404 ದೋಷ (404 Error): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding el:HTTP 404
ಚು r2.7.2) (Robot: Adding lv:HTTP 404
೬೮ ನೇ ಸಾಲು: ೬೮ ನೇ ಸಾಲು:
[[ja:HTTP 404]]
[[ja:HTTP 404]]
[[ko:HTTP 404]]
[[ko:HTTP 404]]
[[lv:HTTP 404]]
[[mk:HTTP 404]]
[[mk:HTTP 404]]
[[nl:Error 404]]
[[nl:Error 404]]

೦೧:೩೮, ೫ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

404 ಅಥವಾ Not Found (ಸಿಗಲಿಲ್ಲ) ದೋಷ ಸಂದೇಶವು ಒಂದು ಎಚ್‌ಟಿಟಿಪಿ (HTTP) ನಿರ್ದಿಷ್ಟ ಪ್ರತಿಕ್ರಿಯಾ ಸಂಕೇತ. ಇದರ ಪ್ರಕಾರ, ಯಾವುದೇ ಅಂತರಜಾಲ ಅಥವಾ ಅಂತರ್ಜಾಲದಲ್ಲಿ ಆನುಷಂಗಿಕ ಕಂಪ್ಯೂಟರ್‌(client‌)ನಿಂದ ಕೋರಿಕೆಯ ಸಂದೇಶವು ಮುಖ್ಯ ಕಂಪ್ಯೂಟರ್‌(server) ತಲುಪಿತಾದರೂ, ಮುಖ್ಯ ಕಂಪ್ಯೂಟರ್‌, ಬೇಕಾದ ಈ ಮಾಹಿತಿಯನ್ನು ಒದಗಿಸಲಾಗದು. '404 ದೋಷ' ಹಾಗೂ 'server not found (ಮುಖ್ಯ ಕಂಪ್ಯೂಟರ್‌ ಅಲಭ್ಯ)' ಅಥವಾ ಇದೇ ರೀತಿಯ ದೋಷಗಳೊಂದಿಗೆ ಗೊಂದಲ ಮಾಡಿಕೊಳ್ಳಬಾರದು. 'Server not found ದೋಷದಲ್ಲಿ ಆನುಷಂಗಿಕ ಕಂಪ್ಯೂಟರ್‌ ಮುಖ್ಯ ಕಂಪ್ಯೂಟರ್‌ನೊಂದಿಗೆ ಕೋರುವ ಸಂಪರ್ಕ ಏರ್ಪಡುವುದೇ ಇಲ್ಲ. 404 ದೋಷವು ಕೋರಲಾದ ಮಾಹಿತಿಯು ಮುಂದೆ ಎಂದಾದರೂ ಪುನಃ ಲಭ್ಯವಾಗಬಹುದು ಎಂಬುದನ್ನು ಸೂಚಿಸುತ್ತದೆ.

ಸ್ಥೂಲ ಅವಲೋಕನ

ಎಚ್‌ಟಿಟಿಪಿ (Hypertext Transfer Protocol (ಬೃಹತ್‌ಪ್ರಮಾಣ ಪಠ್ಯ ವರ್ಗಾವಣಾ ಸಂಹಿತೆ)) ಮೂಲಕ ಸಂವಹನೆ ನಡೆಸುವಾಗ, ಮುಖ್ಯ ಕಂಪ್ಯೂಟರ್‌ ಕೋರಿಕೆಯೊಂದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿದೆ. ಕೋರಿಕೆಗಳಲ್ಲಿ ಅಂತರಜಾಲ ಪುಟ ವೀಕ್ಷಕ (Web browser) ಕಳುಹಿಸುವ ಒಂದು ಎಚ್‌ಟಿಎಮ್‌ಎಲ್‌ (HTML (HyperText Markup Language) (ಬೃಹತ್‌ಪ್ರಮಾಣ ಪಠ್ಯ ಗುರುತಿಸುವ ಸಂಕೇತಭಾಷೆ)) ಕಡತ (ಸಾಂಖ್ಯಿಕ ಪ್ರತಿಕ್ರಿಯಾ ಸಂಕೇತ ಹಾಗೂ ಐಚ್ಛಿಕ ಸಂದೇಶ ಸಮೇತ ಒಂದು ಅಂತರಜಾಲ ಪುಟ)) ಕೋರಿಕೆ ಸೇರಿರಬಹುದು. 404 ಸಂಕೇತದಲ್ಲಿ ಮೊದಲ '4' ಆನುಷಂಗಿಕ ಕಂಪ್ಯೂಟರ್‌ ದೋಷ ಸೂಚಿಸುತ್ತದೆ (ಉದಾಹರಣೆಗೆ, ತಪ್ಪಾಗಿ ನಮೂದಿಸಲಾದ ಅಂತರಜಾಲ ಪುಟ ವಿಳಾಸ (URL)). ನಂತರದ ಎರಡು ಅಂಕಿಗಳು '04' ನಿರ್ದಿಷ್ಟ ದೋಷವನ್ನು ಸೂಚಿಸುತ್ತದೆ. ಎಚ್‌ಟಿಟಿಪಿ ಇಂತಹ ಮೂರಂಕಿಗಳ ಸಂಕೇತ ಬಳಕೆ, ಹಾಗೂ, ಎಫ್‌ಟಿಪಿ (ಕಡತ ರವಾನಾ ಸಂಹಿತೆ) ಮತ್ತು ಎನ್‌ಎನ್‌ಟಿಪಿ ((NNTP - Network News Transfer Protocol)ಜಾಲ ವಾರ್ತಾ ರವಾನಾ ಸಂಹಿತೆ)ಯಂತಹ ಸಂಹಿತೆಯ ಬಳಕೆ ಒಂದೇ ರೀತಿಯಾಗಿವೆ.

ಎಚ್‌ಟಿಟಿಪಿ ಮಟ್ಟದಲ್ಲಿ, 404 ಪ್ರತಿಕ್ರಿಯೆಯ ನಂತರ, ಬಳಕೆದಾರರು ಓದಲು ಸಾಧ್ಯವಾದ 'ಕಾರಣ-ವಿವರಣೆ'ಗಳನ್ನು ಪ್ರದರ್ಶಿಸಲಾಗುತ್ತದೆ. ಎಚ್‌ಟಿಟಿಪಿ ವಿಶಿಷ್ಟತೆಯು ಸೂಚಿಸುವಂತೆ, 'Not Found'[೧] ಹಾಗೂ ಯಥಾಸ್ಥಿತಿಯಲ್ಲಿ ಹಲವು ಅಂತರಜಾಲ ಮುಖ್ಯ ಕಂಪ್ಯೂಟರ್‌ಗಳು 404 ಮತ್ತು Not Found ಎರಡೂ ಸಂಕೇತಗಳೆರಡನ್ನೂ ಒಳಗೊಂಡಿರುವ ಎಚ್‌ಟಿಎಮ್‌ಎಲ್‌ ಪುಟವನ್ನು ಪ್ರದರ್ಶಿಸುತ್ತದೆ.

ಒಂದು ವೇಳೆ ಅಂತರಜಾಲ ಪುಟಗಳು ಸ್ಥಳಾಂತರಗೊಂಡಲ್ಲಿ ಅಥವಾ ಅಳಿಸಲಾದಲ್ಲಿ 404 ದೋಷವನ್ನು ಪ್ರದರ್ಶಿಸಲಾಗುವುದು. ಮೊದಲ ನಿದರ್ಶನದಲ್ಲಿ, 301 Moved Permanently (301 ಕಾಯಂ ಆಗಿ ಸ್ಥಳಾಂತರಗೊಳಿಸಲಾಗಿದೆ) ಎಂಬ ಪ್ರತಿಕ್ರಿಯೆಯನ್ನು ನಮೂದಿಸುವುದು ಉತ್ತಮ. ಇದರಿಂದಾಗಿ ಬಹಳಷ್ಟು ಮುಖ್ಯಕಂಪ್ಯೂಟರ್‌ಗಳಲ್ಲಿ ಮರುಸಂಯೋಜನೆ ಅಥವಾ ಅಂತರಜಾಲ ವಿಳಾಸವನ್ನು ಪುನಃ ರಚಿಸುವ ಮೂಲಕ ಸರಿಪಡಿಸಬಹುದಾಗಿದೆ. ಎರಡನೆಯ ನಿದರ್ಶನದಲ್ಲಿ, 410 Gone (410 ಕಳೆದುಹೋಗಿದೆ) ಎಂದು ನಮೂದಿಸುವುದು ಸೂಕ್ತ. ಏಕೆಂದರೆ, ಇವೆರಡೂ ವಿಕಲ್ಪಗಳಿಗೆ ವಿಶೇಷ ಮುಖ್ಯ ಕಂಪ್ಯೂಟರ್‌ ಸಂಯೋಜನೆಗಳ ಅಗತ್ಯವಿದೆ. ಹಲವು ಅಂತರಜಾಲತಾಣಗಳು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿಲ್ಲ.

404 ದೋಷಗಳನ್ನು ಡಿಎನ್‌ಎಸ್‌ (DNS (Domain Name System) Error - ವ್ಯಾಪ್ತಿ ನಾಮಕರಣ ವ್ಯವಸ್ಥೆ‌) ದೋಷಗಳೊಂದಿಗೆ ಗೊಂದಲ ಮಾಡಬಾರದು. ಡಿಎನ್‌ಎಸ್‌ ದೋಷವೆಂದರೆ ನಮೂದಿಸಲಾದ ಅಂತರಜಾಲ ವಿಳಾಸದಲ್ಲಿ ಸೃಷ್ಟಿಯಾಗಿರದ ಮುಖ್ಯ ಕಂಪ್ಯೂಟರ್‌ನ ಹೆಸರು ಸೇರಿರುತ್ತದೆ. 404 ದೋಷವು ಮುಖ್ಯ ಕಂಪ್ಯೂಟರ್‌ ಲಭ್ಯವಾಯಿತಾದರೂ, ಅದರಲ್ಲಿ ಕೋರಲಾದ ಜಾಲ ಪುಟವು ಅಲಭ್ಯ ಎಂದು ಸೂಚಿಸುತ್ತದೆ.

ಹೇಳಿ-ರಚಿಸಲಾದ ದೋಷ ಪುಟಗಳು (Custom error pages)

ಕ್ಯಾಮಿನೊ ಅಂತರಜಾಲ ಪುಟ ವೀಕ್ಷಕದಲ್ಲಿ ವಿಕಿಪೀಡಿಯಾದ 404 ದೋಷ ಪುಟದ ಒಂದು ಛಾಯಾಚಿತ್ರ.

ಸುಲಭ ಅರ್ಥ ನೀಡುವ ದೋಷ ಸಂದೇಶ ಪುಟವನ್ನು ಪ್ರದರ್ಶಿಸುವಂತೆ ಅಂತರಜಾಲ ಮುಖ್ಯ ಕಂಪ್ಯೂಟರ್‌ಗಳನ್ನು ಮಾದರಿಯಾಗಿ ಸಂಯೋಜಿಸಬಹುದು. ಇದರಲ್ಲಿ ಇನ್ನಷ್ಟು ಸಹಜವಾದ ವಿವರ ನೀಡುವುದು ಅಥವಾ ಮೂಲ ಅಂತರಜಾಲ ತಾಣದ ಛಾಪು ಅಥವಾ ಕೆಲವೊಮ್ಮೆ ಹುಡುಕುವ ಪಾನೆಯೂ ಸಹ ಸೇರಿವೆ. ಬಳಕೆದಾರರಿಂದ ಅಡಗಿಸಲಾಗಿರುವ ಸಂಹಿತೆ ಪುಂಜವನ್ನು ಮರುಸಂಯೋಜಿಸುವುದು ಬಹಳ ಅಪರೂಪ.

ಆದರೆ, ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ (ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ 7 ಆವೃತ್ತಿಯ ಮುಂಚಿನದು) 512 ಬೈಟ್‌ಗಳಿಗಿಂತಲೂ ಕಡಿಮೆ ಗಾತ್ರದ ಮರುಸಂಯೋಜಿತ ಪುಟಗಳನ್ನು ಪ್ರದರ್ಶಿಸುವುದಿಲ್ಲ. ಇದರ ಬದಲಿಗೆ, ಬಳಕೆದಾರರಿಗೆ ಸೂಕ್ತವೆನಿಸುವ ದೋಷ ಪುಟವನ್ನು ಪ್ರದರ್ಶಿಸುತ್ತದೆ. ಗೂಗಲ್‌ ಕ್ರೋಮ್‌ ಬ್ರೌಸರ್‌ ಸಹ ಇದೇ ರೀತಿಯ ಕ್ರಿಯೆಯನ್ನು ಒಳಗೊಂಡಿರುತ್ತದೆ. ಇದರಲ್ಲಿ 404ರ ಬದಲಿಗೆ, ಗೂಗಲ್‌ ಗಣನೆಯು ಸೃಷ್ಟಿಸುವ ಪರ್ಯಾಯ ಸಲಹೆಗಳನ್ನು ನೀಡಲಾಗುತ್ತದೆ.

==ಮಿಥ್ಯ 404 ದೋಷಗಳು (False 404 errors)

== ಕೆಲವು ಅಂತರಜಾಲ ಪುಟಗಳು "200 OK" ಪ್ರತಿಕ್ರಿಯಾ ಸಂಕೇತದೊಂದಿಗಿನ ನಿರ್ದಿಷ್ಟ ಜಾಲ ಪುಟವನ್ನು ಪ್ರದರ್ಶಿಸುವ ಮೂಲಕ, 'ಅಲಭ್ಯ' ದೋಷವನ್ನು ಪ್ರದರ್ಶಿಸುತ್ತವೆ. ಇದನ್ನು ಮೃದು 404 (soft 404) ಎನ್ನಲಾಗಿದೆ. ಮೃದು 404 ದೋಷಗಳು, ಕೊಂಡಿಯು ಕಳಚಿಹೋಗಿದೆಯೇ ಎಂಬುದನ್ನು ನಿರ್ಣಯಿಸುವ ಸ್ವಯಂಚಾಲಿತ ರೀತಿಗಳಿಗೆ ಬಹಳ ಸಮಸ್ಯಾಪೂರಿತವಾಗಿವೆ. ಯಾಹೂನಂತಹ ಕೆಲವು ಶೋಧನಾ ಅಂತರಜಾಲ ಸಾಧನಗಳು ಇಂತಹ ಮೃದು 404 ದೋಷಗಳನ್ನು ಪತ್ತೆ ಮಾಡಲು ಸ್ವಯಂಚಾಲಿತ ರೀತಿಗಳನ್ನು ಅನುಸರಿಸುತ್ತವೆ. [೨] ಕೆಲವು ನಿರ್ದಿಷ್ಟ ಎಚ್‌ಟಿಟಿಪಿ ಮುಖ್ಯ ಕಂಪ್ಯೂಟರ್‌ ತಂತ್ರಾಂಶವನ್ನು ಬಳಸುವಾಗ ಉಂಟಾಗುವ ಸಂಯೋಜನಾ ದೋಷಗಳಿಂದಾಗಿ ಮೃದು 404 ದೋಷಗಳು ಸಂಭವಿಸುತ್ತವೆ. ಉದಾಹರಣೆಗೆ, ಅಪ್ಯಾಷ್‌ ತಂತ್ರಾಂಶದಲ್ಲಿ, ದೋಷ ಕಡತ 404 ಪ್ರದರ್ಶಿಸುವಾಗ (ಇದನ್ನು .htaccess ಕಡತದಲ್ಲಿ ಸೂಚಿಸಲಾಗಿದೆ) ಸಂಬಂಧಿತ ವಿಳಾಸ /error.html ಬದಲಿಗೆ, ಇದನ್ನು ನಿಖರ ವಿಳಾಸದಲ್ಲಿ ನಮೂದಿಸಲಾಗಿದೆ (ಉದಾಹರಣೆಗೆ http://example.com/error.html) [೩]

ದೂರದ ಮುಖ್ಯ ಕಂಪ್ಯೂಟರ್‌ ಅಲಭ್ಯವಾಗಿದ್ದಲ್ಲಿ, ಕೆಲವು ಉಪ-ಮುಖ್ಯ ಕಂಪ್ಯೂಟರ್‌ಗಳು (proxy servers) 404 ದೋಷ ಸಂಕೇತ ಪ್ರದರ್ಶಿಸುತ್ತವೆ. ಮುಖ್ಯ ಕಂಪ್ಯೂಟರ್‌ ಪಥ ವೈಫಲ್ಯ ಅಥವಾ ಟಿಸಿಪಿ (ಪ್ರಸರಣಾ ನಿಯಂತ್ರಣಾ ಸಂಹಿತೆ) ಸಂಪರ್ಕ ನಿರಾಕರಣೆಯಿಂದಾಗಿ ಉಪಮುಖ್ಯ ಕಂಪ್ಯೂಟರ್‌ಗಳು ಕೋರಿಕೆಯನ್ನು ಪುರಸ್ಕರಿಸಲಾಗದು. ಇದಕ್ಕೆ ಅವು ಸರಿಯಾದ 500-ಶ್ರೇಣಿಯ ಸಂಕೇತವನ್ನು ಪ್ರದರ್ಶಿಸುವುದು ಸೂಕ್ತ. ಇದರ ಪರಿಣಾಮವಾಗಿ, ಮುಖ್ಯ ಕಂಪ್ಯೂಟರ್‌ಗಳು ಅಥವಾ ಉಪಮುಖ್ಯ ಕಂಪ್ಯೂಟರ್‌ಗಳು ಹೊರಡಿಸುವ ಕೆಲವು ನಿರ್ದಿಷ್ಟ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಿ, ಅವುಗಳಿಗೆ ಅನಗುಣವಾಗಿ ಸಕ್ರಿಯವಾಗುವ ಸಂಕೇತಸಮೂಹಗಳನ್ನು (programs) ಸಂದಿದ್ಧ ಸ್ಥಿತಿಗೆ ಸಿಲುಕಬಹುದು. ಜೊತೆಗೆ, ಅವು ಅಲಭ್ಯ ಅಂತರಜಾಲ ಮುಖ್ಯ ಕಂಪ್ಯೂಟರ್‌ (web server) ಹಾಗೂ ಲಭ್ಯ ಅಂತರಜಾಲ ಮುಖ್ಯ ಕಂಪ್ಯೂಟರ್‌ನಲ್ಲಿ ಅಲಭ್ಯ ಜಾಲ ಪುಟದ ನಡುವೆ ಭೇದವನ್ನು ಗುರುತಿಸಲಾಗದು.

2004ರ ಜುಲೈ ತಿಂಗಳಲ್ಲಿ, ಯುನೈಟೆಡ್ ಕಿಂಗ್ಡಮ್‌ನ ದೂರಸಂವಹನ ಸೇವೆ ಒದಗಿಸುವ ಬಿಟಿ ಗ್ರೂಪ್‌ ಸಂಸ್ಥೆಯು ಕ್ಲೀನ್‌‌ಫೀಡ್‌ ಎಂಬ ಮಾಹಿತಿ ತಡೆಯುವ ವ್ಯವಸ್ಥೆಯನ್ನು ಅಳವಡಿಸಿತು. ಇದರಿಂದಾಗಿ, ಅಂತರಜಾಲ ಸಚೇತಕ ಪ್ರತಿಷ್ಟಾನವು ಕಾನೂನು-ಬಾಹಿರ ಎಂದು ಪರಿಗಣಿಸುವ ಯಾವುದೇ ತರಹದ ಮಾಹಿತಿಯನ್ನು ತಡೆಗಟ್ಟಿ, 404 ದೋಷವನ್ನು ಪ್ರದರ್ಶಿಸುತ್ತದೆ. [೪] ಇತರೆ ಅಂತರಜಾಲ ಸೇವಾದಾತ ಸಂಸ್ಥೆಗಳು ಇಂತಹದ್ದೇ ಸನ್ನಿವೇಶಗಳಲ್ಲಿ HTTP 403 'forbidden (ನಿಷೇಧಿತ)' ದೋಷ ಸಂದೇಶ ಹೊರಡಿಸುತ್ತವೆ. [೫] ಥಾಯ್ಲೆಂಡ್‌ [೬] ಮತ್ತು ಟುನಿಷ್ಯಾ ದೇಶಗಳಲ್ಲಿ ಸೆನ್ಸಾರ್‌ ಕ್ರಮಗಳನ್ನು ಮರೆಮಾಚಿ ಅವುಗಳ ಸ್ಥಾನದಲ್ಲಿ ಮಿಥ್ಯ 404 ದೋಷಗಳನ್ನು ಪ್ರದರ್ಶಿಸುವುದು ರೂಢಿ. [೭] ಟುನಿಷ್ಯಾದಲ್ಲಿ, ಸೆನ್ಸರ್‌ ಕ್ರಮಗಳು ಬಹಳ ಕಟ್ಟುನಿಟ್ಟಾಗಿವೆ. ಅಲ್ಲಿನ ಜನರಿಗೆ ಇಂತಹ ಮಿಥ್ಯ 404 ದೋಷಗಳ ಬಗ್ಗೆ ಅರಿವಿದೆ. ಇದರಿಂದಾಗಿ ಅವರು, ಅದೃಶ್ಯ ಸೆನ್ಸರ್‌ನ್ನು ನಿರೂಪಿಸುವ 'ಅಮ್ಮರ್‌ 404' ಎಂಬ ಕಾಲ್ಪನಿಕ ಪಾತ್ರವನ್ನು ಸೃಷ್ಟಿಸಿದ್ದಾರೆ. [೮]

ಗ್ರಾಮ್ಯ ಬಳಕೆ

2008ರಲ್ಲಿ, ಅಂಚೆ ಕಛೇರಿಯ [೯] ದೂರಸಂವಹನ ಶಾಖೆಯು ನಡೆಸಿದ ಅಧ್ಯಯನದ ಪ್ರಕಾರ, ಯನೈಟೆಡ್‌ ಕಿಂಗ್ಡಮ್‌ ಮತ್ತು ಐರ್ಲೆಂಡ್‌ ಪ್ರದೇಶಗಳಲ್ಲಿ 404 ಎಂಬುದು 'ಸುಳಿವಿಲ್ಲದಿರುವಿಕೆ'ಯ ಪರ್ಯಾಯ ಎನ್ನಲಾಗಿತ್ತು. ಗ್ರಾಮ್ಯ ನಿಘಂಟುಕಾರ ಜೊನಾಥನ್‌ ಗ್ರೀನ್‌ ಹೇಳಿದ ಪ್ರಕಾರ, ತಂತ್ರಜ್ಞಾನದ ಪ್ರಭಾವ ಹಾಗೂ ಯುವ ಜನತೆಯ ಕಾರಣ, ಗ್ರಾಮ್ಯ ಬಳಕೆಯಲ್ಲಿ '404' ಬಹಳಷ್ಟು ರೂಢಿಯಾಯಿತು. ಆದರೆ ಈಗಿನ ಸಮಯದಲ್ಲಿ, ಇಂತಹ ಬಳಕೆಯು ಕೇವಲ ಲಂಡನ್‌ ಮತ್ತು ಇತರೆ ನಗರ ಪ್ರದೇಶಗಳಲ್ಲಿ ಮಾತ್ರ ಸೀಮಿತವಾಗಿತ್ತು. [೯]

404 ಪುಟ ಉಪಕರಣಗಳು

ಹಲವು ಅಂತರಜಾಲತಾಣಗಳು 404 ದೋಷ ಸಂದೇಶದಲ್ಲಿ ಹೆಚ್ಚುವರಿ ಮಾಹಿತಿ (ಉದಾಹರಣೆಗೆ ಅಂತರಜಾಲತಾಣದ ಮುಖಪುಟದ ಕೊಂಡಿ ಅಥವಾ ಒಂದು ಹುಡುಕು ಕ್ಷೇತ್ರ (search box) ಕಳುಹಿಸಿದರೆ, ಸಲಕರಣೆಗಳಂತಹ (ವಿಡ್ಗೆಟ್‌) ಇನ್ನಷ್ಟು ಆಧುನಿಕ ವಿಸ್ತರಣಗಳು ಲಭ್ಯವಿವೆ. ಇದರ ಮೂಲಕ ಬಳಕೆದಾರರು ವೀಕ್ಷಿಸಬಯಸುವ ಸರಿಯಾದ ಅಂತರಜಾಲ ಪುಟವನ್ನು ವೀಕ್ಷಿಸಬಹುದು. [೧೦]

ಇವನ್ನೂ ಗಮನಿಸಿ

  • ಕೊಂಡಿ ಕೊಳೆತ (Link rot)

ಉಲ್ಲೇಖಗಳು

  1. "6.1.1 Status Code and Reason Phrase". Retrieved 22 June 2008.
  2. "Why is your crawler asking for strange URLs that have never existed on my site?". Yahoo Web Crawler Help page. Retrieved 4 October 2009.
  3. "Farewell to soft 404s,". Google Official Blog. Retrieved 20 September 2008.
  4. ಲಿಂಕ್ಸ್‌ ಪಬ್ಲಿಕ್‌ ಅಫೇರ್ಸ್‌ » ಕ್ಲೀನ್‌ಫೀಡ್‌: ದಿ ಫ್ಯಾಕ್ಟ್ಸ್‌
  5. "DEMON - Error 403"
  6. "The old fake '404 Not Found' routine". Bangkok Post. 2009-02-18. Retrieved 2010-09-12.
  7. Noman, Helmi (12 September 2008). "Tunisian journalist sues government agency for blocking Facebook, claims damage for the use of 404 error message instead of 403". opennet.net. Retrieved 21 November 2010.
  8. "Anti-censorship movement in Tunisia: creativity, courage and hope!". Advocacy.globalvoicesonline.org. 2010-05-27. Retrieved 2010-08-28.
  9. ೯.೦ ೯.೧ "Don't be 404, know the tech slang". BBC News. 2008-12-10. Retrieved 2008-12-13.
  10. Swenson, Sahala (August 19, 2008). "Make your 404 pages more useful". Official Google Webmaster Central Blog. Google, Inc. Retrieved August 28, 2009.

ಬಾಹ್ಯ ಕೊಂಡಿಗಳು