ಮಾಲ್ಗುಡಿ ಡೇಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಾಲ್ಗುಡಿ ಡೇಸ್ ಆರ್. ಕೆ. ನಾರಾಯಣ್ ಅವರ ಸಣ್ಣ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ ದಕ್ಷಿಣ ಭಾರತದಲ್ಲಿನ 'ಮಾಲ್ಗುಡಿ' ಎನ್ನುವ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುತ್ತವೆ. ಆರ್. ಕೆ. ನಾರಾಯಣ್ ಅವರ ಮಾತಿನಲ್ಲಿ 'ಮಾಲ್ಗುಡಿ' - "ಜಗತ್ತಿನ ಯಾವುದೆ ಭಾಗದಲ್ಲಿನ ಚಿರನೂತನ ಪಾತ್ರಗಳ" ಊರು. ಮಾಲ್ಗುಡಿಯು ಸರಾಯು ನದಿಯ ತೀರದಲ್ಲಿದ್ದು, ಮೆಂಪಿ ಬೆಟ್ಟಗಳಿಂದ ಸುತ್ತುವರೆದಿರುತ್ತದೆ.

[ಬದಲಾಯಿಸಿ] ಹಿನ್ನೆಲೆ

ಮಾಲ್ಗುಡಿ ಡೆಸ್ ದಾರವಾಹಿ ಸರಣಿಯನ್ನು ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗು ನಿರ್ದೇಶಕರಾದ ಶಂಕರ್ ನಾಗ್ ಅವರು ನಿರ್ಮಿಸಿದ್ದರು. ದಾರವಾಹಿಯ ಎಲ್ಲಾ ಭಾಗಗಳನ್ನೂ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಚಿತ್ರೀಕರಿಸಲಾಗಿದೆ. ಎಲ್. ವೈದ್ಯನಾಥನ್ ಅವರು ಸಂಗೀತ ನೀಡಿದ್ದು, ಪದಮ್ ರಾಗ್ ಫಿಲಂಸ್ ಸಂಸ್ಥೆಯ ಟಿ.ಎಸ್. ನರಸಿಂಹನ್ ಅವರು ನಿರ್ಮಿಸಿದ್ದಾರೆ. ದಾರವಾಹಿಯ ಒಂದೊಂದು ಭಾಗವೂ ಆರ್.ಕೆ.ನಾರಾಯಣ್ ಅವರ Swami and Friends ಹಾಗೂ The Vendor of Sweets ಸಂಕಲನದ ಕಥೆಗಳಾಗಿವೆ.

[ಬದಲಾಯಿಸಿ] ಹೊಸ ಆವೃತ್ತಿ

ದೂರದರ್ಶನ್ ವಾಹಿನಿಯು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕಿ ಕವಿತ ಲಂಕೇಶ್ ಅವರನ್ನು ಮಾಲ್ಗುಡಿ ಡೆಸ್ ದಾರವಾಹಿಯ ೨೬ ಭಾಗಗಳನ್ನು ನಿರ್ಮಿಸಲು ನೇಮಿಸಿದೆ. ಕವಿತ ಅವರು ಎಲ್ಲಾ ಭಾಗಗಳನ್ನು ಹಿಂದಿಯಲ್ಲಿ ನಿರ್ಮಿಸಲಿದ್ದಾರೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು