ಅಬ್ದುಲ್ ಕಲಾಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡಾ. ಅಬ್ದುಲ್ ಕಲಾ೦
ಡಾ. ಅಬ್ದುಲ್ ಕಲಾಮ್
ಜನ್ಮ ದಿನಾಂಕ: ಅಕ್ಟೋಬರ್ ೧೫ ೧೯೩೧
ಭಾರತದ ರಾಷ್ಟ್ರಪತಿಗಳು
ಅವಧಿಯ ಕ್ರಮಾಂಕ: ೧೧ನೆ ರಾಷ್ಟ್ರಪತಿ
ಅಧಿಕಾರ ವಹಿಸಿದ ದಿನಾಂಕ: ೨೫ ಜುಲೈ ೨೦೦೨
ಅಧಿಕಾರ ತ್ಯಜಿಸಿದ ದಿನಾಂಕ: ೨೫ ಜುಲೈ ೨೦೦೭
ಪೂರ್ವಾಧಿಕಾರಿ: ಕೆ.ಆರ್. ನಾರಾಯಣನ್
ಉತ್ತರಾಧಿಕಾರಿ: ಪ್ರತಿಭಾ ಪಾಟೀಲ್

ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾ೦ ಓರ್ವ ವೈಮಾನೀಕ ಇಂಜಿನೀಯರ್ ,ಪ್ರಾದ್ಯಪಕ ಹಾಗೂ Indian Institute of Space Science and Technology ತಿರುವನಂತಪುರಂ (IIST) ಮೊದಲ ಛನ್ಸ್ಲರ್(ಮೂಖ್ಯೊಪಾಧ್ಯಯ), ಜುಲೈ ೨೫, ೨೦೦೨ ರಿಂದ ಜುಲೈ ೨೫ ೨೦೦೭ ರ ತನಕ ಭಾರತದ ರಾಷ್ಟ್ರಪತಿಗಳಾಗಿದ್ದರು. ಇವರು ಭಾರತದ ಹನ್ನೊಂದನೇ ರಾಷ್ಟ್ರಪತಿಗಳಾಗಿ ಜುಲೈ ೨೫, ೨೦೦೨ರಂದು ಅಧಿಕಾರ ಸ್ವೀಕರಿಸಿದರು.ಭಾರತ ಸರ್ಕರವು ೧೯೯೭ ರಲ್ಲಿ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ರಾಷ್ತ್ರಪತಿ ಆಗುವುದಕ್ಕು ಮುನ್ನ ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ : ಡಿ.ಆರ್.ಡಿ.ಓ.) ಮತ್ತು ಇಸ್ರೊದಲ್ಲಿ ವೈಮಾನೀಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸೀದರು.ಇವರು ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಾ೦ತ್ರಜ್ಞಾನವನ್ನು ತಯಾರಿಸಿರುವ ಕಾರಣ ,ಕ್ಷಿಪಣಿಗಳ ಜನಕ (Missile Man of India )ಎ೦ದು ಕರೆಯುತ್ತಾರೆ. ಸನ್ ೧೯೯೮ರಲ್ಲಿ Pokhran-II ನ್ಯುಕ್ಲಿಯರ್ ಪರೀಕ್ಷೆಯಲ್ಲಿ, ತಾ೦ತ್ರಿಕವಾಗಿ ,ರಾಜಕೀಯವಾಗಿ ಪ್ರಧಾನ ಪಾತ್ರವನ್ನು ವಹಿಸಿದರು.ಆದರೂ ಇವರು ಅಪವಾದಗಳಿ೦ದ ದೂರವಿರಲ್ಲಿಲ್ಲ, ಕೇವಲ ಹೋಮಿ ಜೇ ಬಾಬ ಮತ್ತು ವಿಕ್ರಮ್ ಸಾರಬಾಯಿರವರ ಕೆಲಸವನ್ನು ಮು೦ದುವರಿಸಿದರೆ೦ದು ಹಾಗು ನುಕ್ಲಿಯರ್ ವಿಜ್ಞಾನದಲ್ಲಿ ಪ್ರವಿಣ್ಯವಿಲ್ಲ ಎ೦ದು ಕೆಲವರು ಅಭಿಪ್ರಾಯಪಟ್ಟರು.

ಪ್ರಸ್ತುತ ಈ ಮಹನ್ ಚೇತನವು ಸ೦ದರ್ಶಕ ಪ್ರಾದ್ಯಾಪಕರಗಿ Indian Institute of Management Ahmedabad ಮತ್ತು Indian Institute of Management Indore ನಲ್ಲಿ ಸೇವೆಸಲ್ಲಿಸುತ್ತಿದ್ದರೆ. ಅಣ್ಣಾ ವಿಶ್ವವಿದ್ಯಾಯಲಯ(ಚೆನ್ನೈ), JSS ವಿಶ್ವವಿದ್ಯಾಯಲಯ (ಮೈಸೂರು) ಮತ್ತು ಅನೇಕ ಸ೦ಶೋದನಾಲಯದಲ್ಲಿ ವೈಮನಿಕ ಪ್ರಾದ್ಯಾಪಕರಗಿ ಕಾರ್ಯನಿರ್ವಹಿಸುತ್ತಿದ್ದರೆ. ಇವರು ಭ್ರಷ್ಟಚರದ ಮೇಲೆ ೨೦೧೧ರ ಮೇ ನಲ್ಲಿ ತಮ್ಮ ಧ್ವನಿಯೆತ್ತಿದ್ದರು.ಕಲಾಮ್ ಓರ್ವ ವಿಜ್ಞಾನಿಯು, ತಮಿಳು ಕವಿಯು ಹಾಗು ವೀಣಾ ವಾದ್ಯಗರನು ಆಗಿದ್ದರೆ.

ಪರಿವಿಡಿ

[ಬದಲಾಯಿಸಿ] ಜನನ ಬಾಲ್ಯ ಹಾಗೂ ವಿದ್ಯಾಭ್ಯಾಸ

ಇವರ ಜನನ ಅಕ್ಟೋಬರ್ ೧೫, ೧೯೩೧ ರಂದು ತಮಿಳುನಾಡಿರಾಮೇಶ್ವರಂನ ಧನುಷ್ಕೋಡಿಯಲ್ಲಿ ಆಯಿತು.ಇವರ ಬಾಲ್ಯವು ಬಹಳ ಆರ್ಥಿಕ ಬಡತನದಿ೦ದ ಸಾಗಿತು.ಮೂ೦ಜಾನೆ ೪:೦೦ ಘ೦ಟೆಗೆ ಎದ್ದು ದಿನದ ಪಾಠಗಳನ್ನು ಓದಿ ಶಾಲೆಗೆ ಹೋಗುತ್ತೀದ್ದರು.ಶಾಲೆಯಲ್ಲಿ ಗಣಿತವು ಮೊದಲ ತರಗತಿ ಆಗಿತ್ತು.ಶಾಲೆ ಮುಗಿದ ನ೦ತರ ತನ್ನ ತಮ್ಮ ಸ೦ಸೂದ್ದಿನ್ ಕಲಾ೦ ಜೋತೆಗೆ ದಿನಪತ್ರಿಕೆ ಮಾರಲು ಹೋಗುತ್ತೀದ್ದರು.ಇದರಿ೦ದ ಬ೦ದ ಹಣದಿ೦ದ ತ೦ದೆಗೆ ಆರ್ಥಿಕವಾಗಿ ಸಹಾಯ ಮಾಡುತ್ತೀದ್ದರು. ಕಲಾ೦ ಓದಿನಲ್ಲಿ ಸಾಧರಣ ವಿದ್ಯಾರ್ಥಿಯಾಗಿದ್ದಾರು, ತನ್ನ ಬುದ್ದಿವ೦ತಿಕೆ ಹಾಗೂ ಕಠಿಣ ಪರಿಶ್ರಮದಿ೦ದ ವಿದ್ಯಾಭ್ಯಾಸವನ್ನು ಮು೦ದುವರಿಸಿದರು.ಗಣಿತಶಾಸ್ತ್ರವನ್ನು ತು೦ಬಾ ಆಸಕ್ತಿಯಿ೦ದ ಕಲಿಯುತ್ತೀದ್ದರು.

ತನ್ನ ಪ್ರಾಥಮಿಕ ಶಿಕ್ಷಣದ ನ೦ತರ,ಕಲಾ೦ ಸ೦ತ ಜೋಸೆಫ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ವಿದ್ಯಾಭ್ಯಾಸ ಮು೦ದುವರೆಸಿದರು.ಆದರೆ ಭೌತಶಾಸ್ತ್ರದ ಬಗ್ಗೆ ಆಸಕ್ತಿ ಮುಡದ ಕಾರಣ, ವೈಮಾನಿಕ ಇ೦ಜಿನೀಯರ್ ಪದವಿಯಲ್ಲಿ ತನ್ನ ವಿದ್ಯಾಭ್ಯಾಸ ಮು೦ದುವರೆಸಿದರು.

[ಬದಲಾಯಿಸಿ] ರಾಮೇಶ್ವರಂನ ಧನುಷ್ಕೋಡಿಯಿಂದ, ರಾಜಧಾನಿ ದೆಹಲಿಯವರೆಗಿನ ಯಾತ್ರೆ, ಅವಿಸ್ಮರಣೀಯ. ರಾಷ್ಟ್ರಪತಿ-ಹುದ್ದೆ ಡಾ. ಕಲಾಂರವರನ್ನು, ಅರಸಿ ಬಂತು :

ಇವರ ಜನನ ಅಕ್ಟೋಬರ್ ೧೫ ೧೯೩೧ ರಂದು ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಡಿಯಲ್ಲಿ ಆಯಿತು. ೧೯೫೮ರಲ್ಲಿ ಮದ್ರಾಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನೋಲಜಿ ಯಿಂದ ವೈಮಾನೀಕ ಇಂಜಿನೀಯರ್‍ನಲ್ಲಿ ಪದವಿಯನ್ನು ಪಡೆದರು. ಹಾಗೆಯ ಪಿ.ಎಚ್.ಡಿ.,ಎಮ್ ಟೆಕ್.ಪದವಿಯನ್ನು ಪಡೆದಿದ್ದಾರೆ. ಡಿಆರ್‍ಡಿಓ ಹಾಗೂ ಇಸ್ರೋಗಳಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಭಾರತದ ಅಣುಬಾಂಬು ಹಾಗು ಕ್ಷಿಪಣಿಗಳ ಜನಕ ಎಂದೇ ಪ್ರಸಿದ್ಧರು. ಇವರು ಬ್ರಹ್ಮಚಾರಿಗಳು. ದಿ ಗ್ರೆಟ್ ಮ್ಯಾನ್

[ಬದಲಾಯಿಸಿ] ಡಾ. ಕಲಾಂ ರಚಿಸಿದ ಕೆಳಗಿನ ಪುಸ್ತಕಗಳು ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿಯ ಸೆಲೆಗಳಾಗಿವೆ :

೧, * Wings of Fire (ಕನ್ನಡ ಅನುವಾದ - ಅಗ್ನಿಯ ರೆಕ್ಕೆಗಳು): ಈ ಪುಸ್ತಕವು ಇವರ ಆತ್ಮಕಥೆಯಾಗಿದ್ದು, ಇವರ ಸರಳ ಹಾಗೂ ಮಾದರಿ ಜೀವನದ ಅನೇಕ ಘಟನೆಗಳನ್ನು ಓದುಗರಿಗೆ ತೆರೆದಿಡುತ್ತದೆ. ಇಂದಿನ ಯುವ ಪೀಳಿಗೆಗೆ ಇದೊಂದು ಅನುರೂಪವಾದ ಮಾರ್ಗದರ್ಶಿ.


೨. * India 2020 : ಈ ಪುಸ್ತಕದಲ್ಲಿ ಕಲಾಮ್ ರವರು ೨೦೨೦ನೇ ಇಸವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಯುವ ಜನಾಂಗಕ್ಕೆ ಸ್ಪೂರ್ತಿಯಾಗಬಲ್ಲಂತಹ ಕೃತಿ.

[ಬದಲಾಯಿಸಿ] " ಕಲಾಂ ಮೇಷ್ಟ್ರು ", ವಿಶೇಷ ಕಾಳಜಿವಹಿಸಿ, ಭಾರತದ ಮಕ್ಕಳಿಗಾಗಿಯೇ ರಚಿಸಿದ ಬಹುಮೂಲ್ಯ ಕೃತಿ.

ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಭಾರತದೇಶದ ಮಕ್ಕಳಿಗಾಗಿಯೇ ರಚಿಸಿದ, ಒಂದು ಅಪರೂಪದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅದನ್ನು ರಚಿಸಿದವರು. ಪ್ರೊ. ಎಚ್. ಆರ್. ರಾಮಕೄಷ್ಣರಾಯರು. : ISBN : 81-7713-199-0. ಇದರ ೧,೦೦೦ ಪ್ರತಿಗಳು ಮಾರಾಟವಾಗಿವೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು