ವಿಷಯಕ್ಕೆ ಹೋಗು

ವಿವಾಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ

[ಬದಲಾಯಿಸಿ]

ವಿವಾಹ ದಕ್ಷಿಣ ಏಷ್ಯಾದಲ್ಲಿ ಮದುವೆಗಾಗಿ ಒಂದು ಶಬ್ದ. ಈ ಶಬ್ದವನ್ನು ವೈದಿಕ ಸಂಸ್ಕಾರಗಳ ಪ್ರಕಾರ ಮದುವೆಯನ್ನು ವಿವರಿಸಲೂ ಬಳಸಲಾಗುತ್ತದೆ. ವೈದಿಕ ಹಿಂದೂ ಸಂಪ್ರದಾಯಗಳ ಅಡಿಯಲ್ಲಿ ಮದುವೆಯನ್ನು ಸಂಸ್ಕಾರಗಳ ಪೈಕಿ ಒಂದೆಂದು ಕಾಣಲಾಗುತ್ತದೆ, ಮತ್ತು ಇದು ಒಬ್ಬ ಹೆಂಡತಿ ಮತ್ತು ಒಬ್ಬ ಗಂಡನ ಜೀವಮಾನದ ಬದ್ಧತೆ.

ವಿವಾಹದ ಕ್ರಮ

[ಬದಲಾಯಿಸಿ]

1.ವರಪ್ರೇಕ್ಷಣ ; 2.ಕನ್ಯಾ ಸಮೀಕ್ಷಣ ; 3.ವಧೂಸಮ್ಮಾರ್ಜನ ; 4.ದರ್ಭೇಣ್ವನಿಧಾನ. ; 5.ಯುಗಚ್ಛಿದ್ರಪ್ರತಿಷ್ಠಾಪನ ; 6.ಸುವರ್ಣನಿಧಾನ ; 7.ಸ್ನಾಪನ; ;8..ವದ್ವಾನಯನ ; 9.ಪಾಣಿಗ್ರಹಣ ;10. ಸಪ್ತಪದೀ 11.ಆಜ್ಯಹೋಮ ; 12.ಅಶ್ಮಾಸ್ಥಾಪನ ; 13.ಲಾಜಾಹೋಮ ; 14.ಯೋಕ್ತ್ರವಿಮೋಚನ ;14.ಪತಿಗೃಹಸ್ಥಿತವಧ್ವಭಿಮಂತ್ರಣ ;15.ಗೃಹಪ್ರವೇಶ -ಗೃಹಪ್ರವೇಶ ಹೋಮ ; 16.ಅಂಕೋಪವೇಶನ : 17.ಫಲದಾನ ; 18.ಧ್ರುವದರ್ಶನ ; 19.ಅರುಂಧತೀ ದರ್ಶನ. (ಈಗಿನ ಪದ್ಧತಿಯಂತೆ ,ನಂತರ ಮೊದಲನೇ ಸಂಸ್ಕಾರ -ಗರ್ಭಾದಾನ -ಹೋಮವೂ ಇದೆ; ಇದನ್ನು ವಧೂ ಗೃಹಪ್ರವೇಶದ ಸಂಧರ್ಭದಲ್ಲಿಯೇ ಕೊನೆಯಲ್ಲಿ ಮಾಡುತ್ತಾರೆ.(ಆಪಸ್ತಂಬ ಗೃಹ್ಯಸೂತ್ರದ ಪ್ರಕಾರ-ಡಾ.ರೂಪಾ.) (ಆಧಾರ: ಡಾ.ರೂಪಾ :ಕೃಷ್ಣಯಜುರ್ವೇದೀಯ ವಿವಾಹ ಮಂತ್ರಾರ್ಥ)

ವಿವಾಹದ ಕ್ರಮ ಮತ್ತು ಮಂತ್ರ ವಿಭಾಗ

[ಬದಲಾಯಿಸಿ]

ಆ.ಗೃಹ್ಯಸೂತ್ರ -ಉದಾ:

1.ವರಪ್ರೇಷಣದ ಮಂತ್ರದ ಭಾಗ
ಅಸ್ಮಾಕಮಿಂದ್ರ ಉಭಯಂ ಜುಜೋಷತಿ| ಯಥ್ಸೌಮ್ಯ ಸ್ಯಾಂಧಸೋ ಬುಭೋದತಿ||
ನಮ್ಮಿಭ್ಬರ ಸಂಬಂಧವು ಇಂದ್ರನಿಗೆ ಇಷ್ಟ- ಕಾರಣ ನಾವು ಅವನನ್ನು ಮುಂದೆ ಸೋಮರಸದಿಂದ ಪೂಜಿಸುತ್ತೇವೆ. ಅದು ಅವನಿಗೆ ಗೊತ್ತು.
2.ಕನ್ಯಾದರ್ಶನ ಕಾಲದಲ್ಲಿ ವರನು ವರಣನನ್ನು ಕುರಿತು ಅಭ್ರಾತಘ್ನೀ ಇತ್ಯಾದಿ ಮಂತ್ರಹೇಳುತ್ತಾನೆ -ಈ ವಧುವಿಗೆ ವರುಣನೇ ಸೋದರರನ್ನು ನಾಶಮಾಡದೇ ಇರುವ ಲಕ್ಷ್ಮಿಯನ್ನು ಕೊಡು; ಬ್ರಹಸ್ಪತಿಯೇ ಪತಿಯನ್ನು ನಾಶಮಾಡದೇ ಇರುವ ಲಕ್ಷ್ಮಿಯನ್ನು ಕೊಡು;ಇಂದ್ರನೇ ನೀನು ಪುತ್ರನಾಶಕಳಲ್ಲದ ಲಕ್ಷ್ಮಿಯನ್ನು ಕೊಡು (ಇದು ಜಪ ಎಂದು ಹೇಳಲ್ಪಟ್ಟಿದೆ.).ಇತ್ಯಾದಿ
3. ಕನ್ಯಾ ಸಮೀಕ್ಷಣ ಮಂತ್ರ: ಅಘೋರಚಕ್ಷುರಪತಿಘ್ನೇಧಿ|ಶಿವಾಪತಿಭ್ಯಸ್ಸುಮನಾಸ್ಸುವರ್ಚಾ| ; ನೀನು ಕೂೃರದೃಷ್ಠಿ ಇಲ್ಲದವಳೂ ,ಪತಿಯನ್ನುನಾಶಮಾಡದವಳೂ ಆಗು-- ಇತ್ಯಾದಿ
4.ವಧುಸಮ್ಮಾರ್ಜನಮಂತ್ರ : ದರ್ಭೆಯಿಂದ ದೃಷ್ಠಿಶುದ್ಧಿಕ್ರಿಯೆ: ಇದಮಹಂಯಾತ್ವಯಿ ಪತಿಘ್ನ್ಯಲಕ್ಷ್ಮೀಸ್ತಾಂ ನಿರ್ದಿಶಾಮಿ| -ಭ್ರೂಮಧ್ಯದಲ್ಲಿ ದರ್ಭೆಯಿಂದವರೆಸಿ ಹೇಳುವ ಮಂತ್ರ (ಏ1.1.5): ಎಲೈ ವಧುವೇ ನಿನ್ನಲ್ಲಿ ಪತಿಯನ್ನು ನಾಶಮಾಡುವ ಕೆಟ್ಟ ಧರ್ಮವಿದ್ದರೆ ಅದನ್ನು ವರೆಸಿ ಎಸೆಯುತ್ತೇನೆ. ಹೀಗೆ ಮಂತ್ರಪೂರ್ವಕ ಆತ್ಮಬಲ-ಮನೋಬಲದಿದಿಂದ ಅಪಯಶಗಳನ್ನು ವಧುವಿನಿಂದ ತೆಗೆದು ಕನ್ಯೆಯನ್ನು ಸ್ವೀಕರಿಸುತ್ತಾನೆ.
5.ನೈಮಿತ್ತಿಕ ಜಪ : ವಧುವನ್ನು ಕೊಡುವಾಗ ಅಳಬಾರದೆಂಬ ಮಂತ್ರ.
6.ಜಲಾನಯನ ಮಂತ್ರ :ವಧುವನಸ್ನಾನಕ್ಕಾಗಿನೀರುತರುವ ಮಂತ್ರ.
7.ದರ್ಭೇಣ್ವನಿಧಾನ ಮಂತ್ರ; ದರ್ಭೆಯ ಸಿಂಬಿಯನ್ನು ವಧುವಿನ ತಲಯಮೇಲಿಟ್ಟು ಬಂಧುಗಳು ಸುತ್ತಲೂನಿಂತುನೋಡಲಿ ಎಮದು ಹೇಳುವುದು.
8.ಯುಗಚ್ಛಿದ್ರ-ಪ್ರತಿಷ್ಠಾಪನ ಮಂತ್ರ: ಗಾಡಿಯ ನೊಗದ ಚೂರನ್ನು (ಸಾಂಕೇತಿಕ) ವಧುವಿನ ತಲೆಯ ಮೇಲೆ ಇಟ್ಟು -ಇವಳನ್ನು ವರ್ಚಸ್ವಿಯನ್ನಾಗಿ ಮಾಡು ಎಂದು ಪ್ರಾರ್ಥಿಸುವುಸದು, (ಖೇsನಸಃ ಖೇ ರಥಃಖೇಯುಗದ್ಯ ಶಚೀಪತೇ--) ಇಬ್ಬರೂಸೇರಿ ಜೀವನ ರಥದಭಾರವನ್ನು ಸೇರಿ ಸಂಸಾರ ಸಾದಿಸುವ ರೂಯಪಕವಿರಬಹುದು; ಆದರೆ ಇಲ್ಲಿ ಇಂದ್ರನನ್ನು ಕುರಿತು ಇವಳನ್ನು ವರ್ಚಸ್ವಿಯಾಗಿ ಮಾಡೆಂದು ಕೋರಿಕೆ ಇದೆ.
9.ಸುವರ್ಣನಿಧಾನ -ಅದಕ್ಕೆ ನಾಣ್ಯವನ್ನಿಡುವುದು.
10. ಸ್ನಾಪನ : (ಸ್ನಾನ) ನೀರು ನಿನಗೆ ಶುಭವನ್ನುಂಟುಮಾಡಲಿ, ಎಂದು ಅದಕ್ಕೆ ನೀರು ಬಿಡುವುದು. (ಯಾವ ನೀರಿನಲ್ಲಿ ಕಶ್ಯಪನು ಜನಿಸಿದನೋ ಯಾವ ನೀರಿನಲ್ಲಿ ಅಗ್ನಿಯು ಜನಿಸಿದನೋ ಮತ್ತು ಅದರ ಗರ್ಭದಲ್ಲಿ ಅಗ್ನಿಯನ್ನು ಧರಿಸಿತೋ ಅದು (ನೀರು) ನಿನಗೆ ಮಂಗಳವನ್ನುಂಟು ಮಾಡಲಿ) ;
11. ವಸ್ತ್ರ ಪರಿಧಾನ : ವಧುವಿಗೆ ಉಡಲು ಬಟ್ಟೆ ಕೊಡುವಾಗ ದೇವನು ಸಂಪ್ರೀತನಾಗಲಿ ಎಂದು ಪ್ರಾರ್ಥನೆ.
12.ಯೋಕ್ತ್ರ ಸನ್ನಾಹನ : ಮೇಖಲಾ ಬಂಧನ: (ರಕ್ಷಣೆಗಾಗಿ -ರಕ್ಷಾಬಂಧವಿದ್ದಂತೆ; ವರನಿಗೆ ಉಪನಯನದಲ್ಲಿ ಆಗಿದೆ. ವಧುವಿಗೆ ವಿವಾಹವೇ ಉಪನಯನ) ಸೊಂಟಕ್ಕೆ ಪಟ್ಟಿ ಕಟ್ಟುವುದು .ವಿವಾಹ ಎಂಬ ಪುಣ್ಯಕಾರ್ಯಕ್ಕೆ ಯೋಕ್ತøವನ್ನು ಕಟ್ಟುತ್ತೇನೆ ಎಂದು ವರನು ಹೇಳುವ ಮಂತ್ರ.
13. ವಧ್ವಾನಯನ : ವಿವಾಹಗ್ನಿ ಬಳಿಗೆ ವಧುವನ್ನು ಕರೆದೊಯ್ಯುವುದು :ಪೂಷನ್ ದೇವತೆಯು ನಿನ್ನು ಅಗನಿಯ ಬಳಿಗೆ ಕರೆದೊಯ್ಯಲಿ ,ನಂತರ ಪತಿಯ ಮನೆಗೆ ಒಡತಿಯಾಗಿ ಹೋಗು.
14.ಕನ್ಯಾಭಿಮಂತ್ರಣ :ಸೋಮಃ ಪ್ರಥಮೋ ವಿವಿದೇ ಗಂಧರ್ವೊ ವಿವಿದ ಉತ್ತರಃ| ತೃತೀಯೋ ಅಗ್ನಿóಷ್ಠೇ ಪತಿಸ್ತುರೀಯಸ್ತೇ ಮನುಷ್ಯಜಾಃ|| ಒಂದನೇ ಎರಡನೇ ಮೂರನೇ ಪತಿಗಳು ಸೋಮ,ಗಂಧರ್ವ,ಅಗ್ನಿ, ನಾಲ್ಕನೆಯವನು ಮನುಷ್ಯ-ನಾನು. (!) (ಸೋಮ ಸಸ್ಯದಿಂದ ಬೆಳೆದವಳ, ಗಂಧರ್ವರಿಂದ ಸೌಂದರ್ರ್ಯ ಪಡೆದವಳು, ಅಗ್ನಿಯಿಂದ ಪ್ರಾಯ/ಯೌವನ, ತೇಜಸ್ಸು ಪಡೆದವಳು, ನಾಲ್ಕನೆಯವನು ತಾನು (ಗರ್ಭಧಾರಣೆಗೆ ಕಾರಣ?).
15. ಪಾಣಿಗ್ರಹಣ : ಭಗ ಆರ್ಯಮ,ಸವಿತಾ ದೇವತೆಗಳು ನಿನ್ನನ್ನು ನನಗೆ ಕೊಟ್ಟಿದ್ದಾರೆ. ಮುಪ್ಪಿನ ವರೆಗೂ ಬಾಳಲು, ಮತ್ತು ಉತ್ತಮ ಸಂತಾನ ಪ್ರಾಪ್ತಿಗಾಗಿ ನಿನ್ನ ಕೈಯನ್ನು ಹಿಡಿಯುತ್ತಿದ್ದೇನೆ.-ಮಂತ್ರ: ಗೃಹ್ಣಾಮಿ ತೇ ಸುಪ್ರಜಾಸ್ತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಠಿರ್ಯಥಾsಸಃ| ಭಗೋ ಆರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾsದುರ್ಗಾರ್ಹಪತ್ಯಾಯ ದೇವಾಃ|| ಮತ್ತು ಸರಸ್ವತಿಯ ಪ್ರಾರ್ಥನೆ: ಈ ಸಂಬಂಧವನ್ನು ರಕ್ಷಿಸು , ಎಂದು.

16. ಸಪ್ತಪದೀ ಮಂತ್ರಗಳು

[ಬದಲಾಯಿಸಿ]
ವಧುವಿನ ಕಾಲಿನಿಂದ ಏಳು ಹೆಜ್ಜೆ ಇಡಿಸುವುದು; (ವರನ ಹಿಂದೆ ಏಳುಹೆಜ್ಜೆ ನಡೆಸುವ ಪದ್ದತಿ ಇದೆ -ಪ್ರತಿಸಾರಿ ಬಲಗಾಲನ್ನು ಮುಂದಿಡಬೇಕು.)
1.ಏಕಮಿಷೇ ವಿಷ್ಣುಸ್ತ್ವಾs ನ್ವೇತು|| ಮೊದಲ ಹೆಜ್ಜೆ ಅನ್ನಕ್ಕಾಗಿ-ವಿಷ್ಣು ನಿನ್ನನ್ನು ಅನುಸರಿಸಿಬರಲಿ;
2.ದ್ವೇಊರ್ಜೇ ವಿಷ್ಣುಸ್ತ್ವಾs ನ್ವೇತು||ಎರಡನಯದು ಬಲ/ಶಕ್ತಿಗಾಗಿ -ವಿಷ್ಣು --|| 3.ತ್ರೀಣಿ ವೃತಾಯ ವಿಷ್ಣುಸ್ತ್ವಾs ನ್ವೇತು||
3.ಮೂರನೆಯದು ವ್ರತಕ್ಕಾಗಿ --||
4.ಚತ್ವಾರಿ ಮಯೋಭವಾಯ ವಿಷ್ಣುಸ್ತ್ವಾs ನ್ವೇತು|| ನಾಲ್ಕನೆಯದು ಸುಖಕ್ಕಾಗಿ ---||
5. ಪಂಚ ಪಶುಭ್ಯೋ ವಿಷ್ಣುಸ್ತ್ವಾs ನ್ವೇತು|| ಐದನೆಯದು ಪಶುಸಂಪತ್ತಿಗಾಗಿ ;
6. ಷಡೃತುಭ್ಯೋ ವಿಷ್ಣುಸ್ತ್ವಾs ನ್ವೇತು|| ಆರನೆಯದು ಋತುಗಳಿಗಾಗಿ (ಆಯುಷ್ಯ) ---|;
7.ಸಪ್ತ ಸಪ್ತಭ್ಯೋ ಹೋತ್ರಾಭ್ಯೋ ವಿಷ್ಣುಸ್ತ್ವಾs ನ್ವೇತು|| ಏಳನೆಯ ಹೆಜ್ಜೆ ಯಜ್ಞದ ಹೋತೃಗಳಿಗೆ -ಋತ್ವಿಕ್ಕುಗಳು -ಋಷಿಗಳು-(ಹೋತೃ, ಮೈತ್ರಾವರುಣ, ಬ್ರಾಹ್ಮಣಾಂಸೀ, ಪೋತೃ, ನೇಷ್ಟ್ರ, ಅಗ್ನೀಧ್ರ, ಅಚ್ಛಾವಾಕ,)
ಸಖಾ ಸಪ್ತಪದಾ ಭವ ಸಖಾಯೌ ಸಪ್ತಪದಾ ಬಭೂವ ಸಖ್ಯಂತೇಗಮೇಯಗ್‍ಂ | ಸಖ್ಯಾತ್ತೇ ಮಾಯೋಷಗ್‍ಂ ಸಖ್ಯಾನ್ಮೇ ಮಾಯೋಷ್ಠಾ ಸ್ಸಮಯಾವ ಸಂಕಲ್ಪಾವಹೈ ಸಂಪ್ರಿಯೌ ರೋಚಿಷ್ಣೂ ಸುಮನಸ್ಯಮಾನೌ| ಇತ್ಯಾದಿ--
ಏಳು ಹೆಜ್ಜೆಗಳನ್ನು ಜೊತೆಗೆ ಇಟ್ಟಿದ್ದರಿಂದ ನೀನು ಸಖಿಯಾಗು; ಸಖಿಯಾದೆ; ನಾವು ಸಖರಾದೆವು; ನಾನು ನಿನ್ನಿಂದ ಅಗಲುವುದು ಬೇಡ; ನೀನು ಅಗಲಬೇಡ ; ಒಟ್ಟಿಗೆ ಇರೋಣ. ನಮ್ಮಿಬ್ಬರ ಅಪೇಕ್ಷೆಗಳು ಒಂದೇ ಆಗಲಿ. ಪ್ರೀತಿಸುತ್ತಾ ಒಟ್ಟಿಗೇ ಜೀವಿಸೋಣ.(ಪತಿಪ್ತನಿಸಾಮ್ಯಕ್ಕೆ ಅನೇಕ ಉಪಮೆ ಗಳನ್ನು ಹೇಳಾಗಿದೆ : ಉದಾ: ನಾನು ದಿವಿ ,ನೀನು ಪೃಥ್ವಿ ; ನಾನು ಸಾಮ-ನೀನು ಋಕ್ ; ನಾನು ರೇತ-ನೀನು ಅದನ್ನು ಧರಿಸುವವಳು; ನಾನು ಮನಸ್ಸು-ನೀನು ಮಾತು; ನೀನು ಪುತ್ರರನ್ನು ಪಡೆಯಲು ನನ್ನನ್ನು ಅನುಸರಿಸು , ಬಾ.

ಆಜ್ಯಹೋಮ

[ಬದಲಾಯಿಸಿ]
17. ಆಜ್ಯಹೋಮ : ಪ್ರತಿಬಾರಿ ಪ್ರಾರ್ಥನೆಯೊಂದಿಗೆ ತುಪ್ಪವನ್ನು ಅಗ್ನಿಗೆ ಹಾಕುವುದು : ಅಗ್ನಿಗೆ ಮಂತ್ರ ಪೂರ್ವಕ ಅಹುತಿಗಳನ್ನು ಹಾಕುವುದು : ಉದಾ: ಸೋಮಾಯ ಜನವಿದೇ ಸ್ವಾಹಾ|| ವಧುವನ್ನು (ಮೊದಲು) ಪಡೆದುಕೊಂಡ ಸೋಮನಿಗೆ -ಸ್ವೀಕರಿಸು ; ಹೀಗೆ ಗಂಧರ್ವನಿಗೆ, ಅಗ್ನಿಗೆ, ಪಿತೃಕುಲವನ್ನು ಬಿಟ್ಟು ಗೃಹಣಿಯಾಗಿ ಪತಿಯಡನೆ ಹೋಗಲು -ಸ್ವಾಹಾ- ಸ್ವೀಕರಿಸು. ಇಂದ್ರನೇ ಇವರು ಪತಿಕುಲದಲ್ಲಿ ಬದ್ಧಳನ್ನಾಗಿಮಾಡು - ಇವಳಿಗೆ ಹತ್ತು ಮಕ್ಕಳನ್ನು ಕೊಡು; ಪತಿಂ ಏಕಾದಶಂ ಕೃಧಿ|(ಏ1.4.6) ನನ್ನನ್ನು ಹನ್ನೊಂದನೆಯವನಾಗಿ ಮಾಡು. ಸ್ವಾಹಾ. ಹಾಗೆಯೇ ಪ್ರಥಮನಾದ ಅಗ್ನಿಯು ಬರಲಿ ಇವಳು ಪುತ್ರ ಶೋಕದಿಂದ ಅಳದಿರುವಂತೆ ಮಾಡಲಿ. (ಪುತ್ರರು ಇವಳೆದುರಲ್ಲಿ ಸಾಯದೇ ದೀರ್ಘಾಯಗಳಾಗುವಂತೆಮಾಡಲಿ-ಅದಕ್ಕೆ ವರಣನು ಅನುಮತಿಸಲಿ- ಒಂದು ಆಜ್ಯಾಹುತಿ. ಈಗಾಹ್ರ್ಯಪತ್ಯ ಅಗ್ನಿಯು ಇವಳನ್ನು ರಕ್ಷಿಸಿ ಇವಳ ಮಕ್ಕಳನ್ನೂ ರಕ್ಷಿಸಲಿ . ಇವಳು ಜೀವಂತ ಮಕ್ಕಳನ್ನು ಹೆರುವ ತಾಯಾಗಲಿ (ಏ.1.4.8) ಇವಳ ಅಂಗಾಂಗಳ ರಕ್ಷಣೆಗೆ ದೇವತೆಗಳನ್ನು ಕೋರಿ ಆಜ್ಯದ ಆಹುತಿ ಕೊಡುವುದು. (ವರುಣನ ಪಾಶದಿಂದ ಬಿಡುಗಡೆ ಗೊಳಿಸು ಎಂದು ಅಗ್ನಿಗೆ ಪ್ರಾರ್ಥನೆ ಇದೆ ಆದರೆ ಯಮನ ಪಾಶದಿಂದ ಎಂದು ಇಲ್ಲ)-ಇತ್ಯಾದಿ--.
18.ಆಶ್ಮಾಸ್ಥಾಪನ ಮಂತ್ರ: (ಅಶ್ಮ=ಕಲ್ಲು)ಆ ತಿಷ್ಠೇ ಮಮಶ್ಮಾನಮ ಶ್ಮೇವತ್ವಗ್ಗ್ ಸ್ಥಿರಾ ಭವ| ಕಲ್ಲಿನ ಮೇಲೆ ನಿಂತು ಸ್ಥಿರಳಾಗು ಶತ್ರುಗಳನ್ನು ನಾಶಮಾಡು. (ಉಪನಯನದಲ್ಲಿ ಪುರುಷರಿಗೆ ಅಶ್ಮ ಸ್ಥಾಪನೆ ಯಾಗಿರುತ್ತದೆ.)

ಲಾಜಾಹೋಮ

[ಬದಲಾಯಿಸಿ]
19.ಲಾಜಾಹೋಮ : ಅರಳಿನಿಂದ ಹೋಮ (ಭತ್ತವನ್ನು ಹುರಿದುಮಾಡಿದ ಅರಳು) :ವಧುವನ ಕೈಗೆ ಅರಳು ತುಂಬಿದಾಗ (ಪತಿ ಅಥವಾ ಸೋದರ); ನನ್ನ ಪತಿಯು ದೀರ್ಘಾಯುಷ್ಯಹೊಂದಿ ನೂರು ಶರತ್ಕಾಲ ಬಾಳಲಿ; ಪತಿಯು ಅಗ್ನಿಗೆ ಪ್ರಾರ್ಥನೆ ಮಾಡುವುದು : ನನಗೆ ಪತ್ನಿಯನ್ನೂ ಸಂತಾನ ಭಾಗ್ಯವನ್ನೂ ಕೊಡು. ದೀರ್ಘಾಯುಷನ್ನು ಕೊಡು (ಏ1.5.4-1.5.5) ಅಗ್ನಿಗೆ -ಅರಳಿನ ಅಹುತಿ. (ಅಗ್ನಿ ವಿಶ್ವದ ಮನುಷ್ಯನ ಪ್ರಾಣಶಕ್ತಿ ಅದಕ್ಕೆ ಪ್ರಾರ್ಥನೆ) ; ಪುನಃ ಅಶ್ಮ ಸ್ಥಾಪನೆ -ಅದೇ ಪ್ರಾರ್ಥನೆ; ಪುನಃ 2ನೇ ಲಾಜಾಹೋಮ : ಇವಳನ್ನು ಪಿತೃಕುಲದಿಮದ ಬಿಡುಗಡೆಮಾಡಲಿ ಪತಿಕುಲದಲ್ಲಿ ನೆಲಸಲಿ. 3 ನೇ ಲಾಜಾಹೋಮ ಮಂತ್ರ : ---ಗೋಭಿಂiÀರ್iದ್‍ದಂಪತೀಸ ಮನಸಾಕೃಣೋತಿ|| ತುಪ್ಪದಿಂದ ನಿನಗೆ ಹವಿಸ್ಸು ಕೊಡುತ್ತಾರೆ ;ದಂಪತಿಗಳನ್ನು ನೀನು ಸಮಾನ ಮನಸ್ಕರನ್ನಾಗಿ ಮಾಡುತ್ತೀಯೆ.
20.ಯೋಕ್ತ್ರವಿಮೋಚನ ಸೊಂಟಕ್ಕೆ ಕಟ್ಟಿದ ದರ್ಭೆಯ ದಾರವನ್ನು ಬಿಚ್ಚುವುದು; ಮಂತ್ರ : ವಧುವೇ ಸವಿತೃವು ಕಟ್ಟಿದ ವರುಣನ ಪಾಶದಿಂದ ನಿನ್ನನ್ನು ಬಿಡಿಸುವೆನು. (ಏ1.5.16) ; ---ಧಾತುಶ್ಚಯೋನೌ ಸುಕೃತಸ್ಯಲೋಕೇ ರಿಷ್ಟಾಂ ತ್ವಾ ಸಹಪತ್ಯಾಕೃಣೋಮಿ|| ---ಪುಣ್ಯಲೋಕವಾದ ಬ್ರಹ್ಮಲೋಕದಲ್ಲಿ ನನ್ನೊಂದಿಗೆ ನೀನು ನಾಶವಿಲ್ಲದ ಸುಖವನ್ನು ಪಡೆಯುವಂತೆ ಮಾಡುತ್ತೇನೆ. (ಟಿಪ್ಪಣಿ : ವೈದಿಕ ಧರ್ಮದಲ್ಲಿ ಹೆಂಗಸರಿಗೆ ಪುಣ್ಯಲೋಕವಿದೆಯೋ ಇಲ್ಲವೋ ಎಂಬ ಪ್ರಶ್ನೆ ಇದೆ; ಅದಲ್ಲೆ ಉತ್ತರವಾಗಿ ಈ ಸೊಂಟದ ಕಟ್ಟನ್ನು ಬಿಚ್ಚುವ ಮಂತ್ರವು ಹೆಂಗಸರಿಗೂ ಪತಿಯ ಜೊತೆ ಬ್ರಹ್ಮ ಲೋಕವಿದೆಯೆಂದು ಸ್ಪಷ್ಟವಾಗಿ ಹೇಳಿದಂತಾಗಿದೆ )
21. ಪತಿಗೃಹ ಪ್ರಸ್ಥಿತ ವಧ್ವಭಿಮಂತ್ರಣ : ವಧುವನ್ನು ಪತಿಗೃಹಕ್ಕೆ ಹೊರಡುವಾಗ ಪತಿಯು ಹೇಳುವುದು : ಈಸುಂದರವಾದ ರಥವನ್ನು ಹತ್ತು ಪಿತೃಕುಲದವರು ಕೊಟ್ಟ ಧನವನ್ನು ತೆಗೆದುಕೋ. ನನಗೆ ಅಮೃತ ಲೋಕವನ್ನೂ ಸುಖವನ್ನೂ ಕೊಡು . ---ಆರೋಹ ವಧ್ವಮೃತಸ್ಯ ಲೋಕಗ್ಗ್ ಸ್ಯೋನಂ ಪತ್ಯೇ ವಹತುಂ ಕೃಣುಷ್ಟ||(ಏ.1.6.4). ಸಂತಾನ ಹೊಂದು.(ಏ1.6.5)ಮನೆಗೆ ಒಡತಿಯಾಗು, ಅತ್ತೆಗೆ,ನಾದಿನಿಯರಿಗೆ,ಮೈದುನರಿಗೆ ಒಡತಿಯಾಗು (ಅವರ ಯೋಗಕ್ಷೇಮ ನೋಡಿಕೋ). ಏ.1.6.6)ನಮ್ಮ ಕುಟುಂಬದಲ್ಲಿ ವಿರಾಜಿಸು (ಏ1.6.7)

ಗೃಹಪ್ರವೇಶ ಹೋಮದ ಮಂತ್ರಗಳು

[ಬದಲಾಯಿಸಿ]
22. ಗೃಹಪ್ರವೇಶ ಮಂತ್ರ : ಗೃಹಾನ್ ಭದ್ರಾನ್ ಸುಮನಸಃಃ ಪ್ರಪದ್ಯೇs ವೀರಘ್ನೀ ವೀರವತಸ್ಸುವೀರಾನ್ |--- || ಸಂಪತ್ತಿನಿಂದಕೂಡಿದ ಮನೆಯನ್ನು ಒಳ್ಳೆಯ ಮನಸ್ಸಿನಿಂದ ಪ್ರವೇಶಿಸುತ್ತೇನೆ; ಈ ಮನೆಯ ವೀರರನ್ನು ನಾಶಮಾಡದವಳಾಗಿ ಪ್ರವೇಶಿಸುತ್ತೇನೆ, (ವೀರರನ್ನು ನಾಶಮಾಡುವವಳು ಅಲ್ಲದವಳಾಗಿ))
ಟಿಪ್ಪಣಿ
(ವಧುವಿನ ಪ್ರತಿಜ್ಞೆ ) ಇದುವರೆಗಿನ ವಿವಾಹ ಮಂತ್ರಗಳಲ್ಲಿ ಇದೊಂದೇ ವಧುವು ಕೊಡುವ ವಚನ.
ಪ್ರವೇಶಾನಂತರ : ---ಬಹ್ವೀಂ ಪ್ರಜಾಂ ಜನಯಂತಿ ಸುರತ್ನೇ -| ಮಮಗ್ನಿಗ್‍ಂ ಶತಹಿಮಾಸಪಸ್ಸಪರ್ಯಾತ್|| ನನ್ನ ರಾಣಿಯು ಮಕ್ಕಳನ್ನು ಹೆರುತ್ತಾ ಸಂಪತ್ತಿನಿಂದ ಕೂಡಿ ಈ ಔಪಾಸನಾಗ್ನಿಯನ್ನು ನೂರು ವರ್ಷಗಳ ಕಾಲ ಸೇವೆಮಾಡಲಿ. (ಏ.1.8.3.) : ಈ ಅಗ್ನಿಯು ಸಂತಾನವನ್ನೂ, ಶಕ್ತಿಯನ್ನೂ ,ಧನವನ್ನೂ ಕೊಡಲಿ (ಏ.1.8.4) ; ಪ್ರಜಾಪತಿ,ಇಂದ್ರಾಗ್ನಿಗಳೇ ಮಕ್ಕಳು ಮರಣವಾಗದ ಸುಖವನ್ನು ಕೊಡಿ . (ಏ1.8.6.) ಈ ಹವಿಸ್ಸಿನಿಂದ ನಾನು ಅಭಿವೃದ್ಧಿಹೊದಲಿ,ಹಾಗೆಯೇ ನನ್ನ ಪತ್ನಿಯನ್ನು ಅಭಿವೃದ್ಧಿಗೊಳಿಸಲಿ.(ಏ1.8.6.) ನಾವು ಭಿವೃದ್ಧಿಹೊಂದಿ ಬೇರೆಯವರಿಂದ ಬಯಸುವಂತಾಗದೇ ಇತರರನ್ನು ಪೋಷಿಸುವಂತಾಗಲಿ. (1.8.7.); ನಾವು ವಿಯೋಗ ಹೊಂದದೇ ಪೂರ್ಣ ಆಯುಷ್ಯ ಹೊಂದುವಂತಾಗಲಿ.(ಏ.1.8.8.) ಧೃವೈಧಿ ಪೋಷ್ಯಾ ಮಯಿ, ಮಹ್ಯಂತ್ವಾs ದಾದ್ಬøಹಸ್ಪತಿಃ|ಮಯಾಪತ್ಯಾ ಪ್ರಜಾಪತೀ ಸಂಜೀವ ಶರದಃ ಶತಮ್ ||
23.ಎಲೈ ವಧುವೇ ನಿನ್ನನ್ನು ನನಗೆ ಬೃಹಸ್ಪತಿಯು ಕೊಟ್ಟಿದ್ದಾನೆ. ನೀನು ನನ್ನಲ್ಲಿ ಸ್ಥಿರಳಾಗಿರು ಮತ್ತು ನನ್ನ ಜೊತೆಯಲ್ಲಿ ನೂರು ವರ್ಷಕಾಲ ಬಾಳು.(ಏ1.8.9) ನಮ್ಮನ್ನು ಸೃಷ್ಟಿಸಿದ ತ್ವಷ್ಟøವು ನಮಗೆ ಸಹಸ್ರವರ್ಷದ ಆಯುಷವನ್ನು ಕೊಡಲಿ. (ಏ1.8.10.).
24.ಹೋಮದನಂತರ ಕುಳಿತು ಹೇಳುವ ಉಪನಿವೇಶನ ಮಂತ್ರ : ಇಲ್ಲಿ ಹೆಚ್ಚಾಗಿ ಧನ, ಗೋ, ಅಶ್ವಗಳು ನೆಲಸಲಿ. (ಏ1.9.1)
25.ಅಂಕೋಪವೇಶನ : ವದುವಿನ ತೊಡೆಯಮೇಲೆ ಬಾಲಕನನ್ನು ಕುಳ್ಳಿರಿಸಿ, ---ಉಪಸ್ತೇ ಸೋಮ ಆಧಿತಃ || ನಕ್ಷತ್ರಗಳಮಧ್ಯೆ ಚಂದ್ರನಿರುವಂತೆ ಈ ಬಾಲಕನು (ಈ ಬಾಲಕನಂಥವನು! ) ನಿನ್ನ ಮಡಿಲಲ್ಲಿ ಕುಳಿತುಕೊಳ್ಳಲಿ. (ಗಂಡು ಮಗು ನಿನ್ನ ಮಡಿಲು ತುಂಬಲಿ)..
26.ಬಾಲಕನಿಗೆ ಹಣ್ಣನ್ನು ಕೊಡುತ್ತಾ , ಫಲದಾನ ಮಂತ್ರ; (ವಧುವು ಫಲವತಿಯಾಗಲಿ ! (ಹರಸುವುದು)->
27. ಜಪಮಂತ್ರಗಳು :ಇಹ ಪ್ರಿಯಂ ಪ್ರಜಯಾ ತೇ ಸಮೃದ್ಧತಾ|---- ಸಂತಾನದಿಂದ ನಿನಗೆ ಆನಂದವಾಗಲಿ, ನಿನ್ನ ದೇಹವನ್ನು ನನ್ನೊಡನೆ ಸಂಯೋಜಿಸು. ಮುಂದೆ ಈ ಯಜ್ಞದ ವಿಚಾರವನ್ನು ಕಿರಿಯರಿಗೆ ತಿಳಿಸು.
28. ಮತ್ತೆ --- ಸೌಭಾಗ್ಯಮಸ್ಯೈ ದತ್ವಾಯಾಥಾಸ್ತಂ ವಿಪರೇತನ|| ಬನ್ನಿ ,ಈ ಸುಮಂಗಲಿಗೆ ಸೌಭಾಗ್ಯವನ್ನು ಕೊಟ್ಟು ತೆರಳಿರಿ.
29.ಅರುಂಧತೀ ದರ್ಶನ ಮಂತ್ರ : ಸಪ್ತ ಋಷಯಃ ಪ್ರಥಮಾಂ ಕೃತ್ತಿಕಾನಾಂ ಅರುಂಧತೀಂ ಯಧೃವತಾಗ್‍ಂ ಹನಿನ್ಯುಃ | ಷಟ್ಕೃತ್ತಿಕಾ ಮುಖ್ಯಯೋಗಂ ವಹಂತೀ ಯಮಸ್ಮಾಕಮೇಧತ್ವಷ್ಟಮೀ ||ಕೃತ್ತಿಕೆ ಮೊದಾಲಾದ ಸಪ್ತ ಋಷಿಪತ್ನಿಯರು ಅರುಂಧತಿಯ ನಿಶಚಲತೆ ಯನ್ನು ಕಂಡುಕೊಂಡರೋ ಹಾಗೆ ನನಗೆ ಇವಳು ಇರಲಿ , ಈವಧುವು ನನಗೆ ಎಂಟನೆಯವಳಾಗಿ ಇರಲಿ. (ಎಂಟನೆಯ ಋಷಿಪತ್ನಿಯಂತೆ ಇರಲಿ) .(ಏ.1.9.7)
30.ಟಿಪ್ಪಣೆ (ಡಾ.ರೂಪಾ)
ಮಂಗಳಸೂತ್ರದ ಮಂತ್ರ ವೇದದಲ್ಲಿ ಇಲ್ಲ ; ದಕ್ಷಣಬಾರತದ ಪದ್ದತಿಯಂತೆ ಸೇರಿಸಲಾಗಿದೆ ಎಂಬ ಅಬಿಪ್ರಾಯವಿದೆ. -ಮಾಂಗಲ್ಯಂ ತಂತುನಾsನೇನ ಮಮ ಜೀವನ ಹೇತುನಾ| ಕಂಠೇಸ ಬಧ್ನಾಮಿ ಸುಭಗೇ ಸಾಜೀವ ಶರದಃ ಶತಂ (ಶರದಶ್ಶತಮ್) ||-ನನ್ನ ಜೀವನಕ್ಕೆ ಕಾರಣವಾದ ಈ ಮಂಗಲ ಸೂತ್ರವನ್ನು ,ಸುಭಗೇ ನಿನ್ನ ಕುತ್ತಿಗೆಗೆ ಕಟ್ಟುತ್ತೇನೆ. ನೀನು ನೂರು ವರ್ಷ ಬಾಳು !. (ಪತಿಯ ಆಶೀರ್ವಾದ ಸೂತ್ರ !!)

ಧರ್ಮಸಿಂಧು- ಕನ್ಯಾದಾನ ಕ್ರಮ

[ಬದಲಾಯಿಸಿ]
ಕನ್ಯಾದಾನಕ್ಕೆ ತಂದೆಯು ಮುಖ್ಯ ಕರ್ತೃವು. ಅವನಿಲ್ಲದಿದ್ದರೆ ಕನ್ಯೆಯ ಹತ್ತಿರದ ಸಂಬಂಧಿತಂದೆಯ ದಾಯಾದಿ ಹಿರಿಯರು. ಅವರಿಲ್ಲದಿದ್ದರೆ ತಾಯಿಯ ತಂದೆ ಅಥವಾ ಸೋದರಮಾವ ಕನ್ಯಾದಾನ ಮಾಡಬೇಕು.
ವರನು ಕನ್ಯೆಯಮನೆಗೆ ಬಂದಾಗ ಅವನಿಗೆ ಉಪಚಾರಾರ್ಥವಾಗಿ ಕೊಡುವ ಜೇನು ಮಿಶ್ರಿತ ಮೊಸರೇ ಮಧುಪರ್ಕ. (ಗೃಹ ಗತಾಂ ಸ್ನಾತಕ ವರಂ ಮಧುಪರ್ಕೇಣಾರ್ಹಯಿಷ್ಯೇ) ಗೃಹ್ಯಸೂತ್ರ ಪ್ರಕಾರ ಪದ್ದತಿಗಳು ಬೇರೆ ಆಗುತ್ತವೆ. ಈಕ್ಷಣ: ವಧೂವರರ ಮಧ್ಯೆ ಅಂತಃಪಟ ವಸ್ತ್ರವನ್ನು ಹಿಡಿಯಬೇಕು. ವಧು ಪೂರ್ವಕ್ಕೆ ಮುಖ; ವರ ಪಶ್ಚಿಮಕ್ಕೆ ಮುಖ; ವಧೂವರರು ಕೈಯಲ್ಲಿ ಅಕ್ಷತೆಯನ್ನು ಇಟ್ಟುಕೊಳ್ಳಬೇಕು. ತಮ್ಮ ಇಷ್ಟದೇವತೆಯನ್ನು ನೆನೆಯಬೇಕು. ಜೋಯಿಸರು ಸಕಾಲಬಂದಾಗ ಮಂಗಲಾಷ್ಟಕ ಹೇಳಿ, ತದೇವ ಲಗ್ನಂ ಪಠಿಸಿ, “ಸುಮೂರ್ತಮಸ್ತು ಓಂ ಪ್ರತಿಷ್ಠಾಂ” ಹೇಳೀದ ನಂತರ ಅಂತಃಪಟ ವಸ್ತ್ರವನ್ನು ಉತ್ತರ ದಿಕ್ಕಿಗೆ ಸರಿಸಿದ ನಂತರ ವಧೂವರರು ಪರಸ್ಪರ ತಲೆಯ ಮೇಲೆ ಅಕ್ಷತೆಯನ್ನು ಹಾಕಿ ಪರಸ್ಪರ ನೋಡಿಕೊಳ್ಳುವರು , ಇದು “ಈಕ್ಷಣ”; ವರನು ವಧುವಿನ ಭ್ರೂಮಧ್ಯದಲ್ಲಿ “ಓಂ ಭೂರ್ಭುವಃಸುವಃ” ಎಂದು ದರ್ಭೆಯ ತುದಿಯನ್ನು ವರೆಸಿ ಚೆಲ್ಲಿ ಜಲಸ್ಪರ್ಶಮಾಡುವನು. ಇದು “ಅಕ್ಷತಾರೋಪಣ.”
ಟಿಪ್ಪಣಿ
(ಈಗ ಇರುವ ಪದ್ದತಿ ಅಂತಃ ಪಟವನ್ನು ಸರಿಸಿದ ತಕ್ಷಣ ಪರಸ್ಪರ ನೋಡಿ ಹಾರ ಹಾಕುವುದು. )
ಬ್ರಾಹ್ಮೀವಿವಾಹ- ಕನ್ಯಾದಾನ : ವರನು ಪೂರ್ವ ಮುಖ-ವಧು ಪಶ್ಚಿಮಕ್ಕೆ ಮುಖ : ದಾತನು ಕೊಟ್ಟ ಆಭರಣಗಳನ್ನು ಮಾತ್ರಾ ವಧು ಹಾಕಿಕೊಂಡಿರಬೇಕು. ಹಸ್ತದಲ್ಲಿ ಬಂಗಾರವನ್ನಟ್ಟು ಹಸ್ತ ಪಾದಗಳಿಗೆ ಗಂಧಲೇಪನ ಮಾಡಿ ಕನ್ಯೆಯನ್ನು ದಾನ ಮಾಡಬೇಕು. ದಾತನು ತನ್ನ ಹೆಸರು ಗೋತ್ರ ಹೇಳಿ , “ಶ್ರೀ ಲಕ್ಮೀನಾರಾಯಣನ ಪ್ರೀತ್ಯರ್ಥ, ಮಮ ಸಮಸ್ತ ಪಿತೂೃಣಾಂ ಬ್ರಹ್ಮಲೋಕವ್ಯಾಪ್ತಾದಿ ಕನ್ಯಾದಾನ ಕಲ್ಪೋಕ್ತ ಫಲಪ್ರಾಪ್ತಯೇ- (ಸಂತತಿ ವೃದ್ಧಿಗಾಗಿ ಬ್ರಾಹ್ಮ ವಿವಾಹ ಮೂಲಕ ಕನ್ಯೆಯನ್ನು ಕೊಡುತ್ತಿದ್ದೇನೆ) -ಕನ್ಯಾದಾನಂ ಕರಿಷ್ಯೇ,” ಎಂದು ಸಂಕಲ್ಪಮಾಡಿ ಎದ್ದುನಿಂತು ಕನ್ಯೆಯನ್ನು ಹಿಡಿದುಕೊಂಡು , ಕನ್ಯಾಂ ಕನಕಸಂಪನ್ನಾಂ ಕನಕಭರಣೈರ್ಯುತಾಂ ದಾಸ್ಯಾಮಿ ವಿಷ್ಣವೇ ತುಭ್ಯಂ (ವರನು ವಿಷ್ಣು ಸ್ಥಾನದಲ್ಲಿ ,ವಧು ಲಕ್ಷ್ಮಿರೂಪದಲ್ಲಿ) ಬ್ರಹ್ಮಲೋಕ ಜಿಗೀಷಯಾ ವಿಶ್ವಂಭರಂ ಸರ್ವಭೂತಾಃ ಸಾಕ್ಷಿಣ್ಯಃ ಸರ್ವದೇವತಾಃ | ಇಮಾಂ ಕನ್ಯಾಂ ಪ್ರದಾಸ್ಯಾಮಿ ಪಿತೂೃಣಾಂ ತಾರಣಾಯಚ|| ವರನ ಸಂತಾನ ವೃದ್ಧಿಗಾಗಿ ತನ್ನ ಪಿತೃಗಳಿಗೆ ಪುಣ್ಯಲೋಕ ಪ್ರಾಪ್ತಿಗಾಗಿ ಈ ಸಕಲದೇವತೆಗಳ ಸರ್ವಭೂತಗಳ (ಪಂಚ ಭೂತಗಳು) ಸಾಕ್ಷಿಯಾಗಿ ಕನ್ಯಾದಾನ ಮಾಡುತ್ತಿದ್ದೇನೆ; ಕನ್ಯಾದಾನ ಮಾಡುವವನು ಹೇಳುತ್ತಾನೆ.
ಕಂಚಿನ ಪಾತ್ರೆಯಲ್ಲಿ ವಧುವಿನ ಹಸ್ತವನ್ನಿಟ್ಟು ಅದರ ಮೇಲೆ ವರನ ಹಿರಣ್ಯಸಹಿತವಾದ ಹಸ್ತವನ್ನಿಟ್ಟು ದಾತನ ಹಸ್ತಮೂಲಕ ಬಲಗಡೆ ಇರುವ ಪತ್ನಿಯು ಸಂತತ ಧಾರೆಯ ಮೂಲಕ ನೀರನ್ನು ಬಿಡುವುದು.
ಟಿಪ್ಪಣಿ
(ವರನ ಹಸ್ತದ ಮೇಲೆ ವಧುವಿನ ಹಸ್ತವನ್ನಿಟ್ಟು ನೀರು ಬಿಡುವ ಪದ್ದತಿ ಇದೆ.ದಾನ ಕೊಡುವ ವಸ್ತುವನ್ನು ದಾನ ತೆಗೆದುಕೊಳ್ಳುವವನ ಕೈಯ್ಯಲ್ಲಿಟ್ಟು ನೀರು ಬಿಡುವುದು ಸಂಪ್ರದಾಯ)
“ಕನ್ಯಾ ತಾರಯತು ವರ್ಧತಾಂ ಶಾಂತಿಃ ಪುಷ್ಟಿಸ್ತುಷ್ಟಿಸ್ಚಾಸ್ತು ಪ್ಮಣ್ಯಾಹಂ ಭವೋಧ್ಭವಂತು || ವರನ ಮತ್ತು ತನ್ನ ಮೂರು ತಲೆಮಾರಿನ ಪ್ರವರ ಹೇಳಿ, ವಧೂವರರ ಹೆಸರು ಹೇಳಿ, ಶ್ರೀ ರೂಪಿಣಿಯಾದ ಈ ಕನ್ಯೆಯನ್ನು ಪ್ರಜೋತ್ಪಾದನಾರ್ಥಂ (ಸಂತಾನೋತ್ಪತ್ತಿಗಾಗಿ) ಶ್ರೀಧರರೂಪಿನ ವರನಾದ ನಿನಗೆ ಕೊಡುತ್ತಿದ್ದೇನೆ -“ತುಭ್ಯಮಹಂ ಸಂಪ್ರದದೇ”.
ಹಿರಣ್ಯಯುಕ್ತವಾದ ವರನ ಹಸ್ತದಲ್ಲಿ ಅಕ್ಷತೆ ಸಹಿತವಾದ ನೀರನ್ನು ಬಿಡುವುದು. ಪ್ರಜಾಪತಿಃ ಪ್ರೀಯತಾಂ ಕನ್ಯಾಂ ಪ್ರತಿಗೃಹ್ಣಾತುಭವಾನ್ ಕನ್ಯಾತಾರಯತು ||ಹೀಗೆ ಮೂರುಸಾರಿ ಹೇಳಿ ದಾನಮಾಡುವುದು. ವರನು “ಓಂ ಸ್ವಸ್ತಿ”|ಹೀಗೆ ಹೇಳಿಕನ್ಯೆಯ ಬಲ ಹೆಗಲನ್ನು ಮುಟ್ಟಿಕೊಂಡು “ ಓಂ ಕ ಇದಂಕಸ್ಮಾ ಅದಾತ್=ಪೃಥಿವೀ ಗೃಹ್ಣಾತು” ಹೀಗೆ ಮೂರು ಸಲ ಹೇಳಿ, “ ಧರ್ಮಪ್ರಜಾ ಸೀಧ್ಯರ್ಥಂ ಪ್ರತಿಗೃಹ್ಣಾಮಿ” ಹೀಗೆ ಹೇಳುವನು. ದಾತನು ನಾನು ಗೌರಿಯಂತಿರುವ ಮಗಳನ್ನು/ಕನ್ಯೆಯನ್ನು ಪ್ರೀತಿಯಿಂದ ಸಾಕಿದ್ದೇನೆ . ಈ ಸಭಾಸದರ ಎದುರಿನಲ್ಲಿ ಕೊಟ್ಟಿದ್ದೇನೆ, ಅನೇಕ ಸಂವತ್ಸರಗಳ ಕಾಲ ಪಾಲಿಸು, ಇವಳಿಂದ ಮಕ್ಕಳು ಮೊಮ್ಮಕ್ಕಳನ್ನು ಪಡೆ,
“ಧರ್ಮೇಚಾರ್ಥೇಚ ಕಾಮೇಚ ನಾತಿ ಚರಿತವ್ಯಾತ್ವಯೇಯಂ”; “ಧರ್ಮ ಅರ್ಥ ಕಾಮ(ಬಯಕೆಗಳು) ಇವಗಳಲ್ಲಿ ಇವಳಿಂದ ಅಗಲಬೇಡ” ಎನ್ನುತ್ತಾನೆ (ವಚನ ಪಡೆಯುವುದು) ; ಆಗ ವರನು “ನಾತಿ ಚರಾಮಿ” (ಈ ವಿಚಾರಗಳಲ್ಲಿ ಬಿಟ್ಟು ಹೋಗುವುದಿಲ್ಲ) ಎಂದು ಹೇಳುತ್ತಾನೆ .
ಕನ್ಯಾದಾನ ಸಿದ್ಧಿಸುವುದಕ್ಕಾಗಿ ಯಥಾಶಕ್ತಿ ಹಿರಣ್ಯ/ಹಣವನ್ನು ಕೊಡುವುದು. ವರನು “ಓಂ ಸ್ವಸ್ತಿ” (ಒಳಿತಾಗಲಿ) ಎನ್ನುತ್ತಾನೆ. ನಂತರ ಕನ್ಯೆಯ ಜೊತೆಗೆ ಭೊಜನಪಾತ್ರೆ ಇತರೆ ದಾನಗಳನ್ನುಕೊಡುವುದು -ಅದು ಸ್ತ್ರೀ ಧನ ಅಥವಾ ಸಂಪತ್ತು. ಹೀಗೆ ಕನ್ಯೆಯನ್ನು ದೇವ ಸಾಕ್ಷಿ (ದೈವ ಸಾಕ್ಷಿ), ಅಗ್ನಿಸಾಕಿ (ಹೋಮ ಪೂರ್ವಕ), ಸಭಾ ಸಾಕ್ಷಿಯಾಗಿ ವರನಿಗೆ ಕನ್ಯಾದಾನ ಮಾಡಲಾಗುವುದು.
(ಧರ್ಮಸಿಂಧು-ಕನ್ನಡ-1970ರ ಪ್ರತಿ /ಪುಟ216--219)

[][]

ಉಲ್ಲೇಖ

[ಬದಲಾಯಿಸಿ]
  1. ಕೃಷ್ಣಯಜುರ್ವೇದೀಯ ಸಮಾವರ್ತನ (ಕಾಶೀಯಾತ್ರೆ) ವಿವಾಹ -ಮಂತ್ರಾರ್ಥ -ಡಾ.ರೂಪಾ, ಎಂ.ಎ.ಪಿ.ಎಚ್.ಡಿಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಸಂಸ್ಕೃತ ವಿಭಾಗ ಮಹಾರಾಜ ಕಾಲೇಜು ಮೈಸೂರು.(ಆಪಸ್ತಂಬ ಗೃಹ್ಯಸೂತ್ರದ ಪ್ರಕಾರ-ಡಾ.ರೂಪಾ.)
  2. ಧರ್ಮಸಿಂಧು-ಕನ್ನಡ-ಶಂಭು ಶರ್ಮಾ-1970ರ ಪ್ರತಿ /ಪುಟ216--219)==ಆಧಾರ==
"https://kn.wikipedia.org/w/index.php?title=ವಿವಾಹ&oldid=1252638" ಇಂದ ಪಡೆಯಲ್ಪಟ್ಟಿದೆ