ಪ್ರವಾಹ
Wikipedia ಇಂದ
ಪ್ರವಾಹವು ಭೂಪ್ರದೇಶವನ್ನು ಮುಳುಗಿಸುವ ನೀರಿನ ಹರವಿನ ತುಂಬಿಹರಿಯುವಿಕೆ ಅಥವಾ ಶೇಖರಣೆ. "ಹರಿಯುವ ನೀರು" ಎಂಬ ಅರ್ಥದಲ್ಲಿ, ಈ ಪದವನ್ನು ಅಲೆಯುಬ್ಬರದ ಒಳಹರಿವಿಗೂ ಪ್ರಯೋಗಿಸಬಹುದು. ಪ್ರವಾಹವು ನದಿ ಅಥವಾ ಸರೋವರದಂತಹ ಒಂದು ಜಲರಾಶಿಯ ಒಳಗಿನ ನೀರಿನ ಪರಿಮಾಣದಿಂದ ಉಂಟಾಗಬಹುದು, ಮತ್ತು ಇಂತಹ ಒಂದು ಜಲರಾಶಿಯು ತುಂಬಿಹರಿದಾಗ ಅಥವಾ ತಡೆಗಳನ್ನು ಒಡೆದಾಗ ನೀರಿನ ಒಂದಿಷ್ಟು ಭಾಗ ತನ್ನ ಸಹಜ ಸೀಮೆಯಿಂದ ಬೆಡುಗಡೆಗೊಳ್ಳುತ್ತದೆ. ಒಂದು ಸರೋವರ ಅಥವಾ ಬೇರೆ ಒಂದು ಜಲರಾಶಿಯ ಗಾತ್ರ ಮಳೆ ಮತ್ತು ಹಿಮದ ಕರಗುವಿಕೆಯಲ್ಲಿ ಕಾಲಕಾಲಕ್ಕಾಗುವ ಬದಲಾವಣೆಗಳೊಂದಿಗೆ ಬದಲಾಗುತ್ತದಾದರೂ, ಜನರ ವಸತಿಯಿರುವ ಹಳ್ಳಿ, ನಗರ ಅಥವಾ ಇತರ ನೆಲೆಸಿರುವ ಪ್ರದೇಶಗಳಂತಹ ಭೂಪ್ರದೇಶಗಳಿಗೆ ಅಪಾಯವನ್ನುಂಟುಮಾಡದಿದ್ದಲ್ಲಿ ನೀರಿನ ಇಂತಹ ಬಿಡುಗಡೆಗಳು ಒಂದು ದೊಡ್ಡ ಪ್ರವಾಹವಲ್ಲ.