ಎರಡನೇ ಎಲಿಜಬೆಥ್
Wikipedia ಇಂದ
ಎರಡನೇ ಎಲಿಜಬೆಥ್ (ಜನನ: ಏಪ್ರಿಲ್ ೨೧, ೧೯೨೬) ಯುನೈಟೆಡ್ ಕಿಂಗ್‍ಡಮ್ ಮತ್ತು ೧೫ ಇತರ ದೇಶಗಳ ರಾಣಿ. ಈಕೆ ತಂದೆ ಆರನೇ ಜಾರ್ಜ್‍ನ ನಿಧನದ ನಂತರ ಯುನೈಟೆಡ್ ಕಿಂಗ್‌ಡಮ್‌ನ ಪಟ್ಟಕ್ಕೆ ಬಂದು ಜೂನ್ ೨, ೧೯೫೩ರಂದು ಪಟ್ಟಧಾರಣೆ ಮಾಡಿದರು. ಯುನೈಟೆಡ್ ಕಿಂಗ್‌ಡಮ್ ಅಲ್ಲದೆ ಕೆನಡ, ಆಸ್ಟ್ರೇಲಿಯ, ನ್ಯೂ ಜೀಲ್ಯಾಂಡ್, ಜಮೈಕ, ಬಾರ್ಬಡೋಸ್, ಬಹಾಮಾಸ್, ಗ್ರೆನಾಡ, ಪಾಪುಅ ನ್ಯೂ ಗಿನಿ, ಸಾಲೊಮನ್ ದ್ವೀಪಗಳು, ತುವಾಲು, ಸೇಂಟ್ ಲೂಷಿಯ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್, ಬೆಲೀಜ್, ಆಂಟಿಗುವ ಮತ್ತು ಬಾರ್ಬುಡ ಮತ್ತು ಸೇಂಟ್ ಕಿಟ್ಸ್ ಮತ್ತು ನೆವಿಸ್ ರಾಷ್ಟ್ರಗಳ ರಾಣಿ ಕೂಡ.