಲಿ ಪೂರ್ಣಗೊಳಿಸಿದರು.ಕಮಲ್ರವರ ತಂದೆಯು ಈಕೆಯನ್ನು ಡಾಕ್ಟರನ್ನಾಗಿ ನೋಡಬೇಕು ಮತ್ತು ಡಾಕ್ಟರ್ ವೃತ್ತಿಯಲ್ಲಿ ಇರುವ ಹುಡುಗನೊಡನೆ ವಿವಾಹವಾಗಬೇಕು ಎಂದು ಆಸೆಪಟ್ಟಿದ್ದರು.ಆದರೆ ಕಮಲ್ ಆಯ್ಕೆ ಮಾಡಿಕೊಂಡಿದ್ದು ಬಿ.ಎಸ್ಸಿ-ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ.ಬಿ.ಎಸ್ಸಿಯನ್ನು distinction ಅಂಕಗಳಲ್ಲಿ ತೇರ್ಗಡೆಯಾದರು.ಇದರ ನಂತರ ತಮ್ಮ ಎಮ್.ಎಸ್ಸಿಯನ್ನು ಸೈಟೊಜೆನೆಟಿಕ್ಸ್ ವಿಷಯದಲ್ಲಿ ಪೂರೈಸಿದರು.ನಂತರ ಜೆ.ಡಿ.ರನಾಡಿವ್ ಎಂಬುವವರನ್ನು ೧೯೩೯ರಲ್ಲಿ ವಿವಾಹವಾದರು.ಜೆ.ಡಿ.ರ.ರವರು ಗಣಿತ ತಜ್ಞರಾಗಿದ್ದರು.ವಿವಾಹದ ನಂತರ ಅವರು ಮುಂಬಯಿಗೆ ಸ್ಥಳಾಂತರಿಸಿದರು.ಇಲ್ಲಿ ಅವರು ಟಾಟಾ ಮೆಮೊರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.ಇಲ್ಲಿಯೇ ಕಮಲ್ ತಮ್ಮ ಪಿ.ಎಚ್.ಡಿ(ಸೈಟಾಲಜಿ)ಯನ್ನು ಸಹ ಪ್ರಾರಂಭಿಸಿದರು.ಇದಕ್ಕೆ ಕಮಲ್ರವರಿಗೆ ತಮ್ಮ ತಂದೆ ಮತ್ತು ಪತಿಯಿಂದ ಪೂರ್ಣ ಬೆಂಬಲ ದೊರಕಿತು. ಪಿ.ಎಚ್.ಡಿಯ ವಿಷಯ ಸೈಟಾಲಜಿ ಆಗಿತ್ತು.ಪಿ.ಎಚ್.ಡಿ ಪದವಿಯನ್ನು ಪಡೆಯಲು ಡಾ.ವಿ.ಆರ್.ಖಾನೋಲ್ಕರ್ ರವರ ಸಹಾಯವನ್ನು ಪಡೆದರು. ಪಿ.ಎಚ್.ಡಿ ಮುಗಿಸಿದ ನಂತರ,ಡಾ.ವಿ.ಆರ್.ಖಾನೋಲ್ಕರ್ ರವರ ನೇತೃತ್ವದಿಂದ ಅವರು ತಮ್ಮ ಫೆಲೋಷಿಪ್ ವನ್ನು ಅಮೇರಿಕಾದಲ್ಲಿ ಪೂರ್ಣ ಮಾಡಿದರು.ಪೋಸ್ಟ್-ಡಾಕ್ಟರಲ್ ಫೆಲೋಷಿ‍ಪ್ ವನ್ನು ಅಮ್ಗಾಂಶ ಕೃಷಿ ವಿಷಯದಲ್ಲಿ ಸಂಶೋಧನೆ ಮಾಡಿದರು.ಇವರು ಜಾರ್ಜ್ ಗೇರವರ ಜೊತೆಕೆಲಸ ಮಾಡುವ ಅವಕಾಶ ದೊರಕಿತು.

ವೃತ್ತಿ ಜೀವನ[ಬದಲಾಯಿಸಿ]

ಭಾರತಕ್ಕೆ ವಾಪಸ್ ಮರಳಿದ ಕಮಲ್‍ರವರು,ಐ.ಸಿ.ಆರ್.ಸಿ.ಯಲ್ಲಿ ಹಿರಿಯ ಸಂಶೋಧನಾ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.ಜೀವಶಾಸ್ತ್ರ ಪ್ರಯೋಗಾಲಯ ಮತ್ತು ಅಂಗಾಂಶ ಕೃಷಿ ಪ್ರಯೋಗಾಲಯವನ್ನು ಬಾಂಬೆನಲ್ಲಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.೧೯೬೦ರಲ್ಲಿ,ತಮ್ಮಸಹಾಯಕರ ಜೊತೆಗೆ(ಜೀವಶಾಸ್ತ್ರ) ಮತ್ತು ರಸಾಯನಶಾಸ್ತ್ರ ಕ್ಷೇತ್ರದಲ್ಲಿ,ಅಂಗಾಂಶ ಕೃಷಿ ಮಾಧ್ಯಮವನ್ನು ಮತ್ತು ಶಾರತಗಳನ್ನು ಸೃಷ್ಟಿಸಿದರು.ಇದಲ್ಲದೆ,ಕ್ಯಾನ್ಸರ್,ಜೀವಕೋಶ,ಜೀವವಿಜ್ಞಾನ ಮತ್ತು ಪ್ರತಿರಕ್ಷಾ ಕ್ಷೇತ್ರದಲ್ಲಿ ಸಂಶೋಧನಾ ಘಟಕಗಳನ್ನು ಸ್ಥಾಪಿಸುವುದು ಇವರ ಜವಾಬ್ದಾರಿಯಾಗಿತ್ತು.ಆಕೆಯ ವೃತ್ತಿ ಜೀವನದ ಸಾಧನೆಗಳು ಎಂದರೆ ಲ್ಯೂಕೇಮಿಯಾ,ಸ್ತನ ಕ್ಯಾನ್ಸರ್ ಮತ್ತು ಅನ್ನನಾಳದ ಕ್ಯಾನ್ಸರ್ ರೋಗಗಳ ಕಾರಣಗಳನ್ನು ಹೂಡುಕುವುದಾಗಿತ್ತು.ಇನ್ನೊಂದು ಗಮನಾರ್ಹ ಸಾಧನೆಯೆಂದರೆ,ಕ್ಯಾನ್ಸರ್‍‍‍‍‍ನ ಪ್ರಭಾವಕ್ಕೆ ಒಳಪಡಬಹುದಾದ ಲಿಂಕ್,ಹಾರ್‍‍‍‍ಮೋನ್ಸ್ ಮತ್ತು ಗಡ್ಡೆಯ ವೈರಸ್ ಸಂಬಂಧವನ್ನು ಸ್ಥಾಪಿಸಿದ್ದು.ಕುಷ್ಠರೋಗ ಲಸಿಕೆಯನ್ನು ಇವರು ಕಂಡುಹಿಡಿದರು.ಈಕೆಯ ನಂತರ ಕ್ಯಾನ್ಸರ್ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡುವ ಮಹಿಳೆಯರಿಗೆ ಸ್ಪೂರ್ತಿಯಾದರು,ಮುಖ್ಯವಾಗಿ ಕ್ಯಾನ್ಸರ್ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ.ಇದರಲ್ಲಿ ಒಂದು ಯೋಜನೆಯೂ,'ಇಮ್ಯುನೊಹಿಮೆಟಾಲಜಿ ಇನ್ ಟ್ರೈಬರ್ ರ್ಲೇಟೆಡ್'-ಶಿಶುಗಳ ಅಧ್ಯಯನಕ್ಕೆ ಸಂಬಂಧಿಸಿರುವುದು..[೨]

ವಿಶೇಷ ಅಧ್ಯಯನಗಳು[ಬದಲಾಯಿಸಿ]

ಕಮಲ್‍‍‍‍ರವರು ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವಾಗ,ಅವರು ತಮ್ಮ ಸಂಶೋಧನಾ ಓದಿನ ಬಗ್ಗೆ ವರದಿಯನ್ನು ನೀಡಿದರು.ಅದು 'ಕಂಪೇರಿಟಿವ್ ಮಾರ್ಫಾಲಜಿ ಆಫ್ ಮಾಮರಿ ಗ್ಲಾಂಡ್ಸ್ ಆಫ್ ಫೋರ್ ಸ್ಟ್ರೇನ್ಸ್ ಆಫ್ ಮೈಸ್ ವೇರಿಯಿಂಗ್ ಇನ್ ದೇರ್ ಸಸೆಪ್ಟಿಬಿಲಿಟಿ ಟು ಬ್ರೆಸ್ಟ್ ಕ್ಯಾನ್ಸರ್'.ಫೆಬ್ರವರಿ ೧೯೪೫ರಲ್ಲಿ,ಸ್ತನ ಕ್ಯಾನ್ಸರ್ ಓದಿನ ಬಗ್ಗೆ ವರದಿಯನ್ನು ಒಪ್ಪಿಸಿದರು ಮತ್ತು ಅವರ ತಂಡ ಒಂದು ಪ್ರಮುಖ ಓದಿನಲ್ಲಿ ತಮ್ಮನ್ನು ತೊಡಗಿಸಿಕೊಂಡರು.ಅದೇನೆಂದರೆ,೧೯೮೯ರಲ್ಲಿ ಅಹಮೆದ್‍‍‍ನಗರ್‍‍‍‍ನಲ್ಲಿ ಬುಡಕಟ್ಟು ಮಕ್ಕಳ ಪೌಷ್ಠಿಕಾಂಶದ ಸ್ಥಿತಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿದರು.ಕಮಲ್ ಅಲ್ಲಿನ ಗ್ರಾಮಿಣ ಹಳ್ಳಿಗಳ ಮಹಿಳೆಯರಿಗೆ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಬಗ್ಗೆ ಸಲಹೆಯನ್ನು ಸಹ ನೀಡಿದರು.

ಪ್ರಶಸ್ತಿಗಳು[ಬದಲಾಯಿಸಿ]

  • ಕಮಲ್ ರನಾಡಿವ್‍‍‍ರಾವರಿಗೆ ೧೯೮೨ರಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ 'ಪದ್ಮಭೂಷಣ'ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
  • ಮೆಡಿಕಲ್ ಕೌನ್ಸಿಲ್ ಆಫ್ ಇಡಿಯಾರವರು,೧೯೬೪ರಲ್ಲಿ 'ಪ್ರಥಮ ರಜತ ಮಹೋತ್ಸವ ಸಂಶೋಧನಾ ಪ್ರಶಸ್ತಿ'ಯನ್ನು ನೀಡಿದರು.ಈ ಪ್ರಾಶಸ್ತಿಯು ಬಂಗಾರ ಪದಕ ಮತ್ತು ಹದಿನೈದು ಸಾವಿರ ರುಪಾಯಿ ಹಣವನ್ನು ಒಳಗೊಂಡಿತ್ತು.
  • 'ಜಿ.ಜೆ.ವಾಟುಮುಲ್ ಫೌಂಡೇಶನ್ ಪ್ರಶಸ್ತಿ'-ಸೂಕ್ಷ್ಮ ಜೀವವಿಜ್ಞಾನ.
  • ಇವರು ICRSನ ನಿವೃತ್ತ ವೈದ್ಯಕೀಯ ವಿಜ್ಞಾನಿಯಾಗಿದ್ದರು.

ಲೇಖನಗಳು[ಬದಲಾಯಿಸಿ]

ಕಮಲ್‍ರವರು ಸುಮಾರು ೨೦೦ಕ್ಕೂ ಹೆಚ್ಚುಕ್ಯಾನ್ಸರ್ ಮತ್ತು ಕುಷ್ಠರೋಗಕ್ಕೆ ಸಂಬಂದಿಸಿದ ವೈಜ್ಞಾನಿಕ ಸಂಶೋಧನಾ ದಾಖಲೆಗಳನ್ನು ಪ್ರಕಟಿಸಿದ್ದಾರೆ.ಕೆಲವು ದಾಖಲೆಗಳೇನೆಂದರೆ:

  • 'ಬೀಟಲ್ ಕ್ವಿಡ್ ಚೂಯಿಂಗ್ ಆಂಡ್ ಓರಲ್ ಕ್ಯಾನ್ಸರ್'-ಎಕ್ಸ್ ಪೆರಿಮೆಂಟಲ್ ಸ್ಟಡೀಸ್ ಆನ್ ಹ್ಯಾಮ್‍‍‍‍ಸ್ಟರ್.
  • 'ಎಫೆಕ್ಟ್ ಆಫ್ ಯ್ಯೂರಿಥಾನ್ ಆನ್ ನ್ಯೂಕ್ಲಿಯಿಕ್ ಆಸಿಡ್ಸ್' ಮತ್ತು ಮುಂತಾದವು.

ಉಲ್ಲೇಖಗಳು[ಬದಲಾಯಿಸಿ]

  1. "ಕಮಲ್ ರನಾಡಿವ್‍‍‍‍ರವರ ಜೀವನ".
  2. "ಕಮಲ್ ರನಾಡಿವ್‍‍‍‍ರವರ ವೃತ್ತಿ ಜೀವನ".