ಶಿಕ್ಷಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಶಿಕ್ಷಾ ಆರು ವೇದಾಂಗಗಳ ಪೈಕಿ ಒಂದು, ಮತ್ತು ಇದು ಸಂಸ್ಕೃತದ ಭಾಷಾಧ್ವನಿಶಾಸ್ತ್ರ ಹಾಗು ಧ್ವನಿವಿಜ್ಞಾನದ ಸಾಂಪ್ರದಾಯಿಕ ಹಿಂದೂ ವಿಜ್ಞಾನವನ್ನು ಪ್ರತಿಪಾದಿಸುತ್ತದೆ. ವೈದಿಕ ಸ್ತೋತ್ರಗಳು ಮತ್ತು ಮಂತ್ರಗಳ ಸರಿಯಾದ ಉಚ್ಚಾರಣೆಯನ್ನು ಹೇಳಿಕೊಡುವುದು ಅದರ ಗುರಿಯಾಗಿದೆ. ಸಂಸ್ಕೃತದ ಉಚ್ಚಾರ ಹಾಗು ಉಚ್ಚಾರಣಾ ವಿಧಾನ, ಜೊತೆಗೆ ವೇದಗಳ ಶಾಖೆಗಳಿಗೆ ನಿರ್ದಿಷ್ಟವಾಗಿರುವ ಸಂಧಿಯ ಸಂಸ್ಕೃತ ನಿಯಮಗಳನ್ನು ವಿವರಿಸುವ ಪ್ರಾತಿಶಾಖ್ಯಗಳು ಅತ್ಯಂತ ಹಳೆಯ ಉಚ್ಚಾರಣಾ ಸಂಬಂಧಿ ಪಠ್ಯಪುಸ್ತಕಗಳು.


"https://kn.wikipedia.org/w/index.php?title=ಶಿಕ್ಷಾ&oldid=634842" ಇಂದ ಪಡೆಯಲ್ಪಟ್ಟಿದೆ