ಸೆರೆನಾ ವಿಲಿಯಮ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೆರೆನಾ ವಿಲಿಯಮ್ಸ್

(ಹುಟ್ಟು: ಸೆಪ್ಟೆಂಬರ್ ೨೬, ೧೯೭೧)

ಪರಿವಿಡಿ

ಅಮೆರಿಕ ದೇಶದ ಪ್ರೊಫೆಶನಲ್ ಟೆನ್ನಿಸ್ ಆಟಗಾರ್ತಿ[ಬದಲಾಯಿಸಿ]

ಅಮೆರಿಕ ದೇಶದ ಪ್ರೊಫೆಶನಲ್ ಟೆನ್ನಿಸ್ ಆಟಗಾರ್ತಿ , ಅವಳು 'ವರ್ಲ್ಡ್ ನಂಬರ್ ೧' ಎಂದು 'ವಿಮೆನ್ಸ್ ಟೆನ್ನಿಸ್ ಅಸೋಸಿಯೇಷನ್' ನಿಂದ ೪ ಪ್ರತ್ಯೇಕ ಸಮಯಗಳಲ್ಲಿ ಘೋಶಿಸಲ್ಪಟ್ಟಿದ್ದಾಳೆ. ಹಿಂದಿನ ಟೆನ್ನಿಸ್ ವರ್ಲ್ಡ್ ನಂಬರ್ ೧ ಆಗಿದ್ದ, 'ವೀನಸ್ ವಿಲಿಯಮ್ಸ್' ನ ತಂಗಿ. ಏಪ್ರಿಲ್, ೨೦, ೨೦೦೯ ರಲ್ಲಿ ಆಕೆ ಎರಡನೇ ಸ್ಥಾನಕ್ಕಿಳಿದಿದ್ದಳು. 'ಯು. ಎಸ್. ಓಪನ್' ಮತ್ತು 'ಆಸ್ಟ್ರೇಲಿಯನ್ ಓಪನ್' ಸಿಂಗಲ್ಸ್ ನ ಚಾಂಪಿಯನ್ ಆಟಗಾತಿ. ಸೆರೀನಾ ವಿಲಿಯಂಸ್, ಇದುವರೆವಿಗೆ ೨೦ ಗ್ರಾಂಡ್ ಸ್ಲಾಮ್ ಟೈಟಲ್ಸ್ ಗಳನ್ನು ಗಳಿಸಿದ್ದಾಳೆ. ೧೦ ಸಿಂಗಲ್ಸ್ ನಲ್ಲಿ, ಮತ್ತು ೮ ಡಬ್ಬಲ್ಸ್ ನಲ್ಲಿ ಹಾಗೆಯೇ ೨ ಮಿಕ್ಸ್ ಡಬಲ್ಸ್ ನಲ್ಲಿ. ೨ ಒಲಂಪಿಕ್ಸ್ ವಿಮೆನ್ಸ್ ಡಬ್ಬಲ್ಸ್ ನಲ್ಲಿ, 'ಚಿನ್ನದ ಮೆಡಲ್ಸ್' ಕೂಡ ಸಿಕ್ಕಿದೆ. ಇದುವರೆವಿಗೆ ಆಡಿದ ಆಟಗಾರ್ತಿಯರಲ್ಲಿ, ಚಾಲೂ ವರ್ಷದಲ್ಲಿ ಒಟ್ಟಿಗೆ ನಡೆದ ನಾಲ್ಕೂ 'ಗ್ರಾಂಡ್ ಸ್ಲಾಮ್' ಪಂದ್ಯಗಳಲ್ಲಿಸೆರೀನಾ ವಿಲಿಯಂಸ್, ವಿಜೇತೆಯಾಗಿದ್ದಾರೆ. ( ೧ ಫ್ರೆಂಚ್ ಓಪನ್, ೨ 'ವಿಂಬಲ್ಡನ್', ೪ 'ಆಸ್ಟ್ರೇಲಿಯನ್', ೩ 'ಯು. ಎಸ್. ಓಪನ್ ಟೆನ್ನಿಸ್' ಪಂದ್ಯಗಳಲ್ಲಿ) ಸೆರೆನಾ ವಿಲಿಯಂಸ್, 'ಅತಿಹೆಚ್ಚು ಗ್ರಾಂಡ್ ಸ್ಲಾಮ್ ಪ್ರಶಸ್ತಿ ಪಡೆದ ಇಂದಿನ ಬಿರುಸಿನ ಪ್ರವೀಣ-ವುಮನ್ ಆಟಗಾರ್ತಿಯಾಗಿದ್ದಾಳೆ. ಅದೂ ಅಲ್ಲದೆ ಅತ್ಯಂತ ಪ್ರಶಸ್ಥಿ-ಹಣಪಡೆದ ಕ್ರೀಡಾಳು ಎಂದು ಚರಿತ್ರೆಯಲ್ಲಿ ದಾಖಲಾಗಿದೆ. ೨೦೦೫ ರಲ್ಲಿ, 'ಪ್ರತಿಷ್ಠಿತ ಟೆನ್ನಿಸ್ ಪತ್ರಿಕೆ' ಯೊಂದರ ಪ್ರಕಾರ, ೪೦ ವರ್ಷಗಳ ಟೆನ್ನಿಸ್ ಆಟದ ಇತಿಹಾಸದಲ್ಲಿ ೧೭ ನೆಯ ಅತ್ಯುತ್ತಮ ಆಟಗಾರಳೆಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಸೆರೆನಾ ವಿಲಿಯಂಸ್ ಮತ್ತು ವೀನಸ್ ವಿಲಿಯಂಸ್ ಒಟ್ಟಾಗಿ 'ಟೆನ್ನಿಸ್ ಪ್ರೊಫೆಶನಲ್ ಮ್ಯಾಚ್,' ಗಳನ್ನು ಆಡಿದ್ದಾರೆ[ಬದಲಾಯಿಸಿ]

೧೯೯೮ ನೇ ಇಸವಿಯಿಂದಲೇ, ೨೦ 'ಪ್ರೊಫೆಶನಲ್ ಮ್ಯಾಚ್' ಗಳಲ್ಲಿ ಒಟ್ಟಾಗಿ ಆಡಿದ್ದಾರೆ. ೨೦೦೯, ನೇ, ಮೇತಿಂಗಳಿನಲ್ಲಿ ನಡೆದ ಇಬ್ಬರ ನಡುವಿನ ಮ್ಯಾಚ್ ನಲ್ಲಿ, ೧೦-೧೦ ಪಾಯಿಂಟ್ ಗಳಿಂದ ಟೈ ಆಗಿತ್ತು. ೩ 'ಗ್ರಾಂಡ್ ಸ್ಲಾಮ್ ಟೆನ್ನಿಸ್ ಆಟ' ದಲ್ಲಿ ಸತತವಾಗಿ ಆಡಿದ ಸಿಂಗಲ್ ಫೈನಲ್ಸ್ ನ ವುಮನ್-ಕ್ರೀಡಾಳುವಾಗಿ ಭಾಗವಹಿಸಿದ ಶ್ರೇಯಸ್ಸು ಅವರದು. ಕೋರ್ಟ್ ಬಿಟ್ಟು ಹೊರಗೆಬಂದಾಗ ವಿಲಿಯಮ್ಸ್ ಫ್ಯಾಶನ್, ನಟನೆ, ಹಾಗೂ ಸಂಘ ಸಂಸ್ಥೆಗಳಿಗೆ ಧನಸಹಾಯ, ಇಲ್ಲವೇ ದಾನ-ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿವಹಿಸುತ್ತಾರೆ.

೨೦೦೯ ರ,ಜುಲೈ,೪ ನೇ ತಾರೀಖಿನಂದು ಆಡಿದ 'ವಿಂಬಲ್ಡನ್ ಪೈನಲ್ಸ್,' ನಲ್ಲಿ ಸೆರೆನಾ ಮೂರನೆಯಬಾರಿ ವಿಜಯಿಯಾದರು[ಬದಲಾಯಿಸಿ]

ಅಮೆರಿಕದ ವಿಲಿಯಮ್ ಸಹೋದರಿಯರ ನಡುವಿನ 'ವಿಂಬಲ್ಡನ್ ಫೈನಲ್ಸ್ ಕದನ,' ದಲ್ಲಿ ಅಕ್ಕ ವೀನಸ್ ವಿಲಿಯಂಸ್ ರನ್ನು ೭-೬ (೭-೩),೬-೨ ಪಾಯಿಂಟ್ ಗಳಿಂದ ಮಣಿಸಿ, ೩ ನೆಯಬಾರಿಗೆ, ಸೆರೆನಾ ವಿಲಿಯಂಸ್, 'ಪ್ರತಿಷ್ಠಿತ ವಿಂಬಲ್ದನ್ ಟ್ರೋಫಿ,' ಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರಿಂದಾಗಿ, ಅಮೆರಿಕದ ಸ್ವಾತಂತ್ರ್ಯದಿನದ ಶುಭದಿನದಂದು ಮಿಕ್ಕೆಲ್ಲಾ ಅಮೆರಿಕನ್ನರ ಜೊತೆಗೆ, ' ಸೆಲೆಬ್ರೇಷನ್' ಮಾಡುತ್ತಿದ್ದಾರೆ. ಆರಂಭಿಕ ಸೆಟ್ ನ ೮ ನೇ ಗೇಮ್ ನಲ್ಲಿ ವೀನಸ್ ಎರಡು ಬಾರಿ ಬ್ರೇಕ್ ಪಾಯಿಂಟ್ ಗಳ ಅವಕಾಶ ಪಡೆದಾಗ್ಯೂ ತಪ್ಪಾದ ಗುರಿ, ಮತ್ತು ಹೊಡೆತಗಳಿಂದ ಪ್ರಾರಂಭಿಕ ಸೆಟ್ ಕಳೆದುಕೊಳ್ಳಬೇಕಾಯಿತು. ಟೈ-ಬ್ರೇಕರ್ ನಲ್ಲೂ ೭-೩ ಪಾಯಿಂಟ್ ಗಳಿಂದ ಸೆರೆನಾ ವಿಲಿಯಂಸ್ ಗೆಲುವನ್ನು ದಾಖಲಿಸಿದರು. ವಿಂಬಲ್ಡನ್ ಪ್ರತಿಯೋಗಿತೆಯಲ್ಲಿ ಸತತ ೩೪ ಸೆಟ್ ಗಳ ವಿಜಯಗಳ ವಿಶಿಶ್ಠ ದಾಖಲೆ ಸೃಷ್ಟಿಸಿರುವ ವೀನಸ್ ವಿಲಿಯಂಸ್, ಆರಂಭಿಕ ಸೆಟ್ ಸೋಲುವ ಮೂಲಕ ೨೦೦೭ ರ ವಿಂಬಲ್ಡನ್ ೩ ನೆಯ ಸುತ್ತಿನಲ್ಲಿ ಆರಂಭಿಸಿದ್ದ ತಮ್ಮ ದಾಖಲೆಯನ್ನು ಅಳಿಸಿಹಾಕಿದರು. ಎರಡನೆಯ ಸೆಟ್ ನಲ್ಲಿ ಅಕ್ಕನ ವಿರುದ್ಧ ಮೇಲುಗೈ ಸಾಧಿಸಿದ ಸೆರೆನಾ, ಹೆಚ್ಚಿನ ಪ್ರಯಾಸಪಡದೆ, ಸುಲಭವಾಗಿ ಸೆಟ್ ಗೆಲ್ಲುವ ಮೂಲಕ ಪ್ರಶಸ್ತಿಗೆ ಭಾಜನರಾದರು. ೨ ನೇ ಶ್ರೇಯಾಂಕಿತ ಸೆರೆನಾ ೩೦೦೨ ಹಾಗೂ ೨೦೦೩ ರ ವಿಂಬಲ್ಡನ್ ಪ್ರತಿಯೋಗಿತೆಯಲ್ಲಿ ವೀನಸ್ ರವರನ್ನು ಮಣಿಸಿದ್ದರು. ಆದರೆ, ಹೋದ ವರ್ಷ ಅಕ್ಕ ವೀನಸ್ ವಿರುದ್ಧ ಸೋಲುಂಡು ಸೆರೆನಾ, ರನ್ನರ್ ಅಪ್ ಸ್ಥಾನಪಡೆದು ತೃಪ್ತಿಹೊಂದಬೇಕಾಯಿತು.

'ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳ ಸರದಾರಿಣಿ'[ಬದಲಾಯಿಸಿ]

ಒಟ್ಟಾರೆ '೧೧ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳು', ಸೆರೆನಾ ವಿಲಿಯಂಸ್ ರ ಬತ್ತಳಿಕೆಯಲ್ಲಿ ಸೇರಿದಂತಾಗಿದೆ. ೨೦೦೯ ರ, ಶನಿವಾರ, ಜುಲೈ, ೪ ನೇ ತಾರೀಖಿನಂದು ಆಡಿದ, ವಿಂಬಲ್ಡನ್ ಫೈನಲ್ಸ್ ನಲ್ಲಿ ತಮ್ಮ ಅಕ್ಕ ವೀನಸ್ ವಿಲಿಯಂಸ್ ರನ್ನು ೬-೨ ಪಾಯಿಂಟ್ ಗಳಿಂದ ಮಣಿಸಿ, ಸೆರೆನಾ ವಿಲಿಯಂಸ್ ಮತ್ತೊಂದು ಹೊಸದಾಖಲೆಯನ್ನು ಸೃಷ್ಟಿಸಿದ್ದಾರೆ.

’ಇಎಸ್ಪಿಯೆನ್’-’ಸ್ಪೋರ್ಟ್ಸ್ ಪತ್ರಿಕೆ- ವಿಶೇಷ ಸಂಚಿಕೆಯ 'ಮುಖಪುಟ',ಬಾಡಿ' ಗೆ, ವಿಶೇಷ ಭಂಗಿ[ಬದಲಾಯಿಸಿ]

ಅಕ್ಟೋಬರ್, ೭, ೨೦೦೯ ರಂದಿನ, ’ಇಎಸ್ಪಿಯೆನ್’-’ಸ್ಪೋರ್ಟ್ಸ್ ಪತ್ರಿಕೆ,’ಯ ವಿಶೇಷ ಸಂಚಿಕೆ,’ಬಾಡಿ’ಯ ಮುಖಪುಟಕ್ಕೆ, ವಿಶೇಷಭಂಗಿಯಲ್ಲಿ ಕುಳಿತು ಫೋಟೋ ಕೊಟ್ಟಿರುವಸೆರೆನಾ ವಿಲಿಯಮ್ಸ್, ಒಬ್ಬ ದಿಟ್ಟ ಟೆನ್ನಿಸ್ ಆಟಗಾತಿಯೆನ್ನುವುದನ್ನು ಧೃಢಪಡಿಸಿದ್ದಾರೆ. ಈ 'ಹೊಸ ಅವತಾರ'ದ ವಿಶೇಷತೆಯೆಂದರೆ, ತುಂಡುಬಟ್ಟೆಯೂ ಇಲ್ಲದೆ,'ಸಂಪೂರ್ಣ ಆತ್ಮ-ವಿಶ್ವಾಸದ ಮುಖವಾಡ'ವನ್ನು ಧರಿಸಿ, ಬೆತ್ತಲೆ ಭಂಗಿಯಲ್ಲಿ ಕುಳಿತಿರುವುದು, ಭಾರೀ ಸುದ್ದಿಯಾಗಿದೆ. ಈ 'ಶ್ಯಾಮಲ-ವರ್ಣೆ','ಬೆಡಗಿ'ಯ ಚಿತ್ರದ ಭಂಗಿಯನ್ನು 'ಫೋಟೋಗ್ರಾಫರ್' ಅತಿ ಎಚ್ಚರಿಕೆ ಹಾಗೂ ಚಾಣಾಕ್ಷತನದಿಂದ ಅವರ ಗುಪ್ತಾಂಗಗಳನ್ನು ಹದ್ದಿನ ಕಣ್ಣಿನ ಟೆನ್ನಿಸ್ ರಸಿಕರ ಗಮನದಿಂದ ತಪ್ಪಿಸುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. 'ವಿಲಿಯಮ್ಸ್' ಸೋದರಿಯರಲ್ಲಿ, 'ಸೆರೆನಾ ವಿಲಿಯಮ್ಸ್,' ಆಗಾಗ ಇಂತಹ ವಿವಾದಾಸ್ಪದ ಸನ್ನಿವೇಶಗಳನ್ನು ಸೃಷ್ಟಿಸಿ, ಸಂತಸಪಡುತ್ತಾರೆ. ಆದರೆ ಅವರಿಗೆ ಪೂರ್ಣವಾಗಿ ಸಮಾಧಾನವಾಗಿಲ್ಲ. ಪುರುಷರಂತೆ ಬಿಗಿ ಸ್ನಾಯುಗಳು, ಸ್ಯಾಂಡು ಬಾಡಿ, ಹೊಂದಿದ ಅವರು, ನೀಳಕಾಯವನ್ನು ಪಡೆಯಲು ಎಷ್ಟು ವಿಧಾನಗಳನ್ನು ಅನುಸರಿಸಿದರೂ' ಪೂರ್ಣ ಯಶಸ್ಸು ಲಭಿಸಿಲ್ಲದಿರುವುದು, ಅವರ ಅಸಮಧಾನಕ್ಕೆ ಕಾರಣವಾಗಿದೆ.

ಸೆರೆನಾ ವಿಲಿಯಮ್ಸ್ ಗೆ, ’ಯುಎಸ್ ಓಪನ್ ಟೆನ್ನಿನ್ ಟೂರ್ನಮೆಂಟ್,” ನಲ್ಲಿ ತೋರಿಸಿದ ಅಸಭ್ಯ ವರ್ತನೆಗೆ, ೧೭೫,೦೦೦ ಅಮೆರಿಕನ್ ಡಾಲರ್ ದಂಡ ವಿಧಿಸಿದ್ದಾರೆ[ಬದಲಾಯಿಸಿ]

ವಿಶ್ವದ ನಂ. ೧, ಟೆನ್ನಿಸ ಆಟಗಾತಿಯೆಂದು ಹೆಮ್ಮೆಯಿಂದ ಬೀಗುತ್ತಾ, ಹಣ, ಪ್ರಾಯದ ಮದದಿಂದ ತಲೆತಿರುಗಿದ ಸೆರೆನಾಗೆ, ಈ ತರಹದ ದಂಡಗಳು ಹೊಸದೇನಲ್ಲ. ಈ ಬಾರಿ ಆಕೆಗೆ, 'ಯುಎಸ್ಓಪನ್ ಗ್ರಾಂಡ್ ಸ್ಲಾಮ್ ಟೂರ್ನಮೆಂಟ್ ನ ಆಡಳಿತ ಸಮಿತಿ' ೨೦೦೯ ರ ನವೆಂಬರ್ ೯ ರಂದು ೧೭೫,೦೦೦ ಅಮೆರಿಕನ್ ಡಾಲರ್ ತಲೆದಂಡವನ್ನು ವಿಧಿಸಿದ್ದಾರೆ. ಮತ್ತೆ ವಿಚಾರಿಸಿದಾಗ, ಸಮಿತಿ ತನ್ನ ನೀತಿಯನ್ನು ಖಚಿತಪಡಿಸಿತ್ತು. ( ೮೧.೨೭ ಲಕ್ಷರೂಪಾಯಿಗಳು)

ಮತ್ತೆ ಎಚ್ಚರಿಕೆಯ ನೋಟಿಸ್[ಬದಲಾಯಿಸಿ]

ಮುಂದಿನ ೨ ವರ್ಷಗಳಲ್ಲೂ ಇದೇ ತರಹ ಗ್ರಾಂಡ್ ಸ್ಲಾಮ್ ಆಟಗಳಲ್ಲಿ ಕೆಟ್ಟನಡವಳಿಕೆಯನ್ನು ಪ್ರದರ್ಶಿಸಿದಲ್ಲಿ, ೨೦೧೦, ೨೦೧೧, ಮತ್ತು ೨೦೧೨ ರ ಯುಎಸ್ ಓಪನ್ ಕ್ರೀಡೆಗಳಿಂದ ಹೊರಗೆ ಕೂಡಿಸಲಾಗುವುದೆಂದು ಫೆಡರೇಶನ್ ಕಠಿಣ ಎಚ್ಚರಿಕೆಯನ್ನು ನೀಡಿದೆ. ವರ್ಷ ೨೦೧೧ ರಲ್ಲಿ ಅವರಿಂದ ಯಾವುದೇ ಅಪ್ರಿಯ ನಡವಳಿಕೆ ಕಂಡುಬರದಿದ್ದಲ್ಲಿ, ದಂಡದ ಮೊತ್ತವನ್ನು ೮೨,೫೦೦ ಡಾಲರ್ ಗಳಿಗೆ ಇಳಿಸಲಾಗುವುದು.

'ಸೆರೆನಾ'ರ ದುರ್ವರ್ತನೆಯ ವಿವರಗಳು[ಬದಲಾಯಿಸಿ]

ಸೆರೆನಾ ತಮ್ಮ ಸೆಮಿಫೈನಲ್ಸ್ ನ ಎದುರಾಳಿ ನಂತರ ಚಾಂಪಿಯನ್ನಾಗಿ ಗೆದ್ದುಬಂದ 'ಕಿಮ್ ಕ್ಲಿಜ್ಟರ್ಸ್' ರವರ ವಿರುದ್ಧ ಆಡಿದ ಪಂದ್ಯದಲ್ಲಿ, ತಾಳ್ಮೆಗೆಟ್ಟು ವಿಪರೀತವಾಗಿ ನಡೆದುಕೊಂಡಿದ್ದರು. ಅದಲ್ಲದೆ, 'ಲೈನ್ಸ್ ವುಮನ್' ರವರ ತೀರ್ಪಿಗೆ ಅಸಮ್ಮತಿ ಸೂಚಿಸಿ ನಿಂದನೆಮಾಡಿ ಬೆದರಿಕೆಯ ಶಬ್ದಗಳ ಪ್ರಯೋಗಮಾಡಿದ್ದರು. 'ಟೆನಿಸ್ ರಾಕೆಟ್' ನ್ನು ನೆಲಕ್ಕೆ ಅಪ್ಪಳಿಸಿ ಕೂಗಿದಾಗ, ಎಚ್ಚರಿಕೆ ನೀಡಿದ ನಂತರವೂ ದಡದಡನೆ ಅಂಗಣದಿಂದ ನಿರ್ಗಮನಿಸಿದ್ದರು. 'ಕ್ರೀಡಾ-ಸ್ಫೂರ್ತಿ' ಮರೆತು ವಿಚಿತ್ರವಾಗಿ ವರ್ತಿಸಿದ ಆಕೆಗೆ, ಟೂರ್ನಮೆಂಟ್ ಸಂಘಟಕರು, ೧೦,೫೦೦ ಡಾಲರ್ ದಂಡವನ್ನು ವಿಧಿಸಿದ್ದರು. ೧೯೯೦ ರ ಬಳಿಕ ಮಹಿಳಾ ಟೆನ್ನಿಸ್ ಆಟಗಾತಿಯೊಬ್ಬರು, ತೆತ್ತ ದಂಡದ ಭಾರೀ ಮೊತ್ತ, ಸೆರೆನಾರವರದೇ ಎಂದು ಮಂಗಳವಾರ, ೧, ಡಿಸೆಂಬರ್, ೨೦೦೯ ರಂದು ಲಂಡನ್ ನ ’ಸ್ಪೋರ್ಟ್ಸ್ ಪತ್ರಿಕೆ’ ಯೊಂದರಲ್ಲಿ ದಾಖಿಸಲಾಗಿದೆ.

೧೨ ನೆಯ ಬಾರಿಗೆ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ[ಬದಲಾಯಿಸಿ]

೨೦೧೦ ರ, ಜ. ೩೦ ರಂದು ಮೆಲ್ಬೋರ್ನ್ ನಲ್ಲಿ ನಡೆದ ’ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ’ಯಲ್ಲಿ ’೧೨ ನೆಯ ಬಾರಿಗೆ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ’, ಬೆಲ್ಜಿಯಮ್ ನ ’ಜಸ್ಟಿನ್ ಹೆನಿನ್’ ರನ್ನು ೬-೪, ೩-೬, ೬-೨ ರಿಂದ ಸೋಲಿಸಿದ, ಹಾಲಿ ಚ್ಯಾಂಪಿಯನ್ ಮತ್ತು ಅಗ್ರ ಶ್ರೇಯಾಂಕಿತ ಸೆರೆನಾ ವಿಲಿಯಮ್ಸ್, ’೫ ನೆಯ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್-ಪ್ರಶಸ್ತಿ’ ಮತ್ತು ’೧೨ ನೇ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ’ ಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ೨೪ ಗ್ರಾಂಡ್ ಸ್ಲ್ಯಾಮ್' ಗೆದ್ದ ಸಹ ಅಮೆರಿಕನ್ ಆಟಾಗಾರ್ತಿ, 'ಬಿಲ್ಲಿ ಜೀನ್ ಕಿಂಗ್ಸ್,' ರೊಂದಿಗೆ ಸಾರ್ವಕಾಲಿಕ ಮುಖ್ಯಪ್ರಶಸ್ತಿ ಗೆದ್ದ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ದಾಖಲಿಸಿದ್ದಾರೆ. ಬಿಲ್ಲಿ ಜೀನ್ ಕಿಂಗ್ಸ್, ಮತ್ತು ಆಸ್ಟ್ರೇಲಿಯದ ಮಹಾನ್ ಟೆನ್ನಿಸ್ ಆಟಗಾರ್ತಿ, 'ಮಾರ್ಗರೆಟ್ ಸ್ಮಿತ್,' ಸಮ್ಮುಖದಲ್ಲಿ, ಫೈನಲ್ಸ್ ಪಂದ್ಯವಾಡಿ ಈ ಇಬ್ಬರ ದಾಖಲೆಯನ್ನು ಸರಿಗಟ್ಟಿದರು.

೧೩ ನೆಯ ಬಾರಿಗೆಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ[ಬದಲಾಯಿಸಿ]

ಹಾಲಿ ಚಾಂಪಿಯನ್, 'ಅಮೆರಿಕದ ಸೆರೆನಾ ವಿಲಿಯಮ್ಸ್,' ೨೦೧೦ ರ ಜುಲೈ, ೩ ರಂದು ಜರುಗಿದ 'ವಿಂಬಲ್ಡನ್ ಟೆನ್ನಿಸ್ ಚಾಂಪಿಯನ್ ಶಿಪ್ ನ ಮಹಿಳೆಯರ ಸಿಂಗಲ್ಸ್' ನಲ್ಲಿ, ೨೧ ನೆಯ ಶ್ರೇಯಾಂಕಿತ, 'ರಷ್ಯಾದೇಶದ ಟೆನ್ನಿಸ್ ಆಟಗಾರ್ತಿ,ವೇರಾ ಜ್ವನಾರೇವಾ' ವಿರುದ್ಧ ೬-೩, ೬-೨ ಪಾಯಿಂಟ್ ಗಳಿಂದ ಗೆದ್ದರು. ಸೆರೆನಾ ೪ ನೆಯ ಬಾರಿಗೆ ಮಹಿಳೆಯರ ಸಿಂಗಲ್ಸ್ ನಲ್ಲಿ, ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ. ಏಕ ಪಕ್ಷೀಯವಾಗಿ ನಡೆದ ಫೈನಲ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಲಿಯಮ್ಸ್ ವೃತ್ತಿಬದುಕಿನಲ್ಲಿ '೧೩ ನೆಯ ಗ್ರಾಂಡ್ ಸ್ಲ್ಯಾಮ್' ಗಳಿಸಿ, ೧.೫ ಮಿ. ಡಾಲರ್ ಬಹುಮಾನ ಗೆದ್ದಿದ್ದಾರೆ. 'ಸಾರ್ವಕಾಲಿಕ ಗ್ಡ್ರಾಂಡ್ ಸ್ಲ್ಯಾಮ್ ವಿನ್ನರ್' ಗಳಲ್ಲಿ ೬ ನೇ ಸ್ಥಾನವನ್ನು ಗಿಟ್ಟಿಸಿದ್ದಾರೆ. ಇದುವರೆಗೆ ನಡೆದ ಎಲ್ಲಾ ೩ ಫೈನಲ್ ನಲ್ಲಿ ಸಹೋದರಿ 'ವೀನಸ್' ವಿರುದ್ಧ ಫೈನಲ್ ಗೆದ್ದು ಪ್ರಶಸ್ತಿಹೊಂದಿದ್ದರು.