ಸೊರಬ
ಸೊರಬವು ಶಿವಮೊಗ್ಗ ಜಿಲ್ಲೆಯಲ್ಲಿನ ಒಂದು ತಾಲೂಕು. ದಂಡಾವತಿಯ ತೀರದಲ್ಲಿರುವ ಇದು ಸಮುದ್ರಮಟ್ಟದಿಂದ ಅಂದಾಜು ೫೮೦ ಮೀಟರ್ ಎತ್ತರದಲ್ಲಿದೆ.
ಸೊರಬದ ಮೂಲ ಹೆಸರು ಸುರಭಿಪುರ, ಇಲ್ಲಿ ಒಂದು ಸುರಭಿ (ಆಕಳು) ರಂಗನಾಥದೇವರಿಗೆ ಹಾಲಿನ ಅಭಿಷೇಕ ಮಾಡುತ್ತಿತ್ತೆಂಬ ಪ್ರತೀತಿ ಇದೆ. ಅಲ್ಲಿ ಈಗಿನ ದೇವಸ್ಥಾನವನ್ನು ಹಳೆಸೊರಬದ ಒಬ್ಬ ಗೌಡರು ಕಟ್ಟಿಸಿದರು ಎಂಬುವುದರ ಬಗ್ಗೆ ದಂಡಾವತಿ ನದಿತೀರದಲ್ಲಿ ಶಿಲಾಶಾಸನವಿದೆ.
೨೦೦೧ರ ಜನಗಣತಿಯಂತೆ ಇಲ್ಲಿ ೭೪೨೪ ಜನಸಂಖ್ಯೆ ನಮೂದಾಗಿದ್ದು. ೫೧:೪೯ ಅನುಪಾತದಲ್ಲಿ ಪುರುಷರು ಮತ್ತು ಮಹಿಳೆಯರು ಇರುತ್ತಾರೆ. ಇಲ್ಲಿನ ವಿದ್ಯಾವಂತರ ಸಂಖ್ಯೆ ಸರಿಸುಮಾರು ೮೦ ಪ್ರತಿಶತ ಇದೆ. ಇಲ್ಲಿಯ ಜನರ ಮುಖ್ಯ ಜೀವನಾಧಾರ ಕೃಷಿ. ಸಾಮಾನ್ಯವಾಗಿ ಕೃಷಿಕರೇ ಪ್ರಧಾನವಾಗಿರುವ ಹಳ್ಳಿಗಳೇ ಹೆಚ್ಚು. ಭತ್ತ ಪ್ರಮುಖ ಬೆಳೆ ಇದಲ್ಲದೆ ಅಡಿಕೆ, ಶುಂಠಿ, ಜೋಳ, ಬಾಳೆ ಕೂಡ ಬೆಳೆಯಲಾಗುತ್ತದೆ.
ಶಿಕ್ಷಣ ವ್ಯವಸ್ಥೆ : ಇಲ್ಲಿ ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಅನೇಕ ಖಾಸಗಿ ಶಾಲೆಗಳಿದ್ದು ಉತ್ತಮ ಶಿಕ್ಷಣ ನೀಡುತ್ತಿವೆ. ಕಾಲೇಜ್ ಹಂತದಲ್ಲಿ ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜ್, ಒಂದು ತಾಂತ್ರಿಕ ವಿದ್ಯಾಲಯ(ಪಾಲಿಟೆಕ್ನಿಕ್), ಮತ್ತು ಸರ್ಕಾರಿ ಪದವಿ ಕಾಲೇಜ್ ಕೂಡ ಇದೆ.
ಸೊರಬ ತಾಲೂಕಿನಲ್ಲಿನ ಪ್ರೇಕ್ಷಣೀಯ ಸ್ಥಳಗಳು :
ಇತರ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು : ಕೆಳದಿ, ಇಕ್ಕೇರಿ, ಜೋಗ ಜಲಪಾತ, ಬನವಾಸಿ
ಸೊರಬ ತಾಲೂಕಿನ ಹಳ್ಳಿಗಳು :
ಸೊರಬ ತಾಲ್ಲೂಕಿನಲ್ಲಿ ಬರುವ ಬಹುಮುಖ್ಯ ಊರು 'ಆನವಟ್ಟಿ ಯೂ ಒಂದು.
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಆನವಟ್ಟಿಯಲ್ಲಿ ಗ್ರಾಮ ಪಂಚಾಯಿತಿ ಬರುತ್ತದೆ.ಕುಬಟೂರು ಕುಂತಳರಾಜ ಚಂದ್ರಹಾಸ ರಾಜನು ಆನವಟ್ಟಿಯಲ್ಲಿ ಆನೆ ಕಟ್ಟುವ ಹಟ್ಟಿಯನ್ನು ಮಾಡಿದ್ದರಿಂದ ಇದನ್ನು ಮೊದಲು ಆನೆಹಟ್ಟಿ ಎಂದು ಕರೆಯುತ್ತಿದ್ದರು. ನಂತರ ಇದು ಆನವಟ್ಟಿ ಎಂದು ಪ್ರಸಿದ್ದವಾಗಿದೆ.ಆನವಟ್ಟಿಯಿಂದ 1 ಕಿ.ಮಿ ದೂರದಲ್ಲಿ ಕೋಟಿಪುರದಲ್ಲಿ ಕೈಟಬೇಶ್ವರ ದೇವಸ್ಥಾನ ಇದ್ದು ಅದೂ ಸಹ ಪ್ರಸಿದ್ದವಾಗಿದೆ. ಶಿರಾಳಕೊಪ್ಪ ಸೊರಬ ಹಾನಗಲ್ ಮಧ್ಯದಲ್ಲಿ ಆನವಟ್ಟಿಯಿದ್ದು, ಪ್ರತೀ ಶನಿವಾರದಂದು ಸಂತೆಗೆ ಪ್ರಸಿದ್ದವಾಗಿದೆ. ಸೊರಬ ತಾಲ್ಲೂಕಿನಲ್ಲಿ ಆನವಟ್ಟಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದು ಹೋಬಳಿಯ ಕೇಂದ್ರ ಸ್ಥಾನವಾಗಿರುತ್ತದೆ. ಯಾವುದೇ ಉಪಗ್ರಾಮ ಇರುವುದಿಲ್ಲ. ಊರಿನ ವ್ಯಾಪ್ತಿಯಲ್ಲಿ 1 ಉರ್ದು ಶಾಲೆ ಇದ್ದು, 2 ಸರ್ಕಾರಿ, 1 ಅನುದಾನಿತ, 3 ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 2 ಸರ್ಕಾರಿ, 1ಖಾಸಗಿ ಪ್ರೌಢಶಾಲೆ ಮತ್ತು 1 ಪದವಿ ಪೂರ್ವ ಕಾಲೇಜು, 1 ಪ್ರಥಮ ದರ್ಜೆ ಕಾಲೇಜು ಹಾಗೂ 1 ಸರ್ಕಾರಿ ಡಿ.ಎಡ್ ಕಾಲೇಜು ಇರುತ್ತದೆ. ಅಲ್ಲದೇ 2 ಖಾಸಗಿ I.T.I ಕಾಲೇಜುಗಳಿವೆ. ಇಲ್ಲಿಯ ಒಟ್ಟು ಜನಸಂಖ್ಯೆ 8161 ಇದ್ದು ಕೃಷಿಕರು ಹಚ್ಚಾಗಿರುತ್ತಾರೆ. ಇಲ್ಲಿ ಭತ್ತ, ಜೋಳ, ಹತ್ತಿ, ಅಡಿಕೆ ಮುಖ್ಯ ಬೆಳೆಯಾಗಿದೆ. ಈ ಪಂಚಾಯತಿ 21 ಚುನಾಯಿತ ಸದಸ್ಯರನ್ನೊಳಗೊಂಡ ಅತೀ ದೊಡ್ಡ ಪಂಚಾಯತಿ ಆಗಿದೆ.
ಇತರ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು : ಕೊಟ್ಟಿಪುರ, ಕುಬಟೂರು, ಬಂಕಸಾಣ,ಮೂಡಿ, ತಿಮಪ್ಪ ದೇವರ ಗುಡ್ಡ
ಆನವಟ್ಟಿ ಹೋಬಳಿ ಹಳ್ಳಿಗಳು :