ಸಾನಿಯಾ ಮಿರ್ಜಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ ಭಾರತದ ಶ್ರೇಷ್ಟ ವೃತ್ತಿಪರ ಟೆನ್ನಿಸ್ ಆಟಗಾರ್ತಿ. ಇದುವರೆಗೆ ಟೆನ್ನಿಸ್ ಆಟದಲ್ಲಿ ಅತಿ ಹೆಚ್ಚಿನ ಕ್ರಮಾಂಕ ಪಡೆದ ಎಕೈಕ ಭಾರತೀಯ ಮಹಿಳೆ ಸಾನಿಯಾ. ಭಾರತದ ಹೈದರಾಬಾದ್ ನಗರದ ಸಾನಿಯಾರ ಈಗಿನ ವಿಶ್ವಕ್ರಮಾಂಕ ೩೧.

ಜೀವನ[ಬದಲಾಯಿಸಿ]

ಸಾನಿಯಾ ಮಿರ್ಜಾರವರ ಜನ್ಮ ನವೆಂಬರ್ ೧೫ ೧೯೮೬ರಲ್ಲಿ ಮುಂಬೈ ನಗರದಲ್ಲಾಯಿತು. ತಂದೆಯವರಾದ ಇಮಾಂ ಮಿರ್ಜಾರವರ ಮಾರ್ಗದರ್ಶನದಲ್ಲಿ ಆರನೆ ವರ್ಷದ ಎಳೆ ವಯಸ್ಸಿನಲ್ಲಿಯೆ ಸಾನಿಯ ಟೆನ್ನಿಸ್ ತರಬೇತಿ ಆರಂಭಿಸಿದರು. ೨೦೦೩ರ ಜೂನಿಯರ್ ವಿಂಬಲ್ಡನ್ ಡಬಲ್ಸ್ ಪಂದ್ಯಾವಳಿಯನ್ನು ಗೆದ್ದ ಸಾನಿಯ, ಜೂನಿಯರ್ ವಿಂಬಲ್ಡನ್ ಮುಕ್ತ ಟೆನ್ನಿಸ್ ಪಂದ್ಯಾವಳಿ ಗೆದ್ದ ಅತ್ಯಂತ ಕಿರಿಯ ಭಾರತೀಯ ಕ್ರೀಡಾ ಪಟು ಮತ್ತು ಪ್ರಥಮ ಮಹಿಳಾ ಪಟುವಾದರು. ೨೦೦೩ರಲ್ಲಿಯೆ ತಮ್ಮ ೧೬ನೆ ವಯಸ್ಸಿನಲ್ಲಿ ಸಾನಿಯ ವೃತ್ತಿಪರ ಟೆನ್ನಿಸ್ ರಂಗಕ್ಕೆ ಪದಾರ್ಪಣೆ ಮಾಡಿದರು. ೨೦೦೫ನೆ ಆಸ್ಟ್ರೇಲಿಯಾ ಮುಕ್ತ ಟೆನ್ನಿಸ್ ಪಂದ್ಯಾವಳಿಯ ಮೂರನೆ ಸುತ್ತು ಮತ್ತು ೨೦೦೫ನೆ ಅಮೇರಿಕಾ ಮುಕ್ತ ಟೆನ್ನಿಸ್ ಪಂದ್ಯಾವಳಿಯ ನಾಲ್ಕನೆ ಸುತ್ತಿಗೆ ತಲುಪಿದ ಸಾನಿಯ ಯಾವುದೆ ಗ್ರ್ಯಾಂಡ್‌ಸ್ಲ್ಯಾಮ್ ಪಂದ್ಯದಲ್ಲಿ ಆ ಸುತ್ತಿನವರೆಗೆ ತಲುಪಿದ ಮೊದಲ ಹಾಗು ಎಕೈಕ ಭಾರತೀಯ ಮಹಿಳೆಯಾದರು. ೫ ಅಡಿ ೭ಇಂಚು ಎತ್ತರದ ಬಲಗೈ ಆಟಗಾರ್ತಿಯಾದ ಸಾನಿಯಾ ತಮ್ಮ ಉನ್ನತ ಸಾಧನೆಗಳಿಂದಾಗಿ ಭಾರತದೆಲ್ಲಡೆ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಶ್ವಮಟ್ಟದಲ್ಲಿ ಇವರು ನೀಡಿರುವ ಉನ್ನತ ಪ್ರದರ್ಶನಕ್ಕಾಗಿ ಭಾರತ ಸರ್ಕಾರವು ೨೦೦೪ನೆ ವರ್ಷದ ಅರ್ಜುನ ಪ್ರಶಸ್ತಿಯನ್ನು ಇವರಿಗಿತ್ತು ಸನ್ಮಾನಿಸಿದೆ.

ಸಾಧನೆಗಳು[ಬದಲಾಯಿಸಿ]

ವಿವಾದ[ಬದಲಾಯಿಸಿ]

ಸಾನಿಯ ೨೦೦೫ರ ನವೆಂಬರ್‌ನಲ್ಲಿ ಸುರಕ್ಷಿತ ವಿವಾಹ ಪೂರ್ವ ಲೈಂಗಿಕ ಸಂಬಂಧದ ಬಗ್ಗೆ ಕೊಟ್ಟ ಹೇಳಿಕೆ ವಿವಾದವನ್ನು ಮಾಡಿತು. ಹಲವಾರು ಕಡೆ ಆಕೆಯ ಹೇಳಿಕೆಯ ತೀವ್ರ ಖಂಡನೆ ನೆಡಯಿತು ಮತ್ತು ಕೆಲವು ಕಡೆ ಆಕೆಯ ಪ್ರತಿಕ್ಕೃತಿ ದಹನ ಕೂಡ ನೆಡಯಿತು. ತಾನು ವಿವಾಹ ಪೂರ್ವ ಲೈಂಗಿಕ ಸಂಬಂಧವನ್ನು ಪುರಸ್ಕರಿಸಿಲ್ಲ ಎಂದು ಸಾನಿಯ ಮತ್ತೊಂದು ಹೇಳಿಕೆಯನ್ನು ನೀಡಿದರೂ ಕೂಡ ವಿವಾದ ಅವರ ಬೆನ್ನು ಬಿಡಲಿಲ್ಲ. ಹಲವಾರು ಮುಸಲ್ಮಾನ ಸಂಪ್ರದಾಯವಾದಿಗಳು ಸಾನಿಯ ಟೆನ್ನಿಸ್ ಆಡುವಾಗ ಧರಿಸುವ ಪೋಷಾಕಿನ ಬಗ್ಗೆ ಕೂಡ ಆಕ್ಷೇಪವೆತ್ತಿದ್ದಾರೆ. ಆದರೆ ವಿಚಾರವಾದಿಗಳು ಆಕೆಯನ್ನು ಎರಡು ವಿಚಾರದಲ್ಲಿ ಸಮರ್ಥಿಸಿದರು.