ವಿಷಯಕ್ಕೆ ಹೋಗು

ಸುಂದರ್ ಪಿಚೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಲೇಖನ
( ಯಾವುದೇ ವ್ಯತ್ಯಾಸವಿಲ್ಲ )

೧೮:೫೩, ೧೨ ಆಗಸ್ಟ್ ೨೦೧೫ ನಂತೆ ಪರಿಷ್ಕರಣೆ

ಸುಂದರ್ ಪಿಚೈ
ಜನನ
Pichai Sundararajan

(1972-07-12) ೧೨ ಜುಲೈ ೧೯೭೨ (ವಯಸ್ಸು ೫೨)
ರಾಷ್ಟ್ರೀಯತೆIndian[]
ನಾಗರಿಕತೆUnited States []
ವಿದ್ಯಾಭ್ಯಾಸB.Tech., M.S., M.B.A.
ಶಿಕ್ಷಣ ಸಂಸ್ಥೆIIT Kharagpur
Stanford University
Wharton School of the University of Pennsylvania
ಉದ್ಯೋಗದಾತGoogle Inc.
ಸಂಗಾತಿAnjali Pichai

ಪಿಚೈ ಸುಂದರರಾಜನ್ ಅಥವಾ ಹೆಚ್ಚು ಪರಿಚಿತವಾಗಿ ಸುಂದರ್ ಪಿಚೈ ಮಾಹಿತಿ ತಂತ್ರಜ್ಞಾನದ ಕಾರ್ಯನಿರ್ವಹಣಾಧಿಕಾರಿ.[][][] ಇವರು ಈಗ ಪ್ರಸಿದ್ಧ ಗೂಗಲ್ ಸಂಸ್ಥೆಯ ಮುಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.[]

ಬಾಲ್ಯ ಮತ್ತು ವಿದ್ಯಾಭ್ಯಾಸ

ಪಿಚೈ ಮದ್ರಾಸಿನಲ್ಲಿ೧೯೭೨ರಲ್ಲಿ ಜನಿಸಿದರು.[] ತಂದೆ ರಘುನಾಥ ಪಿಚೈ ಬ್ರಿಟಿಷ್ ಕಂಪನಿ ಜಿ.ಇ.ಸಿ ಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು.[][][೧೦] ಪಿಚೈ ಮದ್ರಾಸಿನಲ್ಲಿ ತನ್ನ ಬಾಲ್ಯ ಹಾಗೂ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಉನ್ನತ ವ್ಯಾಸಂಗಕ್ಕಾಗಿ ಖರಗ್‌ಪುರಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸೇರಿದರು[೧೧].ಅಲ್ಲಿಂದ ಮುಂದೆ ಹೆಚ್ಚಿನ ವ್ಯಾಸಂಗಕ್ಕಾಗಿ ಪ್ರಸಿದ್ಧ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯವನ್ನು ಆಯ್ದುಕೊಂಡು ಅಲ್ಲಿ ಎಮ್.ಎಸ್. ಪದವಿಯನ್ನು ಪಡೆದರು. ಎಮ್.ಬಿ.ಎ ಪದವಿಯನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಸಿದ್ಧ ವಾರ್ಟನ್ ಸ್ಕೂಲ್‍ನಲ್ಲಿ ಪಡೆದರು[೧೨].ಅಲ್ಲಿ ಅವರು ಸಿಬೆಲ್ ಸ್ಕಾಲರ್[೧೩][೧೪] ಹಾಗೂ ಪಾಲ್ಮರ್ ಸ್ಕಾಲರ್ ಆಗಿ ಆಯ್ಕೆಯಾಗಿದ್ದರು. ಮೆಕಿನ್ಸೆ ಮತ್ತು ಕಂಪನಿ ಸಂಸ್ಥೆಯಲ್ಲಿ ತಂತ್ರಜ್ಞಾನ ಮತ್ತು ಉತ್ಪನ್ನ ನಿರ್ವಹಣಾಧಿಕಾರಿಯಾಗಿ ತನ್ನ ವೃತ್ತಿ ಬದುಕನ್ನು ಪ್ರಾರಂಭಿಸಿದರು.[೧೫]

ಗೂಗಲ್ ಸಂಸ್ಥೆಯಲ್ಲಿ

ಪಿಚೈ ೨೦೦೪ರಲ್ಲಿ ಗೂಗಲ್ ಸಂಸ್ಥೆಯನ್ನು ಉತ್ಪನ್ನ ನಿರ್ವಹಣಾಧಿಕಾರಿಯಾಗಿ ಸೇರಿದರು. ಅಲ್ಲಿ ಅವರು ಉತ್ಪನ್ನ ನಿರ್ವಹಣೆಯೊಂದಿಗೆ ಗ್ರಾಹಕ ತಂತ್ರಾಂಶಗಳ ನಾವೀನ್ಯತೆಯ ಗುಂಪನ್ನು ಮುನ್ನಡೆಸುವುದರೊಂದಿಗೆ[೧೬] ,ಗೂಗಲ್ ಕ್ರೋಮ್ ಮತ್ತು ಕ್ರೋಮ್ ಒ.ಎಸ್ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.ಜಿಮೈಲ್ ಮತ್ತು ಗೂಗಲ್ ಮ್ಯಾಪ್ ಮುಂತಾದ ತಂತ್ರಾಂಶಗಳ ಅಭಿವೃದ್ಧಿಯಲ್ಲೂ ಇವರ ಮೇಲ್ವಿಚಾರಣೆ ಇದೆ..[೧೭][೧೮] ೨೪ ಒಕ್ಟೋಬರ್ ೨೦೧೪ರಂದು ಇವರು ಉತ್ಪನ್ನಗಳ ಮುಖ್ಯಸ್ಥರಾಗಿ ಈಗಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಲಾರಿ ಪೇಜ್‍ರಿಂದ ನೇಮಿಸಲ್ಪಟ್ಟರು[][೧೯].೧೦,ಆಗಸ್ಟ್ ೨೦೧೫ರಂದು ಇವರು ಮುಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾದರು[] .ಇವರು ಗೂಗಲ್ ಸಮೂಹದಲ್ಲಿ ಹೊಸ ಮಾತೃಸಂಸ್ಥೆಯಾಗಲಿರುವ ಆಲ್ಫಬೆಟ್ನ ಸ್ಥಾಪನೆಯ ನಂತರ ತನ್ನ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.

ಉಲ್ಲೇಖಗಳು

  1. "Sundar Pichai, biography". 11 August 2015.
  2. Ghosh, Anirvan. "9 Most Prominent Indian-Americans In Silicon Valley". The Huffington Post. Retrieved 11 August 2015.
  3. "Google's Sundar Pichai too in race to head Microsoft?". Times of India. 2 February 2014. Retrieved 4 February 2014.
  4. "Sundar Pichai; man who runs Chrome at Google". Siliconindia.com. 12 May 2011. Retrieved 15 November 2012.
  5. "More Intresting Facts about Pichai Sundararajan". TNP LIVE. Hyderabad, India. 11 August 2015.
  6. ೬.೦ ೬.೧ ೬.೨ "G is for Google". Official Google Blog.
  7. "Sundar Pichai and the world of Indian CEOs".
  8. "Ten things about Sundar Pichai". dailyo.in. 11 August 2015.
  9. "Sundar Pichai – An Inspiring Migrant Story". Y- AXIS. 11 August 2015.
  10. "Sundar Pichai, the man who runs Android". The Indian Express. 11 August 2015.
  11. "Chennai's Sundar Pichai is dark horse". indiatimes.com.
  12. "The rise and rise of Sundar Pichai".
  13. Siebel Scholars. Siebel Scholars. Retrieved on 23 August 2013.
  14. Cooper, Charles (13 March 2013). "Sundar Pichai:Seven prominent Indian-origin people in global IT world". CNET. Retrieved 14 March 2013.
  15. Thoppil, Dhanya Ann (14 March 2013). "Who Is Google Android's Sundar Pichai?". The Wall Street Journal. Retrieved 29 April 2014.
  16. Lee, Dave (11 August 2015). "Sundar Pichai: Google's new boss from humble roots". BBC. Retrieved 11 August 2015.
  17. Cooper, Charles (13 March 2013). "Meet Google's new Android chief Sundar Pichai". CNET. Retrieved 14 March 2013.
  18. Cooper, Charles (13 March 2013). "Sundar Pichai: The man Google, Twitter fought for". CNET. Retrieved 14 March 2013.
  19. "Official Google Blog: G is for Google". Official Google Blog.

ಬಾಹ್ಯ ಸಂಪರ್ಕಗಳು