ಬೇಗೂರು
ಬೇಗೂರು | |
ರಾಜ್ಯ - ಜಿಲ್ಲೆ |
ಕರ್ನಾಟಕ - ಬೆಂಗಳೂರು |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - 700 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
ಮೂವತ್ತೈದು ಸಾವಿರಕ್ಕೂ ಹೆಚ್ಚು ಜನ - /ಚದರ ಕಿ.ಮಿ. |
ಭಾರತ ದೇಶದ ಕರ್ನಾಟಕದಲ್ಲಿನ ಬೆಂಗಳೂರು ನಗರದ ಒಂದು ನಗರವೇ ಬೇಗೂರು ಇದಕ್ಕೆ ಮತ್ತೊಂದು ಹಳೆಯ ಹೆಸರು "ನಿಂಗಾಪುರ". ಇದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿದೆ. ಇದು ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಬರುತ್ತದೆ. ಇದು ಪಾಶ್ಚಾತ್ಯ ಗಂಗ ರಾಜವಂಶದ ನಂತರ ಚೋಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಪ್ರಮುಖ ಸ್ಥಾನ ಎಂದು ಹೇಳಲಾಗುತ್ತದೆ.ಒಂದು ಟ್ಯಾಂಕ್ ಮತ್ತು ಒಂದು ಸುಂದರ ದೇವಾಲಯ (ನಾಗೇಶ್ವರ ದೇವಸ್ಥಾನ) ಬಹುತೇಕ ಸರಿ ಸುಮಾರು ಸಾವಿರದ ನೂರ ರಿಂದ ಸಾವಿರದ ಐನೂರು ವರ್ಷಗಳ ಹಿಂದಿನ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಸ್ವಲ್ಪವೇ ದೂರದಲ್ಲಿರುವ ಮುರಿದಿರುವ ಹಳೆಯ ಮಣ್ಣಿನ ಕೋಟೆಯು ಕಾಶಿವಿಶ್ವೇಶ್ವರ ದೇವಾಲಯವಾಗಿತ್ತು. ಇಲ್ಲಿನ ನಾಗೇಶ್ವರ ದೇವಸ್ತಾನವು ಈ ದೇವಸ್ಥಾನವು ೮ ನೇ ಶತಮಾನದಲ್ಲಿ ತಲಕಾಡಿನ ಗಂಗರಾಜರು ತಂಜಾಪೂರಿನ ಚೋಳ ಮಹಾರಾಜ ರಿಂದ ನಿಮಿ೯ಸಿರುವುದು ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ ೧೧೦೦ವರ್ಷಗಳ ಹಿಂದಿನಿಂದ ಇದೆ. ಶಿವರಾತ್ರಿ ಅಂದು ಇಲ್ಲಿ ಜಾತ್ರೆ ನಡೆಯುತ್ತದೆ.ಕೆ ಆರ್ ಮಾರ್ಕೆಟ್ , ಕೆಂಪೇ ಗೌಡ ಬಸ್ ನಿಲ್ದಾಣ ,ಶಿವಾಜಿನಗರ ದಿಂದ ನೇರ ಬಸ್ ಸೌಲಭ್ಯವಿದೆ
ಬೇಗೂರು ದೇವಸ್ಥಾನಗಳು
[ಬದಲಾಯಿಸಿ]೧.ಶ್ರೀ ಪಾರ್ವತಿ ಸಮೇತ ನಾಗೇಶ್ವರ ಸ್ವಾಮಿ ದೇವಸ್ಥಾನ
೨.ಶ್ರೀ ಕೋಟೆ ಕಾಶಿವಿಶ್ವೇಶ್ವರ ಸ್ವಾಮಿ ದೇವಸ್ಥಾನ
೩.ಶ್ರೀ ಗಂಗಾ ಪರಮೇಶ್ವರಿ ದೇವಾಲಯ
೪.ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ
೫.ಶ್ರೀ ಚೌಡೇಶ್ವರಿ ದೇವಿ ದೇವಾಲಯದ
೬.ಶ್ರೀ ಸಪ್ತ ಮಾತೃಕೆಯರ ಸಮೇತ ಶ್ರೀ ಕಂಭದರಾಯ ಸ್ವಾಮಿ ಮತ್ತು ಕರಗದಮ್ಮ ದೇವಸ್ಥಾನ
೭.ಶ್ರೀ ವೀರ ಭದ್ರೇಶ್ವರ ದೇವಾಲಯದ
೮.ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ
೯.ಶ್ರೀ ಪಿಳೇಕಮ್ಮ ದೇವಿ ದೇವಸ್ಥಾನ
೧೦.ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ
೧೧.ಶ್ರೀ ಕಾಟಮರಾಯ ಸ್ಬಾಮಿ ದೇವಸ್ಥಾನ
೧೨.ಕೊರವಂಜಯಮ್ಮ ದೇವಿ ದೇವಸ್ಥಾನ
೧೩.ಶ್ರೀ ಮಾರಮ ದೇವಿ ದೇವಸ್ಥಾನ
೧೪.ಶ್ರೀ ಸಪಲಮ್ಮ ದೇವಿ ದೇವಸ್ಥಾನ
೧೫.ಅಮ್ಮಣಮ್ಮ ದೇವಿ ದೇವಸ್ಥಾನ
೧೬.ಶ್ರೀ ಗಣಪತಿ ದೇವಸ್ಥಾನ
೧೭.ಶ್ರೀ ಬಸವಣ್ಣ ಸ್ವಾಮಿ ದೇವಸ್ಥಾನ