ವಿಷಯಕ್ಕೆ ಹೋಗು

ಸೈರಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(English: Wild, carefree, independent) ಸೈರಾಟ್,[] ೨೦೧೬ ರಲ್ಲಿ ಭಾರತದಲ್ಲಿ ಮರಾಠಿ ಭಾಷೆಯಲ್ಲಿ ನಿರ್ಮಿಸಿದ ಅಮರ ಪ್ರೇಮಕಥೆಯನ್ನು ಆಧರಿಸಿದ ಚಲನಚಿತ್ರ.ಇದರಲ್ಲಿ ರಿಂಕು ರಾಜ್ಗುರು, ಮತ್ತು ಆಕಾಶ್ ಠೋಸ್ ನಾಯಕಿ,ನಾಯಕಯ ಪಾತ್ರಗಳಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ.ನಾಗ್ರಾಜ್ ಮಂಜುಳೆಯವರು ನಿರ್ದೇಶಕರಾಗಿದ್ದಾರೆ. ಮಂಜುಳೆಯವರು ನಿತಿನ್ ಕೇಣಿ ಮತ್ತು ನಿಖಿಲ್ ಸಾನೆಯವರ ಜೊತೆಸೇರಿ ಆಟ್ಪಾಟ್ ಲಾಂಛನ ದಡಿಯಲ್ಲಿ, ಝೀ ಸ್ಟುಡಿಯೋಸ್ ಮತ್ತು ಎಸ್ಸೆಲ್ ವಿಷನ್ ಪ್ರೊಡಕ್ಷನ್ ನೆರವಿನಿನಲ್ಲಿ ಈ ಚಿತ್ರದ ನಿರ್ಮಾಪಕತ್ವವನ್ನೂ ವಹಿಸಿದ್ದಾರೆ.ಫೆಬ್ರವರಿ ೨೦೧೫ ರಲ್ಲಿ ಆರಂಭವಾದ ಚಿತ್ರೀಕರಣ ಮುಗಿದು,ಬಿಡುಗಡೆಯಾಗಿದ್ದು ಮೇ,೨೦೧೫. ಇಂಗ್ಲೀಷ್ ಸಬ್ ಟೈಟಲ್ಸೊಳಗೊಂಡ ಚಿತ್ರ, ಮಹಾರಾಷ್ಟ್ರ,ಗುಜರಾತ್, ಗೋವ, ಮಧ್ಯ ಪ್ರದೇಶ, ಕಲ್ಕತ್ತಾ, ಕರ್ನಾಟಕ, ತೆಲಂಗಾಣ ಸೇರಿದಂತೆ ದೇಶಾದ್ಯಂತ ೪೫೦ ಕ್ಕೂ ಮಿಗಿಲಾದ ಥಿಯೇಟರ್ ಗಳಲ್ಲಿ ಪ್ರದರ್ಶನ ಕಂಡಿತು. ಜನರ ಒತ್ತಾಯದ ಮೇರೆಗೆ, ೨ ಹೆಚ್ಚುವರಿ ಶೋ ನಡೆಸಲು ಮಧ್ಯರಾತ್ರಿ, ಮತ್ತು ಬೆಳಗಿನ ಜಾವ ೩ ಗಂಟೆಗೆ ರಹಿಮತ್ಪುರದ ಖಾಸಗಿ ಸಭಾಂಗಣವೊಂದರಲ್ಲಿ ಆಯೋಜಿಸಲಾಯಿತು. ಸತಾರ ಜಿಲ್ಲೆಯ ೨೦೦ ಥಿಯೇಟರ್ ಗಳಲ್ಲಿ ಬಿಡುಗಡೆಯಾಯಿತು. ಭಾರತದ ವಿವಿಧೆಡೆಗಳಲ್ಲಿ (ಮಹಾರಾಷ್ಟ್ರದ ಹೊರಗೆ) ಇಂಗ್ಲೀಷ್ ಸಬ್ ಟೈಟಲ್ಸ್ ನೊಂದಿಗೆ ಬಿಡುಗಡೆಯಾಯಿತು.'ಯುನೈಟೆಡ್ ಅರಬ್ ಎಮಿರೇಟ್ಸ್ ದೇಶ'ದಲ್ಲಿ ತೆರೆಕಂಡ ಮೊದಲ ಮರಾಠಿ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕೇರಳದಲ್ಲಿ ೧೦ ಜೂನ್, ಮತ್ತು ಚೆನ್ನೈ ನಲ್ಲಿ ೧೧ ಜೂನ್, ರಂದು ತೆರೆಕಂಡಿತು.

ಸೈರಾಟ್
ಮರಾಠಿ:सैराट
ನಿರ್ದೇಶನನಾಗ್ರಾಜ್ ಮಂಜುಳೆ
ನಿರ್ಮಾಪಕನಾಗ್ರಾಜ್ ಮಂಜುಳೆ,
ನಿತಿನ್ ಕೇಣಿ,
ನಿಖಿಲ್ ಸಾನೆ
ಕಥೆನಾಗ್ರಾಜ್ ಮಂಜುಳೆ, ಅವಿನಾಶ್ ಎಚ್.ಘಾಡ್ಗೆ
ಪಾತ್ರವರ್ಗರಿಂಕು ರಾಜ್ಗುರು
ಆಕಾಶ್ ಥೋಸರ್
ಸಂಗೀತಅಜಯ್−ಅತುಲ್
ಛಾಯಾಗ್ರಹಣಸುಧಾಕರ್ ರೆಡ್ಡಿ ಯಕ್ಕಂಟಿ
ಸಂಕಲನಕುತುಬ್ ಇನಾಂದಾರ್
ಸ್ಟುಡಿಯೋಎಸ್ಸೆಲ್ ವಿಶನ್ ಪ್ರೊಡಕ್ಷನ್ಸ್, ಆಟ್ಪಾಟ್ ಪ್ರೊಡಕ್ಷನ್, ಜೀ ಸ್ಟುಡಿಯೋ
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 29 ಏಪ್ರಿಲ್ 2016 (2016-04-29)
ಅವಧಿ೧೭೪ ನಿಮಿಷಗಳು
ದೇಶಭಾರತ
ಭಾಷೆಮರಾಠಿ

ಚಿತ್ರ ನಿರ್ಮಾಣ

[ಬದಲಾಯಿಸಿ]

ನಾಗ್ರಾಜ್, ಅಮರ ಪ್ರೇಮ ಕಥೆಯ ಆಧಾರವನ್ನಿಟ್ಟುಕೊಂಡು ಚಿತ್ರಕಥೆ ಬರೆದರು. ಅವರ ಹಿಂದಿನ ಚಿತ್ರಗಳಿಗಿಂತ ಹೆಚ್ಚು ಕಮರ್ಶಿಯಲ್ ಆಗಬಹುದೆಂದು ಆಶಿಸಿದ್ದರು. ಅವರ ಜೀವನದ ಒಂದು ಅನುಭವಗಳ ಕಥನ.ಚಿತ್ರ ನಿರ್ಮಾಣಕ್ಕೆ ತಮ್ಮ ಊರನ್ನೇ ಬಳಸಿಕೊಂಡರು. ಜೇವೂರ್ ಎಂಬ ಸೊಲಾಪುರ ತಾಲ್ಲೂಕಿನ ಕರ್ಮಲದಲ್ಲಿ ಅವರಿಗೆ ಬೇಕಾದ ವಾತಾವರಣವಿತ್ತು.

ಸಂಗೀತ ಹಾಗೂ ಬೇರೆ ಭಾಷೆಗಳಲ್ಲಿ ನಿರ್ಮಾಣ

[ಬದಲಾಯಿಸಿ]

ಚಿತ್ರದ ಸಂಗೀತ ಸಂಯೋಜನೆಯನ್ನು 'ಅಜಯ್-ಅತುಲ್ ಜೋಡಿ'ವಹಿಸಿಕೊಂಡಿದ್ದಾರೆ. ಸೈರಾಟ್ ಚಲನ ಚಿತ್ರ, ೨೦೧೬ ರ ಏಪ್ರಿಲ್ ೬ ರಂದು ಬಿಡುಗಡೆಯಾಗಿತ್ತು. ಭಾರತದಲ್ಲಿ ೨೯,ಏಪ್ರಿಲ್ ೨೦೧೬ ರಲ್ಲಿ ಚಿತ್ರಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಅತಿಹೆಚ್ಚು ಹಣ ಸಂಗ್ರಹಿಸಿದ ಮರಾಠಿಚಿತ್ರವಾಗಿತ್ತು. ಈ ಚಿತ್ರಕ್ಕೆ ಮೊದಲು ನಟಸಾಮ್ರಾಟ್ ಎಂಬ ಚಿತ್ರ ವಿಕ್ರಮ ಸ್ಥಾಪಿಸಿತ್ತು. ಮೊಟ್ಟ ಮೊದಲು ಮರಾಠಿ ಭಾಷೆಯ ಅತಿಹಚ್ಚು ಹಣಗಳಿಕೆಯ ಚಲನ ಚಿತ್ರವಾಗಿದೆ. ₹50 ಕೋಟಿ (US$7.4 million) ಮುಂದೆ ಇದರ ಆವೃತ್ತಿಗಳನ್ನು ತಮಿಳು, ತೆಲುಗು, ಮಲಯಾಳಂ, ಕನ್ನಡ, ಗುಜರಾತಿ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಿಸಲಾಗುವುದು. ರಾಕ್ ಲೈನ್ ವೆಂಕಟೇಶ್, ದಕ್ಷಿಣ ಭಾರತದ ೪ ಚಿತ್ರಗಳ ಪುನರ್ನಿಮಾಣದ ಸ್ವಾಮ್ಯತ್ಯವನ್ನು ಪಡೆದಿದ್ದಾರೆ.ನಾಗ್ರಾಜ್ ರವರ ನಿರ್ದೇಶನದಲ್ಲಿ ಅವರ ಚೊಚ್ಚಲ ಚಿತ್ರ ಫ್ಯಾಂಡ್ರಿಗೆ ಸಂಗೀತ ಅಳವಡಿಸಿದ (೨೦೧೩) ಅಜಯ್-ಅತುಲ್ ಸೈರಾಟ್ ಚಿತ್ರಕ್ಕೂ ಸಂಗೀತ ಹೊಂದಿಸಿದ್ದಾರೆ. ೩೭ ಸೌಂಡ್ ಟ್ರಾಕ್ ವಿವರಗಳು ವೆಸ್ಟರ್ನ್ ಕ್ಲಾಸಿಕಲ್ ಪೀಸ್ ಕ್ಯಾಲಿಫೋರ್ನಿಯದ ಹಾಲಿವುಡ್ ಸ್ಟುಡಿಯೋಸ್ ನ ಸೋನಿ ಸ್ಕೋರಿಂಗ್ ಸ್ಟೇಜ್ ಭಾರತೀಯ ಚಲನಚಿತ್ರರಂಗದಲ್ಲಿ ಹಿಂದೆಂದೂ ಕಂಡರಿಯದ ಮೊಟ್ಟಮೊದಲ ಸಂಗೀತ ಆಯೋಜನೆ. ೬೬ ಜನ ಮ್ಯುಸಿಶಿಯನ್ಸ್, ೪೫ ಪೀಸ್ ಸ್ಟ್ರೀಮ್ ಸೆಕ್ಷನ್ ಸೇರಿದಂತೆ, ೬ ಪೀಸ್ ವುಡ್ ವೈಂಡ್ ಸೆಕ್ಶನ್, ೧೩ ಪೀಸ್ ಬ್ರಾಸ್ ಸೆಕ್ಶನ್, ೬ ಪೀಸ್ ಹಾರ್ನ್ಸೆಕ್ಶನ್,ಮತ್ತು ಒಂದು ಹಾರ್ಪ್,ಮಾರ್ಕ್ ಗ್ರಾಹಂ ನಡೆಸಿಕೊಟ್ಟರು.

Untitled

ಪೈರಸಿ

[ಬದಲಾಯಿಸಿ]

ಸೈರಾತ್ ಚಿತ್ರ ವಿಧ್ಯುಕ್ತವಾಗಿ ರಿಲೀಸ್ ಆಗುವ ೨ ದಿನಮೊದಲೇ ಆನ್ ಲೈನ್ ನಲ್ಲಿ ಕಾಣಿಸಿ ಕೊಂಡಿತ್ತು. ಏಪ್ರಿಲ್ ೨೦೧೬,ರಲ್ಲಿ ಸೈರಾಟ್ ಚಿತ್ರದ ನಿರ್ದೇಶಕ, ನಾಗ್ರಾಜ್ ಮಂಜುಳೆ , ಮುಂಬಯಿ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದರು. ಬಿಡುಗಡೆಗ ಮೊದಲು, ಸೆನ್ಸಾರ್ ಸಮಿತಿ ಅವಗಾಹನೆಗೋಸ್ಕರ ನಮೂದಿಸಿ ನಿರ್ಮಿಸಿದ 'ಕಾಪಿ' ಎಂದು ನೆಪ ಹಾಕಿ ಪ್ರದರ್ಶಿಸಿದ ಸಂಗತಿ ಬಯಲಿಗೆ ಬಂತು. ಮೇ, ೨೦೧೬ರಲ್ಲಿ ಒಬ್ಬ ೨೩-ವರ್ಷದ ಮೊಬೈಲ್ ಶಾಪ್ ಒಡೆಯನನ್ನು ಬಂಧಿಸಲಾಯಿತು. ಸೈರಟ್ ಚಿತ್ರದ ಪೈರೆಸಿಗಾಗಿ ಮುಂಬಯಿ ನಗರದ ಸೈಬರ್ ಕ್ರೈಮ್ ನಿಯಂತ್ರಣಾ ಪೊಲೀಸ್ ಪಡೆ, ಬೈಕುಲ್ಲ ಜಿಲ್ಲೆಯ ಓಬ್ಬ ಕೇಬಲ್ ವ್ಯಾಪಾರಿಯನ್ನು ಸೈರಾಟ್ ನ ಪೈರೇಟೆಡ್ ಚಿತ್ರವನ್ನು ತನ್ನ ಖಾಸಗಿ ನೆಟ್ ವರ್ಕ್ ನಲ್ಲಿ ಪ್ರಸಾರಮಾಡಿದ್ದಕ್ಕೆ ಬಂಧಿಸಿದರು.

ಬಾಕ್ಸ್ ಆಫೀಸ್

[ಬದಲಾಯಿಸಿ]

ಸೈರಾಟ್, ರಿಲೀಸ್ ಆದ ಪ್ರಥಮ ದಿನವೇ 3.60 ಕೋಟಿ ರೂಪಾಯಿ (US$530,000) ಗಳಿಸಿತು. ಒಟ್ಟಾರೆ, 12.10 ಕೋಟಿ (US$1.8 million) ಹಣ, ಗಲ್ಲಾ ಪೆಟ್ಟಿಗೆಗೆ ಸೇರಿತು. ಮೊದಲ ವಾರಾಂತ್ಯದಲ್ಲಿ ೬೫ ಕೋಟಿ ರೂಪಾಯಿಗಳಿಗಿಂತ ಅಧಿಕ ಗಳಿಸಿತು. (US$ ೯.೭ ಮಿಲಿಯನ್) ೪ನೇ ವಾರ, ೫೨೫ ಥಿಯೇಟರ್ ಗಳಲ್ಲಿ ತೆರೆಕಂಡಿತು. ೬೫ ಕೋಟಿ (US$ ೯.೭ ಮಿಲಿಯನ್) ದಾಟಿದ, ೬ನೇ ವಾರದಾಂತ್ಯದಲ್ಲಿ, ೯೦ಕೋಟಿ ರೂಪಾಯಿ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ, ಇದುವರೆವಿಗೆ ನಿರ್ಮಿಸಿದ ಮರಾಠಿ ಚಲನಚಿತ್ರಗಳಲ್ಲಿ ಅತೀ ಹೆಚ್ಚು ಹಣ ಗಳಿಸಿದ ಮೊದಲನೆಯ ಚಿತ್ರವೆಂಬ ಹೆಗ್ಗಳಿಕೆ ಪಡೆದಿದೆ.

ಪರ್ಶ್ಯಾ, ಒಬ್ಬ ನಿಮ್ನ ವರ್ಗದ ದಲಿತ ಹುಡುಗ. ಅರ್ಚಿ ಒಬ್ಬ ಮೇಲ್ಜಾತಿಯ ಧನಿಕ ಜಮೀನ್ದಾರನ ಮಗಳು. ಅವರಿಬ್ಬರಲ್ಲಿ ಪ್ರೀತಿ ಹುಟ್ಟುತ್ತದೆ. ಒಬ್ಬರನ್ನೊಬ್ಬರು ಭೇಟಿಮಾಡಲು ಶುರುಮಾಡಿದಾಗ ಹುಡುಗಿಯ ತಂದೆತಾಯಿಗಳಿಂದ ವಿರೋಧ ಹಾಗೂ ಹೊಡೆತವನ್ನು ಎದುರಿಸಲಾರದೆ ಅವರಿಬ್ಬರೂ ಮನೆಬಿಟ್ಟು ಪಟ್ಟಣಕ್ಕೆ ಓಡಿಹೋಗುತ್ತಾರೆ.[] ನಿರ್ದೇಶಕ ನಾಗರಾಜ್ ಮಂಜುಳೆಯವರು, ಚಿತ್ರದ ಆರಂಭದಲ್ಲಿ ಮೊದಲ ಪ್ರೇಮದಲ್ಲಿ ಸಮರ್ಥವಾಗಿ ಭಾವತೀವ್ರತೆಗಳನ್ನೆಲ್ಲಾ ಕಟ್ಟಿಕೊಡುತ್ತಾ ಯುವ ಜೋಡಿಗಳು ತಮ್ಮ ಊರು ಬಿಟ್ಟು, ಊರೂರು ಅಲೆದಾಡುತ್ತಾ ಎದುರಿಸುವ ಸಮಸ್ಯೆಗಳನ್ನು ಚಿತ್ರಿಸಿದ್ದಾರೆ. ಹೊಸ ಬದುಕೊಂದನ್ನು ಕಟ್ಟಿಕೊಳ್ಳಲು ಹೆಣಗಾಡುವ ರೀತಿಗಳನ್ನು ನೋಡಬಹುದು. ಚಿತ್ರದಲ್ಲಿ ನಟಿಸಿದ ರಿಂಕು, ಆಕಾಶ್ ಮತ್ತು ಎಲ್ಲಾ ಕಲಾವಿದರ ಮನೋಜ್ಞ ಅಭಿನಯ ಚಿತ್ರಕಥೆಗೆ ಸಮರ್ಪಕವಾಗಿದೆ. ಚಿತ್ರದ ಕೊನೆಯಲ್ಲಿ ನಾಯಕ ನಾಯಕಿಯರನ್ನು ಅವರ ಮನೆಯವರೇ ಮೋಸದಿಂದ ಹತ್ಯೆಮಾಡುವುದರಿಂದ ಚಿತ್ರ ಕೊನೆಗಾಣುತ್ತದೆ. ಅವರಿಬ್ಬರ ಮಗು ಅನಾಥವಾಗುತ್ತದೆ. ನಮ್ಮ ದೇಶದ ಸಮಾಜದ ಜಾತಿ ಪದ್ದತಿಯನ್ನು ಪ್ರಶ್ನಿಸಿ ಸವಾಲು ಹಾಕುವ ಅರ್ಚನಾ (ಪ್ರಮುಖ ನಾಯಕಿ), ಚಿತ್ರದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಕೆಲವು ಹೊಡೆದಾಟದ ಘಟನೆಗಳನ್ನೂ ಸ್ವತಃ ಮಾಡಿದ್ದಾಳೆ. ರಿಂಕು ರಾಜ್ಗುರು, ಎಂಬ ಹುಡುಗಿಯನ್ನು ಆರಿಸಿಕೊಂಡಬಗ್ಗೆ ಮೊದಲು ಪ್ರೆಸ್ ನಲ್ಲಿ ವಿವಾದವಿತ್ತು. ಅವಳು ಹಳೆ ಸಂಪ್ರದಾಯದ ಮನೆತನದ ಹುಡುಗಿಯ ತರಹ ಕಾಣಿಸದಿದ್ದರೂ, ಎಲ್ಲಾ ನಟಿಯರೂ ರಿಂಕುಗೆ ಹೋಲಿಸಿದರೆ, ಸ್ವಲ್ಪಮಟ್ಟಿಗೆ ["bimbettes"] ಆಗಿರುತ್ತಾರೆ ಎಂದು ನಾಗ್ರಾಜ್ ಮಂಜುಳೆ ಅಭಿಪ್ರಾಯಪಡುತ್ತಾರೆ. ಪುಣೆ ನಗರದ 'ಮಿರರ್' ಇಂಗ್ಲೀಷ್ ಪತ್ರಿಕೆಯ ಸಂಪಾದಕ', ದಿನೇಶ್ ಮಟ್ಕರಿಯವರು,ಸೈರಾಟ್ ಚಿತ್ರಕ್ಕೆ ೪ ಸ್ಟಾರುಗಳನ್ನು ಕೊಟ್ಟು ಶ್ಲಾಘಿಸಿದ್ದಾರೆ.

"The word I will use to describe Sairat is 'significant'."('ನಾನು ಈ ಚಿತ್ರ "ಅತ್ಯದ್ಭುತ" ಎಂದು ಹೇಳಬಲ್ಲೆ.')

ಪ್ರಶಸ್ತಿಗಳು

[ಬದಲಾಯಿಸಿ]
  1. ೬೬ ನೆಯ ಬರ್ಲಿನ್ ಅಂತಾರಾಷ್ಟ್ರೀಯ ಫಿಲ್ಮ್ಸ್ ಫೆಸ್ಟಿವಲ್ ನಲ್ಲಿ, ೧೪ + ವಯೋಮಿತಿಯ ಯುವಪೀಳಿಗೆ ವಿಭಾಗಕ್ಕೆ ನಿರ್ಮಿಸಿದ ಆತಿ-ಪ್ರಭಾವಿ ಚಿತ್ರವೆಂದು ಆಯ್ಕೆಯಾಯಿತು.[],[]
  2. (೨೦೧೫ ರ) ೬೩ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಜ್ಯೂರಿಯ ವಿಶೇಷ ಉಲ್ಲೇಖದ ಪುರಸ್ಕಾರ ರಿಂಕು ಳಿಗೆ ದೊರೆಯಿತು. 'ಸಮಾಜದಲ್ಲಿ ಜಾರಿಯಲ್ಲಿರುವ ಜೊಳ್ಳು, ಅರ್ಥಹೀನ ಸಂಪ್ರದಾಯವನ್ನು ತಿರಸ್ಕರಿಸಿ,ಮುನ್ನುಗ್ಗಿ, ಕೊನೆಗೆ ತನ್ನ ಪರಿವಾರದ ಕುರುಡು ಆಚರಣೆಗೆ ಬಲಿಪಶುವಾದ ಆಧುನಿಕ ಹುಡುಗಿಯ ಜೀವನ ಸಂದರ್ಭವನ್ನು ಬಹಳ ಪ್ರಭಾವಿಯಾಗಿ ತೆರೆಯಮೇಲೆ ಅಭಿನಯಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡುತ್ತಿದ್ದೇವೆ' ಎಂದು ಜ್ಯೂರಿ ಆಕೆಯ ಅಭಿನಯವನ್ನು ಪ್ರಶಂಸಿಸಿತು.[],[]

ಅಭಿನಯಿಸಿದ ಕಲಾವಿದರು

[ಬದಲಾಯಿಸಿ]
  1. ರಿಂಕು ರಾಜ್ಗುರು [ಅರ್ಚನ ಪಾಟೀಲ್] (ಅರ್ಚಿ)
  2. ಆಕಾಶ್ ಠೊಸರ್ [ಪ್ರಶಾಂತ್ ಕಾಳೆ] (ಪರ್ಷ್ಯ)
  3. ತಾನಜಿ ಗಾಲ್ಗುಂಡೆ [ಪ್ರದೀಪ್ ಬಾನ್ಸೊಡೆ] (ಕುಂಟ/ಲಂಗ್ಡ್ಯಾ)
  4. ಅರ್ಬಾಜ್ ಶೈಖ್ [ಸಲೀಮ್ ಶೈಖ್] (ಸಾಲ್ಯಾ)
  5. ಅನುಜಾ ಮುಳೆ (ಆನ್ನಿ)
  6. ರುಬಿನ ಇನಾಮ್ದರ್ (ಸಪ್ನ)
  7. ಧನಂಜಯ್ ನಾನವರೆ [ಮಂಗೇಶ್] (ಮಂಗ್ಯ)
  8. ಸುರೇಶ್ ವಿಶ್ವಕರ್ಮ [ಪಾಟೀಲ,ಆರ್ಚಿಯ ತಂದೆ] (ತಾತ್ಯ)
  9. ಗೀತ ಚವಾನ್ (ಆರ್ಚಿಯ ತಾಯಿ)
  10. ಸೂರಜ್ ಪವಾರ್ [ಪ್ರಿನ್ಸ್] (ಆರ್ಚಿಯ ಅಣ್ಣ)
  11. ಸಾಂಬಾಜಿ ಟಾಂಗ್ಡೆ (ಪಾರ್ಷ್ಯನ ತಂದೆ)
  12. ನಾಗ್ರಾಜ್ ಮಂಜುಲೆ [ಸತ್ಪುತೆ ಸರ್]
  13. ಛಾಯ ಕದಮ್ [ಸುಮನ್ ಅಕ್ಕ]
  14. ಭೂಷನ್ ಮಂಜುಲೆ [ಷಹಿದ್]
  15. ಜ್ಯೋತಿ ಸುಭಾಶ್ [ಸಗುಣ ಅತ್ಯ] (ವಿಶೇಷ ಪಾತ್ರದಲ್ಲಿ)

ಚಲನಚಿತ್ರದ ಧ್ವನಿಯ ನಿರ್ವಹಣೆ

[ಬದಲಾಯಿಸಿ]
ಸಂ.ಹಾಡುಸಾಹಿತ್ಯSinger(s)ಸಮಯ
1."Yad Lagala"ಅಜಯ್ −ಆತುಲ್Ajay Gogavale05:14
2."Aattach Baya Ka Baavarala"ಅಜಯ್ −ಆತುಲ್Shreya Ghoshal05:34
3."Sairat Jhala Ji"ಅಜಯ್ −ಆತುಲ್, ನಾಗ್ರಾಜ್ ಮಂಜುಳೆChinmaya Sripada, Ajay Gogavale06:09
4."Zingaat"ಅಜಯ್ −ಆತುಲ್Ajay−Atul03:46
ಒಟ್ಟು ಸಮಯ:20:43

ಉಲ್ಲೇಖಗಳು

[ಬದಲಾಯಿಸಿ]
  1. BBC.com, By Sudha G Tilak,Delhi,7 June 2016, Sairat: Why a doomed love story has become India's sleeper hit
  2. Indian express, May 1, 2016, Alaka sahani, Filmmaker Nagraj Manjule holds a mirror to social evils with Sairat
  3. Bollywood humgama ರಿಂಕು ರಾಜ್ಗುರುರವರಿಗೆ ನ್ಯಾಷನಲ್ ಫಿಲ್ಮ್ ಅವಾರ್ಡ್ ದೊರಕಿತು. ವಿಶೇಷ ಜ್ಯುರಿ ಅವಾರ್ಡ್/ ವಿಶೇಷ ಫಿಚರ್ ಫಿಲ್ಮ್ ಎಂಬ ಘೋಷಣೆಯೊಂದಿಗೆ
  4. The Huffington post, Updated: 21/12/2015, WATCH: Teasers Of 'Fandry' Director Nagraj Manjule's Next, 'Sairat', Selected To Compete At Berlin Film Festival
  5. "63rd NATIONAL FILM AWARDS FOR 2015" (PDF). Archived from the original (PDF) on 2016-10-07. Retrieved 2016-07-04.
  6. TOI, Preeti Atulkar Mar 29, 2016, 'I’m enjoying this moment to the fullest: Rinku Rajguru'

ಬಾಹ್ಯಸಂಪರ್ಕಗಳು

[ಬದಲಾಯಿಸಿ]
  1. Wikipedia, List of highest-grossing Indian films
  2. Wikipedia, List of most expensive Indian films

.

"https://kn.wikipedia.org/w/index.php?title=ಸೈರಾಟ್&oldid=1062335" ಇಂದ ಪಡೆಯಲ್ಪಟ್ಟಿದೆ