ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೬೨
ಗೋಚರ
ಕಥಕ್: ಬಹು ಪ್ರಾಚೀನ ಕಾಲದಿಂದ ಭಾರತದಲ್ಲಿನ ದೇವಾಲಯಗಳಲ್ಲಿ ದೇವತಾ ಪ್ರೀತ್ಯರ್ಥವಾಗಿ ದೇವದಾಸಿಯರಿಂದ ನೆರವೇರುತ್ತಿದ್ದ ನೃತ್ಯಕ್ಕೆ ಕಥಕ್ ಎಂದೂ ಅಂಥ ನೃತ್ಯವನ್ನು ಕಲಿಸಿಕೊಡುತ್ತಿದ್ದ ಒಂದು ವರ್ಗದ ಬ್ರಾಹ್ಮಣ ಉಪಾಧ್ಯಾಯರಿಗೆ ಕಥಕ ಅಥವ ಕಥಿಕ ಎಂದೂ ಹೆಸರಿದೆ. ಉತ್ತರ ಹಿಂದೂಸ್ತಾನದಲ್ಲಿನ ಲಕ್ನೋ ಮತ್ತು ಜಯಪುರಗಳಲ್ಲಿ ಈ ನೃತ್ಯ ಕ್ರಮೇಣ ಅಭಿವೃದ್ಧಿಗೆ ಬಂದು ಪೂಜ್ಯಸ್ಥಾನವನ್ನು ಪಡೆಯಿತಲ್ಲದೆ ಒಂದು ವಿಶಿಷ್ಟ ಸಂಪ್ರದಾಯವಾಗಿ ಬೆಳೆಯಿತು.ಇದಕ್ಕೆ ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ಭಕ್ತಿಪಂಥವೂ ಪ್ರಭಾವ ಬೀರಿತು. ಕಥಕ್ ಎಂಬ ಹೆಸರು ಸಂಸ್ಕೃತದ ಕಥಾ ಎಂಬ ಶಬ್ದದಿಂದ ಬಂದಿದೆ. ಕಥಕ ಎಂದರೆ ಕಥೆ ಹೇಳುವವ ಎಂದು ಅರ್ಥವಿದೆ.ಕಥಕ್ ನೃತ್ಯಕ್ಕೆ ಲಕ್ನೋ,ಜಯಪುರ ಮತ್ತು ವಾರಣಾಸಿ ಘರಾಣಾಗಳು ಮುಖ್ಯವಾಗಿದೆಯಾದರೂ ರಾಯ್ಘರ್ ಘರಾಣವೂ ತನ್ನದೇ ಆದ ಛಾಪು ಮೂಡಿಸಿದೆ. (ಹೆಚ್ಚಿನ ಮಾಹಿತಿ...)