ಬಲೀಂದ್ರ

ವಿಕಿಪೀಡಿಯ ಇಂದ
Jump to navigation Jump to search


ಬಲೀಂದ್ರ ಮಹಾದೈತ್ಯ ಹಿರಣ್ಯ ಕಶ್ಯಪುವಿನ ಪುತ್ರನಾದ ಪ್ರಹ್ಲಾದ ಕುಮಾರನ ಮೊಮ್ಮಗ.. ಅಸುರನೇ ಆದರೂ ಅಸುರವೈರಿ ಹರಿಯ ಪರಮ ಭಕ್ತ.. ಇವನು ಸಕಲ ವೇದ ಶಾಸ್ತ್ರ ಪಾರಂಗತ, ಸಕಲ ಶಸ್ತ್ರಾಸ್ತ್ರ ವಿದ್ಯಾ ಪ್ರವೀಣ. ಇವನು ಶೋಣಿತಪುರದ ರಾಜನಾಗಿದ್ದು ಇಲ್ಲಿ ನೆಡೆಯುವ ಪ್ರತಿಯೊಂದು ಯಾಗಕ್ಕೂ ವಿಷ್ಣು ದೇವರಿಗೆ ಹವಿಸ್ಸು ನೀಡುತ್ತಿದ್ದ ಹಾಗೂ ಕೇಳಿದ್ದನ್ನು ಕೊಡುವ ದಾನಿಯಾಗಿದ್ದ. ಆದರೆ ಎಷ್ಷೇ ಆದರೂ ಅಸುರ ವಂಶದವನಾಗಿದ್ದರಿಂದ ಇಂದ್ರಾದಿಗಳು ಭಯಭೀತರಾಗಿ ನಾರಾಯಣನಲ್ಲಿ ಮೊರೆ ಹೋಗಿ ಇವನ ಸಂಹಾರ ಮಾಡಬೇಕೆಂದು ಬೇಡಿಕೊಂಡಾಗ ಶ್ರೀ ಮನ್ನಾರಾಯಣನು ಇವನ ಸಂಹಾರಕ್ಕಾಗಿ ವಾಮನ ರೂಪಿಯಾಗಿ ಬಂದು ಮೂರು ಹೆಜ್ಜೆ ಜಾಗ ಬೇಕೆಂದು ಕೇಳುತ್ತಾನೆ. ಹೀಗೆ ಒಂದು ಹೆಜ್ಜೆಯನ್ನು ಆಕಾಶದಲ್ಲಿ ಒಂದು ಹೆಜ್ಜೆಯನ್ನು ಭೂಮಿಯಲ್ಲೂ ಇಟ್ಟಾಗ, ಮೂರನೇ ಹೆಜ್ಜೆ ಎಲ್ಲಿಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ಹೇ ನಾರಾಯಣ ನಿನ್ನ ರೂಪ ಬದಲಾದರೂ ನನ್ನ ಭಕ್ತಿಯ ರೂಪ ನನಗೆ ಎಲ್ಲವನ್ನೂ ತಿಳಿಸುತ್ತದೆ ಎನ್ನುತ್ತಾ ನಿನ್ನ ಮೂರನೇ ಹೆಜ್ಜೆಯನ್ನು ತನ್ನ ತಲೆಯ ಮೇಲಿಡಲು ಹೇಳುತ್ತಾನೆ ಅದಕ್ಕೆ ವಾಮನ ರೂಪಿಯೂ ನೀನು ಭೂಗರ್ಭದಲ್ಲಿ ಹೂತು ಹೋದರೂ ಚಿರಂಜೀವಿಗಳ ಸಾಲಿನಲ್ಲಿ ಅಮರನಾಗಿರು ಮತ್ತೇ ನಿನ್ನ ನಾಮ ಮುಂದೇ ಬಲೀ ಪಾಡ್ಯ ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ ಎಂಬ ವರವನ್ನು ದಯಪಾಲಿಸುತ್ತಾನೆ....

ಉಲ್ಲೇಖ[ಬದಲಾಯಿಸಿ]"https://kn.wikipedia.org/w/index.php?title=ಬಲೀಂದ್ರ&oldid=941409" ಇಂದ ಪಡೆಯಲ್ಪಟ್ಟಿದೆ