ವಿಷಯಕ್ಕೆ ಹೋಗು

ಸಲೀಂ ಅಲಿ ಪಕ್ಷಿಧಾಮ

ನಿರ್ದೇಶಾಂಕಗಳು: 15°30′53″N 73°51′27″E / 15.5146°N 73.8575°E / 15.5146; 73.8575
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಲೀಂ ಅಲಿ ಪಕ್ಷಿಧಾಮ
ಡಾ. ಸಲೀಂ ಅಲಿ ಪಕ್ಷಿಧಾಮ
ಪಕ್ಷಿಧಾಮದ ಮುಖ್ಯದ್ವಾರ
ಸ್ಥಳಚೋರಾ, ಗೋವಾ, ಭಾರತ
ಹತ್ತಿರದ ನಗರಪಣಜಿ
ನಿರ್ದೇಶಾಂಕಗಳು15°30′53″N 73°51′27″E / 15.5146°N 73.8575°E / 15.5146; 73.8575
ಪ್ರದೇಶ178 ha (440 acres)
ಸ್ಥಾಪನೆ೧೯೮೮

ಸಲೀಂ ಅಲಿ ಪಕ್ಷಿಧಾಮವು ನದೀಮುಖದಲ್ಲಿ ಬೆಳೆಯುವ ಮ್ಯಾಂಗ್ರೋವ್ ಸಸ್ಯಗಳ ಆವಾಸಸ್ಥಾನವಾಗಿದೆ. ಇದನ್ನು ಪಕ್ಷಿಧಾಮ ಎಂದು ಘೋಷಿಸಲಾಗಿದೆ. ಇದು ಭಾರತದ ಗೋವಾದ ಮಾಂಡೋವಿ ನದಿಯ ಉದ್ದಕ್ಕೆ, ಚೋರೊ ದ್ವೀಪದ ಪಶ್ಚಿಮ ತುದಿಯಲ್ಲಿದೆ. ಈ ಅಭಯಾರಣ್ಯಕ್ಕೆ ಭಾರತದ ಪ್ರಖ್ಯಾತ ಪಕ್ಷಿಶಾಸ್ತ್ರಜ್ಞ ಸಲೀಂ ಅಲಿ ಅವರ ಹೆಸರನ್ನು ಇಡಲಾಗಿದೆ.

ಅಭಯಾರಣ್ಯ ಮತ್ತು ದ್ವೀಪವನ್ನು ರಿಬಾಂಡರ್ ಮತ್ತು ಚೋರೊ ನಡುವೆ ದೋಣಿಯ ಮೂಲಕ ಸಾಗಿ ಪ್ರವೇಶಿಸಬಹುದು. ಅಭಯಾರಣ್ಯವು, ರೈಜೋಫೊರಾ ಮಕ್ರೋನಾಟಾ, ಅವಿಸೆನಿಯಾ ಅಫಿಷಿನಾಲಿಸ್ ಮತ್ತು ಇತರ ಜಾತಿಗಳ ಮ್ಯಾಂಗ್ರೋವ್‌ಗಳನ್ನು ಹೊಂದಿದೆ.

ವಿವರಣೆ

[ಬದಲಾಯಿಸಿ]
ಅಭಯಾರಣ್ಯದ ಒಳಗೆ ಸುಸಜ್ಜಿತ ಕಾಲುದಾರಿ

ಅಭಯಾರಣ್ಯದ ಗಾತ್ರ 178 ha (440 acres) . ಈ ಪ್ರದೇಶವು ಮ್ಯಾಂಗ್ರೋವ್ ಅರಣ್ಯದಿಂದ ಆವೃತವಾಗಿದೆ.

ಸಸ್ಯ ಮತ್ತು ಪ್ರಾಣಿ

[ಬದಲಾಯಿಸಿ]
ಸಲೀಂ ಅಲಿ ಪಕ್ಷಿಧಾಮವು ಭಾರತದ ಅತ್ಯಂತ ಪ್ರಸಿದ್ಧ ಪಕ್ಷಿಧಾಮಗಳಲ್ಲಿ ಒಂದಾಗಿದೆ.

ಹಲವಾರು ಜಾತಿಯ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಅವುಗಳಲ್ಲಿ ಸಾಮಾನ್ಯವಾದವು, ಸ್ಟ್ರೈಟೆಡ್ ಹೆರಾನ್ ಮತ್ತು ವೆಸ್ಟರ್ನ್ ರೀಫ್ ಹೆರಾನ್ . ರೆಕಾರ್ಡ್ ಮಾಡಲಾದ ಇತರ ಜಾತಿಯ ಪಕ್ಷಿಗಳಲ್ಲಿ ಜ್ಯಾಕ್ ಸ್ನೈಪ್ ಮತ್ತು ಪೈಡ್ ಆವಸೆಟ್ (ಅಸ್ಥಿರ ಮರಳಿನ ದಂಡೆಗಳಲ್ಲಿ) ಸೇರಿವೆ. [] ಅಭಯಾರಣ್ಯವು ಮಡ್‌ಸ್ಕಿಪ್ಪರ್‌ಗಳು, ಫಿಡ್ಲರ್ ಏಡಿಗಳು ಮತ್ತು ಇತರ ಮ್ಯಾಂಗ್ರೋವ್ ಆವಾಸಸ್ಥಾನದ ಜೀವಿಗಳಿಗೆ ಆತಿಥ್ಯ ವಹಿಸುತ್ತದೆ. ಅಭಯಾರಣ್ಯದಲ್ಲಿ ಪಡೆದ ಮಾದರಿಗಳ ಆಧಾರದ ಮೇಲೆ ಕಠಿಣಚರ್ಮಿ ಟೆಲಿಯೊಟಾನೈಸ್ ಇಂಡಿಯಾನಿಸ್‌ನ ಜಾತಿಯ ಜೀವಿಯನ್ನೂ ಇಲ್ಲಿ ಕಾಣಬಹುದಾಗಿದೆ. []

ಮಾಧ್ಯಮ

[ಬದಲಾಯಿಸಿ]

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Borges, S.D. & A.B.Shanbhag (2007). "Additions to the avifauna of Goa, India". Journal of the Bombay Natural History Society. 104 (1): 98–101.
  2. Larsen, Kim; Gobardhan Sahoo; Zakir Ali Ansari (2013). "Description of a new mangrove root dwelling species of Teleotanais (Crustacea: Peracarida: Tanaidacea) from India, with a key to Teleotanaidae" (PDF). Species Diversity. 18: 237–243.


ಬಾಹ್ಯ ಕೊಂಡಿಗಳು

[ಬದಲಾಯಿಸಿ]