ವಿಷಯಕ್ಕೆ ಹೋಗು

ವಾಸುದೇವ ಬಲವಂತ ಫಡ್ಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಸುದೇವ್ ಬಲವಂತ್ ಫಡ್ಕೆ
ಮುಂಬಯಿ ನಗರದಲ್ಲಿ ವಾಸುದೇವ್ ಬಲವಂತ್ ಫಡ್ಕೆ ಪ್ರತಿಮೆ
Born
ವಾಸುದೇವ್ ಬಲವಂತ್ ಫಡ್ಕೆ

Died17 February 1883(1883-02-17) (aged 37)
Occupationಸ್ವಾತಂತ್ರ್ಯ ಹೋರಾಟಗಾರರು

ವಾಸುದೇವ ಬಲವಂತ ಫಡ್ಕೆ (೪ ನವೆಂಬರ್ ೧೮೪೫ - ೧೭ ಫೆಬ್ರವರಿ ೧೮೮೩) ಒಬ್ಬ ಸ್ವಾತಂತ್ರ್ಯ ಹೋರಾಟಗಾರರು. ಇವರು ಬ್ರಿಟೀಷರ ಅವಧಿಯಲ್ಲಿ ರೈತ ಸಮುದಾಯದ ಸಂಕಷ್ಟವನ್ನು ನೋಡಿ ಮರುಗಿದ್ದರು. ಸ್ವರಾಜ್ಯವೊಂದೇ ಇದಕ್ಕೆಲ್ಲ ಪರಿಹಾರ ಎಂದು ನಂಬಿದ್ದರು. ಮಹಾರಾಷ್ಟ್ರ ರಲ್ಲಿ ಕೊಲಿಸ್, ಭಿಲ್ ಮತ್ತು ಧಾಂಗರ್ ಸಮುದಾಯಗಳ ಸಹಕಾರದಿಂದ ಇವರು ರಮೋಶಿ ಎಂದು ಎಂಬ ಕ್ರಾಂತಿಕಾರಿ ಗುಂಪನ್ನು ರಚಿಸಿದರು. ಈ ಗುಂಪು ಬ್ರಿಟಿಷ್ ರಾಜ್ ಉರುಳಿಸಲು ಸಶಸ್ತ್ರ ಹೋರಾಟದಲ್ಲಿ ಆರಂಭಿಸಿತು. ಗುಂಪು ತಮ್ಮ ವಿಮೋಚನೆಯ ಹೋರಾಟದಲ್ಲಿ ಹಣವನ್ನು ಪಡೆಯಲು ಶ್ರೀಮಂತ ಇಂಗ್ಲೀಷ್ ಉದ್ಯಮಿಗಳು ಮೇಲೆ ದಾಳಿಗಳನ್ನು ಆರಂಭಿಸಿತು. ಈ ರೀತಿಯ ಅನಿರೀಕ್ಷಿತ ದಾಳಿಯ ಸಂದರ್ಭದಲ್ಲಿ ಬ್ರಿಟಿಷ್ ಸೈನಿಕರು ಸಿಕ್ಕಿಬಿದ್ದಾಗ, ಫಡ್ಕೆಯವರು ಪುಣೆ ನಗರವನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡಾಗ ಫಡ್ಕೆಯವರು ಲೋಕಪ್ರಸಿದ್ಧಿ ಪಡೆದರು.

ಆರಂಭಿಕ ವರ್ಷಗಳು

[ಬದಲಾಯಿಸಿ]

ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಪನ್ವೇಲ್ ತಾಲೂಕಿನ ಶಿರ್ಧಾನ್ ಗ್ರಾಮದಲ್ಲಿ ನವೆಂಬರ್ 1845 4 ರಂದು ಜನಿಸಿದರು[]. ಬಾಲ್ಯದಲ್ಲಿ ಅವರು ಪ್ರೌಢಶಾಲಾ ಶಿಕ್ಷಣಕ್ಕಿಂತ ಕುದುರೆ ಸವಾರಿ, ಕುಸ್ತಿ ಮುಂತಾದ ಕಲಿಕಾ ಕೌಶಲಗಳಿಗೆ ಆದ್ಯತೆ ಕೊಟ್ಟು ಶಾಲೆಯನ್ನು ಬಿಟ್ಟರು. ಕೊನೆಗೆ ಪುಣೆಗೆ ತೆರಳಿದರು ಮತ್ತು 15 ವರ್ಷಗಳ ಕಾಲ ಪುಣೆಯಲ್ಲಿ ಮಿಲಿಟರಿ ಖಾತೆ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ನಡೆಸಿದರು. ಕ್ರಾಂತಿವೀರ ಲಹುಜಿ ವಸ್ತದ್ ಸಾಳ್ವೆ, ಆಗಿನ ಕಾಲದ ಪುಣೆ ಮೂಲದ ಪ್ರಮುಖ ಸಾಮಾಜಿಕ ವ್ಯಕ್ತಿಯಾಗಿದ್ದವರು, ಫಡ್ಕೆಯವರ ಗುರುಗಳು. ಸಾಳ್ವೆ, ಪರಿಣಿತ ಕುಸ್ತಿಪಟು, ಒಂದು ಕುಸ್ತಿ ತರಬೇತಿ ಕೇಂದ್ರ ನಿರ್ವಹಿಸುತ್ತಿದ್ದರು. ಸಾಳ್ವೆ ಬ್ರಿಟಿಷ್ ಆಳ್ವಿಕೆಯಲ್ಲಿ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಫಡ್ಕೆಯವರಿಗೆ ವಿವರಿಸಿದರು. ಮಾಂಗ್ (ಒಂದು ಅಸ್ಪೃಶ್ಯ) ಸಮುದಾಯದವರಾಗಿದ್ದ ಸಾಳ್ವೆಯವರು,ಫಡ್ಕೆಯವರಿಗೆ ಹಿಂದುಳಿದ ವರ್ಗಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವಿಕೆಯ ಮಹತ್ವವನ್ನು ತಿಳಿಸಿದರು. ಈ ಅವಧಿಯಲ್ಲಿ ಫಡ್ಕೆಯವರು ಮಹಾದೇವ ಗೋವಿಂದ ರಾನಡೆಯವರ ಉಪನ್ಯಾಸಕ್ಕೆ ಹೋಗಲು ಪ್ರಾರಂಭಿಸಿದರು. ಈ ಉಪನ್ಯಾಸಗಳು ಮುಖ್ಯವಾಗಿ ಬ್ರಿಟಿಷರ ನೀತಿಗಳು ಭಾರತೀಯ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುವುದರ ಕುರಿತಾಗಿತ್ತು. ಈ ನೀತಿ ಯಾವರೀತಿ ಈ ಸಮಾಜದಲ್ಲಿ ವ್ಯಾಪಕ ನೋವು ಹಾಗೂ ಹಾನಿಗೆ ಕಾರಣವಾಗುತ್ತಿದೆ ಎಂದು ಕಂಡುಕೊಂಡ ಫಡ್ಕೆಯವರು ಬಹಳವಾಗಿ ನೊಂದುಕೊಂಡರು. ೧೮೭೦ರಲ್ಲಿ ಅವರು ಪುಣೆಯಲ್ಲಿ ಜನರ ಕುಂದುಕೊರತೆಗಳ ನಿವಾರಣೆಗಳಿಗಾಗಿ ಇರುವ ಸಾಮಾಜಿಕ ಆಂದೋಳನವೊಂದಕ್ಕೆ ಸೇರಿಕೊಂಡರು. ಫಡ್ಕೆಯವರು ಐಕ್ಯ ವರ್ಧಿನಿ ಸಭಾ ಎಂಬ ಸಂಸ್ಠೆಯೊಂದನ್ನು, ಯುವಕರಿಗೆ ಶಿಕ್ಷಣ ಕೊಡುವ ಸಲುವಾಗಿ ಪ್ರಾರಂಭಿಸಿದರು. ಇವರು ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದಾಗ, ರಜೆ ಅನುಮೋದನೆ ವಿಳಂಬದ ಕಾರಣದಿಂದ ತನ್ನ ಸಾಯುತ್ತಿರುವ ತಾಯಿಯವರನ್ನು ನೋಡಲು ಸಾಧ್ಯವಾಗಲಿಲ್ಲ. ಈ ಘಟನೆ ಫಡ್ಕೆಯವರನ್ನು ಕೆರಳಿಸಿತು ಮತ್ತು ಅವರ ಜೀವನ ಪ್ರಮುಖ ತಿರುವು ಪಡೆಯಲು ಕಾರಣವಾಯಿತು.

೧೮೭೫ರಲ್ಲಿ, ಆಗಿನ ಬರೋಡಾದ ಗಾಯಕ್ವಾಡ್ ರಾಜನನ್ನು ಬ್ರಿಟೀಷರು ಪದಚ್ಯುತಗೊಳಿಸಿದ ನಂತರ, ಫಡ್ಕೆ ಸರ್ಕಾರದ ವಿರುದ್ಧ ಪ್ರತಿಭಟನೆ ಭಾಷಣಗಳನ್ನು ಬಿಡುಗಡೆ ಮಾಡಿದರು. ಭೀಕರ ಬರಗಾಲ ಹಾಗೂ ಬ್ರಿಟಿಷ್ ಆಡಳಿತದ ಸ್ಪಷ್ಟವಾದ ನಿರಾಸಕ್ತಿ ಇವರನ್ನು ಒಂದು ಸ್ವತಂತ್ರ ಗಣರಾಜ್ಯಕ್ಕಾಗಿ ಶ್ರಮಿಸಬೇಕೆಂದು ಪ್ರೇರೇಪಿಸಿತು. ಇದಕ್ಕಾಗಿ ಅವರು ಡೆಕ್ಕನ್ ಪ್ರದೇಶದ ಪ್ರವಾಸ ಕೈಗೊಂಡರು. ಸುಶಿಕ್ಷಿತರ ಬೆಂಬಲವನ್ನು ಪಡೆಯಲು ಸಾಧ್ಯವಾಗದೇ, ರಮೋಶಿ ಜಾತಿ ಜನರ ಗುಂಪನ್ನು ಕಟ್ಟಿದರು. ಕೋಲಿಸ್, ಭಿಲ್ ಯೋಧರು ಮತ್ತು ಧಾಂಗರ್ ಜನರನ್ನು ಈ ಗುಂಪಿಗೆ ನಂತರ ಸೇರಿಸಲಾಯಿತು. ಅವರು, ಸವಾರಿ, ಕತ್ತಿವರಸೆ ಮತ್ತು ಶೂಟಿಂಗ್ ಗಳನ್ನು ತಾವೇ ಸ್ವತಃ ಕಲಿತುಕೊಂಡಿದ್ದರು. ಅವರು ಬ್ರಿಟಿಶ್ ಆಡಳಿತದಿಂದ ಭಾರತದ ವಿಮೋಚನೆಯನ್ನು ಗುರಿಯಾಗಿಟ್ಟುಕೊಂಡು, ೩೦೦ ಪುರುಷರ ಬಂಡಾಯಗಾರರ ಗುಂಪನ್ನು ಆಯೋಜಿಸಿದರು. ಫಡ್ಕೆಯವರಿಗೆ ತಮ್ಮದೇ ಆದ ಸೈನ್ಯವೊಂದನ್ನು ಕಟ್ಟುವ ಯೊಜನೆಯಿತ್ತು. ಆದರೆ ಹಣದ ಕೊರತೆಯಿಂದಾಗಿ ಸರ್ಕಾರಿ ಖಜಾನೆಗಳನ್ನು ಲೂಟಿ ಮಾಡುವ ಕಾರ್ಯ ಪ್ರಾರಂಭಿಸಿದರು ಹಾಗೂ ಹೀಗೆ ಸಂಗ್ರಹವಾದ ಹಣವನ್ನು ಬರ ಪೀಡಿತ ಹಳ್ಳಿಗಳ ಸಹಾಯಕ್ಕಾಗಿ ವಿನಿಯೋಗಿಸುತ್ತಿದ್ದರು. ಅವರ ಈ ಕಾರ್ಯ ಅವರಿಗೆ ಡಕಾಯಿತ ಎಂಬ ಹಣೆಪಟ್ಟಿ ಬರಲು ಕಾರಣವಾಯಿತು ಹಾಗೂ ತಲೆಮರೆಸಿಕೊಂಡು ಹಳ್ಳಿ ಹಳ್ಳಿ ತಿರುಗುವಂತಾಯಿತು. ಅದಾಗ್ಯೂ ಇವರಿಗೆ ಸವಾಜದ ಕೆಳವರ್ಗದ ಜನರ ಸಹಕಾರ ಹಾಗೂ ಆಶ್ರಯ ದೊರಕಿತು.

ಏತನ್ಮಧ್ಯೆ. ಫಡ್ಕೆಯವರ ಮುಖ್ಯ ಬೆಂಬಲಿಗರಾಗಿದ್ದ ರಾಮೋಶಿ ನಾಯಕ, ದೌಲತ್ರಾವ್ ನಾಯಕ್, ಕೊಂಕಣ ಪ್ರದೇಶಕ್ಕೆ ತೆರಳಿದರು. ಅಲ್ಲಿ ಅವರು ಪಲಾಪ್ಸೆ ಮತ್ತು ಚಿಕಲಿಯಲ್ಲಿ ಧಾಳಿ ಮಾಡಿ ಸುಮಾರು ೧.೫ ಲಕ್ಷ ರೂ ಗಳನ್ನು ಲೂಟಿ ಮಾಡಿದರು. ಆದರೆ ಘಾಟ್ ಮಾತಾ ಕಡೆಗೆ ಹಿಂದಿರುಗುತ್ತಿರುವಾಗ, ಮೇಜರ್ ಡೇನಿಯಲ್ ನಾಯಕ್ ರನ್ನು ಗುಂಡಿಕ್ಕಿ ಕೊಂದನು. ಈ ಘಟನೆ ಫಡ್ಕೆ ಯವರ ಹೋರಾಟವನ್ನು ಹಿಮ್ಮೆಟ್ಟಿಸಿತು. ಬೆಂಬಲ ನಷ್ಟದಿಂದಾಗಿ ಫಡ್ಕೆಯವರು ದಕ್ಷಿಣದ ಶ್ರೀ ಶೈಲ ಮಲ್ಲಿಕಾರ್ಜುನ ಕ್ಷೇತ್ರದ ಕಡೆಗೆ ಹೋಗುವಂತಾಯಿತು. ನಂತರ, ಫಡ್ಕೆ ಒಂದು ತಾಜಾ ಹೋರಾಟವನ್ನು ಪ್ರಾರಂಭಿಸುವುದಕ್ಕಾಗಿ ೫೦೦ ರೋಹಿಲ್ ಜನರನ್ನು ನಿಯವಿಸಿದರು.[]

ಸೆರೆ ಹಿಡಿಯುವಿಕೆ ಮತ್ತು ಸಾವು

[ಬದಲಾಯಿಸಿ]

ಫಡ್ಕೆಯವರ ಬ್ರಿಟೀಷರ ವಿರುದ್ದ್ರ ಏಕಕಾಲದಲ್ಲಿ ಹಲವಾರು ರಾಷ್ಟ್ರವ್ಯಾಪಿ ಧಾಳಿಗಳನ್ನು ಮಾಡುವ ಯೋಜನೆ ಬಹಳ ಸೀಮಿತ ಯಶಸ್ಸು ಕಂಡಿತು. ಸರ್ಕಾರವೂ ಇವರನ್ನು ಹಿಡಿದು ಕೊಡುವವರಿಗೆ ಬಹುಮಾನ ಕೊಡುವುದಾಗಿಯೂ ಘೊಷಿಸಿತು. ಇದಕ್ಕೆ ಪ್ರತಿಯಾಗಿ ಫಡ್ಕೆಯವರು ಬಾಂಬೆ ಗವರ್ನರ್ ರನ್ನು ಹಿಡಿದು ತಂದರೆ ತಾವೂ ಬಹುವಾನ ಕೊಡುವುದಾಗಿ ಘೊಷಿಸಿದರು. ಇದಲ್ಲದೇ ಪ್ರತಿ ಯೂರೋಪಿಯನ್ನರನ್ನು ಕೊಂದರೂ, ಬಹುವಾನ ಕೊಡುವುದಾಗಿ ಘೊಷಿಸಿದರು ಇದಲ್ಲದೇ ಸರ್ಕಾರಕ್ಕೆ ಇತರ ಬೆದರಿಕೆಗಳನ್ನು ಹೊರಡಿಸಿದರು. ಅವರು ನಂತರ ತಮ್ಮ ಸಂಘಟನೆಗೆ ರೋಹಿಲ್ಲ ಮತ್ತು ಅರಬ್ಬರನ್ನು ಸೇರಿಸಿಕೊಳ್ಳಲು ಹೈದರಾಬಾದ್ ರಾಜ್ಯಕ್ಕೆ ಪಲಾಯನ ಮಾಡಿದರು. ಬಹುಮಾನದ ಅಸೆಗಾಗಿ ಯಾರೋ ದ್ರೋಹ ಬಗೆದಿದ್ದರಿಂದ ಪಡ್ಕೆಯವರು ಪಂಢರಪುರಕ್ಕೆ ಹೊರಟಿರುವಾಗ ಸೆರೆ ಸಿಗುವಂತಾಯಿತು. ಇಲ್ಲಿಂದ ಅವರನ್ನು ಪುಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಯಿತು. ಗಣೇಶ್ ವಾಸುದೇವ ಜೋಶಿ ಇವರ ಪರವಾದ ವಕೀಲರಾಗಿದ್ದರು. ಫಡ್ಕೆಯವರು ಹಾಗೂ ಇವರ ಸೆರೆಸಿಕ್ಕ ಸಹಚರರನ್ನು ಜಿಲ್ಲಾ ಅಧಿವೇಶನ ನ್ಯಾಯಾಲಯದ ಜೈಲು ಕಟ್ಟಡದಲ್ಲಿ ಬಂಧಿಸಿಡಲಾಗಿತ್ತು. ಫಡ್ಕೆ ಯವರ ಡೈರಿಯಲ್ಲಿ ಅವರೇ ತಮಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತೆಂದು ಉಲ್ಲೇಖಿಸಿದ್ದಾರೆ. ಫಡ್ಕೆಯವರನ್ನು ಅಡೆನ್ ನ ಜೈಲಿಗೆ ಸಾಗಿಸಲಾಯಿತು. ಆದರೆ ಜೈಲಿನಿಂದ ಇವರು ತಪ್ಪಿಸಿಕೊಂಡರೂ, ಅಲ್ಪಕಾಲದಲ್ಲೇ ಪುನಹ ಸೆರೆಸಿಕ್ಕಿದರು. ಇವರನ್ನು ಪುನಹ ಜೈಲಿಗೆ ಹಾಕಲಾಯಿತು. ನಂತರ ಇವರು ಪ್ರತಿಭಟನೆ ಉಪವಾಸ ಪ್ರಾರಂಭಿಸಿದ್ದರ ಪರಿಣಾಮವಾಗಿ 17 ಫೆಬ್ರವರಿ 1883 ರಂದು ತಮ್ಮ ಕೊನೆಯ ಉಸಿರನ್ನೆಳೆದರು.[]

ಉಲ್ಲೇಖಗಳು

[ಬದಲಾಯಿಸಿ]
  1. ವಿಜಯ ಕರ್ನಾಟಕದ ಲೇಖನ
  2. https://hindi.thebetterindia.com/8544/freedom-fighter-vasudev-balwant-phadke/
  3. indiatoday.in/education-today/gk-current-affairs/story/vasudev-balwant-phadke-309119-2016-02-17