ವೇದಾಂಗ
ಗೋಚರ
ವೇದಾಂಗಗಳು ಸಾಂಪ್ರದಾಯಿಕವಾಗಿ ವೇದಗಳ ಅಧ್ಯಯನ ಮತ್ತು ಅರಿವಿಗೆ ಸಂಬಂಧಿಸಿದ ಆರು ಪೂರಕ ವಿಭಾಗಗಳು. ಇವು ಶಿಕ್ಷಾ (ಧ್ವನಿಶಾಸ್ತ್ರ), ಕಲ್ಪ (ಧರ್ಮಾಚರಣೆ), ವ್ಯಾಕರಣ, ನಿರುಕ್ತ (ವ್ಯುತ್ಪತ್ತಿ ಶಾಸ್ತ್ರ), ಛಂದಸ್ಸು ಮತ್ತು ಜ್ಯೋತಿಷ. ಸಾಂಪ್ರದಾಯಿಕವಾಗಿ, ವ್ಯಾಕರಣ ಮತ್ತು ನಿರುಕ್ತ ಎಲ್ಲ ನಾಲ್ಕು ವೇದಗಳಿಗೆ ಸಾಮಾನ್ಯವಾದರೆ, ಪ್ರತಿ ವೇದವು ತನ್ನದೇ ಶಿಕ್ಷಾ, ಛಂದಸ್ಸು, ಕಲ್ಪ ಮತ್ತು ಜ್ಯೋತಿಷ ಪಠ್ಯಗಳನ್ನು ಹೊಂದಿದೆ.