ಕಾವೇರಿ ನದಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಾವೇರಿ
ಮೈಸೂರಿನ ಬಳಿ ಇರುವ ಶಿವನಸಮುದ್ರ ಜಲಪಾತ
ಮೈಸೂರಿನ ಬಳಿ ಇರುವ ಶಿವನಸಮುದ್ರ ಜಲಪಾತ
ಉಗಮ ತಲಕಾವೇರಿ
ಕೊನೆ ಬಂಗಾಳ ಕೊಲ್ಲಿ
ಮೂಲಕ ಹರಿಯುವ ದೇಶಗಳು ಭಾರತ (ಕರ್ನಾಟಕ ಮತ್ತು ತಮಿಳುನಾಡು)
ಉದ್ದ ೭೬೫ ಕಿ.ಮಿ.
ಜಲನಯನ ಪ್ರದೇಶ ೨೭,೭೦೦ ಚದುರ ಕಿ.ಮಿ.

ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈ ನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಮುಖ್ಯವಾಗಿ ದಕ್ಷಿಣ-ಪೂರ್ವ ದಿಶೆಯಲ್ಲಿ ಹರಿಯುವ ಈ ನದಿಯ ಪಥ ಸುಮಾರು ೭೬೫ ಕಿ.ಮಿ.ಗಳಷ್ಟು ಉದ್ದವಾಗಿದೆ. ಕಾವೇರಿ ಜಲಾನಯನ ಪ್ರದೇಶ ೨೭,೭೦೦ ಚದುರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣ ತೀರ್ಧ ಮತ್ತು ಲೋಕಪಾವನಿ ನದಿಗಳನ್ನು ಹೆಸರಿಸಬಹುದು.

ಕಾವೇರಿ 'ದಕ್ಷಿಣ ಗಂಗೆ'ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ.ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ.ಕೊಡಗರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ.

ಪರಿವಿಡಿ

[ಬದಲಾಯಿಸಿ] ಪೌರಾಣಿಕತೆ

ಬ್ರಹ್ಮನ ಮಗಳಾದ ಲೋಪಮುದ್ರೆಯು ಭೂಲೊಕದಲ್ಲಿ ಲೊಕೊದ್ದಾರಕಗಿ ವಾಸಿಸುತಿದ್ದಳು.ಕವೇರನೆಂಬಮುನಿಯು ಬ್ರಹ್ಮನ ಕುರಿತು ತಪಸ್ಸನ್ನಾಚರಿಸಿ ಬ್ರಹ್ಮನಲ್ಲಿ ವರವಾಗಿ ಮಗುವನ್ನುಕೆಲಿದಾಗ ಲೋಪಮುದ್ರೆಯನ್ನೆ ಮಗಳಾಗಿ ಕೊಡುತ್ತಾನೆ.ಒಂದು ದಿನ ಅಲ್ಲ್ಲಿಗೆ ತಪಸ್ಸನ್ನಾಚರಿಸಲು ಬಬಂದ ಅಗಸ್ತ್ಯಮುನಿಯು ಲೋಪಮುದ್ರೆಯನ್ನು ಮದುವೆಯಾಗುವದಾಗಿ ಕೆಳುತ್ತಾನೆ,ಅದಕೆ ಲೋಪಮುದ್ರೆಯು ತನ್ನನ್ನು ಎಂದು ಕಯಿಸಬಾರದು ಕಾಯಿಸಿದರೆ ನಾನು ಸ್ವತಂತ್ರಲು ಇದಕ್ಕೆ ಒಪ್ಪುದಾದರೆ ಮದುವೆಯಾಗುವದಾಗಿ ಹೆಳುತ್ತಾಳೆ ಅದಕ್ಕೆ ಓಪ್ಪಿದ ಅಗಸ್ತ್ಯಮುನಿಯುಲೋಪಮುದ್ರೆಯನ್ನು ಮದುವೆಯಾಗುತ್ತಾನೆ. ಒಂದು ದಿನ ಅಗಸ್ತ್ಯಮುನಿಯು ತನ್ನ ಶಿಷ್ಣಂದಿರಿಗೆ ಪಾಠಮಾಡುತಾ ತಲ್ಲಿನನಾಗಿ ಸಮಯವನ್ನುಮರೆತು ಬಿಡುತ್ತಾನೆ ,ಆಗ ಲೋಪಮುದ್ರೆಯು ಅಲ್ಲಿನ್ದ ಹೊಟು ತಲಕಾವೇರಿಗೆಬಂದು ಅಂರ್ತಜಲದಲ್ಲಿ ಹಾರಿ ನಿರಾಗಿ ಹರಿಯುತ್ತಾಳೆ.ಅವಳು ಕವೇರನೆಂಬ ಮುನಿಯ ಮಗಳಾದುದರಿಂದ ಈ ನದಿಗೆ ಕಾವೇರಿಯೆಂಬ ಹೆಸರು ಬಂದಿದೆ. ಇನ್ನೊಂದು ಕಥೆಯ ಪ್ರಕಾರ ಅಗಸ್ತ್ಯ ಮುನಿಗಳ ಕಮಂಡಲ ಮಗುಚಿ ಬಿದ್ದಾಗ ಅದರ ನೀರು ಹೊರ ಚೆಲ್ಲಿತು ಅದೇ ಕಾವೇರಿ ನದಿಯಾಯಿತು. ಆ ಕಥೆ ಹಿಗಿದೆ ದಕ್ಷಿಣದ ಪ್ರಾಂತ್ಯವು ನೀರಿಲ್ಲದೆ ಬಂಜರಾಗಿತ್ತು. ಹಾಗಾಗಿ ಇಲ್ಲಿನ ಜಲಕ್ಷಾಮವನ್ನು ಹೋಗಲಾಡಿಸಲು ಮುನಿ ಅಗಸ್ತ್ಯರು, ಬ್ರಹ್ಮನ ಆಶಿರ್ವಾದದೊಂದಿಗೆ,ಶಿವನಿಂದ ಪವಿತ್ರವಾದ ಜಲವನ್ನು ಪಡೆದು ಅವರ ಕಮಂಡಲದಲ್ಲಿ ತುಂಬಿದ್ದರು. ಭೋರ್ಗರೆಯುತ್ತಾ ಉಕ್ಕಿ ಹರಿಯುವ ನದಿಯ ಸೃಷ್ಟಿಗಾಗಿ ಸೂಕ್ತ ಜಾಗವನ್ನು ಹುಡುಕುವ ಆಶಯದಿಂದ, ಅಗಸ್ತ್ಯ ಮುನಿಗಳು ದಕ್ಷಿಣ ಭಾಗಕ್ಕೆ ಪ್ರವಾಸ ಕೈಡೊಂಡು ಕೊಡಗಿನ ಬೆಟ್ಟ ಪ್ರದೇಶವನ್ನು ತಲುಪಿದರು. ದಾರಿಯಲ್ಲಿ ತೆರಳುತ್ತಿರುವ ವೇಳೆ ಅವರು ಬಾಲಕನೊಬ್ಬನನ್ನು ಭೇಟಿಯಾದರು. ವಾಸ್ತವವಾಗಿ, ಆ ಬಾಲಕ ವೇಷಮರೆಸಿದ ಗಣೇಶನಾಗಿದ್ದನು. ದೇಹಬಾಧೆ ಪೀಡಿತರಾಗಿದ್ದ ಅಗಸ್ತ್ಯ ಮುನಿಗಳು ಶೌಚಕ್ಕಾಗಿ ಸೂಕ್ತ ಜಾಗವನ್ನು ಹುಡುಕುತ್ತಿದ್ದು, ತನ್ನ ಕೈಲಿರುವ ನೀರಿನ ಕಮಂಡಲವನ್ನು ಜಾಗರೂಕತೆಯಿಂದ ಹಿಡಿದುಕೊಳ್ಳಲು ಆ ಬಾಲಕನನ್ನು ವಿನಂತಿಸಿದರು. ನದಿಯ ಉಗಮಕ್ಕಾಗಿ ಮುನಿಗಳು ಸೂಕ್ತಜಾಗದ ಅನ್ವೇಷಣೆಯಲ್ಲಿ ಇರುವುದನ್ನು ತಿಳಿದಿದ್ದ ಗಣೇಶ ಇದೇ ಜಾಗ ಸೂಕ್ತವಾಗಿದೆ ಎಂದೆನಿಸಿಕಮಂಡಲವನ್ನು ನೆಲದ ಮೇಲೆ ಇಟ್ಟುಬಿಟ್ಟ.

ಅಲ್ಲಿಯೇ ಹಾರಾಡುತ್ತಿದ್ದ ಕಾಗೆಯೊಂದು ಕಮಂಡಲವನ್ನು ತಾಕುವಂತೆ ಕುಳಿತುಕೊಂಡಿತು. ಅಷ್ಟರಲ್ಲಿ ಹಿಂತಿರುಗಿದ ಅಗಸ್ತ್ಯ ಮುನಿಗಳು ಕಾಗೆಯನ್ನು ನೋಡಿ ಧಾವಂತದಿಂದ ಅದನ್ನು ಓಡಿಸಲು ಪ್ರಯತ್ನಿಸಿದಾಗ ಕಮಂಡಲ ನೀರು ಚೆಲ್ಲಿತು. ಸಣ್ಣ ಪ್ರಮಾಣದ ಜಲವು ಜಲಧಾರೆಯಾಗಿ ನದಿಯಾಗಿ ಹರಿಯಿತು. ತಲಕಾವೇರಿಯ ಸ್ಥಳವನ್ನು ಈಗಲೂ ಪವಿತ್ರವೆಂದು ಪರಿಗಣಿಸಲಾಗುತ್ತಿದ್ದು, ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಮಹಾಭಾರತದ ಆದಿಪರ್ವದಲ್ಲಿ ಅರ್ಜುನನು ತೀರ್ಥಯಾತ್ರೆಗೆ ಹೋಗಿದ್ದಾಗ ಈ ನದಿಯಲ್ಲಿ ಸ್ನಾನ ಮಾಡಿದನೆಂಬ ಉಲ್ಲೇಖವಿದೆ.ರಾಜಸೂಯಯಾಗದ ಸಮಯದಲ್ಲಿ ನಕುಲನು ಇಲ್ಲಿಗೆ ಬಂದಿದ್ದ ಪ್ರಸ್ತಾಪ ಸಭಾಪರ್ವದಲ್ಲಿ ಬರುತ್ತದೆ.

[ಬದಲಾಯಿಸಿ] ನದಿಯ ಪಾತ್ರ

ಕೊಡಗಿನ ಬಳಿಯ ಬೆಟ್ಟಗಳನ್ನು ಬಿಟ್ಟ ನಂತರ ಕಾವೇರಿ ನದಿ ದಕ್ಷಿಣ ಪ್ರಸ್ಥಭೂಮಿಯ ಮೇಲೆ ಪೂರ್ವಕ್ಕೆ ಹರಿಯುತ್ತದೆ. ಈ ನದಿಯಲ್ಲಿ ಮೂರು ದ್ವೀಪಗಳಿವೆ - ಕರ್ನಾಟಕದಲ್ಲಿ ಶ್ರೀರಂಗಪಟ್ಟಣ ಮತ್ತು ಶಿವನಸಮುದ್ರ, ಹಾಗೂ ತಮಿಳುನಾಡಿನಲ್ಲಿ ಶ್ರೀರಂಗ. ಶಿವನಸಮುದ್ರದಲ್ಲಿ ಈ ನದಿ ೩೨೦ ಅಡಿಗಳ ಎತ್ತರದಿಂದ ಧುಮುಕಿ, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ. ಭಾರತದ ಮೊದಲ ಜಲವಿದ್ಯುದಾಗಾರ ಇಲ್ಲಿ ೧೯೦೨ ರಲ್ಲಿ ಕಟ್ಟಲ್ಪಟ್ಟು ಬೆಂಗಳೂರು ನಗರಕ್ಕೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತಿತ್ತು.

ಹೊಗೇನಕಲ್ ಜಲಪಾತವಾಗಿ ಬಿದ್ದಾದ ಮೇಲೆ ತಮಿಳುನಾಡನ್ನು ಪ್ರವೇಶಿಸುವ ಈ ನದಿ, ತಂಜಾವೂರು ಜಿಲ್ಲೆಯ ಮುಖಾಂತರ ಹರಿದು ಕೊನೆಗೆ ಇಬ್ಭಾಗವಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

[ಬದಲಾಯಿಸಿ] ಕರ್ನಾಟಕದಲ್ಲಿ ಕಾವೇರಿ

ಕರ್ನಾಟಕದಲ್ಲಿ ಕಾವೇರಿ ನದಿಗೆ ಹನ್ನೆರಡು ಜಲಾಶಯ ಮತ್ತು ಅಣೆಕಟ್ಟುಗಳಿವೆ. ಈ ಎಲ್ಲ ಅಣೆಕಟ್ಟುಗಳ ಮುಖ್ಯೋದ್ದೇಶ ನೀರಾವರಿ. ಮಡದಕಟ್ಟೆಯ ಬಳಿ ಇರುವ ಅಣೆಕಟ್ಟಿನಿಂದ ಹೊರಡುವ ಕಾಲುವೆ ೭೨ ಮೈಲಿಗಳಷ್ಟು ಉದ್ದವಿದ್ದು, ೧೦,೦೦೦ ಎಕರೆಗಳ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಇದೇ ಕಾಲುವೆ ಮೈಸೂರು ನಗರಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನೂ ಭಾಗಶಃ ಒದಗಿಸುತ್ತದೆ. ಶ್ರೀರಂಗಪಟ್ಟಣದ ಬಳಿ ಇರುವ ಬಂಗಾರ ದೊಡ್ಡಿ ನಾಲೆ ಮೈಸೂರಿನ ಒಡೆಯರ್‍ ರಾಜಮನೆತನದ ರಣಧೀರ ಕಂಠೀರವ ಕಟ್ಟಿಸಿದ್ದು. ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯ ಕೃಷ್ಣರಾಜಸಾಗರ.

[ಬದಲಾಯಿಸಿ] ತಮಿಳು ನಾಡಿನಲ್ಲಿ ಕಾವೇರಿ

ತಮಿಳು ನಾಡಿನ ಮೆಟ್ಟೂರು ಎಂಬಲ್ಲಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ.

[ಬದಲಾಯಿಸಿ] ಹೊರಗಿನ ಸಂಪರ್ಕಗಳು

ಮೆಟ್ಟೂರು ಜಲಾಶಯದ ಚಿತ್ರ

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು
ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು