ಹರಿದಳ
ಗೋಚರ
ಹರಿದಳವು (ಹರಿತಾಳ, ಅರದಾಳ) ಒಂದು ಗಾಢ, ಕಿತ್ತಳೆ-ಹಳದಿ ಬಣ್ಣದ ಆರ್ಸನಿಕ್ ಸಲ್ಫೈಡ್ ಖನಿಜ. ಇದರ ಸೂತ್ರ As2S3. ಇದು ಜ್ವಾಲಾಮುಖಿ ಧೂಮಮುಖಗಳು, ಕಡಿಮೆ ಉಷ್ಣಾಂಶದ ಜಲೋಷ್ಣೀಯ ಶಿರೆಗಳು ಮತ್ತು ಬಿಸಿನೀರಿನ ಚಿಲುಮೆಗಳಲ್ಲಿ ಸಿಗುತ್ತದೆ. ಇದು ಉತ್ಪತನ ಮತ್ತು ಇನ್ನೊಂದು ಆರ್ಸೆನಿಕ್ ಖನಿಜವಾದ ರಿಯಲ್ಗರ್‌ನ ಸವೆತದ ಉಪ ಉತ್ಪನ್ನವಾಗಿ, ಎರಡರಿಂದಲೂ ರಚನೆಯಾಗಿರುತ್ತದೆ.
ಐತಿಹಾಸಿಕ ಉಪಯೋಗಗಳು
[ಬದಲಾಯಿಸಿ]ಹರಿದಳವನ್ನು ರೋಮನ್ ಸಾಮ್ರಾಜ್ಯದಲ್ಲಿ ವ್ಯಾಪಾರಮಾಡಲಾಗುತ್ತಿತ್ತು, ಮತ್ತು ಬಹಳ ವಿಷಮಯವಾಗಿದ್ದರೂ ಇದನ್ನು ಚೀನಾದಲ್ಲಿ ಔಷಧಿಯಾಗಿ ಬಳಸಲಾಗುತ್ತಿತ್ತು. ಇದನ್ನು ನೊಣವಿಷವಾಗಿ ಮತ್ತು ಬಾಣಗಳ ತುದಿಗೆ ವಿಷವಾಗಿ ಬಳಸಲಾಗಿದೆ. ಇದರ ಗಮನ ಸೆಳೆಯುವ ಬಣ್ಣದ ಕಾರಣ, ಇದರಲ್ಲಿ ಚಿನ್ನವನ್ನು ತಯಾರಿಸುವ ದಾರಿಯನ್ನು ಹುಡುಕುತ್ತಿದ್ದ ಚೀನಾ ಮತ್ತು ಪಶ್ಚಿಮದ ರಾಷ್ಟ್ರಗಳು, ಎರಡೂ ಕಡೆಯ ರಸವಾದಿಗಳು ಆಸಕ್ತಿ ಹೊಂದಿದ್ದರು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Webexhibits "Pigments Through the Ages: Orpiment" Archived 2010-01-30 ವೇಬ್ಯಾಕ್ ಮೆಷಿನ್ ನಲ್ಲಿ.
- Babylonian Talmud Tractate Chullin see Rashi 'haZarnich' (in Hebrew)
- Orpiment, Colourlex