ವಿಷಯಕ್ಕೆ ಹೋಗು

ಸಕ್ಕರೆ ಗಿಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಕ್ಕರೆ ಗಿಡ

ಸಕ್ಕರೆ ಗಿಡ ಸೂರ್ಯಕಾಂತಿ ಕುಟುಂಬದ ಅಸ್ಟೇಸೇಯ್ ಪ್ರಭೇದದ ಸಸ್ಯ. ಸ್ಟೆವಿಯಾ ರೆಬೌಡಿಯಾನಾ ಇದರ ವೈಜ್ಞಾನಿಕ ಹೆಸರು. ಇದನ್ನು ಸಾಮಾನ್ಯವಾಗಿ ಕ್ಯಾಂಡಿಲೈಫ್,ಸ್ವೀಟ್ಲೀಫ್ ಅಥವಾ ಸಿಹಿ ಎಲೆ ಎಂದು ಕರೆಯಲಾಗುತ್ತದೆ. ಸಕ್ಕರೆ ಗಿಡ ಬ್ರೆಜಿಲ್ ಮತ್ತು ಪೆರುಗ್ವೆ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.[][]

ಬೆಳೆಯುವ ಪ್ರದೇಶಗಳು

[ಬದಲಾಯಿಸಿ]

ಸಕ್ಕರೆ ಗಿಡ ಬೆಳವಣಿಗೆಗೆ ತೇವವಾದ ಆರ್ದ್ರ ಪರಿಸರಗಳು ಅನುಕೂಲಕರ. ಇದನ್ನು ಬ್ರೆಜಿಲ್ ಮತ್ತು ಪೆರುಗ್ವೆ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬಹುದು.[]

ಸಸ್ಯದ ಇತಿಹಾಸ

[ಬದಲಾಯಿಸಿ]

ಈ ಸಸ್ಯವನ್ನು ೧೫೦೦ ವರ್ಷಗಳಿಗೂ ಹೆಚ್ಚು ಕಾಲ ಬ್ರೆಜಿಲ್ನ ಗುವಾರಾನಿ ಜನರು ಚಹಾ ಹಾಗೂ ಔಷಧಿಯನ್ನು ಸಿಹಿಗೊಳಿಸುವುದಕ್ಕಾಗಿ ಬಳಸುತ್ತಿದ್ದರು. ೧೮೯೯ರಲ್ಲಿ ಸಸ್ಯವಿಜ್ಞಾನಿ ಮೊಯಿಸ್ ಸ್ಯಾಂಟಿಯಾಗೊ ಬರ್ಟೋನಿ ಮೊದಲಿಗೆ ಈ ಸಸ್ಯವು ಪೂರ್ವ ಪರಾಗ್ವೆದಲ್ಲಿ ಬೆಳೆದುದರ ಬಗ್ಗೆ ವಿವರಿಸಿದರು ಮತ್ತು ಅದರ ಸಿಹಿ ರುಚಿಯನ್ನು ಗಮನಿಸಿದರು.[]

ಸಕ್ಕರೆ ಗಿಡದ ಹೂಗಳು

ಬೆಳವಣಿಗೆ

[ಬದಲಾಯಿಸಿ]

ಹುಲ್ಲುಗಾವಲು ಪ್ರದೇಶದಿಂದ ಪರ್ವತ ಭೂಪ್ರದೇಶದವರೆಗಿನ ಅರೆವಾಸಿತ ಆವಾಸಸ್ಥಾನಗಳಲ್ಲಿ ಕಂಡುಬರುವ ಸಕ್ಕರೆ ಗಿಡ ಸಸ್ಯಗಳು ಬೀಜಗಳನ್ನು ಉತ್ಪತ್ತಿ ಮಾಡುತ್ತವೆ. ಆದರೆ ಬೀಜಗಳ ಒಂದು ಸಣ್ಣ ಶೇಕಡ ಮಾತ್ರ ಮೊಳಕೆಯೊಡೆಯುತ್ತವೆ. ಇಂದು ಚೀನಾ, ಕೊರಿಯಾ, ತೈವಾನ್, ಥೈಲೆಂಡ್, ಫಿಲಿಪೈನ್ಸ್, ಇಂಡೋನೇಶಿಯಾ ಮತ್ತು ಮಲೇಶಿಯಾ ಸೇರಿದಂತೆ ಏಷ್ಯಾದಲ್ಲಿ ಆಹಾರವನ್ನು ಸಿಹಿಗೊಳಿಸುವುದಕ್ಕಾಗಿ ಸಕ್ಕರೆ ಗಿಡವನ್ನು ಬೆಳೆಸಲಾಗುತ್ತದೆ. ಇದು ಸೇಂಟ್ ಕಿಟ್ಸ್ ಮತ್ತು ನೆವಿಸ್, ಬ್ರೆಜಿಲ್, ಕೊಲಂಬಿಯಾ, ಪೆರು, ಪರಾಗ್ವೆ, ಉರುಗ್ವೆ ಮತ್ತು ಇಸ್ರೇಲ್ನಲ್ಲಿಯು ಕಂಡುಬರುತ್ತದೆ.[][]

ಉಪಯೋಗ

[ಬದಲಾಯಿಸಿ]

ಸಕ್ಕರೆ ಗಿಡವನ್ನು ಅದರ ಸಿಹಿ ಎಲೆಗಳಿಗಾಗಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಅವು ಸ್ಟೀವಿಯಾ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಿಹಿಕಾರಕ ಉತ್ಪನ್ನಗಳ ಮೂಲವಾಗಿದೆ. ವಿವಿಧ ವ್ಯಾಪಾರಿ ಹೆಸರುಗಳ ಅಡಿಯಲ್ಲಿ ಇದನ್ನು ಮಾರಾಟ ಮಾಡಲಾಗುತ್ತದೆ. ಎಲೆಗಳನ್ನು ತಾಜಾ ತಿನ್ನಬಹುದು ಅಥವಾ ಚಹಾ ಮತ್ತು ಆಹಾರಗಳಲ್ಲಿ ಬಳಸಬಹುದು.[]

ಉಲ್ಲೇಖ

[ಬದಲಾಯಿಸಿ]
  1. https://www.sciencedirect.com/topics/agricultural-and-biological-sciences/stevia-rebaudiana
  2. "ಆರ್ಕೈವ್ ನಕಲು". Archived from the original on 2018-08-24. Retrieved 2018-08-28.
  3. https://www.britannica.com/plant/stevia-plant
  4. https://www.purecirclesteviainstitute.com/resources/infographics/stevia-facts/where-does-stevia-come-from/
  5. https://www.agrifarming.in/stevia-plant-farming/
  6. https://www.motherearthnews.com/organic-gardening/herbs/stevia-plant-zm0z13fmzkin
  7. https://www.drugs.com/npp/stevia.html