ಲೆಸೊಥೊ
ಲೆಸೊಥೊ ರಾಜ್ಯ Muso oa Lesotho ಮುಸೊ ಒಅ ಲೆಸೊಥೊ | |
---|---|
Motto: "Khotso, Pula, Nala" (ಸೆಸೊಥೊ ಭಾಷೆಯಲ್ಲಿ: "ಶಾಂತಿ, ಮಳೆ, ಸಮೃದ್ಧಿ") | |
Anthem: Lesotho Fatse La Bontata Rona | |
Capital and largest city | Maseru |
Official languages | ಸೆಸೊಥೊ ಭಾಷೆ, ಆಂಗ್ಲ |
Demonym(s) | Mosotho (singular), Basotho (plural) |
Government | ಸಾಂವಿಧಾನಿಕ ಅರಸೊತ್ತಿಗೆ |
• ರಾಜ | ಮುಮ್ಮಡಿ ಲೆತ್ಸಿ |
• ಪ್ರಧಾನ ಮಂತ್ರಿ | ಪಾಲಲಿಥ ಮೊಸಿಸಿಲಿ |
ಸ್ವಾತಂತ್ರ್ಯ | |
• ಯುನೈಟೆಡ್ ಕಿಂಗ್ಡಮ್ನಿಂದ | ಅಕ್ಟೊಬರ್ ೪, ೧೯೬೬ |
• Water (%) | negligible |
Population | |
• ಜುಲೈ ೨೦೦೫ estimate | 1,795,0001 (146th) |
• ೨೦೦೪ census | 2,031,348 |
GDP (PPP) | ೨೦೦೫ estimate |
• Total | $4.996 billion (150th) |
• Per capita | $2,113 (139th) |
HDI (೨೦೦೩) | 0.494 low · 149th |
Currency | ಲೊಟಿ (LSL) |
Time zone | UTC+2 |
Calling code | ೨೬೬ |
Internet TLD | .ls |
1 Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected. |
ಲೆಸೊಥೊ ಆಫ್ರಿಕಾದ ದಕ್ಷಿಣಭಾಗದಲ್ಲಿರುವ ಒಂದು ದೇಶ. ಇದು ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾ ರಾಷ್ಟ್ರದಿಂದ ಆವೃತವಾಗಿದೆ. ಲೆಸೊಥೊದ ವಿಸ್ತೀರ್ಣ ೩೦,೩೫೫ ಚ.ಕಿ.ಮೀ. ಮತ್ತು ಜನಸಂಖ್ಯೆ ಸುಮಾರು ೨೨ ಲಕ್ಷ. ರಾಷ್ಟ್ರದ ರಾಜಧಾನಿ ಮಸೇರು. ಹಲವು ಬುಡಕಟ್ಟುಗಳ ಪಾಳೆಯಗಾರರಿಂದ ಆಳಲ್ಪಡುತ್ತಿದ್ದ ಈ ಪ್ರದೇಶವು ೧೮೬೮ರಲ್ಲಿ ಬ್ರಿಟನ್ನಿನ ವಸಾಹತಾಯಿತು. ೧೯೬೫ರಲ್ಲಿ ಸ್ವಾಯತ್ತತೆಯನ್ನು ಪಡೆದ ಲೆಸೊಥೊ ೧೯೬೬ರಲ್ಲಿ ಸಂಪೂರ್ಣ ಸ್ವಾತಂತ್ರ್ಯ ಗಳಿಸಿತು. ಲೆಸೊಥೊ ಒಂದು ಸಾಂವಿಧಾನಿಕ ಅರಸೊತ್ತಿಗೆ. ಆದರೆ ಅರಸನ ಪದವಿ ಕೇವಲ ಅಲಂಕಾರಿಕ. ಬಹುಪಕ್ಷೀಯ ಸಂಸತ್ತನ್ನು ಹೊಂದಿರುವ ಲೆಸೊಥೊ ನಲ್ಲಿ ಬುಡಕಟ್ಟುಗಳ ನಾಯಕರಿಗೆ ವಿಶೇಷ ಸ್ಥಾನವಿದೆ. ಲೆಸೊಥೊದ ಎಲ್ಲಾ ಭೂಪ್ರದೇಶಗಳೂ ಸಮುದ್ರಮಟ್ಟದಿಂದ ೧೦೦೦ಮೀ. ಗೂ ಹೆಚ್ಚಿನ ಎತ್ತರದಲ್ಲಿವೆ. ವಿಶ್ವದಲ್ಲಿಯೇ ಇಂತಹ ಏಕೈಕ ಸ್ವತಂತ್ರ ರಾಷ್ಟ್ರ ಲೆಸೊಥೊ. ರಾಷ್ಟ್ರದ ಅರ್ಥ ವ್ಯವಸ್ಥೆಯು ಕೃಷಿ , ಉದ್ದಿಮೆಗಳು ಮತ್ತು ರಫ್ತು ವಹಿವಾಟನ್ನು ಅವಲಂಬಿಸಿದೆ. ನೆರೆಯ ದಕ್ಷಿಣ ಆಫ್ರಿಕಾ ದೇಶಕ್ಕೆ ಲೆಸೊಥೊ ನೀರು ಮತ್ತು ವಿದ್ಯುತ್ತನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸುತ್ತಿದೆ. ರಫ್ತಾಗುವ ಸರಕುಗಳಲ್ಲಿ ಮುಖ್ಯವಾದುವು ವಜ್ರ, ತುಪ್ಪಳ ಮತ್ತು ಚರ್ಮೋತ್ಪನ್ನಗಳು. ನಾಡಿನ ಪ್ರಮುಖ ಭಾಷೆ ಬಂಟು. ರೋಮನ್ ಕ್ಯಾಥೊಲಿಕ್ ಧರ್ಮೀಯರು ಬಹುಸಂಖ್ಯಾತರು. ದೇಶದ ೮೫% ಜನತೆ ಓದುಬರಹ ಬಲ್ಲರು. ಆರೋಗ್ಯ ಮತ್ತು ಸ್ವಾಸ್ಥ್ಯದ ವಿಚಾರದಲ್ಲಿ ಲೆಸೊಥೊ ಬಹಳ ಹಿಂದಿದೆ. ನಾಡಿನ ೨೯% ಜನತೆ ಏಡ್ಸ್ ರೋಗದಿಂದ ಪೀಡಿತರು. ಈ ಆತಂಕಕಾರಿ ಬೆಳವಣಿಗೆ ದೇಶದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತಿದೆ.