ನೇತ್ರಾವತಿ ನದಿ
ವಿಕಿಪೀಡಿಯ ಇಂದ
ನೇತ್ರಾವತಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ನದಿ. ಚಿಕ್ಕಮಗಳೂರು ಜಿಲ್ಲೆಯ ಸಂಸೆಯಲ್ಲಿ ಉಗಮವಾಗುವ ಈ ನದಿಯು ಮುಂದೆ ಉಪ್ಪಿನಂಗಡಿಯಲ್ಲಿ ಕುಮಾರಧಾರೆ ನದಿಯೊಂದಿಗೆ ಸಂಗಮವಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಕರ್ನಾಟಕ ರಾಜ್ಯದ ಪ್ರಮುಖ ತೀರ್ಥಸ್ಥಳಗಳಲ್ಲಿ ಒಂದಾದ ಧರ್ಮಸ್ಥಳದ ಮೂಲಕ ಈ ನದಿಯು ಹಾದು ಹೋಗುತ್ತದೆ. ಆದ್ದರಿಂದಲೇ ಇದನ್ನು ಭಾರತದ ಪವಿತ್ರ ನದಿಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ.