ಎಸ್.ಕೆ.ಶಾಮಸುಂದರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ಪತ್ರಕರ್ತರೂ ಸೇರಿದಂತೆ ಗೆಳೆಯರೆಲ್ಲರಿಗೂ 'ಶಾಮಿ', 'ಶಾಮ್' ಎಂದೇ ಪರಿಚಿತರಾದ ಎ...
 
No edit summary
 
೬ ನೇ ಸಾಲು: ೬ ನೇ ಸಾಲು:


[[ಬೆಂಗಳೂರು ಪ್ರೆಸ್ ಕ್ಲಬ್]] ಸೇರಿದಂತೆ ಅನೇಕ ಪತ್ರಕರ್ತ ಸಂಘಟನೆಗಳಿಗೆ ಅವರದು ಪೋಷಕ ಸ್ಥಾನ.
[[ಬೆಂಗಳೂರು ಪ್ರೆಸ್ ಕ್ಲಬ್]] ಸೇರಿದಂತೆ ಅನೇಕ ಪತ್ರಕರ್ತ ಸಂಘಟನೆಗಳಿಗೆ ಅವರದು ಪೋಷಕ ಸ್ಥಾನ.

[[ವರ್ಗ:ಪತ್ರಕರ್ತರು|ಎಸ್.ಕೆ.ಶಾಮಸುಂದರ|ಶಾಮ್]]

೧೩:೪೦, ೧೧ ಮಾರ್ಚ್ ೨೦೧೩ ದ ಇತ್ತೀಚಿನ ಆವೃತ್ತಿ

ಪತ್ರಕರ್ತರೂ ಸೇರಿದಂತೆ ಗೆಳೆಯರೆಲ್ಲರಿಗೂ 'ಶಾಮಿ', 'ಶಾಮ್' ಎಂದೇ ಪರಿಚಿತರಾದ ಎಸ್.ಕೆ.ಶಾಮಸುಂದರ ಕನ್ನಡದ ಇಂಟರ್^ನೆಟ್ ಪತ್ರಿಕೋದ್ಯಮದ ಆದ್ಯರು ಎನ್ನಬಹುದು. ಪ್ರಸ್ತುತ www.thatskannada.com ಸಂಪಾದಕರಾಗಿರುವ ಶಾಮ್ ದಶಕಗಳಿಗೂ ಹೆಚ್ಚಿನ ಕಾಲದಿಂದ ಅದೇ ಸಂಸ್ಥೆಯ ವಿವಿಧ ಕನ್ನಡ ಆವೃತ್ತಿಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ರತಿ ವಿಜ್ಞಾನ ದರ್ಪಣದಂಥ ಶುದ್ಧ ಲೈಂಗಿಕ ಮಾಸಪತ್ರಿಕೆಯ ಸಂಪಾದಕರಾಗಿದ್ದ ಶಾಮ್ ಪ್ರಜಾವಾಣಿಯ ಸಹಾಯಕ ಸಂಪಾದಕರಾಗಿದ್ದ ಮ.ಶ್ರೀಧರಮೂರ್ತಿಯವರು ಸ್ಥಾಪಿಸಿದ ಆ ಪತ್ರಿಕೆಗೆ ಗೌರವ ಕಲ್ಪಿಸುವಲ್ಲಿ ನೆರವಾದರು. ಶ್ರೀಧರಮೂರ್ತಿಯವರಂತೆ ಮೂಲತಃ ಚಿತ್ರದುರ್ಗದವರಾದ ಶಾಮ್ ಕೆ.ಶಾಮರಾವ್ ಆಡಳಿತಾವಧಿಯಲ್ಲಿ ಸಂಯುಕ್ತ ಕರ್ನಾಟಕ ಸಮೂಹದ ಕಸ್ತೂರಿ ಮಾಸಪತ್ರಿಕೆಯ ಸಂಪಾದಕರಾಗಿಯೂ ದುಡಿದಿದ್ದರು. ವೈಯೆನ್ಕೆ ದಿನಗಳಲ್ಲಿ ಕನ್ನಡಪ್ರಭ ಪತ್ರಿಕೆಯ ಪುರವಣಿಗಳ ಸಂಪಾದಕರಾಗಿಯೂ ಅಪಾರ ಜನಮನ್ನಣೆ ಗಳಿಸಿದ್ದರು, ಶಾಮ್. ಅನೇಕ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಿ ಬೆಳೆಸಿದ ಕೀರ್ತಿಯೂ ಅವರದು.

ಕನ್ನಡ ಟೀವಿ ಪತ್ರಿಕೋದ್ಯಮದಲ್ಲೂ ಶಾಮ್ ಅವರ ಉತ್ಸುಕತೆ ಪ್ರಚುರಗೊಂಡಿದೆ. ಸುವರ್ಣ ನ್ಯೂಸ್ ಸೇರಿದಂತೆ ಅನೇಕ ಚಾನೆಲ್^ಗಳಲ್ಲಿ ಅವರು ಸಂವಾದಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಹೆಚ್.ಆರ್.ರಂಗನಾಥ್ ನೇತೃತ್ವದ ಪಬ್ಲಿಕ್ ಟೀವಿಯ ಪ್ರಮುಖ ಸುದ್ದಿ ಕಾರ್ಯಕ್ರಮಗಳ ರೂವಾರಿಯೂ ಆಗಿದ್ದಾರೆ.

ಅಮೆರಿಕದ ಕನ್ನಡಿಗರೊಂದಿಗೆ ಅವರದು ತೀರಾ ಹತ್ತಿರದ ನಂಟು. ಬಹುತೇಕ ಅಮೆರಿಕ ಕನ್ನಡ ಸಮ್ಮೇಳನಗಳಿಗೆ ಆಹ್ವಾನಿತರಾಗಿ ವಿಶಿಷ್ಟ ವರದಿಗಳನ್ನು ಕನ್ನಡ ಓದುಗರಿಗೆ ಉಣಬಡಿಸಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ಸೇರಿದಂತೆ ಅನೇಕ ಪತ್ರಕರ್ತ ಸಂಘಟನೆಗಳಿಗೆ ಅವರದು ಪೋಷಕ ಸ್ಥಾನ.