ವಿಷಯಕ್ಕೆ ಹೋಗು

ಹವ್ಯಕ ಹಬ್ಬಗಳು ಮತ್ತು ಸಂಪ್ರದಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹವ್ಯಕರ ಹಬ್ಬ-ಹರಿ ದಿನಗಳು ; ಸಂಪ್ರದಾಯ; ಆಚರಣೆ- ಸಲಕರಣೆ ಸಂಗ್ರಹ -ಪದ್ದತಿ

[ಬದಲಾಯಿಸಿ]
  • ಪ್ರಸ್ತಾವನೆ: ಹಿಂದೂಗಳಲ್ಲಿ ಬರವ ಹಬ್ಬಗಳಲ್ಲಿ ಹವ್ಯಕರು ಆಚರಿಸುವ ಮುಖ್ಯವದ ಹಬ್ಬಗಳ ರೂಢಿಯಲ್ಲಿರುವ. ಶಿವಮೊಗ್ಗಜಿಲ್ಲೆ ಸಾಗರ ಪ್ರಾಂತದಲ್ಲಿರುವ ಹವ್ಯಕ ಸಮುದಾಯದ ಸಂಪ್ರದಾಯಗಳನ್ನು ಮಾತ್ರಾ ಕೊಟ್ಟಿದೆ. ಆ ಸಂಪ್ರದಾಯಗಳಲ್ಲೂ ಗ್ರಾಮ ಗ್ರಾಮಗಳಿಗೂ ಬೇಧಗಳುಂಟು. ಸಂಪ್ರದಾಯಗಳು, ಶಾಸ್ತ್ರಗಳಲ್ಲಿ ಇಲ್ಲದಿದ್ದರೂ ಜನಪದ ರೂಢಿಗತ ನಡವಳಿಕೆಗಳು. ಆವರವರ ಜಾತಿ ಮತ ಪ್ರದೇಶಗಳಿಗೆ ಈ ಸಂಪ್ರದಾಯಗಳು ಬೇರೆ ಬೇರೆ ಆಗಿರಬಹುದು. ಹಬ್ಬ ಹರಿದಿನಾದಿಗಳಿಗೆ ಬೇರೆಬೇರೆ ಸಂಪ್ರದಾಯಗಳಿವೆ. ಇವು ಬರೆದಿಟ್ಟವುಗಳಲ್ಲ. ಆಯಾ ಮನೆತನದವರು ಬಹುಕಾಲದಿಂದ ನಡೆಸಿಕೊಂಡುಬಂದ ಸಾಮಾಜಿಕ ನೆಡವಳಿಕೆಗಳು.

ಯುಗಾದಿ

[ಬದಲಾಯಿಸಿ]

  • ೧. ಯುಗಾದಿ - ಚೈತ್ರ ಶುಕ್ಲ ಪಾಡ್ಯ
  • ಸಂಗ್ರಹ : ಅರಿಸಿನ; ಕುಂಕುಮ; ಮಾವಿನಸೊಪ್ಪು; ಪಂಚಾಮೃತ; ದೇವರಿಗೆ ಹತ್ತಿಯ ಗೆಜ್ಜೆ-ವಸ್ತ್ರ , ಹಬ್ಬದ ಅಡಿಗೆಗೆ ಬೇಕಾದ ವಸ್ತುಗಳು.
  • ಮನೆ ಯವರೆಲ್ಲರೂ ತಲೆಗೆ ಸ್ನಾನ ಮಾದುವುದು ಹೊಸ ಬಟ್ಟೆ ಉಡುವುದು.
  • ೧. ಬಾಗಿಲಿಗೆ , ದೇವರ ಮಂಟಪಕ್ಕೆ ಮಾವಿನ ತೋರಣ ಕಟ್ಟುವುದು.
  • ೨. ಮನೆಯ ದೇವರ ಪೂಜೆ ; ಮಾವಿನ ಸೊಪ್ಪು ಕಟ್ಟಿ ವಿಶೇಷ ಪೂಜೆ ಮಾಡುವುದು.
  • ೩. ನೈವೇದ್ಯ ;- ಹೋಳಿಗೆ, ಪಾಯಸ, ಚಿತ್ರಾನ್ನ, ಬೇವು-ಬೆಲ್ಲ, ಪಾನಕ, ಕೋಸುಂಬರಿ, ಹಾಲು- ಮೊಸರು.
  • ೪. ವೈಶ್ವದೇವ- ಮನೆಯ ಸಂಪ್ರದಾಯವಿದ್ದಂತೆ ಗಣ-ಭೂತ -ಚೌಡಿ -ಯಕ್ಷೆಗಳಿಗೆ ನೈವೇದ್ಯ ಕೊಡುವುದು.
  • ೫. ಹೊಸ ಪಂಚಾಂಗ ಓದುವುದು - ವರ್ಷಫಲ; ಮಳೆಯ ಭವಿಷ್ಯ ಇತ್ಯಾದಿ ತಿಳಿಯುವುದು.

ಶ್ರೀ ರಾಮ ನವಮಿ  :

[ಬದಲಾಯಿಸಿ]

  • ೨. ಶ್ರೀ ರಾಮ ನವಮಿ  : ಚೈತ್ರ ಶುಕ್ಲ ನವಮಿ
  • ೧. ಸಂಗ್ರಹ : ಅರಿಸಿನ-ಕುಂಕುಮ, ಮಾವಿನ ಸೊಪ್ಪು, ಮಂಗಳಾಕ್ಷತೆ, ತೆಂಗಿನಕಾಯಿ.
  • ೨. ತಲೆ ಸ್ನಾನ ಇಡೀದಿನ ಒಪ್ಪತ್ತು. ( ಗೋಧಿ ತಿಂಡಿ )
  • ೩. ನೈವೇದ್ಯ : ಪಾನಕ, ಕೋಸುಂಬರಿ, ಒಪ್ಪತ್ತಿಗೆ ಮಾಡಿದ ತಿಂಡಿ. ಮಧ್ಯಾಹ್ನ : ಪೂಜೆ,ರಾಮನವಮಿಯ ವಿಶೇಷ ಪೂಜೆ, ಶ್ರೀರಾಮ ಅಷ್ಟೋತ್ತರ ನಾಮ ಪೂಜೆ,

ಅಥವಾ ವಿಷ್ಣು ಸಹಸ್ರನಾಮ ಪೂಜೆ ಮಾಡಬಹುದು. ರಾತ್ರಿ : ಮಂಗಳಾರತಿ - ಒಪ್ಪತ್ತಿನ ಉಪಾಹಾರ

ಚಿತ್ರಾಪೂರ್ಣಿಮಾ ಹುಣ್ಣಿಮೆ  :

[ಬದಲಾಯಿಸಿ]

  • ೩.ಚಿತ್ರಾಪೂರ್ಣಿಮಾ ಹುಣ್ಣಿಮೆ  : ಚೈತ್ರ ಶುಕ್ಲ ಪೂರ್ಣಿಮೆ

  • ೧. ಮನೆ ದೇವರ ಪೂಜೆ
  • ೨. ಸಂಗ್ರಹ : ತೆಂಗಿನಕಾಯಿ ಹಣ್ಣು.
  • ೩. ನೈವೇದ್ಯ : ಪಾಯಸ - ಚಿತ್ರಾನ್ನ . ಮತ್ತುಗದ ಎಲೆಯಲ್ಲಿ ಚಿತ್ರಾನ್ನ ತಿನ್ನುವುದು

ಪ್ರಥಮ ಏಕಾದಶಿ

[ಬದಲಾಯಿಸಿ]

೪. ಪ್ರಥಮ ಏಕಾದಶಿ  : ಆಷಾಢ ಶುಕ್ಲ ಏಕಾದಶಿ

  • ೧. ದೇವರ ಪೂಜೆ (ವಿಷ್ಣು ಪ್ರೀತ್ಯರ್ಥ)
  • ೨. ತಲೆ ಸ್ನಾನ ಮಾಡುವುದು : ಇಡೀ ದಿನ ಉಪವಾಸ (ಗೋಧಿ ಉಪಾಹಾರ) ವೃದ್ಧರು ಚಿಕ್ಕಮಕ್ಕಳು ರೋಗಿಗಳಿಗೆ ನಿಯಮವಿಲ್ಲ.
  • ೩. ನೈವೇದ್ಯ : ಮಾಡಿರುವ ಉಪಾಹಾರ
  • ೪. ಬಿಳೀ ಕಲ್ಲು ಕುಟ್ಟಿ ಪುಡಿ ಮಾಡಿ ರಂಗವಲ್ಲಿ ಹಾಕಬೇಕು

ನಾಗರ ಪಂಚಮಿ

[ಬದಲಾಯಿಸಿ]

೫ನಾಗರ ಪಂಚಮಿ  : ( ಶ್ರಾವಣ ಶುದ್ಧ ಪಂಚಮಿ.)

  • ೧. ಬೆಳಿಗ್ಗೆ ಮುಂಚೆ ಎಲ್ಲರೂ ತಲೆಗೆಸ್ನಾನ ಮಾಡಿ ಪೂಜೆ ಮಾಡುವುದು.
  • ೨. ಸಂಗ್ರಹ : ಅರಿಸಿನ, ಕುಂಕುಮ , ಮಂಗಳಾಕ್ಷತೆ, ಹೂವು, ಮಾವಿನ ಸೊಪ್ಪು, ಎರಡು ತೆಂಗಿನಕಾಯಿ , ಹಣ್ಣು, ತಾಂಬ-ಹಾಲು (ಕಾಯಿಸದ ಹಾಲು),ಎರಡು ಬಟ್ಟಲಲ್ಲಿ ಎರಡೂಕಡೆ ಒಂದೊಂದು, ಹತ್ತಿಯ ಗೆಜ್ಜೆವಸ್ತ್ರ,
  • ೩. ಪೂಜೆ : ಪ್ರತಿಷ್ಟೆ ಮಾಡಿದ ನಾಗರ ಕಲ್ಲಿಗೆ ಪೂಜೆ. ನಾಗರಕಲ್ಲಿಗೆ ಅಭಿಷೇಕ-ತನುಎರೆಯುವುದು-ಹಾಲಿಗೆ ಬಾಳೇಹಣ್ಣು ಹಾಕಿ ಮಾಡುವುದು.
  • ೪. ನೈವೇದ್ಯ : ಚಪ್ಪೆ ಅಕ್ಕಿದೋಸೆ (ಉಪ್ಪು ಹಾಕದೆಇರುವ), ಎಳ್ಳುಉಂಡೆ,
  • ೫. ಆದಿನವೇ ಹುರಿದ ಅರಳು-ಕಾಳು, ತಾಂಬೂಲ,ಹಾಲು ಇತ್ಯಾದಿ.
  • ಮದ್ಯಾಹ್ನ ಹಬ್ಬದ ಊಟ -ರಾತ್ರಿ ಉಪವಾಸ ಅಥವಾ ಗೋಧಿ ತಿಂಡಿ.
  • ರಾತ್ರಿ ಮದರಂಗಿ ಸೊಪ್ಪು ಬೀಸಿ ಚಟ್ಣಿ ಮಾಡಿ ಎಲ್ಲರೂ ಕೈ ಬೆರುಳ ಉಗುರಿಗೆ ಹಚ್ಚಿಕೊಳ್ಳುವುದು.

ಉಪಾಕರ್ಮ:

[ಬದಲಾಯಿಸಿ]

  • ೬.ಉಪಾಕರ್ಮ: ಶ್ರಾವಣ ಶುದ್ಧ ಪೂರ್ಣಿಮಾ.
  • ೧. ತಲೆ ಸ್ನಾನ .
  • ೨. ಸಂಗ್ರಹ : ಅರಿಸಿನ ಕುಂಕುಮ , ಮಂಗಳಾಕ್ಷತೆ, ಹಣ್ಣು ಕಾಯಿ, ತಾಂಬೂಲ ಗೋಮೂತ್ರ ಪಂಚಾಮೃತ, ಗಂಡಸರು:- ಹೊಸ ಜನಿವಾರಗಳು, ಪಂಚಗವ್ಯಕೆ ಬೇಕಾದ ವಸ್ತುಗಳು ದರ್ಭೆ,ತೊಳೆದ ಮುಷ್ಟಿ ಅಕ್ಕಿ ತರ್ಪಣಕ್ಕೆ,ಮಾತೃ-ಪಿತೃ ವರ್ಗಗಳ ಪಟ್ಟಿ.
  • ೩. ಪೂಜೆ : ಮನೆ ದೇವರಿಗೆ ಪೂಜೆ. ಹೊಸ ಜನಿವಾರ ಪೂಜೆ ಮಾಡಿ ಹಾಕಿಕೊಳ್ಳುವುದು.
  • ೪. ನೈವೇದ್ಯ: ಹೋಳಿಗೆ ಚಿತ್ರಾನ್ನ, ಅನ್ನ.
  • ೫. ರಾತ್ರಿ ಉಪವಾಸ.

ಸಿಂಹ ಸಂಕ್ರಾಂತಿ :

[ಬದಲಾಯಿಸಿ]

  • ೭. ಸಿಂಹ ಸಂಕ್ರಾಂತಿ : ಹೊಸ್ತಿಲ ಪೂಜೆ ಸಂಕ್ರಾಂತಿ
  • ೧. ಸಂಗ್ರಹ : ಅರಿಸಿನ - ಕುಂಕುಮ, ಮಂಗಳಾಕ್ಷತೆ , ಮಾವನ ಚನಕೆ, ಎರಡು ತೆಂಗಿನಕಾಯಿ, ಹಣ್ಣು , ಹಲಸಿನ ಬೀಜದಿಂದ ಮಾಡಿದ ಭಕ್ಷ್ಯ, ಊದಿನಕಡ್ಡಿ,Uಜ್ಜೆ -ವಸ್ತ್ರ ,ತುಪ್ಪದ ದೀಪ.
  • ೨. ವಾಸ್ತು - ಹೊಸಿಲ ಪೂಜೆ.
  • ೩. ದೇವರ ಪೂಜೆ  : ಯಥಾವಿಧಿ
  • ೪. ನೈವೇದ್ಯ : ಪಾಯಸ ,ಅನ್ನ-ಅಡುಗೆ.

ಶ್ರೀ ಕೃಷ್ಣ ಜನ್ಮಾಷ್ಟಮಿ :

[ಬದಲಾಯಿಸಿ]

  • ೮. ಶ್ರೀ ಕೃಷ್ಣ ಜನ್ಮಾಷ್ಟಮಿ :-ಶ್ರಾವಣ ಬಹುಳ ಅಷ್ಟಮಿ
  • (ರಾತ್ರಿ ೧೨ ಗಂಟೆ ಪೂಜೆಗೆ ಅಷ್ಟಮಿ ಇರಬೇಕು)
  • ೧. ಸಂಗ್ರಹ : ಅರಿಸಿನ ಕುಂಕುಮ, ಮಂಗಳಾಕ್ಷತೆ, ಊದಿನಕಡ್ಡಿ, ಗೆಜ್ಜೆ-ವಸ್ತ್ರ , ಹಣ್ಣುಕಾಯಿ ,ಪಂಚಾಮೃತ ,ಹಸಿಕಡಲೆ ,ಬೆಣ್ಣೆ , ಮೊಸರು, ಹಾಲು.ತುಪ್ಪದ ದೀಪ. ಸಂಜೆಹೂ, ವಿಷ್ಣುಕಾಂತಿ,
  • ೨. ನೈವೇದ್ಯ: ರೊಟ್ಟಿ, ಹೆಸರುಗಂಜಿ (ಹೆಸರುಬೇಳೆ ಪಾಯಸ) , ಸಿಹಿ ಇಡ್ಳಿ, ಅವಲಕ್ಕಿ,ಹಣ್ಣು ಕಾಯಿ, ಹಸಿಕಡಲೆ, ಬೆಣ್ಣೆ ಮೊಸರು, ಹಾಲು, ಚಕ್ಕುಲಿ, ಹುಕ್ಕರಿಕೆ,ಇತ್ಯಾದಿ.
  • ೩. ಪೂಜೆ: ರಾತ್ರಿ ವಿಶೇಷ ಪೂಜೆ, ಶ್ರೀಕೃಷ್ಣನ ಅಷ್ಟೋತ್ತರ, ವಿಷ್ಣು ಸಹಸ್ರ ನಾಮ, ಪುರುಷ ಸೂಕ್ತ, ಅನುಕೂಲವಾದದ್ದು ಮಾಡಬಹುದು. ರಾತ್ರಿ ತಲೆಗೆ ಸ್ನಾನ ಮಾಡಿ ಮಡಿಯಿಂದ ಪೂಜೆ ಮಾಡಬೇಕು . ರಾತ್ರಿ ವೀಳೆಯದ ಎಲೆಯಲ್ಲಿ ಸ್ವಲ್ಪ ಬೆಣ್ಣೆಯನ್ನು ದೇವರ ಮುಂದೆ ಇಟ್ಟಿರಬೇಕು.

ಗೌರಿಹಬ್ಬ

[ಬದಲಾಯಿಸಿ]

  • ೯ ಗೌರಿಹಬ್ಬ (ಭಾದ್ರಪದ ಶುದ್ಧ ತದಿಗೆ)
  • ೧. ಸಂಗ್ರಹ : ಅರಿಸಿನ ಕುಂಕುಮ, ಮಂಗಳಾಕ್ಷತೆ, ಊದಿನಕಡ್ಡಿ, ಅ, ಅಕ್ಕಿ ಕಾಯಿ , ೫ಹಣ್ಣು ಹೂವು, ಬಾಗಿನದ ವಸ್ತುಗಳು,- ೧ ಗೌರಿಗೆ -ಉಳಿದದ್ದು -೧ ಬಾಗಿನ ಕೊಡುವಷ್ಟು, ೧ ಜನಿವಾರ, ಪಂಚಾಮೃತ, ಹಾಲು , ಮಜ್ಜಿಗೆ, ಕರ್ಪೂರ, ಕುಡಿಬಾಳೆಗಳು, ಗೌರಿಹೂ, ಗೆಜ್ಜೆವಸ್ತ್ರ(೧೬)ಎಳೆಯದು, ತುಪ್ಪದ ದೀಪಕ್ಕೆತುಪ್ಪದ ಬತ್ತಿಗಳು.
  • ೨. ಬಾಗಿನಕ್ಕೆ ಸಂಗ್ರಹ : ಅಕ್ಕಿ , ಕಾಯಿ ದುಡ್ಡು, ಬಳೆ,ಕರಿಮಣಿ, ಹೂ,ಕಣ, ಅರಿಸಿನ-ಕುಂಕುಮ,
  • ೩. ಪೂಜೆ : ತಲೆಗೆಸ್ನಾನ ಮಾಡಿ ಶಾಸದಂತೆ ಪೂಜೆಮಾಡುವುದು. ರಾತ್ರಿ ಉಪಾಹಾರ ಮಾಡುವುದು.
  • ೪. ನೈವೇದ್ಯ : ಅನ್ನ , ಹುಳಿ, ಕೊಸುಂಬರಿ, ಮೊಸರುಗಾಯಿ, ಹಯಗ್ರೀವ , ಚಿತ್ರಾನ್ನ, ಶಾವಿಗೆ, ಪಾಯಸ, ಬುತ್ತಿಅನ್ನ, ಪಲ್ಯ , ಸಾಸುವೆ,
  • ವಿಶೇಷ :-ಎಡೆ ಇಡಬೇಕು.

ಗಣಪತಿ ಹಬ್ಬ

[ಬದಲಾಯಿಸಿ]

  • ೧೦. ಗಣಪತಿ ಹಬ್ಬ (ಭಾದ್ರಪದ ಶುದ್ಧ ಚೌತಿ)
  • ಶ್ರೀ ಗಣೇಶ ಚತುರ್ಥಿ-ಶ್ರೀಸಿದ್ದಿವಿನಾಯಕ ವೃತ.
  • ೧. ದೇವರ ಪೂಜೆ-ಮೃತ್ತಿಕಾ ಗಣಪತಿಯನ್ನು ತಂದು ವೃತ ಪ್ರಕಾರ ಪೂಜೆ
  • ೨. ಸಂಗ್ರಹ :ಅರಿಸಿನ-ಕುಂಕುಮ, ಮಂಗಳಾಕ್ಷತೆ, ಊದಿನಕಡ್ಡಿ, ಕರ್ಪುರ, ಹೂ, ದರ್ಭೆ,ದೂರ್ವೆ ಕಳ್ಳಹೂ (ಕಾಡು-ಪುಷ್ಪ), ವಿಷ್ಣುPಂತಿ, ಎಲ್ಲಾಹೂ ಗಿಡದ ಪತ್ರೆ ಕುಡಿ, ಜನಿವಾರ, ಎಲೆ ಅಡಿಕೆ, ತೆಂಗಿನಕಾಯಿ-೧೦, ಕುಡಿಬಾಳೆ, ಗೆಜ್ಜೆ-ವಸ್ತ್ರ-೨೧ ಎಳೆಯದು, ಬಾಗಿನದ ವಸ್ತುಗಳು,ಅಕ್ಕಿ ,ತುಪ್ಪ, ತುಪ್ಪದ ಬತ್ತಿಗಳು, ಬತ್ತಿ ಕಟ್ಟು, ಆರತಿ ಬಟ್ಟಲು, ಹಾಲು, ಮಜ್ಜಿಗೆ, ಪಂಚಾಮೃತ.
  • ೩. ಪಳಿಯುಳಿಕೆ : ಗಣಪತಿಯನ್ನು ಇಡುವ ಮಂಟಪದ ಮೇಲೆ- ಎದುರಿನಲ್ಲಿ, ತರಕಾರಿ, ತೆಂಗಿನಕಾಯಿ, ಹಣ್ಣುಗಳನ್ನು ಕಟ್ಟುವುದು.
  • ೪. ನೈವೇದ್ಯ : ಹಾಲು -ಮಜ್ಜಿಗೆ, ಇಡ್ಡಲಿ, ಅಕ್ಕಿ ಪಾಯಸ, ಕಾಯಿ ಕಡುಬು, ಪಂಚ ಕಜ್ಜಾಯ, ೨೧ ಮೋದಕ, ಕರ್ಜಿ-ಕಾಯಿ, ಪೂರಿ,ಉಚಿಡ್ಳೆ-ಕಾಳು, ಕೊಸುಂಬರಿ, ಕಾಯಿಚಟ್ನಿ.
  • ೫. ಗಣಪತಿ ದೇವಾಲಯಕ್ಕೆ ನೈವೇದ್ಯಕ್ಕೆ ತೆಗೆದುಕೊಂಡು ಹೋಗುವುದು ಚೌಡಿಗೆ ನೈವೇದ್ಯ. (ಸಂಪ್ರದಾಯ ಇದ್ದಂತೆ). ವೈಶ್ವದೇವ ಮಾಡುವುದು.
  • ೬. ಪೂಜೆ: ಮನೆ ದೇವರ ಪೂಜೆ, ವೃತವಿದ್ದರೆ -ವೃತ ಪದ್ದತಿಯಂತೆ ಪ್ರಾಣ-ಪ್ರತಿಷ್ಠಾಪನೆ ಸಹಸ್ರನಾಮ ಇತ್ಯಾದಿಪೂಜೆ, ಇಲ್ಲದಿದ್ದರೆ ದೇವರ ಪೂಜೆ ಮತ್ತು ಗಣಪತಿ ಅಷ್ಠೋತ್ತರಶತನಾಮ , ಸಹಸ್ರನಾಮ ಪೂಜೆ.
  • ೭. ಗಣಪತಿ ಇದ್ದಷ್ಟು ದಿನವೂ ಮೂರುಹೊತ್ತು ಪೂಜೆ,ಮಂಗಳಾರತಿ, ನೈವೇದ್ಯ. ಪಂಚಮಿದಿವಸ ಗಣಪತಿ ಬಿಡುವುದಾದರೆ - ಪೂಜೆ , ಪಂಚಾಮೃತ, ಹಣ್ಣು ಕಾಯಿ, ಹಬ್ಬದ ಅಡುಗೆಯಂತೆ -ಒಂದು ಸಿಹಿ, ಅನ್ನ-ಎಲ್ಲಾ ಆಸೆ (ಅಡುಗೆ), ಚಿತ್ರಾನ್ನ, ಅಂಬೊಡೆ, ಬುತ್ತಿಅನ್ನ, -ನೈವೇದ್ಯ.
  • ೮. ಅದೇ ರಾತ್ರಿ ಗಣಪತಿ ಬಿಡುವುದಾದರೆ -ಬಿಡುವ ಮುಂಚೆ ನೈವೇದ್ಯ, ಮಹಾಮಂಗಳಾರತಿ , ಪ್ರಸಾದ ಹಂಚುವುದು, ಪಳುವಳಿಕೆ ಬಿಚ್ಚುವುದು. ಪಟಾಕಿ ಹೊಡೆಯುವುದು, ಜಗುಲಿಯಮೇಲೆ ಗಣಪತಿಯನ್ನು ಇಟ್ಟು ದೂರ್ವೆಯನ್ನು ಮಜ್ಜಿಗೆಯಲ್ಲಿ ಅದ್ದಿ ಗಣಪತಿಗೆ ಸವರುವುದು, ಅಕ್ಕಿಯನ್ನು ಎರಡೂ ಭುಜಗಳಿಗೆ ಹಾಕಿ ಆರತಿ ಮಾಡಿ ಗಣಪತಿಯನ್ನು ನೀರಿನಲ್ಲಿ ಮುಳುಗಿಸಿದ ನಂತರ ವೀಳೆಯದ ಎಲೆಯ ಮೇಲೆ ಕರ್ಪೂರ ಹಚ್ಚಿ ತೇಲಿ ಬಿಡುವುದು. ಚಂದ್ರ ದರ್ಶನವಾದರೆ ಶಮಂತಕೋಪಾಖ್ಯಾನ ಕೇಳಬೇಕು.

ಉಮಾಮಹೇಶ್ವರನ ವೃತ.

[ಬದಲಾಯಿಸಿ]

  • ೧೧.ಉಮಾಮಹೇಶ್ವರನ ವೃತ.
  • ೧. ದೇವರ ಪೂಜೆ
  • ೨. ಸಂಗ್ರಹ: ಹಣ್ಣುಕಾಯಿ,ತುಪ್ಪದ ದೀಪ,
  • ೩. ನೈವೇದ್ಯ : ಮಹಾ ನೈವೇದ್ಯ, ಹಣ್ಣು ಕಾಯಿ.
  • ೪. ಒಪ್ಪತ್ತು  : ರಾತ್ರಿ ಉಪಾಹಾರ.

ಮಹಾನವರಾತ್ರಿ

[ಬದಲಾಯಿಸಿ]

  • ೧೨ಮಹಾನವರಾತ್ರಿ
  • ೧. ಆಶ್ವಯುಜ ಮಾಸದ ಶುದ್ಧ ಪಾಡ್ಯದಿಂದ ನವಮಿಯವರೆಗೆ ಒಂಭತ್ತುದಿನ-
  • ೨. ದಶಮಿಯ ದಿನ - ವಿಜಯ ದಶಮಿ ಆಚರಣೆ.
  • ೩. ಒಂಭತ್ತು ದಿನವೂ ವಿಶೇಷ ಪೂಜೆ .
  • ೪. ಸಂಗ್ರಹ  : ಹಣ್ಣು ಕಾಯಿ, ತುಪ್ಪದ ದೀಪ ಬತ್ತಿ , ಇತ್ಯಾದಿ.ಮೂಲಾ ನಕ್ಷತ್ರ ಇರುವ ದಿನ ಶಾರದಾ ಪೂಜೆಗೆ ಬೇಕಾಗುವ ವೇದ- ಪುರಾಣಾದಿಗಳ ಪುಸ್ತಕಗಳು.
  • ಮಹಾನವಮಿಯ ದಿನ- ಆಯುಧಪೂಜೆಗೆ ಬೇಕಾದ ವ್ಯವಸಾಯದ ಮತ್ತು ಇತರೆ ಆಯುಧಗಳನ್ನು ತೊಳೆದು ಪೂಜೆಗೆ ಅನುಕೂಲವಾದ ಸ್ಥಳದಲ್ಲಿ ಶುಚಿ ಮಾಡಿ ರಂಗೋಲಿ ಹಾಕಿ ಸಂಗ್ರಹಿಸಿ ಇಟ್ಟುಕೊಳ್ಳುವುದು.
  • ೫. ಪೂಜೆ  : ವಿಶೇಷ ಪೂಜೆ , ದೇವಿಗೆ ಸಂಬಂಧಪಟ್ಟ ಯಾವುದೇ ವಿಶೇಷ ಪೂಜೆ ಮಾಡಬಹುದು. ಶಾರದಾ ಪೂಜೆ ಇರುವ ದಿನ ಗ್ರಂಥಗಳನ್ನು ದೇವರ ಮಂಟಪದ ಹತ್ತಿರವಿಟ್ಟು ಪೂಜೆ ಮಾಡುವುದು . ಶಾರದ ಪೂಜೆಗೆ ಗ್ರಂಥಗಳ ಮೇಲೆ , ಒಂದು ಕಾಗದ ಅಥವಾ ಪಾಟಿಯ ಮೇಲೆ ಶಾರದಾ ಸ್ತುತಿಯನ್ನು ಬರೆದಿಟ್ಟು ಪೂಜೆಮಾಡುವ ಪದ್ದತಿ ಇದೆ. ನವರಾತ್ರಿ ವೃತ ಇರುವವರು ಪದ್ದತಿಯಂತೆ ಹಗಲು ಉಪವಾಸವಿದ್ದು ದಿನವೂ ರಾತ್ರಿ ಪೂಜೆ ಮಾಡುವುದು. (ಶಾರದಾ ಸ್ತೋತ್ರ : ನಮಸ್ತೇ ಶಾರದಾ ದೇವೀ ಕಾಶ್ಮೀರ ಪುರ ವಾಸಿನೀ| ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾ ದಾನಂಚ ದೇಹಿಮೇ || )
  • ೬.ಅದೇ ದಿನ ದೇವರಮಂಟಪದಲ್ಲಿ ಬೆಳ್ಳಿಯ ನಾಣ್ಯವನ್ನೂ, ಒಂದು ಆಭರಣವನ್ನೂ ಇಟ್ಟು ಶಾರದಾ ಪೂಜೆಯ ಜೊತೆಗೇ ಲಕ್ಷ್ಮೀ ಪೂಜೆಯನ್ನೂಮಾಡುವ ಪದ್ದತಿ ಇದೆ. ಅದನ್ನು ಕೆಲವರು ಮಹಾನವಮಿ ಅಥವಾ ವಿಜಯ ನವಮಿಯ ದಿನ ಮಾಡುವರು.
  • ೭. ನೈವೇದ್ಯ ; ಒಂಭತ್ತು ದಿನವೂ ಒಂದು ಸಿಹಿ, ಹಣ್ಣು ಕಾಯಿ. ಮಹಾನಮಿಯ ದಿನ ಆಯುಧ ಪೂಜೆ ಮಾಡುವ ಸಂಪ್ರದಾಯ ಇರುವವರು ಮನೆ ದೇವರ ಪೂಜೆಯ ನಂತರ ಆಯುಧಗಳಿಗೂ, ವಾಹನಗಳಿಗೂ ಪೂಜೆ ಮಾಡುವುದು. (ಕೆಲವರು ಆಯುಧ ಪೂಜೆಯನ್ನು ವಿಜಯ ದಶಮಿಯ ದಿನ ಅಥವಾ ದೀಪಾವಳಿಯ ದಿನ ಮಾಡುತ್ತಾರೆ.)
  • ೮. ವಿಜಯ ದಶಮಿ  ; ವಿಶೇಷ ಪೂಜೆ ಮಾಡಿ ಹಬ್ಬದ ಅಡುಗೆಯ ನೈವೇದ್ಯ. ಗೊಂಬೆ ಪೂಜೆ - ಬನ್ನಿ ಪೂಜೆ ( ಶಮೀ ಪೂಜೆ) ಮಾಡಿ, ಬನ್ನಿಯನ್ನು ಹಿರಿಯರಿಗೆ ಕೊಟ್ಟು ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು. ಹೊಸ ಫಸಲಿನ (ಅಡಿಕೆ ಕೊನೆ-ಭತ್ತದ ಕದಿರು) ಪೂಜೆ ಮಾಡುವ ಸಂಪ್ರದಾಯ ಕಲವು ಕುಟುಂಬಗಳಲ್ಲಿ ಇದೆ.
  • ೯. ಪೂಜೆಯ ನಂತರ ಶಾರದಾ ದೇವಿ ಮತ್ತು (ಲಕ್ಷ್ಮೀ)ದೇವೀ ವಿಸರ್ಜನೆ ಮಾಡಬೇಕು.
  • ೧೦. ಮಹಾನವಮಿಯ ದಿನ ಒಪ್ಪತ್ತು ಮಾಡುವ ಪದ್ದತಿ ಇದ್ದಲ್ಲಿ ಹಾಗೆ ಮಾಡುವುದು.

ಕೊಡೆ ಅಮಾವಾಸ್ಯೆ

[ಬದಲಾಯಿಸಿ]
  • ೧೩ಕೊಡೆ ಅಮಾವಾಸ್ಯೆ
  • ದೇವರಪೂಜೆ-ಕಾಲು ದೀಪದ ಪೂಜೆ ( ಗಂಡನ ಪೂಜೆ)
  • ಸಂಗ್ರಹ  : ಹಣ್ಣು ಕಾಯಿ ಮಾವಿನ ಚನಕೆ
  • ನೈವೇದ್ಯ: ಹೋಳಿಗೆ, ಚಕ್ಕುಲಿ, ಪಾಯಸ ,ಗೋಧಿ ಸಿಹಿ , ಕರಿದ ಭಕ್ಷ್ಯ
  • ಹೊಸ ವಧೂವರರಿಗೆ ; ಹೊಸ ಛತ್ರಿಯ ಉಡುಗೊರೆ .

ಬಸವನ ಅಮಾವಾಸ್ಯೆ.

[ಬದಲಾಯಿಸಿ]
  • ೧೪.ಬಸವನ ಅಮಾವಾಸ್ಯೆ.
  • ೧. ದೇವರ ಪೂಜೆ  : ಮಣ್ಣಿ ನಲ್ಲಿ ಬಸವನನ್ನು ಮಾಡಿ ಪ್ರಜೆ ಮಾಡಬಹುದು . ಪದ್ದತಿ ಇದ್ದಂತೆ. ಪತಿಯ ಪೂಜೆಯನ್ನೂ ಮಾಡುವಪದ್ದತಿ ಇದೆ.
  • ೨. ಸಂಗ್ರಹ : ನೈವೇದ್ಯದ ಅಡುಗೆ, ಹಣ್ಣು- ಕಾಯಿ.
  • ೩. ನೈವೇದ್ಯ : ಪಾಯಸ , ಕರಿದದ್ದು ( ಪೂರಿ) , ಕೋಡು ಬಳೆ.

ಭೂಮಿ ಹುಣ್ಣಿಮೆ

[ಬದಲಾಯಿಸಿ]

  • ೧೫. ಭೂಮಿ ಹುಣ್ಣಿಮೆ (ಆಶ್ವಯಜ ಶುಕ ಪೂರ್ಣಿಮಾ)
  • ೧. ಕ್ರಮ : ದೇವರ ಪೂಜೆ , ಅಡಿಕೆ ತೋಟದಲ್ಲಿ ಅಡಿಕೆ ಮರಕ್ಕೆ ( ಬಾಳೆ ಮರ ಇದ್ದರೆ ಅದನ್ನೂ ಸೇರಿಸಿ) ಪೂಜೆ. (ತಲೆಗೆ ಸ್ನಾನ.)
  • ೨. ಸಂಗ್ರಹ : ಅರಿಸಿನ ಕಂಕುಮ, ಮಂಗಳಾಕ್ಷತೆ, ಮಾವಿನ ಸೊಪ್ಪು, ಊದಿನ ಕಡ್ಡಿ, ಕರ್ಪೂರ, ತುಪ್ಪದ ದೀಪ ಹೂವಿನ ಮಾಲೆ, ಹಣ್ಣು ಕಾಯಿ -೨ , ಭೂರಿ ದಕ್ಷಿಣೆಗೆ ಹಣ.ತೋಟದಲ್ಲಿ ಎರಡುಅಡಿಕೆ ಮರ ಆರಿಸಿಕೊಂಡು ತೋರಣ ಕಟ್ಟಿ , ಶುಚಿಮಾಡಿ ಪೂಜೆಗೆ ಸ್ಥಳ ಸಿದ್ಧತೆ ಮಾಡಿಕೊಳ್ಳಬೇಕು.
  • ೩. ನೈವೇದ್ಯ : ಹಚ್ಚಂಬಲಿ ( ಎಲ್ಲಾ ತರಕಾರಿ ಸೊಪ್ಪು ಬೇಯಿಸಿದ್ದು + ಅನ್ನ , ಕಂಕುಮ , ಹಾಲು , ತುಪ್ಪ. ಮಜ್ಜಿಗೆ , ಮಾಡಿದ ಎಲ್ಲಾ ಅಡುಗೆ ಭಕ್ಷ್ಯಗಳನ್ನು ಸೇರಿಸಿ ಕಲೆಸುವುದು, ಅಗತ್ಯ ವಿದ್ದಷ್ಟು ತಯಾರು ಮಾಡಿಕೊಂಡು ಅದಕ್ಕೆ ಅರಿಸಿನ ಕುಂಕುಮ ತೊಡೆದು ತೋಟದಲ್ಲಿ ಎಲ್ಲಾಕಡೆ ಬೀರುವುದು. ಸೌತೇಕಾಯಿ ಕಡುಬನ್ನು ಭೂಮಿಯಲ್ಲಿ ಹುಗಿಯುವುದು, ಅನ್ನ, ಚಿತ್ರಾನ್ನ, ಬುತ್ತಿ ಅನ್ನ ಅಕ್ಕಿ ಪಾಯಸ , ಎಲ್ಲ ಬಗೆಯ ಅಡುಗೆ ಪದಾರ್ಥ, ಮನೆ ದೇವರಿಗೆ ಮತ್ತು ತೋಟದ ಮರಗಳಿಗೆ ಸಿದ್ಧಪಡಿಸಿದ ಸ್ತಳ ದಲ್ಲಿ ಮಾಡಿ, ತೋಟದಲ್ಲಿ ಮಕ್ಕಳಿಗೆ ದಕ್ಷಿಣೆ ಕೊಟು ಅವರಿಗೆ ಅಲ್ಲಿಯೇ ಊಟ ಬಡಿಸುವುದು.
  • ೪. ಪೂಜೆ ನೈವೇದ್ಯ ಮಕ್ಕಳಿಗೆ ಊಟ - ಈ ಕಾರ್ಯಕ್ರಮಗಳು ಬೆಳಿಗ್ಗೆ ೯ ಗಂಟೆಯಿಂದ ೧೧ ಗಂಟೆಯ ಒಳಗೆ ಮುಗಿಯು ವಂತಿರಬೇಕು - ಮಕ್ಕಳು ಊರಿನ ಎಲ್ಲರ ತೋಟಗಳಿಗೆ ಹೋಗಿ ಪ್ರಸಾದ ದಕ್ಷಿಣೆ ಪಡೆದು ಆನಂದ ಪಡಲು ಅನುಕೂಲವಾಗುವುದು.

ನರಕ ಚತುರ್ದಶಿ

[ಬದಲಾಯಿಸಿ]

  • ೧೬. ನರಕ ಚತುರ್ದಶಿ :( ಆಶ್ವಯುಜ ಬಹುಳ ಚತುರ್ದಶಿ )

ನೀರು ತುಂಬುವ ಹಬ್ಬ - ಮನೆ ದೇವರ ಪೂಜೆ.

  • ೧. ಸಂಗ್ರಹ : ಪೂಜೆಗೆ ಅರಿಸಿನ ಕುಂಕುಮ , ಹಣ್ಣು ಕಾಯಿ-೨, ಗೆಜ್ಜೆ ವಸ್ತ್ರ , ಹಿಂಗಾರ (ಅಡಿಕೆ ಹೂ-ಹಿಂಗಾರ) , ಅಡಿಕೆ ಗೋಟು, ಎಲೆ ಅಡಿಕೆ, ಮಂಗಳಾಕ್ಷತೆ, ಊದಿನ ಕಡ್ಡಿ , ತುಪ್ಪದ ದೀಪ, ಚಂಡು ಹೂ, ಬಲೀಂದ್ರನನ್ನು ತರುವ ತಂಬಿಗೆ-ಅದಕ್ಕೆ ಅಕ್ಕಿ ಕಡಲೆಬೇಳೆ , ಗೋಧಿ ಹಾಕಿ ತುಂಬುವುದು, ದೀಪ ಹಚ್ಚಿ ಕಾಡಿಗೆ ತೆಗೆಯಲು ಮೂರು ಹಣತೆ, ಎಣ್ಣೆ, ದಪ್ಪ ಬತ್ತಿ.
  • ೨. ಹಿಂದಿನ ದಿನ ರಾತ್ರಿ - ನಿತ್ಯ-ಸ್ನಾನದ ಹಂಡೆ ಯನ್ನು ತೊಳೆದು , ನೀರು ತುಂಬಿ ಮುಚ್ಚಿ, ಅದಕ್ಕೆ ಇಂಡಲಚ್ಚಿ (ಕಹಿ ಹಿಂಡಲೆ ) ಬಳ್ಳಿಯನ್ನು ಕಾಯಿ ಸಮೇತ ಹಂಡೆಯ ಕಂಠಕ್ಕೆ ಸುತ್ತಿ, ಎಲ್ಲಾಕಡೆ ಕೆಮ್ಮಣ್ಣು ಜೇಡಿಯನ್ನು ಬರೆದು, (ದಪ್ಪಗೆ ನಾಮ ಮಾಡಿಹಚ್ಚಿ ಅಲಂಕರಿಸುವುದು -ಹಂಡೆ, ಒಲೆ, ಭಾವಿ, ಇತ್ಯಾದಿ), ತಯಾರು ಮಾಡುವುದು. ಜೋಡಿ ಹಣತೆಗೆ ಎಣ್ಣೆ ದೀಪ ಹಚ್ಚಿ ಮತ್ತೊಂದು ಹಣತೆಗೆ ಕಪ್ಪು (ಕಾಡಿಗೆ ) ಹಿಡಿದಿಟ್ಟುಕೊಳ್ಳಬೇಕು.
  • ೩. ಹಬ್ಬದ ಕ್ರಮ : ಬಳಗಿನಝಾವ ೫.೦೦-೫.೩೦ಗೆ ಎದ್ದು, ನೀರುಕಾಯಿಸಿ ಸ್ನಾನ ಮಾಡಿ ಮಡಿಯುಟ್ಟು , ಭಾವಿಗೆ ಪೂಜೆ ನೈವೇದ್ಯಮಾಡಿ (ಹಣ್ಣು ಕಾಯಿ ) , ನೀರುತುಂಬಿ (ಒಂದು ಕೊಡ ನೀರು ಸೇದಿಕೊಂಡು) , ಸ್ವಲ್ಪ ಸ್ನಾನದ -ಹಂಡೆಗೆ ಹಾಕಿ, ಸ್ವಲ್ಪ ಹಾನಕ್ಕೆ ತೆಗೆದಿಟ್ಟು, ಸ್ವಲ್ಪ ದನಕರುಗಳ ಸ್ನಾನಕ್ಕೆ ತೆಗೆದಿಟ್ಟು, ಉಳಿದುರಲ್ಲಿ ದೇವರ ಪೂಜೆಗೆ, ದೇವರಪೂಜೆ ತಂಬುಗೆಯಲ್ಲಿ ತುಂಬಿ (ಭೂರೆ-ನೀರು; ಬಲೀಂದ್ರನ ತಂಬುಗೆ) ದೇವರ ಮುಂದೆ ಇಡುವುದು, ಉಳಿದ ಮಡಿನೀರನ್ನೂ (ಕೊಡವನ್ನು) ದೇವರ ಮಂಟಪದ ಹತ್ತಿರ ಇಡುವುದು. ನಂತರ ದನಕರುಗಳಿಗೆ ಎಣ್ಣೆ , ಭೂರೆ-ನೀರು ಹಾಕಿ ಸ್ನಾನದ ಶಾಸ್ತ್ರ ಮಾಡುವುದು: ಜಾಗಟೆಯೊಂದಿಗೆ-ಅವಕ್ಕೆ ಅರಿಸಿನ ಕುಂಕುಮ ಹಚ್ಚಿ, ನಮಸ್ಕರಿಸುವುದು. ಮನೆಯವರೆಲ್ಲಾ ಮೈಗೆ ಎಣ್ಣೆ ಹಚ್ಚಿಕೊಂಡು ಅಭ್ಯಂಜನ-ಸ್ನಾನ ಮಾಡುವುದು: ತಯಾರಿಸಿದ ಕಾಡಿಗೆಯನ್ನು ಹಚ್ಚಿಕೊಳ್ಳಬೇಕು . ರಾತ್ರಿ ದನ-ಕರುಗಳಿಗೆ ಚೀನೀ-ಕಾಯಿ ಕಡುಬನ್ನು ತಿನ್ನಲು ಕೊಡುವುದು.
  • ೪. ಪೂಜೆ : ಮಧ್ಯಾಹ್ನ ಬಲೀಂದ್ರನ ತಂಬುಗೆಗೆ ಆವಾಹನೆ ಮಾಡಿ ಪೂಜೆ ಮಾಡುವುದು. ರಾತ್ರಿ ಮಂಗಳಾರತಿ.
  • ೫. ನೈವೇದ್ಯ : ಚೀನಿ ಕಾಯಿ ಕಡುಬು,ಅನ್ನ, ಚಿತ್ರಾನ್ನ ಇತ್ಯಾದಿ.
  • ೬. ಹಿಂದಿನ ರಾತ್ರಿ ಎಣ್ಣೆದೀಪ ಹಚ್ಚಿ , ಹಣತೆಗೆ ಕಪ್ಪು (ಕಾಡಿಗೆ ) ಹಿಡಿಯುವುದು. ಈ ಕಾಡಿಗೆಯನ್ನು ಅಭ್ಯಂಜನ ನಂತರ ಹಚ್ಚಿಕೊಳ್ಳುವುದು. ದನ-ಕರುಗಳಗೂ ಹಚ್ಚಬೇಕು.

ದೀಪಾವಳಿ

[ಬದಲಾಯಿಸಿ]

  • ೧೭. ದೀಪಾವಳಿ  : ( ಆಶ್ವಯುಜ ಬಹುಳ ಅಮಾವಾಸ್ಯೆ )
        ( ನರಕಚತುರ್ದಶಿಯ ಮರುದಿನದ ಅಮಾವಾಸ್ಯೆಯನ್ನು ದೀಪಾವಳಿ ಎಂದು ಕರೆಯವ ರೂಢಿಯಿದೆ)
  • ೧. ಬಲೀಂದ್ರನ ಪೂಜೆ. ಹಬ್ಬದ ಆಚರಣೆ . ದೇವರ ಪೂಜೆ.
  • ೨. ಸೂರ್ಯಾಸ್ತ ನಂತರ (ರಾತ್ರಿ) ಸಗಣಿ-ಉಂಡೆಯ ಮೇಲೆ ಕುಂಬಳಕಾಯಿ-ತುಂಡಿನಲ್ಲಿ ಹಣತೇಮಾಡಿ , ಅದರಲ್ಲಿ ಎಣ್ಣೆ ಬತ್ತಿಹಾಕಿ ದೀಪ ಹಚ್ಚಿ ಬಲೀಂದ್ರನಿಗೆ ಸ್ವಾಗತ ಕೋರುವ ಪದ್ದತಿ ಅನೇಕ ಕಡೆ ಇದೆ.
  • ೩. ರಾತ್ರಿ ದೇವರಿಗೆ ಮಂಗಳಾರತಿ.

ಬಲಿ ಪಾಡ್ಯಮಿ

[ಬದಲಾಯಿಸಿ]

  • ೧೮. ಬಲಿ ಪಾಡ್ಯಮಿ (ಗೋ ಪೂಜೆ ಹಬ್ಬ)(ಕಾರ್ತೀಕ ಶುಕ್ಲ ಪಾಡ್ಯ)
  • ದೇವರಪೂಜೆ, ಗೋವಿನ ಪೂಜೆ, ದೇವಾಲಯದಲ್ಲಿ ಪೂಜೆ ಅಥವಾ ಹಣ್ಣು ಕಾಯಿ ಕೊಡುವುದು , ಬಲೀಂದ್ರನನ್ನು ಕಳಿಸುವುದು.

ಸಂಗ್ರಹ : ಅರಿಸಿನ ಕುಂಕುಮ, ಮಂಗಳಾಕ್ಷತೆ, ಊದಿನಕಡ್ಡಿ, ಕರ್ಪೂರ,ತುಪ್ಪದ ಬತ್ತಿ, ಎರಡು ತುಪ್ಪದ ದೀಪ, ತೆಂಗಿನಕಾಯಿ -೨ + ಭೂತಾದಿ ಗಣಗಳಿಗೂ, ಯಕ್ಷ-ಚೌಡಿಗಳಿಗೂ ಒಡೆಯಲು ೨೫-೩೦ ಕಾಯಿ, ಬಾಳೆ ಹಣ್ಣು -೧ ಗೊನೆ, ಗೋ-ಗ್ರಾಸಕ್ಕೆ ಅಕ್ಕಿ, ಬೆಲ್ಲ, ಗೋವಿನ ಕಾಲು ಪೂಜೆಗೆ ದುಡ್ಡು, ಹೂವಿನ ಮಾಲೆಗಳು, ತುರಾ-ರೊಟ್ಟಿ, ಕೊರಳ ಮಾಲೆಗಳು -

  • (ಹಿಂಗಾರ, ಗೋಟು-ಅಡಿಕೆ, ತುರಾರೊಟ್ಟಿ, ಕಾಮ-ಕಸ್ತೂರಿ-ಚಂಡೆ, ಅಥವಾ ಪಚ್ಚೆ ತೆನೆ, ಅಂಬೊಡಿ ಎಲೆ, ಎಲ್ಲಾ ಸೇರಿಸಿ ಕಟ್ಟಿದ್ದು) ಮಾವಿನ ಚನಕೆಗಳು-ಮನೆ ಬಾಗಿಲಿಗೆ,ದೇವರ ಮಂಟಪಕ್ಕೆ, ಗೋ ಪೂಜೆಯ ಕಂಬಕ್ಕೆ, ಅಡಿಕೆ ಮರಕ್ಕೆ, ತೆಂಗಿನ ಮರಕ್ಕೆ,ಕೊಟ್ಟಿಗೆಯ ಕಂಬಕ್ಕೆ, ಕೊಟ್ಟಿಗೆಯ ಬಾಗಿಲಿಗೆ, ಗೆಜ್ಜೆ ವಸ್ತ್ರ-ಪೂಜೆಯ ದನ ಮತ್ತು ಕರುಗಳಿಗೆ. ಇತ್ಯಾದಿ.
  • ೧. ಕ್ರಮ : ಎಲ್ಲಾ ದನ ಕರುಗಳಿಗೂ ಮೈ ತೊಳೆದು ಬಣ್ಣ ಹಚ್ಚುವದು, ಮಾಲೆ ಕಟ್ಟುವುದು, ಕಾಲು ಪೂಜೆಯ ಕಾಯಿ ಒಡೆದು, ಕೊಟ್ಟಿಗೆಯಲ್ಲೇ ಬಿಡುವುದು. (ಕೆಮ್ಮಣ್ಣು-ಜೇಡಿ ಮಣ್ಣು-ನೀರು ಮಿಶ್ರಣ ಪ್ರತ್ಯೇಕ ತಯಾರಿಸಿ- ಸಿದ್ದೆಯ ಬಾಯಿಯ ಮಧ್ಯಕ್ಕೆ ಬರುವಂತೆ ಜೋಡಿ-ದಾರಕಟ್ಟಿ ಮಿಶ್ರಣಕ್ಕೆ ಅದ್ದಿ ದನ -ಕರುಗಳ ಮೈಮೇಲೆ , ಹಣೆಯ ಮೇಲೆ ಗುನ್ನ ಹೊಡೆದರೆ ಗೋ-ಪಾದ ಚಿಹ್ನೆ ಬೀಳುವುದು. ರಸಾಚಿiನಿಕ ಬಣ್ಣ ಉಪಯೋಗಿಸಿದರೆ ಕೂದಲು ಉದುರಿ ನಂಜಾಗುವ ಅಪಾಯವಿದೆ. ಉದಾ: )
  • ೨. ದೇವಸ್ಥಾನಕ್ಕೆ ಹಣ್ಣು ಕಾಯಿ, ಉಡಿ ಅಕ್ಕಿ, ಕೊಡುವುದು. ಎಲ್ಲಾ ದೇವರು,ಭೂತ-ಯಕ್ಷ, ಬ್ರಹ್ಮ, ಹಾಗೂ, ಗದ್ದೆಗೆ ಕಾಯಿ ಒಡೆಯುವುದು, ಹೊಸ ಕದಿರನ್ನು ತಂದು ದೇವರ ಮುಂದಿಟ್ಟು ಪೂಜೆ ಮಾಡಿ ನಂತರ ಪಣತಕ್ಕೆ ಹಾಕುವುದು.
  • ೩. ಪೂಜೆ : ಮಧ್ಯಾಹ್ನ , ದೇವರು, ವಾಸ್ತು, ಹೊಸಲಿಗೆ (೨ ಕಡೆ), ಮನೆ ಕೋಳು, ಬೀರು (ಹಣ-ಒಡವೆ ಪಟ್ಟಿಗೆ), ಆಯುಧಗಳು (ವ್ಯವಸಾಚಿiದ ಮತ್ತು ಇತರೆ), ವಾಹನಗಳು, ಪಣತ, ಭಾವಿ , ಒರಳು-ಒನಕೆ, ಕಡಗಲು, ತುಳಸಿ, ದಿನವೂ ಉಪಯೋಗಿಸುವ ಯಂತ್ರಗಳಿಗೆ ಪ್ರಜೆ ಮಾಡಿ ನೈವೇದ್ಯ ಮಾಡಬೇಕು.
  • ೪. ದೇವರಿಗೆ ನೈವೇದ್ಯ : ಅನ್ನ, ಚಿತ್ರಾನ್ನ, ಹೋಳಿಗೆ, ಬತ್ತಿ-ಅನ್ನ, ಕೊಸುಂಬರಿ, ಹೊಸ ಕದಿರಿನ ಬತ್ತ ಬತ್ತ ಬಿಡಿಸಿದ ಅಕ್ಕಿ ಹಾಕಿ ಹಾಲು-ಪಾಯಸ ತುರಾ-ರೊಟ್ಟಿ ,ಹಣ್ಣು-ಕಾಯಿ ಇತ್ಯಾದಿ.
  • ೫. ಕಡಗಲು, ಪಣತ, ಚೌಡಿಗೆ ನೈವೇದ್ಯ : ಕೊಸುಂಬರಿ, ಹೊಸಕದಿರಿನ ಬತ್ತ ಬತ್ತ ಬಿಡಿಸಿದ ಅಕ್ಕಿ ಹಾಕಿ ಹಾಲು-ಪಾಯಸ ತುರಾ-ರೊಟ್ಟಿ , ಹಣ್ಣು-ಕಾಯಿ ಇತ್ಯಾದಿ.
  • ೬. ಸಂಜೆಯ ಕ್ರಮ : ಸಂಜೆ ಕೊಟ್ಟಿಗೆಗೆ ಬರುವ ದನ ಕರುಗಳಿಗೆ ಹಾನ ಮಾಡಿ ಚೆಲ್ಲಿ, ಕಾಯಿ ಸುಳಿದು, ಒಡೆದು,ಅವನ್ನು ಹೊರಗಡೆಯೆ ಬಿಟ್ಟು, ಒಳಗೆ ಬೆಲ್ಲದ ನೀರಿನ ತೊಳಕಲು ಕೊಟ್ಟು, ಆರತಿ ಎತ್ತಬೇಕು. ಮಧ್ಯಾಹ್ನ ಪೂಜೆ ಮಾಡಿದ ಎಲ್ಲಾ ಕಡೆ ಕತ್ತಲಾದ ನಂತರ ದೀಪ ಹಚ್ಚಬೇಕು. ಸಂಜೆ ಹೊಸ ಬಟ್ಟೆ ಧರಿಸುವುದು.
  • ೭. ರಾತ್ರಿ ಮನೆಯ ಮುಂದೆ ದೀಪ ಹಚ್ಚಿ, ಪಠಾಕಿ ಹೊಡೆದು , ನಂತರ ಮನೆಯಿಂದ ಸ್ವಲ್ಪ ದೂರದಲ್ಲಿ ದೀವಟಿಗೆ ಹಚ್ಚಿ ಊರ ಬಾಗಿಲವರೆಗೆ (ಗಡಿ) ಹೋಗಿ ಕೇಕೆ ಹಾಕುತ್ತಾ, ಪಠಾಕಿ ಹೊಡೆಯುತ್ತಾ ಹಬ್ಬವನ್ನು ಕಳಿಸುವುದು - ಬಲೀಂದ್ರನನ್ನು ಕಳಿಸುವುದು ಅಥವಾ ಬೀಳ್ಕೊಡುವುದು.
  • ೮.ರಾತ್ರಿ ಊಟ ಅಥವಾ ಉಪಾಹಾರ.
  • ೯.ರಾತ್ರಿ ೧೦ ಗಂಟೆಯ ನಂತರ ಹಬ್ಬ-ಹಾಡವ ತಂಡದವರು ಬರುವ ರೂಢಿ ಇದೆ.ಹಾಗೆ ಬಂದವರಿಗೆ , ಅಕ್ಕಿ ಕಾಯಿ, ಎಣ್ಣೆ, ಅಡಿಕೆ, ದುಡ್ಡು , ಹೋಳಿಗೆ,ಕೊಡಬೇಕು.

ಉತ್ಥಾನ ದ್ವಾದಶಿ

[ಬದಲಾಯಿಸಿ]

  • ೧೯. ಉತ್ಥಾನ ದ್ವಾದಶಿ(ಕಾರ್ತೀಕ ಶುದ್ಧ ದ್ವಾದಶೀ) ತುಳಸಿ ಪೂಜೆ

ಮದ್ಯಾಹ್ನ ದೇವರ ಪೂಜೆ, ರಾತ್ರಿ ತುಳಸೀ ವಿವಾಹ ಪೂಜೆ, ಕಾರ್ತಿಕ ದೀಪೋತ್ಸವ ಆಚರಣೆ

  • ೧. ಸಂಗ್ರಹ : ಅರಿಸಿನ- ಕುಂಕುಮ, ಮಂಗಳಾಕ್ಷತೆ, ಕರ್ಪುರ, ಊದಿನ ಕಡ್ಡಿ, ಮಾವಿನ ಚನಕೆ, ಹಣ್ಣು ಕಾಯಿ, ಹೂ ಮಾಲೆಗಳು-ತುಳಸೀ ಅಲಂಕಾರಕ್ಕೆ,ಎಲೆ ಅಡಿಕೆ, ತುಪ್ಪದ ದೀಪ, ನೆಲ್ಲಿ-ಚನಕೆ (ಕಾಯಿ ಇರುವುದು),ಕಬ್ಬಿನ ಗಿಡ, ಬಾಳೆ ಗಿಡ, ಚಂಡು ಹೂ-ತುಳಸಿ ಕಟ್ಟೆಗೆ,ಹಣತೆಗಳು, ಬತ್ತಿ ಕಟ್ಟುಗಳು, ಸಾಕಷ್ಟು ಎಣ್ಣೆ. ರಾತ್ರಿ ತುಳಸೀ ನೈವೇದ್ಯಕ್ಕೆ ಬೇಕಾದ ಕುಸುಂಬರಿ-ಸಿಹಿ ಖಾದ್ಯಕ್ಕೆ ಬೇಕಾಗುವ ವಸ್ತುಗಳು. ಬಾಳೆ-ಸಿUತೆ ಅಥವಾ ಪ್ಲೇಟುಗಳು.
  • ೨. ಪೂಜೆ; ಮಧ್ಯಾಹ್ನದ ಪೂಜೆಗೆ ಹಣ್ಣುಕಾಯಿ ಮಹಾ ನೈವೇದ್ಯ .
  • ೩. ತುಳಸಿಪೂಜೆಗೆ ಸಿದ್ಧತೆ : ತುಳಸೀ ಕಟ್ಟೆಗೆ ಬಾಳೆ ಗಿಡ-ಕಬ್ಬಿನ ಗಿಡಗಳನ್ನಮು ಕಟ್ಟಿ , ತೋರಣಕಟ್ಟಿ ಹೂ ಗಳಿಂದ ಸಿಂಗರಿಸಿ ಚಂಡು ಹೂವು-ಹೂಮಾಲೆಗಳನ್ನು ಕಟ್ಟಿ,ಹಣತೆ ದೀಪಗಳಿಂದ ಕಾರ್ತಿಕ-ದೀಪೋತ್ಸವಕ್ಕೆ ಸಂಜೆಯೇ ವ್ಯವಸ್ಥೆ ಮಾಡಿಕೊಂಡು, ಮುತ್ತೈದೆಯರಿಗೂ, ಮಕ್ಕಳಿಗೂ ಪೂಜೆಗೆ ಆಹ್ವಾನಿಸಬೇಕು. ನೈವೇದ್ಯ ಕ್ಕೆ ಬೇಕಾದ ಸಣ್ಣ ಅಕ್ಕಿ ಪಾಯಸ, ಕೊಸುಂಬರಿ, ಬಾಳೇಹಣ್ಣು ರಸಾಯನ ,(ಸಿಹಿ), ಬೆಣ್ಣೆ, ಹಸಿಕಡಲೆ, ತಯಾರಿಸುವುದು.
  • ೪. ತುಳಸಿ ಪೂಜೆ :ರಾತ್ರಿ ವೈದಿಕರಿರಿಂದ ಕೆಲವರು ಶಾಸ್ತ್ರೋಕ್ತ ಪೂಜೆ ಮಾಡಿಸುತ್ತಾರೆ. ಕೆಲವರಮನೆಯಲ್ಲಿ ಗಂಡಸರು ಮಡಿಯುಟ್ಟು ಪೂಜೆ ಮಾಡುತ್ತಾರೆ. ಕೆಲವರ ಮನೆಗಳಲ್ಲಿ ತುಳಸೀ ಪೂಜೆಯನ್ನು ಹೆಂಗಸರು ಮಾಡುವ ರೂಢಿ ಬಂದಿದೆ. ತುಳಸಿ ಪೂಜೆ ಮಾಡುವಾಗ ತುಳಸಿ ಕಟ್ಟೆಯೊಳಗೆ ಸಾಲಿಗ್ರಾಮ ಅಥವಾ ಶ್ರೀ ಕೃಷ್ಣನ ವಿಗ್ರಹ ವನ್ನಿಟ್ಟು, ಷೋಡಸೋಪಚಾರ ಪೂಜೆಯನ್ನು ಮಾಡುವುದು. ಪೂಜೆ ಮಾಡುವಾಗ, ತುಳಸೀ ಕಟ್ಟೆಯ ಸುತ್ತ ಎದುರಿನಲ್ಲಿ ಹಣತೆಗಳಲ್ಲಿ ದೀಪಹಚ್ಚಿ ಕಾರ್ತಿಕ ಆಚರಿಸುವುದು. ಎಲ್ಲರಿಗೂ ನೈವೇದ್ಯ ಮಾಡಿದ ಪನಿವಾರ ಹಂಚುವುದು.

ಸಂಪೆ ಷಷ್ಠೀ - ಚಂಪಾ ಷಷ್ಠೀ

[ಬದಲಾಯಿಸಿ]

೨೦. ಸಂಪೆ ಷಷ್ಠೀ - ಚಂಪಾ ಷಷ್ಠೀ. (ಮಾರ್ಗಶೀರ್ಷ ಶುಕ್ಲ ಷಷ್ಠೀ )

  • ೧. ಕಾರ್ಯಕ್ರಮ  :- ದೇವರ ಪೂಜೆ
  • ೨. ಸಂಗ್ರಹ : - ಹಣ್ಣು ಕಾಯಿ, ಕುಂಬಳಕಾಯಿ.
  • ೩. ನೈವೇದ್ಯ :-ಉದ್ದಿನ ವಡೆ, ಕಂಬಳ ಕಾಯಿಯಿಂದ ಮಾಡಿದ ಅಡುಗೆ, ಅನ್ನ , ಸಿಹಿಭಕ್ಷ್ಯ.
  • ರಾತ್ರಿ - ಉಪಾಹಾರ.

ಎಳ್ಳು - ಅಮಾವಾಸ್ಯೆ

[ಬದಲಾಯಿಸಿ]
  • ೨೧. ಎಳ್ಳು - ಅಮಾವಾಸ್ಯೆ (ಮಾರ್ಗಶೀರ್ಷ ಬಹುಳ ಅಮಾವಾಸ್ಯೆ)
  • ಕಾರ್ಯಕ್ರಮ : ದೇವರ ಪೂಜೆ,
  • ಸಂಗ್ರಹ : ಹಣ್ಣು ಕಾಯಿ, ಕರಿ ಎಳ್ಳು,
  • ಕ್ರಮ : ಎಲ್ಲರೂ ಎಳ್ಳು ಹಾಕಿದ ನೀರಿನಿಂದ ತಲೆಗೆ ಸ್ನಾನ ಮಾಡುವುದು.
  • ನೈವೇದ್ಯ : ಹಬ್ಬದ ಅಡುಗೆ.

ಮಕರ ಸಂಕ್ರಾಂತಿ -ಮಕರ ಸಂಕ್ರಮಣ

[ಬದಲಾಯಿಸಿ]

  • ೨೨. ಮಕರ ಸಂಕ್ರಾಂತಿ -ಮಕರ ಸಂಕ್ರಮಣ
  • ದಕ್ಷಿಣಾಯನದ ಕೊನೆಯ ದಿನ -ಸೂರ್ಯ ಉತ್ತರಾಯನಕ್ಕೆ ಮಕರ ರಾಶಿ ಪ್ರವೇಶ ಮಾಡುವ ದಿನ,ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವುದು.)
  • ೧. ಕಾರ್ಯಕ್ರಮ : ಮನೆ ದೇವರ ಪೂಜೆ, ಬಾಗಿನ ಕೊಡುವುದು, ಹೊಸ ಬಟ್ಟೆ ಹಾಕಿಕೊಂಡು ಎಳ್ಳು-ಬೆಲ್ಲ ಹಂಚುವುದು.
  • ೨. ಸಂಗ್ರಹ : ಹಣ್ಣು-ಕಾಯಿ, ಸಂಕ್ರಾಂತಿ ಎಳ್ಳು, ಕಬ್ಬು, ಹಣ್ಣುಗಳು, ಸಕ್ಕರೆ-ಅಚ್ಚು, ಬಾಗಿನದ ವಸ್ತುಗಳು ಇತ್ಯಾದಿ.
  • ೩. ನೈವೇದ್ಯ : ಹೆಸರು ಬೇಳೆ ಹುಗ್ಗಿ, ಹುಳಿಸೇಹಣ್ಣು ಗೊಜ್ಜು, ಸಿಹಿ, ಅನ್ನ, ಚಿತ್ರಾನ್ನ.
  • ೪. ಮುತ್ತೈದೆಯರು ಹಿರಿಯ ಹೆಂಗಸರಿಗೆ ಬಾಗಿನ ಕೊಟ್ಟು ಆಶೀರ್ವಾದ ಪಡೆದು, ಒಪ್ಪತ್ತು ಮಾಡುವುದು ( ರಾತ್ರಿ ಉಪಾಹಾರ).
  • ೫. ಸಂಜೆ - ಮಕ್ಕಳು ಹೊಸ ಬಟ್ಟೆ ಧರಿಸಿ ಎಲಾ ಮನೆಗಳಿಗೆ ಸಂಕ್ರಾತಿ ಕಾಳು ಹಂಚಿ (ಬಿಳಿ-ಎಳ್ಳು , ಸೇಂಗಾಬೀಜ, ಬೆಲ್ಲದ ಚೂರು - ಮಿಶ್ರಣ) ಜೊತೆಗೆ ಕಬ್ಬಿನ ತುಂಡು, ಸಕ್ಕರೆಅಚ್ಚು , ಹಣ್ಣು-ಹೂ-ಅರಿಸಿನ-ಕುಂಕುಮ ಸೇರಿಸಿ ಕೋಡುವುದು.

ರಥ ಸಪ್ತಮಿ

[ಬದಲಾಯಿಸಿ]

  • ೨೩. ರಥ ಸಪ್ತಮಿ
  • ಮಕರ ಮಾಸ-ಮಾಘ ಮಾಸದಲ್ಲಿ ಬರುವ ಶುಕ್ಲ ಸಪ್ತಮೀ
  • ಸೂರ್ಯನು ತನ್ನ ರಥವನ್ನು ಉತ್ತರ - ಪಥಕ್ಕೆ ತಿರುಗಿಸಿದ ದಿನ , ಭೀಷ್ಮನು ಉತ್ತರಾಯನ ಪ್ರಾರಂಭವಾದ ನಂತರ ಸಪ್ತಮೀ ದಿನ ದೇಹ ತ್ಯಾಗ ಮಡಿದನೆಂಬ ಪ್ರತೀತಿ ಇದೆ.
  • ೧. ಕಾರ್ಯಕ್ರಮ: ದೇವರ ಪೂಜೆ, ಸೂರ್ಯನ ಪೂಜೆ.
  • ೨. ನೈವೇದ್ಯ : ಹಬ್ಬದ ಅಡುಗೆ , ಗೋಧಿಯಿಂದ ಮಾಡಿದ ಭಕ್ಷವನ್ನು ದೇವರಿಗೂ , ಸೂರ್ಯನಿಗೂ ನೈವೇದ್ಯ ಮಾಡುವುದು.
  • ೩. ಹಬ್ಬದ ಅಡುಗೆ , ಊಟ.

ಮಹಾ ಶಿವರಾತ್ರಿ

[ಬದಲಾಯಿಸಿ]

  • ೨೪. ಮಹಾ ಶಿವರಾತ್ರಿ - ಮಾಘ ಬಹುಳ ತ್ರಯೋದಶೀ ( ಮಧ್ಯರಾತ್ರಿ ಪೂಜೆಗೆ ಇರುವ ದಿನ)
  • ೧. ಕಾರ್ಯಕ್ರಮ : ಹಗಲು ಮನೆದೇವರ ಪೂಜೆ, ರಾತ್ರಿ ಶ್ರೀ ಸಾಂಬಶಿವ ಪೂಜೆ, ತಲೆ ಸ್ನಾನ ಮಾಡಿ ಇಡೀ ದಿನ ಉಪವಾಸ (ಉಪಾಹಾರ), ರಾತ್ರಿ ನೈವೇದ್ಯಮಾಡಿದ ತಿಂಡಿಯ ಉಪಾಹಾರ.
  • ೨. ಸಂಗ್ರಹ : ಅರಿಸಿನ -ಕುಂಕುಮ, ಮಂಗಳಾಕ್ಷತೆ, ಹಣ್ಣು-ಕಾಯಿ,ತುಪ್ಪದ ದೀಪ, ಬಿಲ್ವಪತ್ರೆ, ಇತರೆ ಗಿಡಗಳ ಪತ್ರೆಗಳು, ಹೂವು, ಕಾಡು-ಹೂವುಗಳು , ಗೆಜ್ಜೆ ವಸ್ತ್ರ
  • .೩. ಪೂಜೆ : ರಾತ್ರಿ ಸ್ನಾನ ಮಾಡಿ, ಮಡಿಯುಟ್ಟು ಶ್ರೀ ಸಾಂಬಶಿವನಿಗೆ ಅಷ್ಟೋತ್ತರ/ಸಹಸ್ರ ನಾಮ/ ರುದ್ರಾಭಿಷೇಕ/ ಯಥಾ ಶಕ್ತಿ ಪೂಜೆ ಮಾಡುವುದು. ಮನೆಯ ವರೆಲ್ಲರೂ ಪೂಜೆಯ ನಂತರ ಶಿವನ ತಲೆಯ ಮೇಲೆ ಬಿಲ್ವ ಪತ್ರೆ ಹಾಕಿ ನಮಸ್ಕರಿಸಬೇಕು.
  • ೪. ನೈವೇದ್ಯ : ರೊಟ್ಟಿ, ಹೆಸರು ಬೇಳೆ ಪಾಯಸ, ಸಿಹಿ ಇಡ್ಡಲಿ (ಕಡುಬು).
  • ೫. ಶಾಸ್ತ್ರ ಪ್ರಕಾರ ಇಡೀ ದಿನ ಉಪವಾಸ- ರಾತ್ರಿ ಇಡೀ ಜಾಗರಣೆ -ಪೂಜೆ.

ವ್ರಥ-ಕಥೆಗಳು

[ಬದಲಾಯಿಸಿ]

  • ವಿಶೇಷ ಪೂಜೆಗೆ ಬೇಕಾದ ಸಾಮಗ್ರಿಗಳು (ಸತ್ಯ ನಾರಾಯಣ ಪೂಜೆ, ದೇವೀ ಮಹಾತ್ಮ್ಯೆ, - ವ್ರಥ-ಕಥೆಗಳು) :-
  • ಅರಿಸಿನ-ಕುಂಕುಮ, ರಂಗೋಲಿ, ಮಾವಿನ ಚನಕೆ, ದರ್ಭೆ, ಎಲೆ-ಅಡಿಕೆ, ಬಾಳೆ ಹಣ್ಣು, ಇತರೆಹಣ್ಣುಗಳು, ಹೂವು, ದೂರ್ವೆ, ತುಳಸಿ, ಪತ್ರೆ, ಜನಿವಾರ, ಚಲ್ಲರೆ, ಮಂಗಳಾಕ್ಷತೆ, ಪಂಚಗವ್ಯ-ಪಂಚಾಮೃತಕ್ಕೆ ಬೇಕಾಗುವ ಸಾಮಗ್ರಿಗಳು, ಕುಡಿಬಾಳೆ-೧೦-೧೨, ತೆಂಗಿನಕಾಯಿ-೬, ೮, ಅಕ್ಕಿ-೬,೮ ಸೇರು, ದ್ರಾಕ್ಷಿ , ಉತ್ತುತ್ತೆ, ಕಲ್ಲುಸಕ್ಕರೆ, ಪಚ್ಚಕರ್ಪುರ, ಕೇಸರಿ, ಆಕಳಹಾಲು, ತುಪ್ಪ, ಮಣೆಗಳು (ಕೂರುವ-ಚಾಪೆಗಳು), ಊದಿನ ಕಡ್ಡಿ, ಕರ್ಪೂರ, ತುಪ್ಪದ ದೀಪ, ಪ್ರತ್ಯೇಕ ದೀಪ, ಕಲಶದಚಂಬು, ಲೋಟ (ಇದ್ದರೆ ಬೆಳ್ಳಿಯವು),ಆರತಿ ತಟ್ಟೆಗಳು, ಗೆಜ್ಜೆ ವಸ್ತ್ರ, ಇತ್ಯಾದಿ.
  • ವಿ.ಸೂ.:- ಎಲ್ಲಾ ದೇವತಾ ಕಾರ್ಯಗಳಿಗೂ ಬಳಿಗ್ಗೆ ತಲೆ ಸ್ನಾನ ಮಾಡಬೇಕು: ಮಸುರೆ ತಿಂಡಿ ತಿನ್ನಬಾರದು.

  • (ಸಂಗ್ರಹ  : -ಸೌ. ಪ್ರತಿಭಾ ಸುರೇಶ ಈಳಿ, ಸಾಗರ ತಾಲ್ಲೂಕು ಕರ್ನಾಟಕ-ಟಿಪ್ಪಣಿ,ಸಂಪಾದನೆ,ಬಿ.ಎಸ್.ಚಂದ್ರಶೇಖರ ಸಾಗರ.