ಶಾಸಕಾಂಗ
ಗೋಚರ
ಶಾಸಕಾಂಗಗಳು ಕಾನೂನುಗಳನ್ನು ನಿಶ್ಚಯಿಸುವ ಸರಕಾರಗಳ ವಿಭಾಗಗಳು. ಇವು ಸಾಮಾನ್ಯವಾಗಿ ಪ್ರತಿನಿಧಿತ್ವ ಸಭೆಗಳ ರೂಪದಲ್ಲಿ ಇರುತ್ತವೆ. ವಿವಿಧ ಸರಕಾರಗಳ ವಿಧಗಳಲ್ಲಿ ಈ ಪ್ರತಿನಿಧಿತ್ವ ಸಭೆ ವಿವಿಧ ಬಗೆಗಳಲ್ಲಿ ಸಂಘಟಿತಗೊಳ್ಳುತ್ತವೆ. ಸಂಸದೀಯ ಸರ್ಕಾರಗಳಲ್ಲಿ ಶಾಸಕಾಂಗ ಕಾರ್ಯಾಂಗಕ್ಕಿಂತ ಮೇಲ್ದರ್ಜೆಯನ್ನು ಹೊಂದಿರುತ್ತದೆ. ರಾಷ್ಟ್ರಪತಿ ಆಳ್ವಿಕೆ ಸರ್ಕಾರದ ಪದ್ಧತಿಗಳಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಸಮಾನ ದರ್ಜೆಗಳನ್ನು ಹೊಂದಿರುತ್ತವೆ.
ಸದಸ್ಯರು
[ಬದಲಾಯಿಸಿ]ಶಾಸಕಾಂಗದ ಸದಸ್ಯರಿಗೆ "ಶಾಸಕ" ಎಂದು ಕರೆಯುತ್ತಾರೆ. ಶಾಸಕರು ಶಾಸನವನ್ನು ನಿರ್ಮಿಸುತ್ತಾರೆ. ಶಾಸಕರು ಪ್ರಸ್ತಾವಿತ ಕಾನೂನುಗಳ ಮೂಲಕ ಮತ ಹಾಕುತ್ತಾರೆ. ಶಾಸನವು ಸ್ಥಿರ ಸಂಖ್ಯೆಯ ಸದಸ್ಯರನ್ನು ಹೊಂದಿರುತ್ತದೆ. ಶಾಸನದಲ್ಲಿ ಸಾಮಾನ್ಯವಾಗಿ ಶಾಸಕರು ತುಂಬಿರುತ್ತಾರೆ, ಅವರು ನಿರ್ದಿಷ್ಟ ಕೋಣೆಯಲ್ಲಿ ಕೂಡಿರುತ್ತಾರೆ.