ಸಿ. ಹೊನ್ನಪ್ಪ ಗೌಡ
ಸಿ. ಹೊನ್ನಪ್ಪ ಗೌಡ | |
---|---|
ಜನನ | 15 ಮೇ 1973 |
ವೃತ್ತಿ | ಕಬಡ್ಡಿ ಕೋಚ್ |
ಪ್ರಮುಖ ಪ್ರಶಸ್ತಿ(ಗಳು) | ಏಕಲವ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ |
ಬಾಳ ಸಂಗಾತಿ | ದೀಪ್ತಿ |
ಮಕ್ಕಳು | 2 |
ಚನ್ನತಿಮ್ಮಯ್ಯ ಹೊನ್ನಪ್ಪ ಗೌಡ ಕಬಡ್ಡಿ ಆಟಗಾರ. ಇವರು ಕರ್ನಾಟಕದಿಂದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪಡೆದ ಮೊದಲ ಕಬಡ್ಡಿ ಆಟಗಾರ.
ಆರಂಭಿಕ ಜೀವನ
[ಬದಲಾಯಿಸಿ]೧೩ನೇ ವರ್ಷದಲ್ಲಿ ಇವರಿಗೆ ಕಬಡ್ಡಿ ಆಟದ ಮೇಲೆ ಆಸಕ್ತಿ ಬೆಳೆಯಿತು. ಇವರ ಅಣ್ಣ ಸಿ.ಗೋವಿಂದರಾಜ್‍ರವರು ಕಬ್ಬಡಿ ಆಟಗಾರರಾಗಿದ್ದರು. ಕ್ರೀಡಾ ಕೋಟಾ ಉಪಯೋಗಿಸಿ ಉದ್ಯೋಗವನ್ನು ಪಡೆದ ಅಣ್ಣನ ಜೀವನ, ಹುಡುಗ ಹೊನ್ನಪ್ಪರವರಿಗೆ ಸ್ಫೂರ್ತಿ ನೀಡಿತು. ಅಣ್ಣನಿಂದ ಪ್ರೇರಣೆಗೊ೦ಡ ಹೊನ್ನಪ್ಪ, ಸಣ್ಣ ವಯಸಿನಲ್ಲಿಯೇ ಕಬ್ಬಡಿಯ ಆಟ ಕಲಿಯಲು ಪ್ರಾರಂಭಿಸಿದರು.[೧] ಅವರು ಬೆಂಗಳೂರು ಮಾರುತಿ ಕಬಡ್ಡಿ ಕ್ಲಬ್‍ಗೆ ಸೇರಿದರು. ಹೊನ್ನಪ್ಪರವರು ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಮಾಜಿ ಬಿ.ಇ.ಎಲ್ ಉದ್ಯೋಗಿ, ಎಸ್.ಎಲ್. ಭಟ್ ಗಮನಿಸಿದರು. ೧೯೯೦ರಲ್ಲಿ ತನ್ನ ೧೭ ವರ್ಷದಲ್ಲಿ ವಿಜಯವಾಡಾ, ಆಂಧ್ರ ಪ್ರದೇಶದಲ್ಲಿ ನಡೆದ ೩೯ನೇಯ ಹಿರಿಯ ರಾಷ್ಟ್ರೀಯ ಚಾಂಪಿಯನ್‍ಷಿಪ್‍ನಲ್ಲಿ, ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಪಡೆದು, ಕರ್ನಾಟಕ ರಾಜ್ಯ ತಂಡದಲ್ಲಿ ಸ್ಥಾನ ಪಡೆದರು. ೧೯೯೧ರಲ್ಲಿ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಯಲ್ಲಿ ಉದ್ಯೋಗಿಯಾಗಿ, ಇಲಾಖೆಯಿಂದ ಒದಗಿಸಲಾದ ಬೂಟುಗಳನ್ನು ಉಪಯೋಗಿಸಿ ಆಡಲಾರಂಭಿಸಿದರು.
ವಿಜಯ ಬ್ಯಾಂಕ್‍ನಲ್ಲಿ ಉದ್ಯೋಗ
[ಬದಲಾಯಿಸಿ]ಮೂರು ರಾಷ್ಟ್ರೀಯ ಆಟಗಳು ಮತ್ತು ಎರಡು ಫ಼ೆಡರೇಶನ್ ಕಪ್‍ಗಳ ನಂತರ, ಹೊನ್ನಾಪ್ಪರವರಿಗೆ ವಿಜಯ ಬ್ಯಾಂಕ್‍ನಿಂದ ಉದ್ಯೋಗದ ವಿಚಾರವಾಗಿ ಕರೆ ಬಂದಿತು. ೧೯೯೫ರಲ್ಲಿ ಚೆನ್ನೈನಲ್ಲಿ ಸೆವೆಂತ್ ಸೌತ್ ಏಷ್ಯನ್ ಫ಼ೆಡರೇಶನ್ (ಎಸ್.ಎ.ಎಫ಼್.) ಕ್ರೀಡಾಕೂಟಕ್ಕಾಗಿ ಹೊನ್ನಪ್ಪ ಭಾರತೀಯ ತಂಡದಲ್ಲಿ ಸ್ಥಾನ ಪಡೆದುಕೊಂಡರು ಮತ್ತು ಭಾರತಕ್ಕೆ ಚಿನ್ನದ ಪದಕ ಗೆದ್ದು, ತಂಡದ ಉಪ-ನಾಯಕರಾಗಿ ಯಶಸ್ಸು ಪಡೆದರು ಮತ್ತು ಪ್ರಚಾರವು ಮುಂದುವರೆಯಿತು. ಒಂದು ಕ್ಲೆರಿಕಲ್ ಗ್ರೇಡ್‍ನಿಂದ ಹೊನ್ನಪ್ಪರವರು ೧೯೯೬ರಲ್ಲಿ ಸಹಾಯಕ ವ್ಯವಸ್ಥಾಪಕರಾದರು ಮತ್ತು ಬ್ಯಾಂಕ್ ಒದಗಿಸುವ ಸೌಕರ್ಯಗಳ ಅತ್ಯುತ್ತಮ ಅನುಭವವನ್ನು ಪಡೆದುಕೊಂಡರು. ಇತ್ತೀಚೆಗೆ ಮುಕ್ತಾಯಗೊಂಡ ಉದ್ಘಾಟನಾ ಬ್ಯಾಂಕುಗಳ ಒಲಿಂಪಿಯಾಡ್‍ನ ಕಬಡ್ಡಿ ಸಮಾರಂಭದಲ್ಲಿ ವಿಜಯ ಬ್ಯಾಂಕ್‍ನೊಂದಿಗೆ "ಅತ್ಯುತ್ತಮ ಕ್ಯಾಚರ್" ಗೌರವವನ್ನು ಪಡೆದುಕೊಂಡಿದಾರೆ . ಮಾಜಿ ಭಾರತೀಯ ಕಬಡ್ಡಿ ನಾಯಕ ೧೮ ಜೂಲೈ ೨೦೧೫ರಂದು ಪ್ರೊ-ಕಬಡ್ಡಿ ಲೀಗ್‍ನ ಎರಡನೇ ಋತುವಿನಲ್ಲಿ ದೆಹಲಿ ದಬಾಂಗ್ ತಂಡದ ತರಬೇತುದಾರರಾಗಿದ್ದರು.[೨]
ಪ್ರಶಸ್ತಿಗಳು ಮತ್ತು ಮಾನ್ಯತೆ
[ಬದಲಾಯಿಸಿ]- ಕರ್ನಾಟಕ ಸರ್ಕಾರವು ಹೊನ್ನಪ್ಪರವರಿಗೆ ೧೯೯೭ರಲ್ಲಿ ಏಕಲವ್ಯ ಪ್ರಶಸ್ತಿ
- ೨೦೦೧ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತು
- ೨೦೦೧ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಭಾರತ ಸರ್ಕಾರವು ಅವರನ್ನು ಗೌರವಿಸಿತು
- ಗೌರವಾನ್ವಿತ ಡಾಕ್ಟರೇಟ್‍ಅನ್ನು ಪಡೆದರು.[೩] ಗ್ಲೋಬಲ್ ಯುನಿವರ್ಸಿಟಿ ಆಫ್ ಚಾಯ್ಸ್ - ಎಂ ಎಸ್ ಯು (ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಯೂನಿವರ್ಸಿಟಿ), ಅವರಿಗೆ ಪಿ.ಎಚ್.ಡಿ ನೀಡಿತು.
ಉಲ್ಲೇಖಗಳು
[ಬದಲಾಯಿಸಿ]- ↑ https://www.thehindu.com/thehindu/mp/2003/01/30/stories/2003013000920400.htm
- ↑ https://timesofindia.indiatimes.com/pro-kabaddi-league/Arjuna-awardee-Honnappa-named-Delhi-coach-for-Pro-Kabaddi/articleshow/47676535.cms
- ↑ https://www.sportskeeda.com/kabaddi/dabang-delhi-coach-honnappa-c-gowda-awarded-phd-malaysia-university