ವಿಷಯಕ್ಕೆ ಹೋಗು

ವಾಯುಗೋಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೂಮಿಯ ಮೇಲಿನ ಎಲ್ಲಾ ಜೀವಿಗಳೂ ಬದುಕಲು ಗಾಳಿ ಬೇಕೆಂಬುದು ನಮಗೆ ತಿಳಿದಿದೆ. ನಮಗೆ ಗಾಳಿಯು ಎಲ್ಲಿಂದ ದೊರೆಯುತ್ತದೆ? ಇದು ಭೂಮಿಯ ವಾತಾವರಣದಿಂದ ದೊರೆಯುತ್ತದೆ. ಭೂಮಿಯನ್ನು ಆವರಿಸಿಕೊಂಡಿರುವ ವಾಯುವಿನ ಪದರಕ್ಕೆ ವಾಯುಗೋಳ Atmosphereಎನ್ನುವರು. ವಾಯುಗೋಳವು ಹೇಗೆ ಉಂಟಾಯಿತೆಂದು ನಿಮಗೆ ಗೊತ್ತಿದೆಯೆ? ಮೊದಲು ಭೂಮಿಯು ರೂಪುಗೊಂಡಾಗ ವಾಯುಗೋಳವಿರಲಿಲ್ಲ. ಭೂಮಿಯ ಒಳಗೆ ಬಂಧಿತವಾಗಿದ್ದ ಅನಿಲಗಳನ್ನು ಮತ್ತು ಹಬೆಯನ್ನು ಜ್ವಾಲಾಮುಖಿಗಳು ಸ್ಪೂಟಗೊಂಡು ಹೊರಚಿಮ್ಮಿಸಿದವು.ಈ ಅನಿಲಗಳು ಭೂಮಿಯ ಸುತ್ತ ಲಕ್ಷಾಂತರ ವರುಷಗಳಿಂದ ಸಂಗ್ರಹಗೊಂಡು, ವಾಯುಗೋಳ ರೂಪುಗೊಂಡಿತು.

ವಾಯುಗೋಳದ ಪದರಗಳು:

೧.ಹವಾಗೋಳ Troposphere: ಭೂಮಿಯ ವಾಯುಗೋಳದ ಅತ್ಯಂತ ಕೆಳಗಿನ ಪದರವನ್ನು ಹವಾಗೋಳ ಎನ್ನುವರು. ನೀರಾವಿ, ನೈಟ್ರೂಜನ್, ಅಕ್ಸಿಜನ್, ಈ ಪ್ರದೇಶದಲ್ಲಿ ಹೇರಳವಾಗಿ ಕಂಡು ಬರುತ್ತವೆ. ಹವಾಗೋಳದ ಮೇಲ್ಭಾಗದ ಗಡಿಗೆ ಹವಾಸೀಮೆ ಎನ್ನುವರು.

೨.ಸ್ತರಗೋಳ stratosphere:ಹವಾಸೀಮೆಯ ಮೇಲ್ಭಾಗದ ಪದರವನ್ನು ಸ್ತರಗೋಳ ಎನ್ನುವರು. ಸ್ತರಗೋಳದ ಮೇಲ್ಬಾಗದಲ್ಲಿ ಅಪಾಯಕಾರಿ ನೇರಳಾತೀತ ವಿಕಿರಣಗಳ ವಿರುದ್ಧ ರಕ್ಷಾಕವಚದಂತೆ ವರ್ತಿಸುವ ಓಝೂನ್ ಪದರವಿದೆ.

೩.ಮಧ್ಯಗೋಳ Mesosphere: ಸ್ತರಗೋಳದಿಂದ ಸುಮಾರು ೩೦ಕಿ.ಮೀ. ಎತ್ತರದಲ್ಲಿರುವ ಪ್ರದೇಶವನ್ನು ಮಧ್ಯಗೋಳ ಎನ್ನುವರು. ಇದು ವಾಯುಮಂಡಲದ ಅತ್ಯಂತ ತಂಪು ಪ್ರದೇಶವಾಗಿದೆ. ಇಲ್ಲಿರುವ ಗಾಳಿಯ ಪ್ರಮಾಣ ತುಂಬಾ ಕಡಿಮೆಯಿರುತ್ತದೆ.

೪.ಅಯಾನುಗೋಳ Ionosphere: ಮಧ್ಯಗೋಳದ ನಂತರ ಇರುವ ಪದರವನ್ನು ಅಯಾನುಗೋಳ ಎನ್ನುವರು. ಇದು ಅಯಾನು ಅಥವಾ ಆವೇಶಭರಿತ ಕಣಗಳಿಂದ ಆಗಿದೆ. ಆದ್ದರಿಂದ ರೇಡಿಯೂ ಪ್ರಸರಣಕ್ಕೆ ಈ ವಲಯ ಸಹಕರಿಸುತ್ತದೆ.

೫.ಬಹಿಗೋ‍ಳ Exosphere:ಭೂಮಿಯ ವಾಯುಮಂಡಲದ ಅತ್ಯಂತ ಹೊರ ಪದರವನ್ನು ಬಹುಗೋಳ ಎನ್ನುವರು. ಇದು ಹಗುರವಾದ ಅನಿಲಗಳಾದ ಹೈಡ್ರೂಜನ್ ಮತ್ತು ಹೀಲಿಯಮ್ ನಿಂದ ಕೂಡಿದೆ.ಈ ಪ್ರದೇಶದಲ್ಲಿ ಕೆಲವು ಕೃತಕ ಉಪಗ್ರಹಗಳೂ ಸುತ್ತುತ್ತಿವೆ.

"https://kn.wikipedia.org/w/index.php?title=ವಾಯುಗೋಳ&oldid=1165864" ಇಂದ ಪಡೆಯಲ್ಪಟ್ಟಿದೆ