ವ್ಯಾಟಿಕನ್ ನಗರ
ವ್ಯಾಟಿಕನ್ ನಗರ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ವ್ಯಾಟಿಕನ್ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | i, ii, iv, vi |
ಆಕರ | 286 |
ವಲಯ** | ಯುರೋಪ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1984 (8ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ವ್ಯಾಟಿಕನ್ ನಗರ - ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು. ವ್ಯಾಟಿಕನ್ ನಗರ-ಅಧಿಕೃತವಾಗಿ, 'ವ್ಯಾಟಿಕನ್ ನಗರ ರಾಜ್ಯ'. ವ್ಯಾಟಿಕನ್ ನಗರವು ಕ್ರಿಶ್ಚಿಯನ್ನರ ಅತ್ಯುಚ್ಚ ಧರ್ಮಗುರು ಪೋಪ್ ಅವರು ನೆಲೆಸಿರುವ ಸ್ಥಳ. ರೋಮ್ ನಗರದ ಮಧ್ಯಭಾಗದಲ್ಲಿ ಸ್ಥಿತವಾಗಿರುವ ವ್ಯಾಟಿಕನ್ ನಗರವು, ಸ್ವತಂತ್ರ ದೇಶವಾಗಿದೆ ಮತ್ತು 'ಪ್ರಪಂಚದಲ್ಲಿಯೇ ಅತ್ಯಂತ ಸಣ್ಣ ರಾಷ್ಟ್ರ'ವೆಂಬ ಹೆಗ್ಗಳಿಕೆಯನ್ನು ಪಡೆದಿದೆ.
ಹೋಲಿ ಸೀ
[ಬದಲಾಯಿಸಿ]ಈ ನಗರದ ಅಧಿಕಾರವನ್ನು ಹೋಲಿ ಸೀ ಎಂಬ ರೋಮನ್ ಕ್ಯಾಥೋಲಿಕ್ ಚರ್ಚ್ ಪೀಠವು ನೆಡೆಸುತ್ತದೆ. ಈ ದೇಶದ ನಾಯಕತ್ವವನ್ನು ಮತ್ತು ಆಡಳಿತವನ್ನು ಪೋಪ್ ರವರಿಗೆ ನೀಡಲಾಗಿದೆ ಮತ್ತು ಸರ್ಕಾರದ ಪ್ರಮುಖರಾಗಿ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯವರಿಗೂ ಮತ್ತು ವ್ಯಾಟಿಕನ್ ರಾಜ್ಯಪಾಲರಿಗೂ ಅಡಳಿತ ವಹಿಸಲಾಗಿದೆ. ಈಗಿನ ಪೋಪ್ ಪದವಿಯನ್ನು, ಪೋಪ್ ಹದಿನಾರನೇ ಬೆನೆಡಿಕ್ಟ್ ಅಲಂಕರಿಸಿದ್ದಾರೆ.
ವಿಶ್ವದ ಅತಿದೊಡ್ಡ ಇಗರ್ಜಿ
[ಬದಲಾಯಿಸಿ]ಈ ನಗರದ ಮಧ್ಯಭಾಗದಲ್ಲಿ ತೆರೆದ ಕ್ರೈಸ್ತ ಧರ್ಮ ಗುರುಗಳು ಇರುವ ದೇವಾಲಯವಿದೆ. ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ಕ್ರೈಸ್ತ ದೇವಾಲಯ. ಈ ದೇವಾಲಯ ಧರ್ಮ ಪ್ರವರ್ತಕ ಸಂತ ಪೀಟರ್ ಅವರ ಸಮಾಧಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಇಷ್ಟೇ ಅಲ್ಲದೆ ವ್ಯಾಟಿಕನ್ ಸಿಟಿಯಲ್ಲಿ ಮೈಕೆಲೆಂಜಲೋ ಮತ್ತಿತರರು ರಚಿಸಿದ ಕಲಾಕೃತಿಗಳ ಸಂಗ್ರಹ ಹಾಗೂ ವೈವಿಧ್ಯ ಶೈಲಿಯ ಕಟ್ಟಡ ವಿನ್ಯಾಸಗಳನ್ನು ಕಾಣಬಹುದು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |