ಶಿವಮೊಗ್ಗ ಜಿಲ್ಲೆಯ ಸೊರಬ ಪ್ರದೇಶದಲ್ಲಿ ಪ್ರವಹಿಸುವ ನದಿಯಾದ ದಂಡಾವತಿಯು ಸೊರಬದ ಕುಪ್ಪೆ ಪ್ರದೇಶದಲ್ಲಿ ಉಗಮಿಸುತ್ತದೆ. ಮುಂದೆ ಸಾಗುತ್ತ ವರದಾ ನದಿಯನ್ನು ಸೇರುವ ಈ ನದಿಯ ತೀರದಲ್ಲಿ ಸೊರಬದ ಶ್ರೀ ರಂಗನಾಥ ದೇವಸ್ಥಾನವು ಸ್ಥಿತವಾಗಿದೆ.