ನಿಕಿತ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಕಿತ ಸಿಂಗ್

ನಿಕಿತ ಸಿಂಗ್ ಭಾರತೀಯ ಕಾದಂಬರಿಗಾರ್ತಿ. ಇವರು ಅಕ್ಟೋಬರ್ ೬,೧೯೯೧ ರಂದು ಪಟ್ಣ, ಬಿಹಾರ್ ಎಂಬಲ್ಲಿ ಜನಿಸಿದರು.

ಆರಂಭಿಕ ಜೀವನ ಮತ್ತು ವೃತ್ತಿಜೀವನ[ಬದಲಾಯಿಸಿ]

ತನ್ನ ಜೀವನದ ಮೊದಲ ನಾಲ್ಕು ವರ್ಷಗಳ ಕಾಲ ಪಟ್ಣದಲ್ಲಿದ್ದು. ನಂತರ ಅವರು ಪ್ರಾಥಮಿಕ ಶಿಕ್ಷಣಗೋಸ್ಕರ ಇಂಡೋರ್ ಸ್ಥಳಾಂತರಗೊಂಡರು. ಅವರು ೨೦೦೮ರಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಬ್ರಿಡ್ಜ್ ಫೊರ್ಡ್ ಸ್ಕೂಲ್, ರಾಂಚಿಯಲ್ಲಿ ಮುಗಿಸಿದರು. ೨೦೧೨ ರಲ್ಲಿ ಆಕ್ರೊಪೊಲಿಸ್ ಔಷಧೀಯ ಶಿಕ್ಷಣ ಮತ್ತು ಸಂಶೋಧನೆ ಔಷಧಾಲಯದಲ್ಲೇ ಪದವಿದಾರರಾದರು. ಅವರು ೨೦೧೧ ರಲ್ಲಿ ಪೆಂಗ್ವಿನ್ ಬುಕ್ಸ್ ಇಂಡಿಯಾರವರೊಂದಿಗೆ ಒಪ್ಪಂದಕ್ಕೆ ಸೇರಿದರು ಮತ್ತು ಗ್ರೇಪ್ ವೈನ್ ಇಂಡಿಯಾ ಪಬ್ಲಿಷರ್ಸ ಎಂಬ ಕಂಪೆನಿಗೆ ಸೇರಿದರು.

ಅವರು ೧೯ನೇ ವಯಸ್ಸಿನಲ್ಲಿ ಔಷಧೀಯ ಶಿಕ್ಷಣ ಓದುವಾಗ ತನ್ನ ಮೊದಲ ಪುಸ್ತಕ 'ಲವ್ @ ಫೇಸ್ಬುಕ್ ಬರೆದರು. ಲವ್ @ ಫೇಸ್ಬುಕ್ ಒಂದು ಯುವ ವಯಸ್ಕರ ಪುಸ್ತಕ, ಹತ್ತೊಂಬತ್ತು ವರ್ಷದ ಹುಡುಗಿ ಒಬ್ಬ VJಯ ಪ್ರೇಮಪಾಶದಲ್ಲಿ ಸಿಲುಕುತ್ತಾಳೆ.

ಕಲ್ಪಿತ ಹೆಸರಾದ ಸಿದ್ಧಾರ್ಥ ಒಬೆರಾಯ್ ಅಡಿಯಲ್ಲಿ ತಮ್ಮ ಬ್ಯಾಕ್‍ಬೆಂಚರ್ಸ್ ಪುಸ್ತಕ ಸರಣಿಗೆ ಎರಡನೆ ಪುಸ್ತಕವನ್ನು ಬರೆದಿದ್ದಾಳೆ. ೨೦೧೩ರಲ್ಲಿ ಲೈವ್ ಭಾರತದ ಯುವ ಸಾಧಕರ ಪ್ರಶಸ್ತಿ ಪಡೆದರು.